Bigg Boss Kannada – ಗಂಧರ್ವನಾದ ವಿನಯ್, ರಾಕ್ಷಸರ ಅಟ್ಟಹಾಸಕ್ಕೆ ಕಿಡಿ

bigboss tasks

ಬಿಗ್ ಬಾಸ್ ನ ಸೀಸನ್ 10 ( Big boss season 10 ) ಇದೀಗ ಸತತ 58 ನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪು(Puneeth Rajkumar) ಅವರ ಹಾಡಿನೊಂದಿಗೆ ಬಿಗ್ ಬಾಸ್ ದಿನಾ ಶುರುವಾಯಿತು. ಇವತ್ತು ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ಟಾಸ್ಕ್ ಅನ್ನು ನೀಡಿದ್ದಾರೆ. ಇವತ್ತಿನ ಟಾಸ್ಕ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದ್ದಂತೂ ಖಚಿತ. ಟಾಸ್ಕಿಗೆ ತಕ್ಕಂತೆ ಉಡುಪುಗಳನ್ನು ಕೂಡ ಇಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಲಾಗಿತ್ತು. ಇದರ ಕುರಿತದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಂಗೀತ ಹಾಗೂ ವರ್ತೂರ್ ಸಂತೋಷ್ ಟೀಮ್ ಲೀಡರ್ಸ್ :

ಗುಂಪಿನ ನಾಯಕರನ್ನಾಗಿ ಆಯ್ಕೆ ಮಾಡಲು, ಧನಾತ್ಮಕ ಹಾಗೂ ಋಣಾತ್ಮಕ ಮನೋಭಾವ(Positive ಅಬ್ದ್ negative mentality) ಯಾರಿಗೆ ಜಾಸ್ತಿ ಇರುತ್ತದೆ ಎಂದು ಬಿಳಿ ಹೂವು ಹಾಗೂ ಕಪ್ಪು ಹೂವನ್ನು ನೀಡುವುದರ ಮೂಲಕ ಸೆಲೆಕ್ಟ್ ಮಾಡಲಾಗುತ್ತಿತ್ತು. ವರ್ತೂರ್ ಸಂತೋಷ್ (Varthur santhosh) ಅವರು ಅತಿ ಹೆಚ್ಚು ಬಿಳಿ ಹೂವುಗಳನ್ನು ಪಡೆದು ಧನಾತ್ಮಕ ಮನೋಭಾವ ಉಳ್ಳವರು ಎಂದು ಹಾಗೂ ಸಂಗೀತ(Sangeetha) ಅವರು ಹೆಚ್ಚು ಕಪ್ಪು ಹೂಗಳನ್ನು ಪಡೆದು ಋಣಾತ್ಮಕ ಮನೋಭಾವ ಉಳ್ಳವರು ಎಂದು ಪರಿಗಣಿಸಲಾಗಿತು. ಆದ್ದರಿಂದ ಇವರಿಬ್ಬರು ಟಾಸ್ಕಿನ ನಾಯಕರು ಎಂದು ಬಿಗ್ ಬಾಸ್ ಘೋಷಿಸಿದರು.

ಎರಡು ಗುಂಪುಗಳಿಗೆ ಸದಸ್ಯರನ್ನು ವಿಂಗಡಿಸುವ ಜವಾಬ್ದಾರಿ ಸ್ನೇಹಿತ ಅವರದ್ದಾಗಿತ್ತು. ಬಿಗ್ ಬಾಸ್ 2 ಗುಂಪುಗಳಿಗೂ ಸಮನಾದ ಬಲಿಷ್ಠರನ್ನು ಸೇರಿಸುವಂತೆ ಹೇಳಿದ್ದರು. ಕೊನೆಯದಾಗಿ ಮೈಕಲ್ ಹಾಗೂ ಅವಿನಾಶ್ ಉಳಿದುಕೊಂಡರು. ಮೈಕಲ್ ಅವರನ್ನು ವರ್ತೂರ್ ಸಂತೋಷ್ ಅವರ ಗುಂಪಿಗೆ ಸೇರಿಸಿದ್ದಕ್ಕಾಗಿ ಸಂಗೀತ ಅವರು ಇದು ಅನ್ಯಾಯ ಎಂದು ಸಂತೋಷ್ ಅವರ ಜೊತೆ ಜಗಳವಾಡಿದರು.

ರಾಕ್ಷಸಿ ಸಂಗೀತ, ಗಂಧರ್ವ ವರ್ತೂರ್ :

