Bigg Boss Kannada – ಈ ಬಾರಿ ಫಿನಾಲೆ ತಲುಪುವ ಅರ್ಹತೆ ಯಾರಿಗಿದೆ..? ಯಾರು ಗೆಲ್ಲುತ್ತಾರೆ ಗೊತ್ತಾ ?

bigboss 10 finalist list

ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ( Big boss season 10 ) ಈಗಾಗಲೇ ಹಲವು ದಿನಗಳನ್ನು ಕಳೆದಿದೆ. ಹಾಗೆಯೇ ಎಲ್ಲರಲ್ಲೂ ಕಾಡುವ ಮುಖ್ಯ ಪ್ರಶ್ನೆ ಏನೆಂದರೆ ಈ ಸೀಸನ್ ಬಿಗ್ ಬಾಸ್ ಅನ್ನು ಯಾರು ಗೆಲ್ಲುತ್ತಾರೆ. ಯಾಕೆಂದರೆ ಈ ಸೀಸನ್ ನ ಸದ್ಯಕ್ಕೆ ಉಳಿದುಕೊಂಡ ಸ್ಪರ್ಧಿಗಳಲ್ಲಿ ಒಬ್ಬರಿಗಿಂತ ಒಬ್ಬರು ಪ್ರಬಲಾಗಿದ್ದಾರೆ. ಮತ್ತು ಎಲ್ಲರ ನಡುವೆ ಪೈಪೋಟಿ ( Competition ) ಜಾಸ್ತಿ ಇದೆ. ಹಾಗಿದ್ದರೆ ಈ ಸೀಸನ್ ನ ಬಿಗ್ ಬಾಸ್ ಮನೆಯಲ್ಲಿ ಈಗ ಸದ್ಯಕ್ಕೆ ಉಳಿದುಕೊಂಡಿರುವ ಸ್ಪರ್ಧಿಗಳಲ್ಲಿ ಯಾರು ಸ್ಟ್ರಾಂಗ್ ಇದ್ದಾರೆ? ಯಾರು ವೀಕ್ ಇದ್ದಾರೆ? ಮತ್ತು ಶೋ ಗೆಲ್ಲಲು ಯಾರು ಅರ್ಹರಿದ್ದಾರೆ ಎಂದು ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈಗ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳೆಂದರೆ : ಸಂಗೀತಾ ಶೃಂಗೇರಿ, ವಿನಯ್ ಗೌಡ, ಡ್ರೋನ್ ಪ್ರತಾಪ್, ತುಕಾಲಿ ಸ್ಟಾರ್ ಸಂತು, ವರ್ತೂರು ಸಂತೋಷ್, ಮೈಕಲ್ ಅಜಯ್, ನಮ್ರತಾ ಗೌಡ, ಸ್ನೇಹಿತ್, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಸಿರಿ, ಮತ್ತು ಸ್ನೇಹಿತ್ .

ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ( pavi puvappa and avinash shetty ) :

ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಪವಿ ಪೂವಪ್ಪ ಹಾಗು ಅವಿನಾಶ್ ಶೆಟ್ಟಿ ಅವರು ಮನೆಯ ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಮನೆಯಲ್ಲಿ ಆಟ ಹೇಗಿರುತ್ತದೆ ಎಂದು ತಿಳಿದಿಲ್ಲ. ಮೊದಲು ಎಲ್ಲ ಗೊತ್ತು ಎಂದು ಜಂಬ ಕೊಚ್ಚಿಕೊಂಡಿದ್ದರು. ಹಾಗೆಯೇ ಮೊನ್ನೆ ನಡೆದ ಟಾಸ್ಕ್ ಗಳಲ್ಲಿ ಇವರ ಪರಿಫಾರ್ಮೇನ್ಸ್ ಏನು ಇಲ್ಲ. ಮತ್ತು ಇವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋದು ಪಕ್ಕಾ.

