Bigboss Kannada Season – ಬಿಗ್‌ಬಾಸ್ ಸೀಸನ್ 10ರ ಸಂಭಾವ್ಯ ನಟ ನಟಿಯರ ಪಟ್ಟಿ ಬಿಡುಗಡೆ

WhatsApp Image 2023 10 05 at 15.56.01

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಕನ್ನಡದ ಬಿಗ್ ಬಾಸ್-10 ಕಂಟೆಸ್ಟಂಟ್ಗಳ (Big Boss-10 Contestent) ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಬಿಗ್ ಬಾಸ್ ಕಂಟೆಸ್ಟೆಂಟ್ ಇವರೇ ನೋಡಿ :

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಇನ್ನೇನು ಕೆಲವೇ ದಿನಗಳಲ್ಲಿ  ಶುರುವಾಗಲಿದೆ. ಮತ್ತು ಬಿಗ್ ಬಾಸ್ ಸೀಸನ್ 10ಗೆ ಸಕಲ ಸಿದ್ಧತೆ ಆರಂಭವಾಗಿದ್ದು,  ಕರ್ನಾಟಕ ಜನೆತೆಗೆ ಈ ಬಾರಿ ಬಿಗ್ ಬಾಸ್ ಸೀಸನ್ 10 ರಲ್ಲಿ ಯಾರ್ಯಾರು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಇನ್ನು ಹೆಚ್ಚು ಆಗುತ್ತಿದೆ ಎಂದು ತಿಳಿದೇ ಇದೆ.
ಆದರಿಂದ ಈ ಬಾರಿಯ ‘ಬಿಗ್‍ಬಾಸ್’ ಮನೆಗೆ ಯಾರೆಲ್ಲ ಅಭ್ಯರ್ಥಿಗಳ ಎಂಟ್ರಿ ನೀಡುತ್ತಿದರೆ ಎಂಬುದರ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಿ ಕೊಡುತ್ತೇವೆ.

chanel

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಅಕ್ಟೋಬರ್ 8 ರಿಂದ ರಾತ್ರಿ 9:30 ಕ್ಕೆ ಪ್ರಸಾರವಾಗಲಿದೆ. ಬಿಗ್​ ಬಾಸ್​ ಕನ್ನಡ ಸೀಸನ್​ 10 ಆರಂಭಕ್ಕೂ ಮುನ್ನ ಕಲರ್ಸ್​ ಕನ್ನಡ (Colors Kannada) ವಾಹಿನಿ ಹಾಗೂ ನಟ ಕಿಚ್ಚ ಸುದೀಪ್   ಸುದ್ದಿಗೋಷ್ಠಿ ಆಯೋಜಿಸಿದ್ದು, ಈ ಸೀಸನ್​ನ ವಿಶೇಷತೆಗಳ ಬಗ್ಗೆ  ಮಾಹಿತಿ ನೀಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ‘ನೂರು ದಿನಗಳ ಹಬ್ಬ’ ಎಂದು ಪ್ರೊಮೋ (Promo) ಬಿಡುಗಡೆ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 10ಗೆ ಸಕಲ ಸಿದ್ಧತೆ ಆರಂಭವಾಗಿದ್ದು, ಮತ್ತೊಂದು ಕಡೆ ಈ ಬಾರಿ ಸೀಸನ್ ಯಾವ ಯಾವ ಸ್ಪರ್ಧಿಗಳನ್ನ ಬರಮಾಡಿಕೊಳ್ಳುತ್ತೆ? ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಿಂದ ಹಿಡಿದು, ಕಿರುತೆರೆ, ಸಿನಿಮಾ ಸೇರಿ ಹಲವು ಕ್ಷೇತ್ರಗಳಲ್ಲಿ ಮಿಂಚಿದ ಹೆಸರುಗಳೇ ಓಡಾಡುತ್ತಿವೆ.

ಇಲ್ಲಿ ವಿಶೇಷವಾಗಿ ಮೊದಲನೆಯ ಕಂಟೆಸ್ಟಂಟ್ (Contestent) ಆಗಿ
‘777 ಚಾರ್ಲಿ’ ಚಲನಚಿತ್ರದ ಚಾರ್ಲಿ ಎಂಟ್ರಿ ನೀಡಲಿದೆ ಎಂದು ಎಲ್ಲರಿಗೂ ತಿಳಿದೇ ಇದೆ.
ಆದರೆ ಚಾರ್ಲಿ ಯನ್ನು ಹೊರತುಪಡಸಿ ಯಾರೆಲ್ಲ contestent ಆಗಿ ಬರಲಿದ್ದಾರೆ ಎಂದು ಸಂಪೂರ್ಣವಾಗಿ ನಮ್ಮ ಲೇಖನದಲ್ಲಿ ತಿಳಿಯೋಣ.

ಈ ಕಂಟೆಸ್ಟೆಂಟ್ ಸೀಸನ್ 10 ನಲ್ಲಿ ಬರುವುದು ಗ್ಯಾರಂಟಿ :

ನೀನಾದ್ ಹರಿತ್ಸ: ನಾಗಿಣಿ 2 ಸೀರಿಯಲ್ ನಲ್ಲಿ  ಲೀಡ್ ರೋಲ್ ನಿಭಾಯಿಸಿದ ನಾಯಕ ನೀನಾದ್ ಹರಿತ್ಸ ಈ ಬಾರಿ ಬಿಗ್ ಬಾಸ್ ನಲ್ಲಿ ಪ್ರವೇಶಿಸಲಿದ್ದಾರೆ.