ಈ ಟಾಸ್ಕಿನ ಪ್ರಕಾರ ಬಿಗ್ ಬಾಸ್ ಮನೆಯನ್ನು ಬಿಗ್ ಬಾಸ್ ಲೋಕ ಎಂದು ಪರಿಗಣಿಸಲಾಗಿತ್ತು. ಬಿಗ್ ಬಾಸ್ ಲೋಕ ಎಂಬ ತಾಸ್ಕಿನಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಯಿತು. ಕಾರ್ತಿಕ್‌, ಸಂಗೀತಾ, ತನಿಷಾ, ಅವಿನಾಶ್‌, ಪ್ರತಾಪ್ ಹಾಗೂ ಸಿರಿ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು-ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾಗಿದ್ದರು. ವಿನಯ್, ನಮ್ರತಾ, ವರ್ತೂರು, ತುಕಾಲಿ ಸಂತೋಷ್‌ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ರಾಕ್ಷಸರು, ಗಂಧರ್ವರಿಗೆ ಅವರ ಬಟ್ಟೆಯನ್ನೆಲ್ಲ ಚೆಲ್ಲಾಡಿ ಹಾಗೂ ಅಡುಗೆ ಮನೆಯಲ್ಲಿ ನೀರನ್ನು ಎರಚಿ ಹಿಂಸೆಯನ್ನು ಕೊಡುತ್ತಿದ್ದಾರೆ. ಆದರೆ ಗಂಧರ್ವರು ಕೋಪವನ್ನು ಮಾಡಿಕೊಳ್ಳದೆ ಸಹನೆಯಿಂದ ನಡೆದುಕೊಳ್ಳುತ್ತಿದ್ದಾರೆ. ಕಾರ್ತಿಕ್ ಅವರು ಮನೆಯ dustbin ನ ಕಸವನ್ನೆಲ್ಲ ಅಡುಗೆ ಮನೆಯಲ್ಲಿ ಹರಡಿ ಕಸವನ್ನೆಲ್ಲ ಅಡುಗೆ ಮನೆಯಲ್ಲಿ ಸುರಿದು ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಕಿರುಚುತ್ತಿದ್ದರು. ತನುಷ ಅವರು ವರ್ತುರ್ ಸಂತೋಷ ಅವರನ್ನು ಕಾಲು ಒತ್ತುವಂತೆ ಹೇಳಿದರು, ಸಂಗೀತ ಅವರು ನಾನು ಬಟ್ಟೆ ಮಡಿಚಲು ಮೊದಲು ಹೇಳಿದ್ದೆ, ಇಲ್ಲಿ ಕಾಲು ಒತ್ತುತ್ತಿದ್ದೀರಾ ಎಂದು ಗಲಾಟೆ ಮಾಡುತ್ತಿದ್ದರು. ವಿನಯ ಅವರಿಗೆ ನೀಡಲಾಗಿದ್ದ ಆನೆಯನ್ನು ಒಡೆದುಹಾಕಿ ಡಷ್ಟಬಿನ್ ಗೆ ಎಸೆಯಲಾಗಿತ್ತು. ರಾಕ್ಷಸರು ಏನೇ ತೊಂದರೆ ಕೊಟ್ಟರು ಅದನ್ನು ನಗುನಗುತ ಗಂಧರ್ವ ಗುಂಪಿನವರು ಸಹಿಸಿಕೊಳ್ಳುತ್ತಿದ್ದರು.
ಮುಂದುವರೆದು ಎರಡು ತಂಡಗಳಿಗೂ ಟಾಸ್ಕ್ ಅನ್ನು ನೀಡಿದ್ದಾರೆ. ಅದರ ಪ್ರಕಾರ ಬಾವುಟಗಳನ್ನು ರಚಿಸಿ, ಅವುಗಳನ್ನು ಕಾಪಾಡಿಕೊಳ್ಳಬೇಕು. ವಿನಯ್ ಹಾಗೂ ಕಾರ್ತಿಕ್ ಅವರು ಟಾಸ್ಕಿನಲ್ಲಿ ಹೊಡೆದಾಡಲು ಶುರು ಮಾಡಿದರು, ಆಗ ಬಿಗ್ ಬಾಸ್ ಮಧ್ಯಸ್ಕೆಯನ್ನು ವಹಿಸಿ 2 ಗುಂಪಿನವರು ಆಟವನ್ನು ನಿಲ್ಲಿಸಿ ಎಂದು ಹೇಳಿದರು. ನಾಳೆಯ ಸಂಚಿಕೆಯು ಇನ್ನೂ ರೋಚಕತೆಯನ್ನು ಮೂಡಿಸಲಿದೆ. ಎಲ್ಲರೂ ಕಾದು ನೋಡಬೇಕಾಗಿದೆ.

ಸ್ನೇಹಿತ ಅವರು ಮನೆಯ ಕ್ಯಾಪ್ಟನ್ ಆಗಿರುವುದು ಭಿಕ್ಷೆ ಎಂದ ಸಂಗೀತ :

ಸ್ನೇಹಿತ್ ಅವರು ಮನೆಯ ಉಸ್ತುವಾರಿಯನ್ನು ವಹಿಸಿದ್ದರು, ಸ್ನೇಹಿತ್ ಅವರು ಹಾಗೂ ಸಂಗೀತ ಅವರು ಹೋಗೆ ಬಾರೋ ಎಂದು ಜಗಳವನ್ನು ಆಡಿದ್ದಾರೆ. ಟಾಸ್ಕಿನ ರೂಲ್ಸ್ ಅನ್ನು ಪದೇ ಪದೇ ಹೇಳುತ್ತಿದ್ದ ಕಾರಣ ಸಂಗೀತ ಅವರು ಕೋಪಗೊಂಡು, ನೀನು ಕ್ಯಾಪ್ಟನ್ ಆಗಿರೋದು ಮನೆಯವರ ಭಿಕ್ಷೆಯಿಂದ, ಮನೆಯಲ್ಲಿ ಇರಲು ಲಾಯಕ್ಕಿಲ್ಲ ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!