ಬಿಗ್‌ಬಾಸ್ ಸೀಸನ್ 10 ( Big Boss Season 10 ) ಶುರುವಾಗಿ 6 ವಾರಗಳು ಕಳೆದು 7ನೇ ವಾರಕ್ಕೆ ಕಾಲಿಟ್ಟಿದೆ. 6ನೇ ವಾರ ಡಬಲ್ ಎಲಿಮಿನೇಶನ್ ( Elimination ) ಇದ್ದಿದ್ದರಿಂದ ಸ್ಪರ್ಧಿಗಳ ಮುಖದಲ್ಲಿ ಕೊಂಚ ಗಾಬರಿಯ ವಾತಾವರಣ ಮನೆ ಮಾಡಿತ್ತು. ಕಿಚ್ಚನ ಜೊತೆ ನಡೆದ ಫೇಕ್, ಜೆನ್ಯೂನ್ ಚರ್ಚೆಯಲ್ಲಿ ಮುಳುಗಿದ್ದ ಮನೆಯಲ್ಲಿ ಬೆಳ್ಳಂ ಬೆಳಿಗ್ಗೆ ನಗುವಿನ ವಾತಾವರಣ ಸೃಷ್ಟಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಗೆ ಸರ್ಪ್ರೈಸ್ ಎಂಟ್ರಿ :
7ನೇ ವಾರದ ಆರಂಭದಲ್ಲೇ ಒಂದು ಅದ್ಭುತ ಸರ್ಪ್ರೈಸ್ ( Surprise ) ಕೊಟ್ಟ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ನಗು ಮನೆ ಮಾಡಿದೆ. ಸರ್ಪ್ರೈಸ್ ನೆಪವಾಗಿ ಬಿಗ್‌ಬಾಸ್ ಮನೆಗೆ ಸ್ಪೆಷಲ್ ಎಂಟ್ರಿ ತೆಗೆದುಕೊಂಡರಾ ಬ್ರಹ್ಮಾಂಡ ಗುರೂಜಿ ( Bramhaanda Guruji ). ಮುಂಡಾ ಮೋಚ್ತು’ ಎಂಬ ಶಬ್ದ ಬಿಗ್‌ಬಾಸ್ ಮನೆಯಲ್ಲಿ ಮೊಳಗಿದೆ.
ಬೆಳಗ್ಗೆನೇ ಬಿಗ್ ಬಾಸ್ ಮನೆಯ ಮುಖ್ಯ ದ್ವಾರ ( MainDoor ) ಓಪನ್ ಆದಾಗ ಸ್ಪರ್ಧಿಗಳು ಅಚ್ಚರಿಯಿಂದ ನೋಡುತ್ತಿದಂತೆ ಬ್ರಹ್ಮಾಂಡ ಗುರೂಜಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಇದನ್ನು ನೋಡಿದ ಮನೆಯ ಸ್ಪರ್ಧಿಗಳ ಮುಖದಲ್ಲಿ ನಗು ಅರಳಿದೆ. ಹೀಗೆ ಮನೆಯೊಳಗೆ ಎಂಟ್ರಿ ಕೊಟ್ಟ ಗುರೂಜಿ ಬಾಳೆ ಹಣ್ಣು ತಿನ್ನುತ್ತಾ , ಮನೆ ಮಂದಿಯನ್ನು ಮತನಾಡಿಸುತ್ತ, ಮನೆ ತುಂಬಾ ಓಡಾಡಿಕೊಂಡು ಇದ್ದಾರೆ. ಈಗ ಮನೆ ಮಂದಿಯೆಲ್ಲ ಖುಷಿಯಿಂದ ಅವರ ಜೊತೆ ಮಾತನಾಡುತ್ತ ತಮ್ಮ ಚಟುವಟಿಕೆ ಯಲ್ಲಿ ನಿರತರಾಗಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹಾಗೆಯೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಗುರೂಜಿ ಬಂದಿರುವುದು ಅಚ್ಚರಿ ( Shock ) ಮೂಡಿಸಿದೆ. ಹಾಗೂ ಈ ಒಂದು ವಿಚಾರ ಎಲ್ಲರಲ್ಲೂ ಕಾಡುತ್ತಿದೆ. ಗುರೂಜಿ ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದಿದ್ದರೋ ಅಥವಾ ವೈಲ್ಡ್ ಕಾರ್ಡ್ ( Wild Card ) ನಲ್ಲಿ ಎಂಟ್ರಿ ಕೊಟ್ಟಿದ್ದರೋ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಬಿಗ್ ಬಾಸ್ ಮನೆಯೊಳಗೆ ಬ್ರಹ್ಮಾಂಡ ಗುರುಜಿಯ ಡೈಲಾಗ್ ಗಳ ( Dialogues ) ಸುರಿಮಳೆ :
ಹೌದು, ಮನೆಯೊಳಗೆ ಎಂಟ್ರಿ ಕೊಟ್ಟಿದ್ದೋ.. ಕೊಟ್ಟಿದ್ದು ಡೈಲಾಗ್ಸ್ ಗಳ ಸುರಿಮಳೆ ಸುರಿದಿದೆ. ಬ್ರಹ್ಮಾಂಡ ಗುರೂಜಿ ಪ್ರತಿಯೊಂದು ಮಾತಿಗೂ ‘’ಮುಂಡಾಮೋಚ್ತು’’, ‘’ಪುಟಗೋಸಿ’’, ‘’ನಿನ್ ಪಿಂಡ’’, ‘’ಹಾಳಾಗೋಗು’’ ಅನ್ನುವ ಡೈಲಾಗ್ ಗಳು ಅವರ ಟ್ರೇಡ್ ಮಾರ್ಕ್ ಆಗಿದ್ದು ಇದು ಎಲ್ಲರನ್ನು ನಕ್ಕು ನಗಿಸಿದೆ.
