Lava Mobile – ಬರೀ 10 ಸಾವಿರದೊಳಗೆ ಸಿಗುತ್ತಿದೆ ಹೊಸ ಲಾವಾ 5G ಮೊಬೈಲ್, ಚೈನಾ ಮೊಬೈಲ್ಸ್ ಗೆ ಟಕ್ಕರ್.

IMG 20231222 WA0005 1

ಇಂದು ಮಾರ್ಕೆಟ್ ನಲ್ಲಿ ಹೊಸ ಹೊಸ ಸ್ಮಾರ್ಟ್ ಮೊಬೈಲ್ ಫೋನ್ ಗಳು ಲಗ್ಗೆ ಇಡುತ್ತಿವೆ. ಒಂದು ಮೊಬೈಲ್ ಫೋನ್ ಮತ್ತೊಂದು ಮೊಬೈಲ್ ಫೋನ್ ಗೆ ಟಕ್ಕರ್ಕೊಡುತ್ತಿವೆ. ಒಂದು ಸಲ ನಾವು ಸ್ಮಾರ್ಟ್ ಫೋನ್ ಗಳ ( Smart Phones ) ಜಗತ್ತಿನಲ್ಲಿ ಇಳಿದರೆ ನಮ್ಮ ಕಣ್ಣ ಮುಂದೆ ಹಲವಾರು ಸ್ಮಾರ್ಟ್ ಫೋನ್ ಗಳ ಆಯ್ಕೆ ಇರುತ್ತವೆ. ಯಾವುದನ್ನು ಕೊಂಡು ಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂದು ತಿಳಿಯದಾಗುತ್ತದೆ. ಅದರಲ್ಲೂ ಪ್ರತಿ ಯೊಂದು ಮೊಬೈಲ್ ಫೋನ್ ಗಳು ತಮ್ಮದೇ ಆದ ಸ್ವಂತ ಬ್ರ್ಯಾಂಡ್ ( Brand ) ನಲ್ಲಿ ಹೊಸ ಹೊಸ ಫೀಚರ್ಸ್ ಗಳುಳ್ಳ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಮಾರುಕಟ್ಟೆಗೆ ಒಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಆಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ (Lava Blaze 2 5G smartphone)

ಲಾವಾ ಕಂಪನಿ (Lava Company) ಇಂದು ಮಾರ್ಕೆಟ್ ನಲ್ಲಿ ತನ್ನದೇ ಆದ ಹೊಸ ಅಲೆಯನ್ನು ಸೃಷ್ಟಿ ಮಾಡುತ್ತಿದೆ. ಈ ಹಿಂದೆಯೂ ಲಾವಾ ಮೊಬೈಲ್ ಕಂಪೆನಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ಗಳನ್ನ ಪರಿಚಯಿಸಿದೆ. ಹಾಗೆಯೇ ಲಾವಾ ಕಂಪೆನಿಯು ಒಂದು ಹಳೇ ಬ್ರ್ಯಾಂಡ್ ಆಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಒಳಗೊಂಡಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಗಳನ್ನ ಕಾಣಬಹುದು. ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ (Smartphone) ಅನ್ನು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್  ಫೋನ್ ನ ವಿಶೇಷತೆ ಬಗ್ಗೆ ನೋಡೋಣ ಬನ್ನಿ.

m blaze 2 5g banner

ಲಾವಾ ಕಂಪೆನಿ ಬಿಡುಗಡೆ ಮಾಡಿರುವ ಸ್ಮಾರ್ಟ್ ಫೋನ್ ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ (Lava Blaze 2 5G smartphone) ಆಗಿದ್ದು, ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ವಿದೆ. ರಿಂಗ್‌ ಲೈಟ್‌ ಆಯ್ಕೆ ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ( Media Tec Dimensity 6020 Processor ) ಹೊಂದಿದ್ದು, ಆಂಡ್ರಾಯ್ಡ್‌ 13 ( Android 13 ) ಅನ್ನು ಈ ಫೋನ್‌ ರನ್‌ ಮಾಡಲಿದೆ. ಈ ಸ್ಮಾರ್ಟ್ ಫೋನ್ ನ ಉಳಿದ ಫೀಚರ್ಸ್ ಗಳ ಬಗ್ಗೆ ನೋಡೋಣ ಬನ್ನಿ.

