Motorola – ಮೋಟಾರೋಲಾದ ಈ ಹೊಸ ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ..!

Motorola G54 5G

ಇಂದು ಜಗತ್ತನ್ನು ಆಳುತ್ತಿರುವುದು ಮೊಬೈಲ್ ( Mobile ) ಎನ್ನಬಹುದು. ಹೌದು, ಮೊಬೈಲ್ ಎಂಬ ಸಣ್ಣ ವಸ್ತು ಏನೆಲ್ಲ ಮಾಡುತ್ತದೆ ಅಲ್ಲವೇ?. ಮೊಬೈಲ್ ಇಂದ ಎಲ್ಲ ಕೆಲಸಗಳನ್ನು ಕೂಡ ನಾವು ನಮ್ಮ ಕೈಯಲ್ಲೇ ಮಾಡಿ ಮುಗಿಸಬಹುದು. ಇಂದು ಮಾರ್ಕೆಟ್ನಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳನ್ನು ನೋಡುತ್ತೇವೆ. ಹಾಗೆಯೇ ಮೊಬೈಲ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ನಡುವೆ ಪೈಪೋಟಿ ನಡೆಯಿತ್ತಿದೆ. ಮೊಬೈಲ್ ಗಳ ಲೋಕದಲ್ಲಿ ಹೊಸ ಹೋಸ ಫೀಚರ್ಸ್ ಗಳುಳ್ಳ ( New Features ) ಸ್ಮಾರ್ಟ್ ಫೋನ್ ಗಳು ಮಾರ್ಕೆಟ್ ಗೆ ಎಂಟ್ರಿ ಕೋಡುತ್ತಿವೆ. ಈಗ ಮೊಟೊರೋಲಾ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಫ್ಲಿಪ್ ಕಾರ್ಟ್ ನಲ್ಲಿ ಆಫರ್ ನೊಂದಿಗೆ ( Special Offers ) ಬಿಡುಗಡೆಯಾದ ಮೊಟೊರೋಲಾ G54 5G :

Motorola G54 5G 2

ಹೌದು, ಮೊಟೊರೋಲಾ ಬಿಡುಗಡೆ ಮಾಡುತ್ತಿರುವ ತನ್ನ ಹೊಸ ಸ್ಮಾರ್ಟ್ ಫೋನ್ ಮೊಟೊರೋಲಾ G54 5G ( Motorola G54 5G Smart Phone ) ಸ್ಮಾರ್ಟ್ ಫೋನ್ ವಿಶೇಷ ಆಫರ್ ಗಳೊಂದಿಗೆ ಲಭ್ಯವಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ ಇ ಕಾಮಾರ್ಸ್ ( Flipkart E Commerce ) ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಇದೀಗ ಅನೇಕ ಆಫರ್ ಗಳ ಮೇಳಗಳನ್ನು ಆಯೋಜಿಸುತ್ತಿದೆ. ಇದೀಗ ಫ್ಲಿಪ್‌ಕಾರ್ಟ್‌ ಸಂಸ್ಥೆಯು ‘ಸೂಪರ್‌ ವ್ಯಾಲ್ಯೂ ಸೇಲ್‌’ ( Super Value Sale ) ಮೇಳವನ್ನು ಆಯೋಜಿಸಿದೆ. ಇದರಲ್ಲಿ ಕೆಲವು ಸ್ಮಾರ್ಟ್‌ಫೊನ್‌ಗಳನ್ನು ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಈ ಸೇಲ್‌ನಲ್ಲಿ ಮೊಟೊರೊಲಾ ಸಂಸ್ಥೆಯ ಮೊಟೊರೊಲಾ G54 5G ಫೋನ್‌ ಕೂಡ ಒಂದು.

ಫ್ಲಿಪ್ ಕಾರ್ಟ್ ನಲ್ಲಿ ನೀಡಲಾದ ಈ ಸ್ಮಾರ್ಟ್ ಫೋನ್ ನ ರಿಯಾಯಿತಿ ಬೆಲೆ ( price ) :

ಫ್ಲಿಪ್ ಕಾರ್ಟ್ ಆಯೋಜಿಸಿದ್ದ ‘ಸೂಪರ್‌ ವ್ಯಾಲ್ಯೂ ಸೇಲ್‌’ ನಲ್ಲಿ ಮೊಟೊರೊಲಾ G54 5G ಮೊಬೈಲ್‌ ಅನ್ನು ಶೇ. 22% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಹಾಗೆಯೇ 8 GB RAM + 128 GB ವೇರಿಯಂಟ್‌ ಸ್ಮಾರ್ಟ್ ಫೋನ್ ಅನ್ನು 13,999 ರೂ. ಗಳ ಆಫರ್‌ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ಇದರ ಜೊತೆಗೆ ಇನ್ನೊಂದು ಮುಖ್ಯ ವಿಷಯ ಎಂದರೆ, ಕೆಲವು ಬ್ಯಾಂಕ್‌ ಗೊಂದಿಗೆ ಮತ್ತು ಇತರೆ ಆಫರ್‌ ಪಡೆದುಕೊಂಡರೆ, ಇನ್ನಷ್ಟು ಡಿಸ್ಕೌಂಟ್‌ನಲ್ಲಿ ಈ ಒಂದು ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.

