Vivo Mobiles – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ವಿವೋದ ಮತ್ತೊಂದು ಮೊಬೈಲ್, ಇಲ್ಲಿದೆ ಮಾಹಿತಿ

Vivo Y100i power smartphone

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.ನೀವು ಸಹ ಒಂದು ಉತ್ತಮ ಹಾಗೂ ಬಜೆಟ್ – ಫ್ರೆಂಡ್ಲಿ ಸ್ಮಾರ್ಟ್ ಫೋನ್ ಗಾಗಿ ನೋಡುತ್ತಿದ್ದರೆ, Vivo Y100i power ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಏಕೆಂದರೆ, ಈ ಸ್ಮಾರ್ಟ್ ಫೋನ್ ಕೇವಲ ಉತ್ತಮ ಫೀಚರ್ಸ್ ನೀಡುವುದಲ್ಲದೆ ಅಗ್ಗದ ಬೆಲೆಯಲ್ಲಿ ಕೂಡ ಲಭ್ಯವಾಗುತ್ತಿದೆ. ಬನ್ನಿ ಹಾಗಿದ್ದರೆ ಈ Vivo Y100i power ನ ಬೆಲೆ ಹಾಗೂ ಇದರ ವೈಶಿಷ್ಟತೆಗಳನ್ನು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Vivo Y100i power ಸ್ಮಾರ್ಟ್ ಫೋನ್ :

Vivo Y100i power

ಚೀನಾ (China) ಮೂಲದ ಪ್ರಸಿದ್ಧ ವಿವೋ ಕಂಪನಿ (Vivo company)ಬಹಳ ದಿನದಿಂದ ನಿರೀಕ್ಷೆಯಲ್ಲಿ ಕಾಯುತ್ತಿದ ವಿವೋ ಜನಪ್ರಿಯ ಗ್ರಾಹಕರಿಗೆ ತನ್ನ ಹೊಸ
Y ಸರಣಿಯ (Y series) ಹೊಸ Vivo Y100i power ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ಬನ್ನಿ ಹಾಗಾದರೆ Vivo Y100i power ಫೋನಿನ ಫೀಚರ್(features) ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ, ಡಿಸ್ಪ್ಲೇ (Display )ಮತ್ತು ಪ್ರೊಸೆಸರ್‌ ಬಗ್ಗೆ ಮಾಹಿತಿಯನ್ನು ತಿಳಿಯುವದಾದರೆ,
ಈ ಸ್ಮಾರ್ಟ್ ಫೋನ್ 6.64 ಇಂಚಿನ HD ಡಿಸ್‌ಪ್ಲೇಯನ್ನು (Display)ಹೊಂದಿದೆ. ಇದು ಪಂಚ್-ಹೋಲ್ IPS LCD ಡಿಸ್‌ಪ್ಲೇ ಆಗಿದ್ದು, 1080 x 2388 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌(Screen resolution) ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 120 Hz ರಿಫ್ರೆಶ್ ರೇಟ್‌(Refresh rate) ಬೆಂಬಲಿಸಲಿದೆ. ಈ ಸ್ಮಾರ್ಟ್ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ ಅನ್ನು ಹೊಂದಿದ್ದು. ಇದು ಆಂಡ್ರಾಯ್ಡ್‌ 13 OS ( ಆಪರೇಟಿಂಗ್ ಸಿಸ್ಟಮ್‌ನಲ್ಲಿ) ಕಾರ್ಯನಿರ್ವಹಿಸುತ್ತದೆ.

whatss

ಕ್ಯಾಮೆರಾ (Camera):

ವಿವೋ Y100i ಪವರ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌(dual rear camera setup) ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 MP ಸೆನ್ಸಾರ್‌(Main camera sensor), ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ (depth sensor) ಅನ್ನು ಹೊಂದಿದೆ. ಅಷ್ಟೇ ಅಲ್ಲದೆ
ಸೆಲ್ಫಿಗಾಗಿ ಒಂದೇ ಮುಂಬಾಗದ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ(Battery ):

ಈ ಸ್ಮಾರ್ಟ್ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು (Battery)ಹೊಂದಿದೆ. ಇದು 44W ವೇಗದ ಚಾರ್ಜಿಂಗ್ (fast charging)ಅನ್ನು ಬೆಂಬಲಿಸುತ್ತದೆ.

ಸ್ಟೋರೇಜ್ (storage)
ಈ ಸ್ಮಾರ್ಟ್ ಫೋನ್ 12 GB RAM ಮತ್ತು 512 GB ಇಂಟರ್‌ ಸ್ಟೊರೇಜ್‌ (Internal storage) ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ. ಇದರೊಂದಿಗೆ 12 GB ವರ್ಚುವಲ್ RAM ಕೂಡ ವಿಸ್ತರಿಸಬಹುದಾಗಿದೆ ಎಂದು ತಿಳಿದಿದೆ.

ಇನ್ನು ಇತರೆ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನೋಡುವುದಾದರೆ ಡ್ಯುಯಲ್ ಸಿಮ್, 5G, Wi-Fi, ಬ್ಲೂಟೂತ್, GPS ಮತ್ತು USB- ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ 639mm2 ಲಿಕ್ವಿಡ್ ಕೂಲಿಂಗ್ ಹೀಟ್ ಪೈಪ್(liquid cooling heat pipe) ಮತ್ತು 8736mm ಗ್ರ್ಯಾಫೈಟ್ ಶೀಟ್(Graphite sheet) ಅನ್ನು ಹೊಂದಿದೆ.

tel share transformed

ವಿವೋ Y100i ಪವರ್ ಬೆಲೆ ಮತ್ತು ಲಭ್ಯತೆ:

ವಿವೋ Y100i ಪವರ್ ಸ್ಮಾರ್ಟ್‌ಫೋನ್‌ ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಆದರಿಂದ ಇದರ ಬೆಲೆ 2,099 ಯುವಾನ್ (~$295) ಆಗಿದೆ ಎಂದು ತಿಳಿದು ಬಂದಿದೆ.
ಈ ಸ್ಮಾರ್ಟ್ ಫೋನ್ ಕಪ್ಪು, ಬಿಳಿ ಮತ್ತು ನೀಲಿ ಮುಂತಾದ ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “Vivo Mobiles – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ವಿವೋದ ಮತ್ತೊಂದು ಮೊಬೈಲ್, ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *

error: Content is protected !!