ಲಾವಾ ಬ್ಲೇಜ್‌ 2 5G ಮೊಬೈಲ್ ನ ಡಿಸ್‌ಪ್ಲೇ ( Display ) :

Lava Blaze 2 5G

ಈ ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್‌ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ.
2.5D ಕರ್ವ್ಡ್ ಡಿಸ್‌ಪ್ಲೇ ಮೂಲಕ ವಿಶೇಷ ವಾಗಿ ಗಮನ ಸೆಳೆದಿದೆ.
ಹಾಗೆಯೇ ಇದರಲ್ಲಿ 90 Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಕಾಣಬಹುದು.
ಭದ್ರತೆ ಮತ್ತು ಇತರೆ ಅನುಕೂಲಕ್ಕಾಗಿ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆಯನ್ನು ಕೂಡ ಹೊಂದಿದೆ.

whatss

ಈ ಸ್ಮಾರ್ಟ್ ಫೋನ್ ನ ಪ್ರೊಸೆಸರ್‌ ( Processor ) :

ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಆಂಡ್ರಾಯ್ಡ್ 13 ಓಎಸ್‌ನಲ್ಲಿ ಅನ್ನು ನೀಡಲಾಗಿದೆ.
ಅದರ ಜೊತೆಗೆ ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್‌ ಸೌಲಭ್ಯವನ್ನೂ ಸಹ ನೀಡಲಾಗಿದೆ. ಅಂದರೆ ಎರಡು ವರ್ಷಗಳ ತ್ರೈಮಾಸಿಕ ಭದ್ರತಾ ನವೀಕರಣದ ಆಯ್ಕೆ ನೀಡಲಾಗಿದೆ.

ಸ್ಟೋರೇಜ್ ( Storage ) :

ಮುಖ್ಯವಾಗಿ ಈ ಫೋನ್ 4GB RAM ಮತ್ತು 64GB ಇಂಟರ್‌ ಸ್ಟೋರೇಜ್ ಹಾಗೂ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ನ ಎರಡು ಆಯ್ಕೆಯಲ್ಲಿ ಲಭ್ಯ ಇವೆ.
ಅಷ್ಟೇ ಅಲ್ಲದೆ 1TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್‌ ಆಯ್ಕೆಯನ್ನೂ ಸಹ ನೀಡಲಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಕ್ಯಾಮೆರಾ ವಿನ್ಯಾಸ ( Camera ) :

ಈ ಫೋನ್‌ ನಲ್ಲಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ರಿಯಲ್‌ ಕ್ಯಾಮೆರಾ ನೀಡಲಾಗಿದೆ.
ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಸ್ಕ್ರೀನ್ ಫ್ಲ್ಯಾಶ್‌ ಆಯ್ಕೆಯೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸರ್‌ ನೀಡಲಾಗಿದೆ.
ಈ ಸೆನ್ಸರ್‌ಗಳು ಫಿಲ್ಮ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಯುಹೆಚ್‌ಡಿ, ಜಿಫ್, ಬ್ಯೂಟಿ, ಎಚ್‌ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ, ಫಿಲ್ಟರ್‌ಗಳು ಮತ್ತು ಇಂಟೆಲಿಜೆಂಟ್ ಸ್ಕ್ಯಾನಿಂಗ್‌ನಂತಹ ಮೋಡ್‌ಗಳನ್ನು ಹೊಂದಿದೆ. ಈ ಮೊಬೈಲ್ ನ ಒಂದು ವಿಶೇಷತೆ ಎನ್ನಬಹುದು.

ಈ ಸ್ಮಾರ್ಟ್ ಫೋನ್ ನ ಬಣ್ಣಗಳು ( Colors ) :

ಈ ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ದೊರೆಯುತ್ತದೆ. ಅವುಗಳೆಂದರೆ :
ಗ್ಲಾಸ್ ಬ್ಲ್ಯಾಕ್
ಗ್ಲಾಸ್ ಬ್ಲೂ ಮತ್ತು
ಗ್ಲಾಸ್ ಲ್ಯಾವೆಂಡರ್

tel share transformed

ಬ್ಯಾಟರಿ ಪ್ಯಾಕ್ ಅಪ್ ( Battery Pack up ) :

ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಟೈಪ್-ಸಿ ಚಾರ್ಜಿಂಗ್‌ ಮೂಲಕ 18W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ.

ಈ ಸ್ಮಾರ್ಟ್ ಫೋನ್ ನ ಬೆಲೆ ಹಾಗೂ ಲಭ್ಯತೆ ( Price ) :

ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಭಾರತದಲ್ಲಿ ಈ ಫೋನ್‌ ಬೆಲೆ 9,999 ರಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಈ ಫೋನ್‌ ಅನ್ನು ನೀವು ನವೆಂಬರ್ 9 ರಿಂದ ಅಮೆಜಾನ್‌ ಹಾಗೂ ಲಾವಾದ ಅಧೀಕೃತ ಸೈಟ್ (Lavamobiles.com) ಮೂಲಕ ಖರೀದಿ ಮಾಡಬಹುದಾಗಿದೆ.

ಇನ್ನೊಂದು ಮುಖ್ಯ ವಿಚಾರ ಎಂದರೆ, ಈ ಫೋನ್‌ ಖರೀದಿ ಮಾಡುವವರಿಗೆ ವಾರಂಟಿ ಅಡಿಯಲ್ಲಿ ಮನೆ ಬಾಗಿಲಿಗೆ ಸೇವೆಯನ್ನು ನೀಡಲಾಗುತ್ತದೆ. ಈ ಸೇವೆಯನ್ನು ಪಡೆಯಲು, ಬಳಕೆದಾರರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!