ಮೊಟೊರೊಲಾ G54 5G ಮೊಬೈಲ್‌ ನ ಫೀಚರ್ಸ್‌ :
ಡಿಸ್ಪ್ಲೇ ( Display ) :

ಮೊಟೊರೊಲಾದ ಈ ಫೋನ್ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದ್ದು ಈ ಫೋನ್ ನಲ್ಲಿ ಡಿಸ್ಪ್ಲೇ ವಿನ್ಯಾಸ ಈ ಕೆಳಗಿನಂತಿದೆ :
6.5 ಇಂಚಿನ ಫುಲ್‌ ಹೆಚ್‌ಡಿ+ LED ಡಿಸ್‌ಪ್ಲೇ ಅನ್ನು ಹೊಂದಿದೆ.
2400 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ.
HDR10 ಸಪೋರ್ಟ್‌ ಹೊಂದಿದ್ದು, 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದರಲ್ಲಿದೆ.
ಈ ಸ್ಮಾರ್ಟ್ ಫೋನ್ ಪಾಂಡಾ ಗ್ಲಾಸ್ ಮೂಲಕ ರಕ್ಷಣೆ ಹೊಂದಿದ್ದು, ಇದು ಗೊರಿಲ್ಲಾ ಗ್ಲಾಸ್‌ನಂತೆ ಅಲ್ಯೂಮಿನೋಸಿಲಿಕೇಟ್ ಗ್ಲಾಸ್ ಆಗಿದೆ.

whatss

ಪ್ರೊಸೆಸರ್ ( Processor ) :

ಮೊಟೊರೊಲಾ G54 5G ಸ್ಮಾರ್ಟ್‌ಫೋನ್‌ ನಲ್ಲಿ ಬಳಸಲಾದ ಪ್ರೊಸೆಸರ್ :
ಮೀಡಿಯಾ ಟೆಕ್‌ ಡೈಮೆನ್ಸಿಟಿ 7020 SoC ಪ್ರೊಸೆಸರ್‌ ಅನ್ನು ಹೊಂದಿದೆ.
ಆಂಡ್ರಾಯ್ಡ್‌ 14 ಓಎಸ್‌ ಅಪ್‌ಡೇಟ್‌ಗೂ ಸಪೋರ್ಟ್‌ ಹೊಂದಿದೆ.
ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 8GB RAM + 128GB ಹಾಗೂ 12GB RAM + 256GB ಆಂತರೀಕ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ( Camera ) :

ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ.
50 ಮೆಗಾ ಪಿಕ್ಸೆಲ್ OIS ಪ್ರಾಥಮಿಕ ಕ್ಯಾಮೆರಾ.
ಆಟೋ ಫೋಕಸ್‌ಗಾಗಿ 8 ಮೆಗಾ ಪಿಕ್ಸೆಲ್ ಎರಡನೇ ಕ್ಯಾಮೆರಾ.
ಆದರೆ ಈ ವಿಭಾಗದಲ್ಲಿ ಹೆಚ್ಚುವರಿ ಮ್ಯಾಕ್ರೋ ಅಥವಾ ಡೆಪ್ತ್ ಸೆನ್ಸರ್‌ ಆಯ್ಕೆ ಪಡೆದಿಲ್ಲ.
ಇನ್ನು 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅನ್ನು ಹೊಂದಿದೆ.

tel share transformed

ಬ್ಯಾಟರಿ ಪ್ಯಾಕ್ ಅಪ್ ( Battery Pack up ) :

ಈ ಫೋನ್‌ 33W ಚಾರ್ಜಿಂಗ್ ಸಪೋರ್ಟ್‌ ನೊಂದಿಗೆ 6000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಹೊಂದಿದೆ.

ಇದಿಷ್ಟು ಸದ್ಯಕ್ಕೆ ಫ್ಲಿಪ್ ಕಾರ್ಟ್ ನ ಸೂಪರ್ ವ್ಯಾಲ್ಯೂ ಸೇಲ್ ನಲ್ಲಿ ಬಿಡುಗಡೆ ಆಗಲಿರುವ ಮೊಟೊರೋಲಾ G54 5G ಸ್ಮಾರ್ಟ್ ಫೋನ್ ನ ಬಗ್ಗೆ ಸಂಪೂರ್ಣ ಮಾಹಿತಿ. ನಿಮಗೆ ಈ ಮೊಬೈಲ್ ಫೋನ್ ಇಷ್ಟ ಆಗಿದ್ದಲ್ಲಿ ಆದಷ್ಟು ಬೇಗ ಆರ್ಡರ್ ಮಾಡಿ ಪಡೆದುಕೊಳ್ಳಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!