Nubia Phone – 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ನುಬಿಯಾ Z60 ಅಲ್ಟ್ರಾ ಫೋನ್ ಅನಾವರಣ!

Nubia Z60 ultra smartphone

ಸ್ಮಾರ್ಟ್‌ಫೋನ್‌ಗಳ ದುನಿಯಾದಲ್ಲಿ ಭಾರಿ ಬೇಡಿಕೆಯ ಬ್ರ್ಯಾಂಡ್‌ ಆಗಿರುವ ನುಬಿಯಾ (Nubia) ಈಗ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ (Nubia Z60 ultra smartphone)ಅನ್ನು ಬಿಡುಗಡೆ ಮಾಡಿದೆ.
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಇದೀಗ ಮಾರುಕಟ್ಟೆಯಲ್ಲಿ ಗೇಮಿಂಗ್ ಸ್ಮಾರ್ಟ್ ಫೋನ್ ತಯಾರಿಕೆಗೆ ಎಂದೇ ಹೆಸರುವಾಸಿಯಾಗಿದೆ.
ನುಬಿಯಾ ಕಂಪನಿ ಇದೀಗ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್ ಫೋನ್ ಅನ್ನು ಗೇಮಿಂಗ್ ಪ್ರಿಯರಿಗೆ ಲಾಂಚ್ ಮಾಡಿದೆ ಎಂದು ಹೇಳಬಹುದು. ಈ ಸ್ಮಾರ್ಟ್ ಫೋನ್ ಬಂದು ಒಂದು ಉತ್ತಮ ಮೊಬೈಲ್ ಫೋನ್ ಆಗಿದ್ದು , ಗೇಮಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತ ಇದೆ ಎಂದು ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌:

Nubia Z60 ultra smartphone gaming

ಮೂರು ರೀತಿಯ RAM ಮತ್ತು 1TB ಸ್ಟೊರೇಜ್‌ ಆಯ್ಕೆ ಮಾತ್ರವಲ್ಲದೇ, ಅತ್ಯುತ್ತಮ ಬ್ಯಾಟರಿ ಬ್ಯಾಕಪ್, ಕ್ಯಾಮರಾ ಹೀಗೆ ಅತ್ಯಾಧುನಿಕ ತಂತ್ರಜ್ಞಾನಗಳಿರುವ ಈ ಸ್ಮಾರ್ಟ್ ಫೋನ್ ಅದರ ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿದೆ. ಅದರ ಜೊತೆಗೆ
ಮಲ್ಟಿ ಟಾಸ್ಕ್ ಕೆಲಸಗಳು, ತಡೆರಹಿತ ಉಪಯೋಗ ಮತ್ತು ಗೇಮಿಂಗ್ ಉದ್ದೇಶದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ RAM ಇರುವ ಸ್ಮಾರ್ಟ್ಫೋನ್ ಗಳನ್ನು (Smartphone) ಹುಡುಕುತ್ತಿದ್ದರೆ,ಅದಕ್ಕೆ ಮಾರುಕಟ್ಟೆಯಲ್ಲಿ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಉತ್ತಮ ಆಯ್ಕೆಯಾಗಿದೆ.
ಬನ್ನಿ ಹಾಗಾದರೆ (Nubia Z60 ultra smartphone) ನ ಇನ್ನೂ ಹೆಚ್ಚಿನ ವಿಶೇಷ ಫೀಚರ್ ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಡಿಸ್ಪ್ಲೇ ಮತ್ತು ಪ್ರೊಸೆಸ್ಸರ್‌(Display and processer):

ಈ ಸ್ಮಾರ್ಟ್ ಫೋನ್ ದೊಡ್ಡದಾದ 6.8 ಇಂಚಿನ FHD+ AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 1,160X2,480 px ರೆಸಲ್ಯೂಷನ್‌ ಸಾಮರ್ಥ್ಯ (Resolution capacity) ಹೊಂದಿದೆ. ಇದರ ರಿಫ್ರೆಶ್‌ ರೇಟ್ (Refresh rate)120Hz ಆಗಿದ್ದು, 400 ppi px ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 100 % ರಷ್ಟು DCI -P3 ಕಲರ್‌ ಗ್ಯಾಮಟ್‌ (Colour Gyamet)ಹೊಂದಿದೆ. ಈ ಹ್ಯಾಂಡ್ಸೆಟ್(Hand set ) 163.98×76.35×8.78mm ಅಳತೆ ಮತ್ತು 246 ಗ್ರಾಂ ತೂಕ ಹೊಂದಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ (dust and water resistant) IP68 ರೇಟಿಂಗ್ ಅನ್ನು ಪಡದುಕೊಂಡಿದೆ. ಸ್ನಾಪ್‌ಡ್ರಾಗನ್ (Snapdragon)8 Gen 3 SoC ಪ್ರೊಸೆಸ್ಸರ್‌ನಿಂದ ಚಲಿಸುವ ಈ ಸ್ಮಾರ್ಟ್‌ಫೋನ್‌ ಅನ್ನು12GB ವರೆಗಿನ RAM ನೊಂದಿಗೆ ಜೋಡಿಸಲಾಗಿದೆ.ಮತ್ತು ನುಬಿಯಾ Z60 ಅಲ್ಟ್ರಾ ಫೋನ್‌ (Nubia Z60 ultra phone) ಆಂಡ್ರಾಯ್ಡ್‌ 14 (Android 14 ) ಆಧಾರಿತ ಮೈOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