ನಮ್ರತಾ ಗೌಡ : ಕಳೆದ ಕೆಲ ಸೀಸನ್‌ಗಳಿಂದಲೂ ನಮ್ರತಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದ್ದರು, ಆದರೆ ನಾಗಿಣಿ 2 ಸೀರಿಯಲ್ ನಲ್ಲಿ ನಟಿಸುತ್ತಿರುವುದರಿಂದ ಅವರಿಗೆ ಸಾಧ್ಯವಾಗಿರಲಿಲ್ಲಾ, ಆದರೆ ಈಗ ನಟಿ ನಮ್ರತಾ ಯಾವದೇ ಸೀರಿಯಲ್ ಅಥವಾ ಶೋಗಳಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಈ ಬಾರಿಯ ಸೀಸನ್ 10 ರಲ್ಲಿ ನಮ್ರತಾ ಗೌಡಾ ಎಂಟ್ರಿ ನೀಡಲಿದ್ದಾರೆ.

ವಿಜಯ ಸೂರ್ಯ : ಅಗ್ನಿಸಾಕ್ಷಿ ಧಾರವಾಹಿಯಿಂದ ಖ್ಯಾತಿಯನ್ನು ಪಡೆದುಕೊಂಡ ನಟ ವಿಜಯ ಸೂರ್ಯ ಈ ಬಾರಿ ಸೀಸನ್ 10 ರಲ್ಲಿ ಪ್ರವೇಶಿಸಲಿದ್ದಾರೆ ಎಂದು ಎನ್ನಲಾಗುತ್ತಿದೆ. ಸದ್ಯ ವಿಜಯ ಅವರು ‘ನಮ್ಮ ಲಚ್ಚಿ’ ಅಭಿನಯಿಸುತ್ತಿದ್ದಾರೆ, ಈ ಸೀರಿಯಲ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

ರಂಜನಿ ರಾಘವನ್: ಬಿಗ್ ಬಾಸ್ ಮೂಲಕ ಕಮ್ ಬ್ಯಾಕ್ ಮಾಡಲು ‘ಪುಟ್ಟ ಗೌರಿ ಮದುವೆ’ ಮತ್ತು ‘ಕನ್ನಡತಿ’ ಧಾರವಾಹಿಯಲ್ಲಿ ನಟಿಸಿರುವ ರಂಜನಿ ರಾಘವನ್ ಕೂಡ ಬಿಗ್ ಬಾಸ್ ಕನ್ನಡದ ಹತ್ತನೇ ಸೀಸನ್‌ನ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ರಕ್ಷಕ್ ಬುಲೆಟ್:  ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ (Rakshak Bullet Prakash) ಅವರು ಶರಣ್ ಅಭಿನಯದ   ‘ಗುರು ಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದರು. ಈಗ ಬಿಗ್ ಬಾಸ್ ದೊಡ್ಮನೆಗೆ ರಕ್ಷಕ್ ಬುಲೆಟ್ ಪ್ರವೇಶಲಿದ್ದಾರೆ.

ರಾಜೇಶ್ ಧ್ರುವ: ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅಖಿಲ್ ಪಾತ್ರ ವಹಿಸಿದ್ದ ರಾಜೇಶ್ ಧ್ರುವ ಸೀಸನ್ 10 ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇತ್ತೀಚೆಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋದಲ್ಲಿ ನೋಡಿದ, ಕಿಚ್ಚ ಸುದೀಪ್ ಅವರ ಕಾರ್ಯಕ್ರಮದ ವದಂತಿಯ ಸ್ಪರ್ಧಿಗಳ ಪಟ್ಟಿಯಲ್ಲಿ ರಾಜೇಶ್ ಧ್ರುವ ಕೂಡ ಸೇರಿದ್ದಾರೆ.

ಮೇಘಾ ಶೆಟ್ಟಿ:
ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಅಭಿಮಾನಿಗಳ ಅಚ್ಚು ಮೆಚ್ಚಾಗಿರುವ ಮೇಘಾ ಶೆಟ್ಟಿ  ಬಿಗ್ ಬಾಸ್ ಸೀಸನ್ 10 ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ನಟ ಡಾರ್ಲಿಂಗ್‌ ಕೃಷ್ಣ ಅವರ ಜೊತೆ ಮೇಘಾ ಶೆಟ್ಟಿ ನಟಿಸಿದ್ದಾರೆ. ಮೇಘಾ ಶೆಟ್ಟಿ ಸೋಷಿಯಲ್​ ಮೀಡಿಯಾದಲ್ಲಿಯೂ ಕೂಡ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.

ವಿನಯ್ ಕುಮಾರ್: ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ವಿನಯ್ ಕುಮಾರ್ ಕೂಡ ಬಿಗ್ ಬಾಸ್ ಕನ್ನಡ 10 ರ ಸ್ಪರ್ಧಿಯಾಗಿ ಭಾಗವಾಗಲಿದ್ದಾರೆ.

ಮಿಮಿಕ್ರಿ ಗೋಪಿ:  ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಎಂದೂ ಖ್ಯಾತಿ ಪಡೆದ ಮಿಮಿಕ್ರಿ ಗೋಪಿ ಅವರೂ ಕೂಡ ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ಇಂತಹ ಉತ್ತಮ ಮಾಹಿತಿಯನ್ನು ತಿಳಿಸಿಕೊಡುವ ಈ ಲೇಖನವನ್ನು ನಿಮ್ಮ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಿಲು ಮರಿಯಬೇಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!