Biggboss Kannada – ಇಶಾನಿ ನಂತರ ಇವತ್ತು ಭಾಗ್ಯಶ್ರೀ ಹೊರಗೆ ಬರ್ತಾರಾ..? ಇಲ್ಲಿದೆ ಮಾಹಿತಿ

double elimination eshani out 1 1

ಬಿಗ್ ಬಾಸ್ ( Big Boss ) ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಆಗಿದೆ. ಹಾಗೆಯೇ ಬಿಗ್ ಬಾಸ್ ಈ ಸೀಸನ್ ನಲ್ಲಿ ಸ್ಪರ್ಧಿಗಳ ಹಲವಾರು ಆರೋಪಗಳು ಮತ್ತು ಜಗಳಗಳು ಸೋಷಿಯಲ್ ಮೀಡಿಯಾ(social media)ದಲ್ಲಿ ಹರಿದಾಡುತ್ತಿವೆ. ಹಾಗೆಯೇ ಕಳೆದ ವಾರ ‘ಬಿಗ್ ಬಾಸ್‌’ ಮನೆಯಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ :

ಹಾಗಾಗಿ ಈ ವಾರದಲ್ಲಿ ಯಾರು ಎಲಿಮಿನೇಟ್ ( Eliminate ) ಆಗುತ್ತಾರೆ ಎಂದು ವೀಕ್ಷಕರಲ್ಲಿ ಗೊಂದಲ ಮೂಡಿದೆ. ಮತ್ತು ಕಳೆದ ವಾರ ಎಲಿಮಿನೇಷನ್ ಆಗದ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಯುತ್ತಿದೆ. ಅದಕ್ಕೆ ಸುದೀಪ್ ಸರ್ ಕೂಡ ಉತ್ತರ ಕೊಟ್ಟಿದಾರೆ. ಹೌದು ವೀಕ್ಷಕರೇ ಈ ವಾರ ಡಬಲ್ ಎಲಿಮಿನೇಷನ್ ಇರುವುದು ಖಚಿತವಾಗಿದೆ.

ಇಲ್ಲಿಯವರೆಗೆ ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ ಹಾಗೂ ರಕ್ಷಕ್ ಬುಲೆಟ್‌ ‘ಬಿಗ್ ಬಾಸ್‌’ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಮತ್ತು ಮೂರನೇ ವಾರ ದಸರಾ ಹಬ್ಬದ ಪ್ರಯುಕ್ತ ಎಲಿಮಿನೇಷನ್ ನಡೆಯಲಿಲ್ಲ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹಾಗೆಯೇ ಕಳೆದ ವಾರ ಕೂಡ ವರ್ತೂರು ಸಂತೋಷ್(Varthur santhosh) ತಾವು ಸೇವ್ ಆಗಿದ್ದರೂ ಕೂಡ ನಾನು ಮನೆ ಇಂದ ಹೊರಹೋಗುತ್ತೇನೆ ಎಂದ ಕಾರಣಕ್ಕೆ ಸುದೀಪ್ ಸರ್ ಬೇಸರಗೊಂಡು ಎಲಿಮಿನೇಷನ್ ಮಾಡದೇ ಹೋಗಿದ್ದರು. ಆದ್ದರಿಂದ ಕಳೆದವಾರ ಕೂಡ ಎಲಿಮಿನೇಷನ್ ನೆಡೆಯಲಿಲ್ಲ. ಹಾಗಾಗಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಡಬಲ್ ಎಲಿಮಿನೇಷನ್ ಇರುವುದರಿಂದ ಯಾರು ಹೋಗಬಹುದು ಎಂಬ ಗೊಂದಲ ವೀಕ್ಷಕರಲ್ಲಿ ಮನೆ ಮಾಡಿದೆ.

ಈಶಾನೀ ಔಟ್ :

eshani out next bhagya

ಕಳೆದ ವಾರ ಡೇಂಜರ್ ಜೋನ್ (ಡೇಂಜರ್ zone )ನಲ್ಲಿ ಇದ್ದ ನೀತು ಹಾಗೂ ಇಶಾನಿ ಇಬ್ಬರಲ್ಲಿ ಒಬ್ಬರು ಹೋಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಳೆದ ವಾರ ಇಬ್ಬರೂ ಸೇವ್ ಆಗಿದ್ದರು. ಆದರೆ ಈ ವಾರದ ಮೊದಲ ದಿನವೇ ಒಂದು ಎಲಿಮಿನೇಷನ್ ಪ್ರಕ್ರಿಯೆ ನೆಡೆದು ಈಶಾನಿ ಅವರು ಮನೆಯಿಂದ ಹೊರಬಂದಿದ್ದಾರೆ. ಒಂದು ಆಶ್ಚರ್ಯ ಸಂಗತಿ ಏನೆಂದರೆ ಈ ಎಪಿಸೋಡ್ ನಲ್ಲಿ ಸುದೀಪ್ ಅವರು ಈಶಾನಿ ಅವರ ಹೆಸರನ್ನು ಹೇಳಲಿಲ್ಲ ಬದಲಾಗಿ ನಿಮಗೆಲ್ಲರಿಗೂ ಗೊತ್ತಿದೆ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು. ನಾನು ಹೆಸರು ಹೇಳುವ ಮುಂಚೆ ಅವರೇ ಎದ್ದು ನಿಂತರೆ ಉತ್ತಮ ಎಂದು ಹೇಳುತ್ತಾರೆ. ಆ ಕ್ಷಣ ಈಶಾನಿ ಎದ್ದು ನಿಲ್ಲುತ್ತಾರೆ.ಹಾಗೂ ಮನೆ ಇಂದ ಹೊರ ನಡೆದಿದ್ದಾರೆ.

