Poco M6 5G : 50 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ, ಕಡಿಮೆ ಬೆಲೆಯ ಬೆಸ್ಟ್ 5G ಫೋನ್ ಬಿಡುಗಡೆ !

poco new

ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಒಂದು ಹೊಸ ಸುದ್ದಿ ಬಂದಿದೆ. ಹೌದು, ಅದೇನೆಂದರೆ ಚೀನಾದ ಖ್ಯಾತ ಮೊಬೈಲ್ ತಯಾರಕ ಟೆಕ್ ಕಂಪನಿ (Tech company ) ಎಕ್ಸೋಮಿ (Xamoi)ಯ ಸಬ್-ಬ್ರಾಂಡ್ ಆದ ಪೊಕೊ(Poco) ಡಿಸೆಂಬರ್ 22 ರಂದು ಭಾರತದಲ್ಲಿ ತನ್ನ ‘Poco M6 5G’ ಸ್ಮಾರ್ಟ್‌ಫೋನ್(smartphone) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಮತ್ತು 90Hz ರಿಫ್ರೆಶ್ ರೇಟ್‌ನೊಂದಿಗೆ 6.74-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ.
50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಈ ಪೊಕೊ ಎಂ6 5ಜಿ(Poco M6 5G) ಮೊಬೈಲ್ ಫೋನ್ ಇದೀಗ ಭಾರತದಲ್ಲಿ ಬಿಡುಗಡೆ ಕಂಡಿದೆ. ಈ ಪಾಕೋ ಸ್ಮಾರ್ಟ್ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಮೂಲಕ ಖರೀದಿಗೆ ಲಭ್ಯವಿರುತ್ತದೆ. ಇದರ ಬೆಲೆ, ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕುರಿತು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪೊಕೊ ಎಂ6 5ಜಿ(Poco M6 5G) 2023:

poco with good camera

ಮೊದಲನೆಯದಾಗಿ, ಡಿಸ್ಪ್ಲೇ (Display) ಬಗ್ಗೆ ನೋಡುವುದಾದರೆ, Poco M6 5G ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್‌ನೊಂದಿಗೆ 6.74 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಡಿಸ್ಪ್ಲೇ 1650 x 720 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುತ್ತದೆ.ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ನಿಂಡ ಚಾಲಿತವಾಗುತ್ತದೆ.

ಕ್ಯಾಮೆರಾ (Camera):

ಈ ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋಟೊಗಾಗಿ, 50MP ಪ್ರಾಥಮಿಕ ಕ್ಯಾಮೆರಾವನ್ನು (Primary camera) ಒಳಗೊಂಡಿದೆ
ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಹೊಂದಿದೆ.

tel share transformed

ಬ್ಯಾಟರಿ (Battery)

ಈ ಸ್ಮಾರ್ಟ್ ಫೋನ್ 5000mAh ಬ್ಯಾಟರಿಯನ್ನು(Battery) ಹೊಂದಿದೆ, ಇದು 18W ವೇಗದ ಚಾರ್ಜಿಂಗ್(Fast charging) ಅನ್ನು ಬೆಂಬಲಿಸುತ್ತದೆ.

ಸ್ಟೋರೇಜ್ (Storage)
ಈ ಸ್ಮಾರ್ಟ್ ಫೋನ್ ಮೂರು RAM ಆಯ್ಕೆಗಳೊಂದಿಗೆ ಎರಡು ಸ್ಟೋರೇಜ್ ರೂಪಾಂತರಗಳೊಂದಿಗೆ ಬಿಡುಗಡೆ ಕಂಡಿದೆ.
ಮೊದಲನೆಯದಾಗಿ,128GB ಮತ್ತು 256GB ಎರಡು ಸ್ಟೋರೇಜ್ ರೂಪಾಂತರಗಳೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ.
4GB, 6GB ಮತ್ತು 8GB ಮೂರು RAM ಆಯ್ಕೆಗಳೊಂದಿಗೆ ಬರುತ್ತದೆ .
ಇತರೆ ಕನೆಕ್ಟಿವಿಟಿ ಆಯ್ಕೆಗಳ ಸಂಪರ್ಕಕ್ಕಾಗಿ, ಫೋನ್ 5G, 4G, 3G, 2G, Wi-Fi, ಬ್ಲೂಟೂತ್ , GPS, FM ರೇಡಿಯೋ ಮತ್ತು USB ಟೈಪ್-C ಪೋರ್ಟ್ ಅನ್ನು ಚಾರ್ಜಿಂಗ್‌ಗಾಗಿ ಹೊಂದಿದೆ.

whatss

ಬೆಲೆ ಮತ್ತು ಲಭ್ಯತೆ(Price):

ಕಂಪನಿಯು Poco M6 5G ನ ಆರಂಭಿಕ ಬೆಲೆಯನ್ನು ರೂ 9,499 ಗೆ ನಿಗದಿ ಪಡಿಸಿದೆ. ಖರೀದಿದಾರರು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಡಿಸೆಂಬರ್ 26 ರಿಂದ ಫೋನ್ ಖರೀದಿಸಲು ಸಾಧ್ಯವಾಗುತ್ತದೆ.

ನೀವೂ ಕೂಡಾ ಈ ಮೇಲಿನ ಮಾಹಿತಿಯನ್ನು ತಿಳಿದುಕೊಂಡು ಉತ್ತಮ ಬೆಲೆಯಲ್ಲಿ ಲಭ್ಯವಿರುವ ನಿಮ್ಮ ನೆಚ್ಚಿನ ಜನಪ್ರಿಯ 5g ಬ್ರಾಂಡ್ ಈ ಪೊಕೋ M6 5G ನಿಮ್ಮ ಸ್ಮಾರ್ಟ್ ಫೋನ್ ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!