Bigg Boss Kannada : ಬಿಗ್​ಬಾಸ್​ನಲ್ಲಿ ತಂದೆ ಧ್ವನಿ ಕೇಳಿ ಭಾವುಕನಾಗಿ ಅತ್ತ ಪ್ರತಾಪ್.!

drone prathap crying by talking to his father

ಈ ಬಾರಿಯ ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss season 10 ) ನಲ್ಲಿ ಹತ್ತು ಹಲವು ವಿಶೇಷ ಘಟನೆಗಳು ನಡೆದಿವೆ. ಹಾಗೆಯೇ ಮನೆಯಲ್ಲಿ ಒಂದು ವಿಶಿಷ್ಟತೆ ಮೂಡಿದೆ. ಒಂದು ಸ್ಪರ್ಧಿ ಇದ್ದ ಹಾಗೆ ಮತ್ತೊಬ್ಬ ಸ್ಪರ್ಧಿ ಇಲ್ಲ. ಅವರ ಭಾವನೆಗಳು ಚೇಂಜ್ ಆಗುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತಪ್ಪು ಒಪ್ಪಿಕೊಂಡ ಡ್ರೋನ್ ಪ್ರತಾಪ್ :

drone prathap

ಇನ್ನು ಬಿಗ್ ಬಾಸ್ ಶುರುವಾದ ಮೊದಲು ವೈರಿಗಳಂತೆ ಕಿತ್ತಾಡುತಿದ್ದವರು ಈಗ ಒಂದಾಗಿದ್ದಾರೆ. ಸ್ನೇಹಿತರಂತೆ ಇದ್ದವರು ಜಗಳವಾಡಿಕೊಂಡಿದ್ದಾರೆ. ಇವರೆಲ್ಲರ ನಡುವೆ ಡ್ರೋನ್ ಪ್ರತಾಪ್ ಬಹಳ ನೋವನ್ನು ತಿಂದಿದ್ದಾರೆ. ಹಾಗೆಯೇ ಬಹಳಷ್ಟು ಟೀಕೆಗೆ ಒಳಗಾಗಿದ್ದರು. ಹಾಗಾಗಿ ಈಗ ಕನ್ನಡಿಗರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.
ಮೊದಲು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪಾಡಿಗೆ ಸುಮ್ಮನೆ ಇರುತ್ತಿದ್ದ ಡ್ರೋನ್ ಪ್ರತಾಪ್ ( Drone Prathaap ) ಕ್ರಮೇಣ ಇತರ ಸ್ಪರ್ಧಿಗಳ ಜೊತೆಗೆ ಬೆರೆಯುತ್ತಾ ಬಂದರು. ಹೀಗೆ ತಮ್ಮ ಒಳ್ಳೆಯ ಗುಣ ನಡತೆ , ಟಾಸ್ಕ್ ( Task ) ಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಮುಂತಾದ ಚಟುವಟಿಕೆಯಿಂದ ವೀಕ್ಷಕರ ಮನ ಗೆದ್ದಿದ್ದಾರೆ.

ಆದರೆ ಅವರು ಬಿಗ್ ಬಾಸ್ ಮನೆಯ ಒಳಗಡೆ ತಮ್ಮ ಕುಟುಂಬದ ಬಗ್ಗೆ ಮಾತನಾಡಿಲ್ಲ. ಮತ್ತು ಯಾವುದೇ ಫೀಲಿಂಗ್ ( Feeling ) ತೋರಿಸಿ ಕೊಂಡಿಲ್ಲ. ಆದರೆ, ಈ ಬಾರಿಯ ಕಿಚ್ಚನ ಪಂಚಾಯಿತಿ ಡ್ರೋನ್ ಪ್ರತಾಪ್ ಅವರ ಕಣ್ಣೀರಿಗೆ ಸಾಕ್ಷಿಯಾಗಿದೆ. ಅದೇನೆಂದು ನೋಡೋಣ ಬನ್ನಿ.