ಆದರೆ ಡಬಲ್ ಎಲಿಮಿನೇಷನ್ ಇರುವುದರಿಂದ ಇಂದಿನ ಸಂಚಿಕೆಯಲ್ಲಿ ಮತ್ತೊಬ್ಬರು ಹೊರಬರುತ್ತಾರೆ. ಈಗ ವೀಕ್ಷಕರು ಭಾಗ್ಯಶ್ರೀ ಅಥವಾ ಡೇಂಜರ್ ಜೋನ್ ನಲ್ಲಿ ಇದ್ದ ನೀತು ಹೊರಬಹುದು ಎಂದು ಕೊಂಡಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಭಾನುವಾರದ ಸಂಚಿಕೆಯಲ್ಲಿ ಭಾಗ್ಯಶ್ರೀ ಅವರು ಹೊರಬರಬಾರದು ಎಂದ ಜನ! ಯಾಕಿರಬಹುದು ?

ಬಿಗ್ ಬಾಸ್ ಮನೆಯೊಳಗೆ ಪದೇ ಪದೇ ಭಾಗ್ಯಶ್ರೀ ಅವರನ್ನ ವೀಕ್ ( Weak ) ಅಂತ ಟಾರ್ಗೆಟ್‌ ಮಾಡಲಾಗುತ್ತಿದೆ. ಟಾಸ್ಕ್ ಗಳಲ್ಲಿ ಭಾಗ್ಯಶ್ರೀ ಅವರ ಆಟ ಏನು ಇಲ್ಲದ ಕಾರಣ ಅವರನ್ನು ಸ್ನೇಹಿತ್ ಟಾರ್ಗೆಟ್ ಮಾಡಿ ಹಿಯಾಳಿಸಿದ್ದರು. ಅದನ್ನು ಸೀರಿಯಸ್ ಆಗಿ ತೆಗೆದು ಕೊಂಡ ಭಾಗ್ಯಶ್ರೀ ಅವರು ಸ್ನೇಹಿತ್ ಅವರ ಮೇಲೆ ಗರಂ ಆಗಿ ರೇಗಾಡಿದ್ದಾರೆ.
ತಮಗೆ ಸಿಕ್ಕ ಒಂದು ಟಾಸ್ಕ್‌ನಲ್ಲಿ ಭಾಗ್ಯಶ್ರೀ ಚೆನ್ನಾಗಿಯೇ ಪರ್ಫಾಮ್‌ ಮಾಡಿದ್ದಾರೆ. ‘ಬಿಗ್ ಬಾಸ್‌’ ಮನೆಯಲ್ಲಿ ಉಳಿಯಬೇಕು ಎಂಬ ಹಠ ಅವರಲ್ಲಿದೆ. ಈ ಒಂದು ವಿಚಾರ ವೀಕ್ಷಕರಿಗೆ ಇಷ್ಟವಾಗಿದೆ. ಹಾಗಾಗಿ ಭಾಗ್ಯಶ್ರೀ ಅವರನ್ನ ಎಲಿಮಿನೇಟ್ ಮಾಡಬೇಡಿ ಎನ್ನುತ್ತಿದ್ದಾರೆ ವೀಕ್ಷಕರು.

ಇನ್ನು ಡೇಂಜರ್‌ ಜೋನ್ ನಲ್ಲಿ ಇರುವ ನೀತು ಹೋಗಬಹುದಾ?

ಕಳೆದ ವಾರ ವಿನಯ್‌ ಗುಂಪಿನ ವಿರುದ್ಧ ನೀತು ತಿರುಗಿಬಿದ್ದಿದ್ದರು. ಹಾಗೆಯೇ ಈ ವಾರ ಸ್ನೇಹಿತ್‌ ಕಣ್ಣೀರು ಸುರಿಸಿದ್ದಕ್ಕೆ ಕರಗಿ ಹೋಗಿ ನಮ್ರತಾಗೆ ಫ್ಯಾಮಿಲಿ ಕಡೆಯಿಂದ ಪತ್ರ ಸಿಗುವಂತೆ ಮಾಡಿದ್ದರು ನೀತು. ಈ ವಾರ ಟಾಸ್ಕ್‌ಗಳಲ್ಲಿ ಪರ್ಫಾಮ್ ಮಾಡುವ ಅವಕಾಶ ನೀತುಗೆ ಸಿಗಲಿಲ್ಲ ಮತ್ತು ಕುಟುಂಬದಿಂದ ಪತ್ರವೂ ಸಿಗಲಿಲ್ಲ. ಹಾಗಾಗಿ ಈ ವಾರ ನೀತು ಅವರು ಎಲಿಮಿನೇಟ್ ಆಗಬಹುದು. ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಹಾಗಾಗಿ ಈ ವಾರದ ಮೊದಲ ಎಪಿಸೋಡ್ ನಲ್ಲೇ ಹೊರ ಬಂದ ಇಶಾನಿ ಹೊರತಾಗಿ, ನೀತು ಭಾಗ್ಯಶ್ರೀ ಇವರಿಬ್ಬರಲ್ಲಿ ಯಾರು ಹೋಗಬಹುದು ಎಂದು ಕಾದು ನೋಡಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!