ಇನ್ನು ನೋಡುವುದಾದರೆ, ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ನ ಮೊದಲ ಸೀಸನ್ ನ ( Big Boss Season 1 ) ಸ್ಪರ್ಧಿಯಾಗಿದ್ದರು. ಹಾಗೆಯೇ ಆ ಸೀಸನ್ ನ ಫಿನಾಲೆ ( Finale ) ಹಂತ ತಲುಪಿ 3ನೇ ರನ್ನರ್ ಅಪ್ ಆಗಿದ್ದರು. ಇದಾದ ನಂತರ ಸತತ ಹತ್ತು ವರ್ಷಗಳ ಬಳಿಕ ಮತ್ತೆ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟಿದ್ದಾರೆ.
‘ಬಿಗ್ ಬಾಸ್’ ಮನೆಯೊಳಗೆ ಇಲ್ಲಿಯವರೆಗೂ ಅತಿಥಿಗಳಾಗಿ ಎಂಟ್ರಿಕೊಟ್ಟಿದ್ದರು. ಇದೀಗ ವಿಶೇಷ ಅತಿಥಿಯಾಗಿ ನರೇಂದ್ರ ಬಾಬು ಶರ್ಮಾ ಬಂದಿದ್ದಾರಾ? ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಇವರಿಂದ ಸಲಹೆ ಸಿಗುತ್ತಾ? ಎಂಬುದನ್ನ ಕಾದುನೋಡಬೇಕಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಈ ಸೀಸನ್ ಬಿಗ್ ಬಾಸ್ ನಲ್ಲಿ ಹಲವಾರು ಅತಿಥಿಗಳ ಎಂಟ್ರಿ :
ಈ ಸೀಸನ್ ನ ಬಿಗ್ ಬಾಸ್ ಅಂತೂ ಬಹಳ ವಿಶಿಷ್ಟವಾಗಿದೆ. ಮನೆಯೊಳಗೆ ಹಲವಾರು ಪ್ರಕರಣಗಳು ನಡೆದಿವೆ. ಹಾಗೆಯೇ ಇದುವರೆಗೂ ಹಲವಾರು ಮಂದಿ ಬಿಗ್ ಬಾಸ್ ಮನೆಯೊಳಗೆ ಬಂದು ಹೋಗಿದ್ದಾರೆ. ಅವರಲ್ಲಿ ಶಾಸಕ ಪ್ರದೀಪ್ ಈಶ್ವರ್, ‘ಬಿಗ್ ಬಾಸ್’ ವಿನ್ನರ್ ಪ್ರಥಮ್, ನಟಿ ತಾರಾ, ‘ಭಾಗ್ಯಲಕ್ಷ್ಮೀ’ ಸೀರಿಯಲ್ ಖ್ಯಾತಿಯ ನಟಿ ಸುಷ್ಮಾ ಕೆ ರಾವ್ ಬಂದಿದ್ದರು.
ಇನ್ನು ಒಂದು ವಿಶೇಷ ಸಂಗತಿ ಎಂದರೆ ಈ ಭಾನುವಾರ ಮನೆಯೊಳಗೆ ಡಬಲ್ ಎಲಿಮಿನೇಷನ್ ಕೂಡ ನಡೆದಿದೆ. ಅದಾದ ನಂತರ ಈಗ ಮನೆಗೆ ಬ್ರಹ್ಮಾಂಡ ಗುರೂಜಿ ಧಿಡೀರ್ ಎಂಟ್ರಿ ಕೊಟ್ಟು ಎಲ್ಲರನ್ನು ಮುಕವಿಷ್ಮಯ ವಾಗಿಸಿದೆ. ಈ ಒಂದು ವಿಚಾರ ಎಲ್ಲ ಸ್ಪರ್ಧಿಗಳ ಮತ್ತು ವೀಕ್ಷಕರ ತಲೆ ಕೆಡಿಸಿದೆ. ಹಾಗೆಯೇ ಗುರೂಜಿ ಬಂದಿದ್ಯಾಕೆ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಬಿಗ್ ಬಾಸ್ ಮನೆಯೊಳಗೆ ಗುರೂಜಿ ಗೆಸ್ಟ್ ( Guest ) ಆಗಿ ಆಗಮಿಸಿದ್ದಾರೋ ಅಥವಾ ಡಬಲ್ ಎಲಿಮಿನೇಷನ್ ನಂತರ ನಡೆದ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದಾರೋ ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಂದಿನ ಎಪಿಸೋಡ್ ನಲ್ಲಿ ಸಿಗಲಿದ. ಕಾದು ನೋಡೋಣ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