ತುಕಾಲಿ ಸ್ಟಾರ್’ ಸಂತು ( thukali santhu ) :

ಇನ್ನು ತುಕಾಲಿ ಸ್ಟಾರ್ ಸಂತು ಅವರ ಬಗ್ಗೆ ಹೇಳುವುದಾದರೆ, ಬಿಗ್ ಬಾಸ್ ಮನೆಯಲ್ಲಿ ನಾನು ಸಿಕ್ಕಾಪಟ್ಟೆ ಕಾಮಿಡಿ ಮಾಡ್ತಿದ್ದೀನಿ ಅಂದುಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಯ ಟಾಸ್ಕ್ ನಲ್ಲಿ ತಮ್ಮ ಆಟವನ್ನು ಏನು ತೋರಿಸುತ್ತಿಲ್ಲ. ಯಾವಾಗಲೂ ಸ್ಪರ್ಧಿಗಳ ಜೊತೆ ಏರು ದ್ವನಿಯಲ್ಲಿ ಮಾತನಾಡುತ್ತ ಜಗಳ ಆಡುತ್ತಾರೆ. ಇವರು ಕೂಡ ಫಿನಾಲೆ ತಲುಪುವುದು ಡೌಟ್.

ನಮ್ರತಾ ( Namratha ) :

ಈಗ ಲವ್ ಬರ್ಡ್ ವಿಚಾರ ದಲ್ಲಿ ಇರುವವರು ನಮ್ರತಾ ಗೌಡ. ಅವರು ಸದ್ಯ ಸ್ನೇಹಿತ್ ಜೊತೆಗಿನ ಫ್ರೆಂಡ್‌ಶಿಪ್ ವಿಚಾರಕ್ಕೆ ಅವರು ಸೌಂಡ್ ಮಾಡ್ತಿದ್ದಾರೆ. ಸ್ನೇಹಿತ್, ವಿನಯ್ ಬಿಟ್ಟರೆ ಅವರು ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಆರಂಭದಲ್ಲಿ ಸಂಗೀತಾ, ತನಿಷಾ ಜೊತೆ ಜಗಳ ಆಡುತ್ತಿದ್ದರು. ಹಾಗೆಯೇ ಇವರು ಕೂಡ ಮುಂದಿನ 3 ವಾರಗಳಲ್ಲಿ ಹೊರಗಡೆ ಬರುವ ಸಾಧ್ಯತೆ ಹೆಚ್ಚಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಡ್ರೋನ್ ಪ್ರತಾಪ್ ( Drone prathap ) :

ಬಿಗ್ ಬಾಸ್ ಗೆ ಡ್ರೊನ್ ಪ್ರತಾಪ್ ಹೋದಾಗ ಅವರ ಬಗ್ಗೆ ಬಹಳ ನೆಗೆಟಿವಿಟಿ ಇತ್ತು ಮತ್ತು ಬೇಕಾಬಿಟ್ಟಿ ಮತನಾಡುತ್ತಿದ್ದರು. ಆಮೇಲೆ ಅವರ ತಾಳ್ಮೆಯಿಂದ ಅದು ಪಾಸಿಟಿವ್ ಆಗಿ ಬದಲಾಯ್ತು. ಪ್ರತಾಪ್ ಅವರ ಬುದ್ಧಿವಂತಿಕೆ, ತಾಳ್ಮೆ, ಸಂಯಮ, ವಿನಯ ಎಲ್ಲವೂ ವೀಕ್ಷಕರ ಮನಸ್ಸನ್ನು ಗೆದ್ದಿತ್ತು. ಈಗ ಹೆಚ್ಚು ಮುಂದೆ ಇರುವ ಸ್ಪರ್ಧಿ ಅಂದ್ರೆ ಅದು ಪ್ರತಾಪ್. ಅವರು ಮನೆಯಲ್ಲಿ ಹೀಗೆ ತಮ್ಮ ಆಟವನ್ನು ಮುಂದುವರಿಸಿಕೊಂಡು ಹೋದರೆ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಬಹುದು.