ಈ ಬಾರಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮನೆಯವರಿಂದ ಪತ್ರ ಸಿಗುವ ಒಂದು ಟಾಸ್ಕ್ ನಡೆದಿತ್ತು. ಅದರಲ್ಲಿ ಕೆಲವು ಸ್ಪರ್ಧಿಗಳಿಗೆ ಪತ್ರ ದೊರೆತ್ತಿಲ್ಲ ಮತ್ತು ಕೆಲವರಿಗೆ ದೊರೆತಿದೆ ಅದರಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರು. ಇದಾದ ನಂತರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್ ಬಳಿ ಮನೆಯವರಿಂದ ಪತ್ರ ಬಂದಿದ್ದರೆ ಏನೂ ನಿರೀಕ್ಷೆ ಮಾಡ್ತಿದ್ರಿ ಎಂದು ಕೇಳಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಅಪ್ಪನ ಧ್ವನಿ ಕೇಳಿ ಅತ್ತ ಡ್ರೋನ್ ಪ್ರತಾಪ್ :

ಇದಕ್ಕೆ ಉತ್ತರಿಸಿದ ಡ್ರೋನ್ ಪ್ರತಾಪ್ ಅಪ್ಪ ಹೇಳಿದ ಮಾತು ಎಂದಿದ್ದಾರೆ. ನಂತರ ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೇನೆ. ಅಪ್ಪಾ.. ಅಪ್ಪಾ ಕ್ಷಮಿಸಪ್ಪಾ ಎಂದು ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯೊಳಗೆ ಕಣ್ಣೀರಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಒಂದು ವಿಡಿಯೋ ತುಣುಕು ಶೋಷಿಯಲ್ ಮೀಡಿಯಾ ( Social Media ) ದಲ್ಲಿ ಹರಿದಾಡುತ್ತಿದೆ.

ಡ್ರೋನ್ ಪ್ರತಾಪ್ ಜೋರಾಗಿ ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮತ್ತು ಫೋನ್ ನಲ್ಲಿ ತಂದೆಯ ಧ್ವನಿಯನ್ನೂ ಕೂಡ ಅವರಿಗೆ ಕೇಳಿಸಲಾಗಿದೆ. ಪ್ರತಾಪ್ ಅವರು ಸುದೀಪ್ ಕೇಳಿದ ಪ್ರಶ್ನೆ ಗೆ ಭಾವುಕರಾಗಿ ಅತ್ತು ಕಣ್ಣೀರು ಸುರಿಸಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ಪ್ರತಾಪ್ ಅವರು ನೋಡುಗರಿಗೆ ಇನ್ನು ಹತ್ತಿರವಾಗಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಸತತ ಮೂರು ವರ್ಷದ ನಂತರ ಅಪ್ಪ-ಮಗ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದು, ಪ್ರತಾಪ್ ಅವರಿಗೆ ಖುಷಿಯನ್ನು ತಂದುಕೊಟ್ಟಿದೆ. ಅಪ್ಪ ಮಾತನಾಡಿದಾಗ ಪ್ರತಾಪ್ ಅವರು ಅಪ್ಪನ ಬಳಿ ಕ್ಷಮೆಯನ್ನು ಕೇಳಿದರು. ಅದಕ್ಕೆ ಪ್ರತಾಪ್ ಅವರ ಅಪ್ಪ, ಅದನೆಲ್ಲ ನಾವು ತಲೆಯಲ್ಲಿ ಇಟ್ಟುಕೊಂಡಿಲ್ಲ ಚೆನ್ನಾಗಿ ಆಡುತ್ತಿದ್ದೀಯ. ಊರಿನವರೆಲ್ಲ ಚೆನ್ನಾಗಿ ಆಡುತ್ತಿದ್ದಾನೆ ಮಗ ಎಂದು ಹೇಳುತ್ತಿದ್ದಾರೆ ಎಂದು ಉತ್ತರಿಸಿದರು. ಡ್ರೋನ್ ಪ್ರತಾಪ್ ಅವರ ತಂದೆ ಬಿಗ್ ಬಾಸ್ ಅವರ ದೊಡ್ಡ ಫ್ಯಾನ್ ಅಂತೆ. ಹಾಗಾಗಿ ಅವರ ತಂದೆ ಸುದೀಪ್ ಅವರನ್ನು ಕೇಳಿದೆ ಅಂತ ಹೇಳು ಅಂತ ಕೂಡ ಹೇಳಿದರು.

ನಂತರ ಸುದೀಪ್ ಅವರು ನಿಮ್ಮ ಕೆಲವು ತಪ್ಪನ್ನು ಒಪ್ಪಿಕೊಳ್ಳುತ್ತೀರಿಯೇ ಎಂದು ಕೇಳಿದಾಗ, ಡ್ರೋನ್ ಪ್ರತಾಪ್ ಅವರು ಹೌದು ನನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ಉತ್ತರಿಸಿದರು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!