Bigg Boss Kannada – ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಫೇಲ್ ಆಯ್ತಾ ಸ್ನೇಹಿತ್ ಉಸ್ತುವಾರಿ

bigboss vinay and kartik fight

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನಲ್ಲಿ ಬಹುದೊಡ್ಡ ಗಂಧರ್ವರು ಹಾಗೂ ರಾಕ್ಷಸರ ಆಟವು ಕ್ಷಣಕ್ಷಣಕ್ಕೆ ರೋಚಕತೆಯನ್ನು ಮೂಡಿಸುತ್ತಿದೆ. ಈಗಾಗಲೇ ರಾಕ್ಷಸರು ಗಂಧರ್ವರಾಗಿದ್ದಾರೆ ಹಾಗೂ ಗಂಧರ್ವರು ರಾಕ್ಷಸಕರಾಗಿದ್ದಾರೆ. ದಿನ 60 ರಂದು ಬೆಳಗ್ಗೆ ಎದ್ದ ಕೂಡಲೇ ಗಂಧರ್ವರ ಗುಂಪಿನಲ್ಲಿರುವ ಸಂಗೀತ ರವರಿಗೆ ಒಂದು ಉಪಾಯ ಹೊಳೆದಿದೆ. ಇದು ಆಟದ ರೀತಿಯನ್ನೇ ಬದಲಾಯಿಸುವ ಎಲ್ಲಾ ಸಾಧ್ಯತೆಗಳು ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿನಯ್ ಗೆ ಚಪ್ಪಲಿಯಿಂದ ಹೊಡೆದರ ಕಾರ್ತಿಕ್? :

bigboss task fight

ಸಂಗೀತ, ರಾಕ್ಷಸರು ಹೇಳಿದ ಆದೇಶಗಳನ್ನು ಕೇಳಬೇಕಾಗಿಲ್ಲ ಎಂದು ಅವರ ಗುಂಪಿನವರಿಗೆ ತಿಳಿಸಿದರು. ನಂತರ ಕಾರ್ತಿಕ್ ಅವರು ಎಲ್ಲಾ ಕೆಲಸಗಳನ್ನು ನಿಧಾನವಾಗಿ ಮಾಡುತ್ತಿದ್ದರು. ಕೋಪಗೊಂಡ ವಿನಯ್, ಚಪಾತಿ ಹಿಟ್ಟಿನಿಂದ ಕಾರ್ತಿಕ್ ಅವರ ಮುಖಕ್ಕೆ ಹೊಡೆದರು, ಅದರಿಂದ ಕೋಪಗೊಂಡ ಕಾರ್ತಿಕ್ ಅವರು ಸ್ನೇಹಿತ್ ಅವರಿಗೆ ಕಂಪ್ಲೇಂಟ್ ಮಾಡಿದರು. ಸ್ನೇಹಿತ್ ಅವರು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಕಾರ್ತಿಕ್ ಹಾಗೂ ವಿನಯ್ ತುಂಬಾ ಕೋಪಕೊಂಡಿದ್ದರು. ಆಗ ಕಾರ್ತಿಕ್ ಅವರು ಕೋಪಗೊಂಡು ತನ್ನ ಚಪ್ಪಲಿಯನ್ನು ನೆಲಕ್ಕೆ ಸಿಟ್ಟಿನಿಂದ ಎಸೆದರು. ಆಗ ಆ ಚಪ್ಪಲಿಯೂ ಬೌನ್ಸ್ ಆಗಿ ವಿನಯವರ ಮೇಲೆ ಬಿದ್ದಿತ್ತು. ಇದರಿಂದ ಕೋಪಗೊಂಡ ವಿನಯ್, ನೀನು ಯಾರೋ ನನಗೆ ಚಪ್ಪಲಿಯಲ್ಲಿ ಹೊಡೆಯುವುದಕ್ಕೆ ಎಂದು ಕಿರುಚಾಡಿದರು. ಮನೆಯ ಮಂದಿಗಳೆಲ್ಲ ಬಂದು ಇವರಿಬ್ಬರನ್ನು ತಡೆದರು.

ಇವನ ಜೊತೆ ಚಪ್ಪಲಿಯಲ್ಲಿ ಹೊಡೆಸಿಕೊಂಡ ಮೇಲೆಯೂ ನಾನು ಈ ಮನೆಯಲ್ಲಿ ಇರಬೇಕಾ?, ಈಗಲೇ ಈ ಮನೆಯಿಂದ ಹೋಗುತ್ತೇನೆ, ಬಿಗ್ ಬಾಸ್ ಬಾಗಿಲನ್ನು ತೆರೆಯಿರಿ ಎಂದು ವಿನಯವರು ಕಿರುಚಾಡುತ್ತಿದ್ದರು. ಅಷ್ಟೇ ಅಲ್ಲದೆ ತನ್ನ ಬಟ್ಟೆಗಳೆಲ್ಲವನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ನೆನ್ನೆ ನಿಮ್ಮ ಅಮ್ಮನ್ ಎಂಬ ಶಬ್ದವನ್ನು ಕಾರ್ತಿಕ್ ಬಳಸಿದ್ದಾನೆ ಇವತ್ತು ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಬಿಟ್ಟರೆ ಮುಖ ಮೂತಿ ಹೊಡೆಯುತ್ತಾನೆ ಎಂದು ಹೇಳುತ್ತಿದ್ದರು.

ಕಣ್ಣೀರಿಟ್ಟ ಸಂಗೀತ :

sangeeta crying in bigboss

ಸಂಗೀತ ಅವರ ಗುಂಪಿನವರೆಲ್ಲ, ಇಷ್ಟು ಜಗಳ ಆಗೋಕೆ ಕಾರಣವೇ ಸಂಗೀತ, ನಾವು ಆದೇಶವನ್ನು ನಡೆಸಿಕೊಟ್ಟಿದ್ದರೆ ಇಷ್ಟೆಲ್ಲ ಜಗಳ ಆಡುತ್ತಿರಲಿಲ್ಲ ಎಂದು ಸಂಗೀತಾಗೆ ಹೇಳಿದರು. ಅದಕ್ಕೆ ಸಂಗೀತ ಅವರು ಅಳುತ್ತ ನನ್ನ ಮಾತನ್ನು ನೀವು ಕೇಳಬೇಕಾಗಿತ್ತು ನೀವು ಏಕೆ ಹೊರಗಡೆ ಬಂದಿರಿ, ಒಳಗಡೆನೆ ಯಾವುದೋ ಒಂದು ಕೆಲಸವನ್ನು ಮಾಡುತ್ತಾ ಕುಳಿತುಕೊಳ್ಳಬೇಕಾಗಿತ್ತು ಎಂದು ಹೇಳಿದರು. ಹೆಸರು ಇರೋದೇ ಹೀಗೆ ಎಂದು ಹೇಳಿದರು.
ನಮ್ರತಾ ಅವರು ಸಂಗೀತ ಅವರಿಗೆ, ಜಗಳ ಮಾಡುವುದಕ್ಕೆ ನೀನೇ ಪ್ರವೋಕ್ ಮಾಡುತ್ತೀರಾ ಎಂದು ಬೈದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!