ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!

drone prathap missed ticket

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ನೀನು ಕೆಲವೇ ವಾರಗಳಲ್ಲಿ ಮುಗಿಯುತ್ತಿದೆ. ಗುಂಪು ಗುಂಪಾಗಿ ಆಡುತ್ತಿದ್ದ ಮನೆಯ ಮಂದಿಯರು, ಪ್ರೇಕ್ಷಕರ ಮನ ಗೆಲ್ಲಲು ಮತ್ತು ವಿನ್ನರ್ ಆಗುವ ಬಯಕೆಯಿಂದ ಏಕಾಂಗಿಯಾಗಿ ಹೋರಾಡುತ್ತಿರುವುದು ಗಮನ ಸೆಳೆಯುತ್ತಿದೆ. ಟಿಕೆಟ್ ಟು ಫಿನಾಲೆ(Ticket to finale)ಯಲ್ಲಿ ಪ್ರತಾಪ್(drone prathap) ಅವರಿಗೆ ಟಿಕೆಟ್ ದೊರೆಯದಿರುವುದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ ಏನು ಎಂಬುದರ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಟಿಕೆಟ್ ಟು ಫಿನಾಲೆ ಪ್ರತಾಪ್ ಗೆ ಏಕೆ ದೊರೆಯಲಿಲ್ಲ?:

drone Prathap who got direct ticket to the finale

ಟಿಕೆಟ್ ಟು ಫಿನಾಲೆ ಟಾಸ್ಕಿನಲ್ಲಿ ಪ್ರತಾಪ್ ಅವರು ಎಂದೂ ನಿರೀಕ್ಷಿಸದ ಆಟವನ್ನು ಆಡಿ 420 ಪಾಯಿಂಟ್ಗಳನ್ನು ಗಳಿಸಿ, ಇಡೀ ಮನೆಯವರಿಗೆಲ್ಲರಿಗಿಂತಲೂ ಅತಿ ಹೆಚ್ಚು ಪಾಯಿಂಟ್ಗಳನ್ನು ಗಳಿಸಿದ್ದರು. ಆದರೂ ಕೂಡ ಅವರಿಗೆ ಟಿಕೆಟ್ ಸಿಗಲಿಲ್ಲ. ಏಕೆಂದರೆ ಕೊನೆಯಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದ್ದರು ಅದೇನೆಂದರೆ, ಟಾಸ್ಕಿನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಮೊದಲ ಮೂವರನ್ನು ಸೆಲೆಕ್ಟ್ ಮಾಡಿ ಮನೆಯವರು ಯಾರು ಅರ್ಥರು ಅವರಲ್ಲಿ ಎಂಬುದನ್ನು ನಿರ್ಧರಿಸಬೇಕಾಗಿತ್ತು. ಸಂಗೀತ ಅವರಿಗೆ 300 ಪಾಯಿಂಟ್ಗಳು ಹಾಗೂ ನಮ್ರತ ಅವರಿಗೆ 210 ಪಾಯಿಂಟ್ ಗಳು ಬಂದಿದ್ದವು. ಆದ್ದರಿಂದ ಈ ಮೂವರಲ್ಲಿ ಸಂಗೀತ ಅವರಿಗೆ ಮನೆಯ ಮಂದಿಯವರೆಲ್ಲ ಟಿಕೆಟ್ ಪಡೆಯಲು ಅರ್ಹರಿದ್ದಾರೆ ಎಂದು ನಿರ್ಧರಿಸಿದರು. ಆದ್ದರಿಂದ ಟಿಕೆಟ್ ಪಾಲು ಪ್ರತಾಪ್ ಅವರ ಕೈ ತಪ್ಪಿ ಹೋಯಿತು.

