Ola Scooty – ಓಲಾ ಸ್ಕೂಟಿಗೆ ಮನಸೋತ ಜನ, ಬರೋಬ್ಬರಿ 30 ಸಾವಿರ ಬುಕಿಂಗ್ಸ್ ದಾಖಲೆ

most popular scooty

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಓಲಾ ಎಲೆಕ್ಟ್ರಿಕ್ ಸ್ಕೂಟಿ ಗಳು ಹೆಚ್ಚಿನದಾಗಿ ಮಾರಾಟವಾಗುತ್ತಿದೆ :

ಓಲಾ(Ola), ಎಥರ್(Ather)ಹಾಗೂ ಸಿಂಪಲ್ ಎನರ್ಜಿ(Simple Energy) ಇವು ಬೆಂಗಳೂರು ಮೂಲದ ಕಂಪನಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(electric scooter) ಅನ್ನು ಉತ್ಪಾದನೆ ಮಾಡುತ್ತವೇ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡಾ ಮಾರಾಟವಾಗುತ್ತಿವೆ. ಸದ್ಯ, ಇದೀಗ ಭಾರತದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ Ola ಎಲೆಕ್ಟ್ರಿಕ್, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಂಪನಿಯ ತನ್ನ ಅತಿ ಹೆಚ್ಚಿಗೆ ಮಾಸಿಕ ಮಾರಾಟವನ್ನು ಪ್ರಕಟಿಸಿದೆ. ನವೆಂಬರ್ ತಿಂಗಳಲ್ಲಿ ಬರೋಬ್ಬರಿ 30 ಸಾವಿರ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಒಟ್ಟಾರೆ ಬೇರೆ ಎಲೆಕ್ಟ್ರಿಕ್ ವಾಹನ ಕಂಪನಿಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ ಎಂದೇ ತಿಳಿಸಬಹುದು.

ಮೈಲಿಗಲ್ಲು ಸಾಧಿಸಿದ ಓಲಾ :

ದೃಢವಾದ ಮಾರಾಟವು ನಮ್ಮ ಬ್ರ್ಯಾಂಡ್ ಮತ್ತು ನಮ್ಮ ಬಲವಾದ ಉತ್ಪನ್ನ ಶ್ರೇಣಿಯಲ್ಲಿ ಗ್ರಾಹಕರು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ. ನಮ್ಮ ಅತ್ಯಧಿಕ ನೋಂದಣಿಗಳನ್ನು ದಾಖಲಿಸುವ ಮೂಲಕ ನಾವು ನಮ್ಮ ಗ್ರಾಹಕರ ಉನ್ನತ ಆಯ್ಕೆಯಾಗಿ ಸ್ಪಷ್ಟವಾಗಿ ಹೊರಹೊಮ್ಮಿದ್ದೇವೆ ಎಂದು OLA ಮೈಲಿಗಲ್ಲಿನ ಕುರಿತು ಓಲಾ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಂಶುಲ್ ಖಂಡೇಲ್ವಾಲ್ ಅವರು ಮಾತಾಡಿದರು.

ಇದೆ ಬೇಡಿಕೆ ಡಿಸೆಂಬರ್‌ ತಿಂಗಳಿನಲ್ಲೂ ಮುಂದುವರಿಯುತ್ತದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ. ಈ 2023 ವರ್ಷಾಂತ್ಯವನ್ನು ಹೊಸ ದಾಖಲೆಗಳೊಂದಿಗೆ ಮುಗಿಸಬೇಕು ಎಂಬುದು ಓಲಾ(OLA) ಕಂಪನಿಯ ಮುಖ್ಯ ಗುರಿಯಾಗಿ ಇರಿಸಿಕೊಂಡಿದೆ. ಎಕೋ ಫ್ರೆಂಡ್ಲಿ (Eco- friendly), ಗ್ರೀನ್ ಮೊಬಿಲಿಟಿಯತ್ತ (Green mobility) ಭಾರತದ ಪ್ರಯಾಣವನ್ನು ವೇಗಗೊಳಿಸಲು ಮತ್ತು ಸ್ಕೂಟರ್ ವಿಭಾಗದಲ್ಲಿ #EndICEAge (ಇಂಧನ ಚಾಲಿತ ವಾಹನಗಳ ಅಂತ್ಯ) ಗೆ ಹತ್ತಿರವಾಗಲು ನಮ್ಮ ಬದ್ಧತೆಯಲ್ಲಿ ನಾವು ಅಚಲರಾಗಿದ್ದೇವೆ ಎಂದು ಅಂಶುಲ್ ಅವರು ಹೇಳಿಕೊಂಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿವಿಧ OLA ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಅವುಗಳ ಬೆಲೆಯ ವಿವರ:

ಮೊದಲಿಗೆ Ola ಎಲೆಕ್ಟ್ರಿಕ್‌ನ ಪ್ರಮುಖ ಸ್ಕೂಟರ್ ಆಗಿರುವ S1 Pro ಎಲೆಕ್ಟ್ರಿಕ್ ಸ್ಕೂಟರ್
1,47,499 ರೂ. ಲಭ್ಯವಾಗುತ್ತದೆ.

S1 Air ಎಲೆಕ್ಟ್ರಿಕ್ ಸ್ಕೂಟರ್ ರೂ. 1,19,999 ಬೆಲೆಯಲ್ಲಿ ಲಭ್ಯವಿದೆ.

Ola Electric ತನ್ನ ICE-ಕಿಲ್ಲರ್ ಉತ್ಪನ್ನವಾದ S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿ ಕೊಂಡಿದೆ.
S1 X+ ಎಲೆಕ್ಟ್ರಿಕ್ ಸ್ಕೂಟರ್
S1 X (3kWh) ಎಲೆಕ್ಟ್ರಿಕ್ ಸ್ಕೂಟರ್
S1 X (2kWh) ಎಲೆಕ್ಟ್ರಿಕ್ ಸ್ಕೂಟರ್

S1 X+ ಎಲೆಕ್ಟ್ರಿಕ್ ಸ್ಕೂಟರ್ 1,09,999 ರೂ ಗೆ ಖರೀದಿಗೆ ಲಭ್ಯವಿದೆ.

S1 X (3kWh) ಮತ್ತು S1 X (2kWh) ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 99,999 ಮತ್ತು ರೂ. 89,999 ರ ಬೆಲೆಯಲ್ಲಿ ಖರೀದಿಗಳಿಗೆ ಲಭ್ಯವಿದೆ.

S1 X (3kWh) ಮತ್ತು S1 X (2kWh) ಎಲೆಕ್ಟ್ರಿಕ್ ಸ್ಕೂಟರ್ ಗಳ ಬುಕಿಂಗ್ ಈಗ ರೂ. 999 ಕ್ಕೆ ಸ್ಟಾರ್ಟ್ ಆಗಿದೆ. ಆಸಕ್ತ ಗ್ರಾಹಕರು ಮುಂಗಡವಾಗಿ ಬುಕಿಂಗ್ ಮಾಡಬಹುದಾಗಿದೆ. ಇಂತಹ ಉಪಯುಕ್ತ ಹಾಗೂ ಮುಖ್ಯ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!