ಸಂಗೀತಾ ಶೃಂಗೇರಿ ( Sangeetha sringeri ) :

karthik and sangeetha

ಕಾರ್ತಿಕ್, ತನಿಷಾ ಜೊತೆ ಫ್ರೆಂಡ್‌ಶಿಪ್ ಮಾಡಿದ್ದ ಸಂಗೀತಾ ಆಮೇಲೆ ವಿನಯ್ ಟೀಂಗೆ ಹೋಗಿ ಅವರ ಜೊತೆ ಒಂದು ವಾರ ಇದ್ದು ಮತ್ತೆ ಈಗ ಕಾರ್ತಿಕ್ ಟೀಂಗೆ ಬಂದಿದ್ದಾರೆ. ಮೊದಲು ಸಂಗೀತ ಮೇಲೆ ವೀಕ್ಷಕರಿಗೆ ಒಳ್ಳೆಯ ಅಭಿಪ್ರಾಯ ಇತ್ತು . ಯಾವಾಗ ಅವರ ಬುದ್ದಿ ತಿಳಿಯಿತೋ ಅವಾಗ ಅವರನ್ನು ವೀಕ್ಷಕರು ಹೆಚ್ಚು ಲೈಕ್ ಮಾಡಲು ಹೋಗಲಿಲ್ಲ. ಹಾಗೆಯೇ ಇವರು ಕೂಡ ಬಿಗ್ ಬಾಸ್ ಮನೆಯಲ್ಲಿ ಇವಾಗ ಹಾವ ಮಾಡ್ತಾ ಇದ್ದಾರೆ. ಇವರು ಕೂಡ ಬಿಗ್ ಬಾಸ್ ಫಿನಾಲೆಗೆ ಹೋಗಬಹುದು.

ಮೈಕಲ್ ಅಜಯ್ ( Maikal ajay ) :

ಬಿಗ್ ಬಾಸ್ ಮನೆಯಲ್ಲಿ ಸದ್ಯ ಕನ್ನಡ ಕಲಿತು ಎಲ್ಲರ ಮನಸ್ಸು ಗೆಲ್ಲುತ್ತಿರುವ ಮೈಕಲ್ ಬಿಗ್ ಬಾಸ್ ಸೀಸನ್ 10 ಗೆಲ್ಲುತ್ತಾರ ಎಂಬ ಕಾತುರ ಕೆಲವರಿಗೆ ಇದೆ. ಆದರೆ ಮೈಕಲ್ ಅಜಯ್ ಅವರು ಬಿಗ್ ಬಾಸ್ ಮನೆಯಲ್ಲಿ ಆಟವನ್ನು ಸರಿಯಾಗಿ ಆಡುತ್ತಿಲ್ಲ. ಬೇರೆ ಅವರ ತಪ್ಪುಗಳನ್ನು ಹುಡುಕುತ್ತಿದ್ದಾರೆ. ಅವರು ಕೂಡ ಬಿಗ್ ಬಾಸ್ ಮನೆಯಿಂದ ಆದಷ್ಟು ಬೇಗ ಹೊರಗೆ ಹೋಗುವ ಲಕ್ಷಣ ಇದೆ.

