Tecno Mobiles – ಇಷ್ಟು ಕಮ್ಮಿ ಬೆಲೆ ಅಂದ್ರೆ ನಿಜ ನೀವು ನಂಬಲ್ಲ, ಟೆಕ್ನೋದ ಹೊಸ ಸ್ಮಾರ್ಟ್ ಫೋನ್

Techno spark 20C

ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್(smart phone) ಖರೀದಿ ಮಾಡುವವರಿಗೆ ಒಂದು ಹೊಸ ಸುದ್ದಿ ಬಂದಿದೆ. ಹೌದು, ಅದೇನೆಂದರೆ
ಪ್ರಸಿದ್ಧವಾದ ಟೆಕ್ನೋ ಕಂಪನಿ ಸದ್ದಿಲ್ಲದೆ ತನ್ನ ಹೊಸ ಟೆಕ್ನೋ ಸ್ಪಾರ್ಕ್ 20C (Tecno Spark 20C) ಸ್ಮಾರ್ಟ್ ಫೋನನ್ನು ಇದೆ ನವೆಂಬರ್ 2023 ರಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು ಡ್ಯುಯಲ್ ಫ್ಲ್ಯಾಷ್ ಘಟಕಗಳೊಂದಿಗೆ ಜೋಡಿಯಾಗಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಬರುತ್ತದೆ ಎಂದು ಕಂಪನಿಯು ಗ್ರಾಹಕರಿಗೆ ತಿಳಿಸಿದೆ. ಈ ಟೆಕ್ನೋ ಸ್ಮಾರ್ಟ್ ಫೋನ್ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಾಗುತ್ತದೆ. ಇದರ ಬೆಲೆ, ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕುರಿತು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಟೆಕ್ನೋ ಸ್ಪಾರ್ಕ್ 20C (Tecno Spark 20C) ಸ್ಮಾರ್ಟ್ ಫೋನ್, 2023:

Techno spart 20C phone

ಮೊದಲನೆಯದಾಗಿ,ಟೆಕ್ನೋ ಸ್ಪಾರ್ಕ್ 20C (Tecno Spark 20C) ಸ್ಮಾರ್ಟ್ ಫೋನ್ ಡಿಸ್ಪ್ಲೇ (display)ಬಗ್ಗೆ ನೋಡುವುದಾದರೆ, ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್ 6.6-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ (refresh rate), 1612×720ಪಿಕ್ಸೆಲ್‌ಗಳ ರೆಸಲ್ಯೂಶನ್ (resolution) ಸಾಮರ್ಥ್ಯದೊಂದಿಗೆ ಬರುತ್ತದೆ.Tecno Spark 20C ಆಕ್ಟಾ-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 4GB RAM ನೊಂದಿಗೆ ಬರುತ್ತದೆ. Tecno Spark 20C ಆಂಡ್ರಾಯ್ಡ್ 13 (Android 13) OS ಅನ್ನು ರನ್ ಮಾಡುತ್ತದೆ

ಕ್ಯಾಮೆರಾ (Camera):

ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಹಿಂಭಾಗದಲ್ಲಿ LED flash ಮತ್ತು AI ಸೆಕೆಂಡ್ ಲೆನ್ಸ್​ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾವನ್ನು ಪ್ಯಾಕ್ ಮಾಡುತ್ತದೆ. ಇದು ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 8-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಬ್ಯಾಟರಿ (battery):

18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಮತ್ತು USB ಟೈಪ್-C ಪೋರ್ಟ್ ಹೊಂದಿರುತ್ತದೆ.

ಸ್ಟೋರೇಜ್ (Storage):
ಈ ಸ್ಮಾರ್ಟ್ ಫೋನ್ ಎರಡು ರೂಪಾಂತರದಲ್ಲಿ ಬರುತ್ತದೆ.
1.4GB RAM + 128GB storage
2.8GB RAM + 128GB storage
ಇವು ಎರಡೂ ಮಾದರಿಗಳು 8GB ವರ್ಚುವಲ್ RAM ನೊಂದಿಗೆ ಬರುತ್ತವೆ.

Tecno Spark 20C ನಲ್ಲಿನ ಇನ್ನ ಇತರೆ ಸಂಪರ್ಕ ಆಯ್ಕೆಗಳು ಹಾಗೂ ಫೀಚರ್ ಗಳ ಬಗ್ಗೆ ತಿಳಿಯುವುದಾದರೆ, Wi-Fi, GPS ಮತ್ತು USB OTG ಅನ್ನು ಒಳಗೊಂಡಿದೆ. ಫೋನ್‌ನಲ್ಲಿರುವ ಸೆನ್ಸಾರ್ ಗಳು ಫ್ಲಾಶ್ ಲೈಟ್, ದಿಕ್ಸೂಚಿ/ ಮ್ಯಾಗ್ನೆಟೋಮೀಟರ್, ಗೈರೊಸ್ಕೋಪ್ ಮತ್ತು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ:

ಇನ್ನೂ ಕೊನೆಯದಾಗಿ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್​ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿಯನ್ನು ನೋಡುವುದಾದರೆ, ಕಂಪನಿಯು ಇನ್ನೂ ನಿಖರವಾಗಿ ತನ್ನ ಬೆಲೆಯನ್ನು ಬಹಿರಂಗ ಮಾಡಿಲ್ಲ. ಆದರೆ, ವರದಿಗಳ ಪ್ರಕಾರ ಈ ಸ್ಮಾರ್ಟ್ ಫೋನ್ ಬೆಲೆ ಭಾರತದಲ್ಲಿ ಅಂದಾಜು 10,900 ರೂ. ಆಗಿರಬಹುದು ಎಂದು ತಿಳಿದುಕೊಳ್ಳಬಹುದಾಗಿದೆ

ಈ ಫೋನ್ ಆಲ್ಪೆಂಗ್ಲೋ ಗೋಲ್ಡ್, ಗ್ರಾವಿಟಿ ಬ್ಲಾಕ್, ಮಿಸ್ಟರಿ ವೈಟ್ ಮತ್ತು ಮ್ಯಾಜಿಕ್ ಸ್ಕಿನ್ (ಹಸಿರು ಚರ್ಮ) ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!