ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನಲ್ಲಿ ರೋಚಕವಾದ ಟಾಸ್ಕ್ ಬಿಗ್ ಬಾಸ್ ಶ್ಲೋಕ ನಡೆಯುತ್ತಿದೆ. ರಾಕ್ಷಸರ ಗುಂಪಿನವರು ಈಗ ಗಂಧರ್ವರಾಗಿದ್ದಾರೆ. ಏಟಿಗೆ ಎದುರೇಟಿನಂತೆ ಸಂಗೀತ ಗುಂಪಿನವರು ಮಾಡಿದ ಎಲ್ಲಾ ಹಿಂಸೆಗಳಿಗೆ ದುಪ್ಪಟ್ಟು ಎದುರೇಟನ್ನು ವರ್ತೂರ್ ಸಂತೋಷ್(Varthur Santhosh) ಅವರ ಗುಂಪಿನವರು ನೀಡುತ್ತಿದ್ದಾರೆ. ಇದರ ಕುರಿದಾದ ಸಂಪೂರ್ಣ ಮಾಹಿತಿಯು ಈ ವರದಿಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಂಗೀತ ಹಾಗೂ ಪ್ರತಾಪ್ ಮನೆಯಿಂದ ಹೊರಗೆ :

ಗಂಧರ್ವರು ಹಾಗೂ ರಾಕ್ಷಸರ ರಾಜ್ ನಡೆಯುತ್ತಿದ್ದು, ಸಂಗೀತ ಹಾಗೂ ಪ್ರತಾಪ್ ಈಗ ಗಂಧರ್ವರ ಗುಂಪಿನಲ್ಲಿದ್ದರು. ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು, ಇದರ ಪ್ರಕಾರ ಗಂಧರ್ವರ ಗುಂಪಿಗೆ ನೀರನ್ನು ಅಥವಾ ಇನ್ನಿತರ ಹಿಂಸೆಯನ್ನು ನೀಡಿ ಕುರ್ಚಿಯಿಂದ ಇಳಿಸಬೇಕಿತ್ತು. ನಿನ್ನೆ ಪವಿ ಹಾಗೂ ವರ್ತುರ್ ಸಂತೋಷ ಅವರಿಗೆ ಸಂಗೀತ ಹಾಗೂ ಅವರ ಗುಂಪಿನವರು ನೀರನ್ನು ಎರಚಿ ಅತಿಯಾದ ಹಿಂಸೆಯನ್ನು ನೀಡಿದ್ದರು. ಅದಕ್ಕೆ ಎದುರೇಟಿನಂತೆ ಇಂದು, ಸಂಗೀತ ಹಾಗೂ ಪ್ರತಾಪ್ ಅವರಿಗೆ ಪವಿ ಮೈಕಲ್ ಹಾಗೂ ವರ್ತೂರ್ ಸಂತೋಷ್ ಅವರು ನೀರಿಗೆ ಸೋಪಿನ ಪೌಡರನ್ನು ಬೆರೆಸಿ ವೇಗದಿಂದ ಮುಖಕ್ಕೆ ಏರಚಿದ್ದಾರೆ. ಇದರಿಂದ ಸಂಗೀತ ಹಾಗೂ ಪ್ರತಾಪ್(drone prathap) ಅವರ ಕಣ್ಣಿಗೆ ಸೋಪಿನ ನೀರು ಹೋಗಿ ಅವರು ಬಿಗ್ ಬಾಸ್ ಮನೆಯಿಂದ ಆಸ್ಪತ್ರೆಗೆ ತೆರಳಿದ್ದಾರೆ.