ಕಾರ್ತಿಕ್ ( Karthik ) :

ಇನ್ನು ಕಾರ್ತಿಕ್ ಬಗ್ಗೆ ಹೇಳಿವುದಾದರೆ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಸ್ಪರ್ಧಿ ಆಗಿದ್ದಾರೆ. ಟಾಸ್ಕ್ ಆಗಲಿ ಮನರಂಜನೆ ಆಗಲಿ ಎಲ್ಲದ್ರಲ್ಲೂ ಮುಂದೆ ಇದ್ದಾರೆ. ಕಾರ್ತಿಕ್ ಅವರು ಸಂಗೀತಾ, ತನಿಷಾ, ವಿನಯ್ ಗೌಡ ಇವರ ಮಧ್ಯೆ ಇರುತ್ತಾರೆ. ವಿನಯ್ ಹಾಗೂ ಕಾರ್ತಿಕ್ ನಡುವೆ ಸಂಘರ್ಷಗಳು ಇದ್ದೆ ಇರುತ್ತವೆ. ಇನ್ನು ಕಾರ್ತಿಕ್ ಅವರು ಫಿನಾಲೆ ಗೆ ಹೋಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಇತ್ತೀಚಿಗೆ ಇವರಿಗೆ ಫ್ಯಾನ್ಸ್ ಫಾಲೋಯಿಂಗ್ ಕೂಡ ಹೆಚ್ಚಾಗಿದೆ.

ಸ್ನೇಹಿತ್‌ ( Snehith ) :

ಸ್ನೇಹಿತ್ ಇದೀಗ ಒಂದು ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಹಾಗೆಯೇ ಅವರು ಮನೆಯ ಇತರ ಸ್ಪರ್ಧಿಗಳು ಮತ್ತು ವೀಕ್ಷಕರ ಕಣ್ಣಲ್ಲಿ ಸ್ವಲ್ಪ ದೂರ ಆಗುತ್ತಿದ್ದಾರೆ. ಅವರ ಆಟ ಕೂಡ ಚೆನ್ನಾಗಿಲ್ಲ. ಅವರು ಮನೆಯಿಂದ ಹೊರಗಡೆ ಬರುವುದಂತೂ ಪಕ್ಕಾ. ಬಿಗ್ ಬಾಸ್ ಗೇಮ್‌ನ್ನು ಸೀರಿಯಸ್ ಆಗಿ ತಗೊಂಡ ಹಾಗಿಲ್ಲ. ಇಷ್ಟು ದಿನದಲ್ಲಿ ತಾವು ಏನು ಎಂದು ಸಾಬೀತುಪಡಿಸಿಕೊಳ್ಳದ ಸ್ನೇಹಿತ್ ಮುಂದೆ ಅವರು ಕೂಡ ಫಿನಾಲೆ ಗೆ ತೆರಳುವುದು ಕಷ್ಟ ಇದೆ.

ವಿನಯ್ ಗೌಡ ( Vinay gauda ) :

vinay bigboss

ಬಿಗ್ ಬಾಸ್ ಕನ್ನಡ ಸೀಸನ್ 10’ರ ಅಗ್ರೆಸ್ಸಿವ್ ಸ್ಪರ್ಧಿ ವಿನಯ್. ಬಿಗ್ ಬಾಸ್ ಮನೆಯ ಆನೆ ಎಂದೇ ಕರೆಸಿಕೊಂಡವರು. ಈ ಮದ್ಯೆ ವಿನಯ್ ಸಂಗೀತಾ, ಕಾರ್ತಿಕ್, ತನಿಷಾ, ತುಕಾಲಿ ಸ್ಟಾರ್ ಜೊತೆ ಸಿಕ್ಕಾಪಟ್ಟೆ ಜಗಳ ಆಡಿದ್ದಾರೆ. ಇವರು ಎಲ್ಲಾ ಟಾಸ್ಕ್ ಗಳನ್ನು ಕೂಡ ಚೆನ್ನಾಗಿ ಆಡುತ್ತಾರೆ ಹಾಗೆಯೇ ಎಲ್ಲರ ಮೇಲೆ ಕೋಪ ಜಗಳ ಮಾಡುಕೊಳ್ಳುತ್ತಲೇ ಇರುತ್ತಾರೆ. ಇವರು ಕೂಡ ಫಿನಾಲೆ ಗೆ ಹೋಗಬಹುದು.

