ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?

IMG 20240108 WA0004

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (BigBoss Kannada season 10) ನಲ್ಲಿ ಇಂದು ನಡೆದ ಒಂದು ಕಾರ್ಡುಗಳ ಟಾಸ್ಕ್ ನಿಂದ ದೊಡ್ಡ ಜಗಳವೇ ಮನೆಯಲ್ಲಿ ನಡೆಯುತ್ತಿದೆ. ಮನೆಯಿಂದ ಹೊರಗಡೆ ಅನಾರೋಗ್ಯದಿಂದ ತೆರಳಿದ ಪ್ರತಾಪ್(prathap), ಮರಳಿ ಬಂದ ನಂತರ ಮೊದಲಿಗಿಂತ ಬದಲಾದಂತೆ ಕಾಣುತ್ತಿದ್ದಾರೆ. ಅಂದರೆ ಎಲ್ಲ ಮಾತುಗಳನ್ನು ನೇರವಾಗಿ ಎದುರಾಳಿಗಳ ಮೇಲೆ ಮಾತನಾಡುತ್ತಿದ್ದಾರೆ. ಇಂದು ಕೂಡ ಮನೆಯಲ್ಲಿ ವಿನಯ ಹಾಗೂ ಪ್ರತಾಪ್ ಅವರಿಗೆ ಜಗಳವಾಗಿದೆ. ಜಗಳ ಏಕೆ ನಡೆಯಿತು ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

vinay prathap fight

ಶನಿವಾರದ ಸಂಚಿಕೆಯಲ್ಲಿ ಪ್ರತಾಪ್ ಅವರು, ವಿನಯವರು ಅವರ ಗುಂಪಿಗೆ ಬಂದವರನ್ನು ತುಳಿದು ಮೇಲೆ ಬಂದಿದ್ದಾರೆ, ಅವರ ಬ್ಲಾಂಕೆಟ್ ಗಳನ್ನೆಲ್ಲ ತನ್ನ ಬೆಟ್ ನಲ್ಲಿ ಇರಿಸಿಕೊಂಡಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದ್ದಾಗಿನಿಂದ ಅವರಿಬ್ಬರಿಗೆ ಮಾತಿನ ಚಕಾಮುಖಿ ನಡೆಯುತ್ತಲೇ ಇದೆ. ಇಂದು ನಡೆದ ಟಾಸ್ಕಿನಲ್ಲಿ ಕಾರ್ಡುಗಳು ಯಾರಿಗೆ ಅನ್ವಯವಾಗುತ್ತಯೋ ಅವುಗಳನ್ನು ಅವರಿಗೆ ಕಾರಣಗಳನ್ನು ನೀಡುವ ಟಾಸ್ಕಿನಲ್ಲಿ, ಪ್ರತಾಪ್ ಅವರು ಎಲ್ಲಾ ಕಾರ್ಡ್ಗಳನ್ನು ವಿನಯವರಿಗೆ ನೀಡಿದ್ದಾರೆ. ಇದರಿಂದ ವಿನಯವರು ಪ್ರೊವೋಕ್ ಆದರೂ.

whatss

ಪರಿಣಾಮ ನೆಟ್ಟಗಿರಲ್ಲ ಎಂದು ಹೇಳಿದ ಪ್ರತಾಪ್:

ಅಮಾಯಕ ಕಾರ್ಡ್ ಅನ್ನು ವಿನಯವರು ಪ್ರತಾಪ್ ಗೆ ನೀಡಲು ಕಾರಣವನ್ನು ನೀಡುತ್ತಿದ್ದಾಗ, ವಿನಯವರು ಹೀಗೆ ಹೇಳಿದರು : ಮೊದಲನೇ ದಿನದಿಂದಲೂ ಕಣ್ಣೀರು ಹಾಕುತ್ತ ಬಾತ್ರೂಮಿನಲ್ಲಿ ಹೋಗಿ ಅಮಾಯಕನಂತೆ ಇದ್ದಿದ್ದು, ಮನೆಯಲ್ಲಿ ಏನೇ ನಡೆದರೂ ಮಾತನಾಡದೆ ಶನಿವಾರದ ದಿನಕ್ಕಾಗಿ ಕಾಯುತ್ತಿರುತ್ತಾರೆ. ಎಂದು ಹೇಳಿದರು. ಅದಕ್ಕೆ ಡ್ರೋನ್ ಪ್ರತಾಪ್ ಅವರು ನೀವು ಹೇಳಿದಂತೆಲ್ಲ ಹೇಳಿಸಿಕೊಳ್ಳಲು ಆಗುವುದಿಲ್ಲ. ಹೀಗೆ ಮಾತನಾಡಿದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಹೇಳಿದರು. ಅದಕ್ಕೆ ವಿನಯವರು ನೀನು ಯಾರು ನನಗೆ ಪರಿಣಾಮ ಚೆನ್ನಾಗಿಲ್ಲ ಎನ್ನುವುದಕ್ಕೆ, ನೀನು ಮುಗ್ಧನ ತರ ಬಂದು ಇಲ್ಲಿ ಆಡುತ್ತಿರುವ ನಾಟಕಗಳೆಲ್ಲ ನನಗೆ ಗೊತ್ತಿಲ್ಲವಾ ಎಂದು ವಾದವನ್ನು ಮಾಡಿದ್ದಾರೆ. ವಿನಯ್ ಮಾತ್ರವಲ್ಲದೆ ಮನೆಯ ಹಲವಾರು ಜನರು ಕೂಡ ಸಿಂಪತಿ ಕಾರ್ಡನ್ನು ಪ್ಲೇ ಮಾಡುತ್ತಿರುವುದು ಪ್ರತಾಪ್ ಎಂದು ಹೇಳಿದ್ದಾರೆ.

ವಿನಯ್ – ಪ್ರತಾಪ್ ಕಾಳಗ:

ಇಂದು ನಡೆದ ಟಾಸ್ಕ್ ಒಂದರಲ್ಲಿ ಎಲ್ಲಾ ಕಾರ್ಡ್ಗಳನ್ನು ಪ್ರತಾಪ್ ಅವರು ವಿನಯವರಿಗೆ ನೀಡುತ್ತಿದ್ದಾರೆ. ಉದಾಹರಣೆಗೆ ಪ್ರಚೋದಿಸುವ ಕಾರ್ಡ್, ಡಬಲ್ ಸ್ಟ್ಯಾಂಡರ್ಡ್ ಕಾರ್ಡ್, ಹೀಗೆ ಎಲ್ಲಾ ಕಾಡುಗಳನ್ನು ನೀಡುವಾಗ ಕಾರಣಗಳನ್ನು ನೀಡಿ ವಿನಯವರಿಗೆ ಪ್ರತಾಪ ಅವರು ಪ್ರವೋಕ್ ಮಾಡಿದ್ದಾರೆ. ವಿನಯ್ ಅವರು, ನಾನು ಬೇಗ ಪ್ರವೋಕ್ ಆಗುತ್ತೇನೆ ಎಂದು ತಿಳಿದು ಇಷ್ಟೊಂದು ಮಾತನಾಡುತ್ತೇನೆ ಮಾತನಾಡುತ್ತಿದ್ದಾನೆ ಎಂದು ಪ್ರತಾಪ್ ಅವರಿಗೆ ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 10 ನಲ್ಲಿ ಇನ್ನೇನು ಎರಡೇ ವಾರಗಳು ಇರುವಾಗ ಎಲ್ಲರೂ ಎಚ್ಚೆದ್ದಂತೆ ಕಾಣುತ್ತಿದೆ. ಕೆಲವು ದಿನಗಳಷ್ಟೇ ಇರುವ ಬಿಗ್ ಬಾಸ್ ಮನೆಯಲ್ಲಿ ರೋಚಕತೆಯು ಈಗ ಶುರುವಾಗುತ್ತಿದೆ. ವಿನಯ್ ಹಾಗೂ ಪ್ರತಾಪ್ ಅವರ ಜಗಳ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!