ಪ್ರತಾಪ್ ಗೆ ದೊರೆಯದ ಬಗ್ಗೆ ಜನರ ಅಭಿಪ್ರಾಯ :

ಇದನ್ನು ವೀಕ್ಷಿಸಿದ ಪ್ರೇಕ್ಷಕರು, ತುಂಬಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಡೆದಂತೆ ನುಡಿಯಲಿಲ್ಲ, ಪ್ರತಾಪ್ ಅವರಿಗೆ ಟಿಕೆಟ್ ಕೊಡಬೇಕಿತ್ತು ಎಂದು ಹಲವಾರು ಪ್ರೇಕ್ಷಕರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೋಪಗೊಂಡ ಫ್ಯಾನ್ಸ್, ಬಿಗ್ ಬಾಸ್ ಫೇಕ್ ಪ್ಲಾನ್ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ದಿನ ಬಿಗ್ ಬಾಸ್ ನೋಡಿದ್ದು ಕೂಡ ವೇಸ್ಟ್ ಆಯಿತು ಎಂದಿದ್ದಾರೆ. ಅಷ್ಟೇ ಅಲ್ಲದೆ, ಒಬ್ಬರು. “ಬಿಗ್ ಬಾಸ್’ಗೆ ಸಂಗೀತಾ ಶೃಂಗೇರಿ ಅವರ ಅತ್ತಿಗೆ ದುಡ್ಡು ಕೊಟ್ಟಿರಬೇಕು. ಅದಕ್ಕೆ ಅವರಿಗೆ ಟಿಕೆಟ್ ನೀಡಿದ್ದಾರೆ” ಎಂದು ಕೋಪ ಹೊರ ಹಾಕಿದ್ದಾರೆ. ಇನ್ನು ಕೆಲವರು ಸಂಗೀತ ಅವರಿಗೆ ಸಪೋರ್ಟ್ ಮಾಡುತ್ತಾ, ಮೊದಲನೇ ಒಳ್ಳೆಯ ಆಟ ಆಡಿದವರಿಗೆ ಟಿಕೆಟ್ ಸಿಕ್ಕಿದ್ದು ಒಳ್ಳೆಯದಾಯಿತು. ಒಂದು ವಾರ ಚೆನ್ನಾಗಿ ಆಟ ಆಡಿದರೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿದ್ದಾರೆ.

whatss

ಸಂಗೀತಾಗೆ ಟಿಕೆಟ್ ದೊರೆತ ಬಗ್ಗೆ ಬಿಗ್ ಬಾಸ್ ಸ್ಪಷ್ಟಣೆ :

ಇಂದಿನ ಸಂಚಿಕೆಯಲ್ಲಿ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ತೆಗೆದುಕೊಂಡ ಅಭಿಪ್ರಾಯ ಯಾರಿಗೆಲ್ಲ ಸರಿ ಅನಿಸಿದೆ ಎಂದು ಸುದೀಪ್ ಅವರು ಮನೆಯವರ ಜೊತೆ ಹೇಳಿದರು. ಅದಕ್ಕೆ ಎಲ್ಲಾ ಅಭ್ಯರ್ಥಿಗಳು, ಬಿಗ್ ಬಾಸ್ ನಿರ್ಧಾರವು 100% ಸರಿಯಾಗಿದೆ. ಏಕೆಂದರೆ ಸಂಗೀತ ಅವರು ಮೊದಲಿನಿಂದ ಚೆನ್ನಾಗಿ ಆಟ ಆಡುತ್ತಾ ಬಂದಿದ್ದಾರೆ, ಆದರೆ ಪ್ರತಾಪ್ ಅವರು ಈ ಒಂದು ವಾರವಷ್ಟೇ ಚೆನ್ನಾಗಿ ಆಟ ಆಡಿದ್ದಾರೆ. ಹಾಗಾಗಿ ಸಂಗೀತ ಅವರಿಗೆ ಟಿಕೆಟ್ ದೊರೆತಿದ್ದು ಸರಿ ಇದೆ ಎಂದು ಹೇಳಿದರು. ಸುದೀಪ್ ಅವರು ಅದಕ್ಕೆ ಸ್ಪಷ್ಟಣೆಯನ್ನು ನೀಡುತ್ತಾ, ಬಿಗ್ ಬಾಸ್ ಮೊದಲೇ ಸೂಚಿಸಿದ್ದಂತೆ ವಾರದ ಅಂತ್ಯದಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ಒಬ್ಬ ಸದಸ್ಯ ಟಿಕೆಟ್ ಟು ಫಿನಾಲೆಯನ್ನು ಪಡೆಯುತ್ತಾರೆ ಎಂದು ಹೇಳಿದ್ದರು, ಅದರಂತೆಯೇ ನಡೆದಿದ್ದಾರೆ ಎಂದು ಹೇಳಿದರು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!