ವರ್ತೂರು ಸಂತೋಷ್ ( Varthur santhosh ):

ಬಿಗ್ ಬಾಸ್ ಮನೆಗೆ ಬಂದ ನಂತರ ವರ್ತುರ್ ಸಂತೋಷ್ ಅವರ ಹಲವಾರು ಪ್ರಕರಣಗಳು ನಡೆದಿವೆ. ಹುಲಿ ಉಗುರಿನ ವಿಷಯದಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಹಾಗೆಯೇ ಇನ್ನು ಟಾಸ್ಕ್ ವಿಚಾರದಲ್ಲಿ ನೋಡುವುದಾದರೆ ಇವರು ಟಾಸ್ಕ್ ಅನ್ನು ಕೂಡ ಚೆನ್ನಾಗಿ ಆಡುತ್ತಿಲ್ಲ. ಇವರು ಯಾವಾಗಲೂ ನನ್ನನ್ನು ಪ್ರೀತಿಸುವ ಜನರಿದ್ದಾರೆ ಎಂದು ಹೇಳಿಕೊಂಡು ಇರುತ್ತಾರೆ. ಇವರು ಕೂಡ ಫಿನಾಲೆ ಗೆ ಹೋಗುತ್ತಾರೆ.

ತನಿಷಾ ( Thanisha ) :

ಬಿಗ್ ಬಾಸ್ ಕನ್ನಡ ಮನೆಯ ‘ಬೆಂಕಿ’ ಎಂದೇ ಕರೆಸಿಕೊಂಡಿರುವ ತನಿಷಾ ಅವರನ್ನು ಕಂಡರೆ ಎಲ್ಲರಿಗೂ ಇಷ್ಟ. ಇವರು ಇದ್ದ ವಿಷಯವನ್ನು ಅವರು ಇದ್ದ ಹಾಗೆ ಹೇಳುತ್ತಾರೆ ಎಂದೇ ಅವರನ್ನು ಅನೇಕರು ಇಷ್ಟಪಡ್ತಾರೆ. ಇವರು ಟಾಸ್ಕ್ ಅನ್ನು ಚೆನ್ನಾಗಿಯೇ ಆಡುತ್ತಾರೆ. ಆದರೆ ಸಂಗೀತಾ, ವರ್ತೂರು ಸಂತೋಷ್ ಮಧ್ಯೆ ಸಿಕ್ಕಿ ಹಾಕಿಕೊಂಡು ಅವರು ಸೈಲೆಂಟ್ ಆಗಿರೋ ಹಾಗೆ ಇದ್ದಾರೆ. ಅವರು ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ಹೋಗುತ್ತಾರೆ.

ಸಿರಿ ( siri ) :

ಇನ್ನು ಕೊನೆಯದಾಗಿ ಸಿರಿ ಬಗ್ಗೆ ನೋಡುವುದಾದರೆ, ಇವರು ಬಿಗ್ ಬಾಸ್ ಮನೆಯ ಎಲ್ಲ ಟಾಸ್ಕ್ ಗಳನ್ನು ಕೂಡ ಚೆನ್ನಾಗಿಯೇ ಆಡುತ್ತಾರೆ. ಅವರು ಬೇರೆ ಅವರ ತರ ಕಿರುಚಾಡಿ ಜಗಳ ಆಡಿ ಅವರು ಕೂಡ ಬಿಗ್ ಬಾಸ್ ಮನೆಯಿಂದ ಆದಷ್ಟು ಬೇಗ ಹೊರಬರುವ ಎಲ್ಲ ಸಾಧ್ಯತೆಗಳು ಇವೆ.

ಈ ಸೀಸನ್ ಅಲ್ಲಿ ಯಾರು ಫಿನಾಲೆ ತಲುಪುತ್ತಾರೆ, ಯಾರು ಟ್ರೋಫಿ ಗೆಲ್ತಾರೆ ಅಂತ ಕಾದು ನೋಡಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!