ಆಟ ನಿಲ್ಲಿಸುವಂತೆ ಆದೇಶ ನೀಡಿದ ಬಿಗ್ ಬಾಸ್ :
ಸಂಗೀತ ಅವರು ನೀರಿನ ಬರೆಸವನ್ನು ತಡೆಯಲಾಗದೆ ಖುಷಿಯಿಂದ ಎದ್ದರು, ನಂತರ ಪ್ರತಾಪ್ ಅವರಿಗೆ ನೀರನ್ನು ಎರಚಿಸುವ ಬಿಗ್ ಬಾಸ್ ಆಟವನ್ನು ನಿಲ್ಲಿಸುವಂತೆ ಆದೇಶವನ್ನು ನೀಡಿದರು. ಒಟ್ಟಿನಲ್ಲಿ ಈ ಬಾರಿ ಭಾರೀ ಪೈಪೋಟಿ, ಸ್ಪರ್ಧೆ ಇರೋದರಿಂದ ಗಾಯಗಳು ಆಗುತ್ತಿವೆ, ವಿವಾದಗಳು ಆಗುತ್ತಿದೆ. ಈ ಬಾರಿ ಹ್ಯಾಪಿ ಬಿಗ್ ಬಾಸ್ ಎಂದು ಹೇಳಲಾಗಿತ್ತು, ಆದರೆ ಇಷ್ಟು ಸೀಸನ್‌ಗಳಲ್ಲಿ ಆಗದಷ್ಟು ಗಲಾಟೆ, ಜಗಳ ಈ ಸೀಸನ್‌ನಲ್ಲಿ ನಡೆಯುತ್ತಿದೆ. ಬಿಗ್ ಬಾಸ್ ಈ ಸೀಸನ್ ನಲ್ಲಿ ಇವರ ಜಗಳ ಕಿತ್ತಾಟ ನೋಡದೆ ಆಟಗಳನ್ನು ಮಧ್ಯದಲ್ಲಿ ನಿಲ್ಲಿಸುವಂತಾಗಿದೆ. ಇಲ್ಲಿ ಮನರಂಜನೆ ಹಾಸ್ಯ ಸಿಗೋದು ಭಾರೀ ಅಪರೂಪ ಎನ್ನುವ ಹಾಗೆ ಆಗಿದೆ.
ಕಾರ್ತಿಕ್ ಜೈಲಿಗೆ:

ಕಾರ್ತಿಕ್(karthik) ಅವರು ಕಳಪೆ ಪಟ್ಟವನ್ನು ಪಡೆದುಕೊಂಡು ಜೈಲಿಗೆ ತೆರಳಿದ್ದಾರೆ. ಕಾರ್ತಿಕ್ ಅವರು ಈ ವಾರ ಚೆನ್ನಾಗಿಯೇ ಪರ್ಫಾರ್ಮೆನ್ಸ್ ಅನ್ನು ಮಾಡಿದರು. ಆದರೂ ಕೂಡ ಚಪ್ಪಲಿಯ ವಿಷಯವನ್ನು ಮಾತ್ರ ಹಿಡಿದುಕೊಂಡು ವಿನಯ್ ಹಾಗೂ ಅವರ ತಂಡದವರು ಕಾರ್ತಿಕ್ ಅವರಿಗೆ ಕಳಪೆಯ ಪಟ್ಟವನ್ನು ನೀಡಿದ್ದಾರೆ. ಇದು ಪ್ರೇಕ್ಷಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಇದನ್ನು ಕಾರ್ತಿಕ್ ಕೈಮುಗಿದು ನಗುನಗುತ್ತಲೇ ಸ್ವೀಕರಿಸಿದ್ದಾರೆ. ಕಪ್ಪು ಬಿಳಿಯ ಜೈಲು ಉಡುಗೆ ತೊಟ್ಟ ಕಾರ್ತಿಕ್, ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’ ಎಂದುಹೇಳಿ ಜೈಲು ಕೊಠಡಿಯೊಳಗೆ ಇಳಿದಿದ್ದಾರೆ. ವರ್ತೂರು ಮತ್ತು ತನಿಷಾ ಇಬ್ಬರೂ ಸೇರಿ ಕಾರ್ತಿಕ್ ಅವರನ್ನು ಜೈಲಿನ ಬಾಗಿಲಿಗೆ ಬಂದು ಬೀಳ್ಕೊಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