tel share transformed

ಈ ಪವರ್‌ಫುಲ್‌ ಹ್ಯಾಂಡ್‌ಸೆಟ್‌ ಸ್ನಾಪ್‌ಡ್ರ್ಯಾಗನ್‌ 8 ಜೆನ್‌ SoC ಪ್ರೊಸೆಸ್ಸರ್‌ ಹೊಂದಿದ್ದು, ಝಡ್‌ಟಿಇ ಸಬ್‌–ಬ್ರ್ಯಾಂಡ್‌ನ ಫ್ಲಾಗ್‌ಶಿಪ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 6.8 ಇಂಚಿನ ದೊಡ್ಡದಾದ OLED ಡಿಸ್ಪ್ಲೇ ಹೊಂದಿರುವ ಈ ಫೋನ್‌ 120Hz ರಿಫ್ರೆಶ್‌ ದರ ಹೊಂದಿದೆ. ನೀರು ಮತ್ತು ಧೂಳನ್ನು ಪ್ರತಿರೋಧಿಸಲು IP68 ಅನ್ನು ಹೊಂದಿದೆ. ಎರಡು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾದ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌, ಮೂರು ರೀತಿಯ RAM ಮತ್ತು 1TB ಸ್ಟೊರೇಜ್‌ ಆಯ್ಕೆಯಲ್ಲಿ ಬರಲಿದೆ.

ಕ್ಯಾಮೆರಾ (Camera) :

ನುಬಿಯಾ Z60 ಅಲ್ಟ್ರಾ ಫೋನ್‌ (NubiaZ60 ultra smart phone) ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟಪ್‌(Triple camera setup) ಅನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾmain camera)ಹೊಂದಿದೆ. ಎರಡನೇ ಕ್ಯಾಮರಾವು 50 ಮೆಗಾಪಿಕ್ಸೆಲ್‌ ಆಗಿದ್ದು 18mm ವೈಡ್-ಆಂಗಲ್ ಕ್ಯಾಮೆರಾ (Wide angle camera)ಸಂವೇದಕವನ್ನು ಅಪಾರ್ಚರ್‌ ಇರುವ ಆಟೋಫೋಕಸ್‌ (Auto focous) ಹೊಂದಿದೆ. ಇದರ ಮೂರನೆ ಕ್ಯಾಮೆರಾವು 64-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ (Teliphoto lens) ಒಳಗೊಂಡಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು ನಿರ್ವಹಿಸಲು 12-ಮೆಗಾಪಿಕ್ಸೆಲ್‌ನ ಅಂಡರ್‌ ಡಿಸ್‌ಪ್ಲೇ ಕ್ಯಾಮೆರಾವನ್ನು (Under display camera)ಮುಂಭಾಗದಲ್ಲಿ ಅಳವಡಿಸಲಾಗಿದೆ.

ಸ್ಟೋರೇಜ್ ಆಯ್ಕೆಗಳು:(Storage):

ನುಬಿಯಾ Z60 ಅಲ್ಟ್ರಾ ಫೋನ್‌ನ (Nubia Z60ultra smart phone) ಮೂರು ರೂಪಾಂತರದಲ್ಲಿ ಬರುತ್ತವೆ,
8GB RAM ಮತ್ತು 256GB ಸಂಗ್ರಹಣೆ(Storage)
12GB RAM ಮತ್ತು 256GB ಸಂಗ್ರಹಣೆ(Storage)
12GB RAM ಮತ್ತು 512GB ಸಂಗ್ರಹಣೆ(Storage)

whatss

ಬ್ಯಾಟರಿ (Battery)ಮತ್ತು ಕನೆಕ್ಟಿವಿಟಿ (Connectivity features)ಆಯ್ಕೆಗಳು :

ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌6,000mAh ಬ್ಯಾಟರಿಯೊಂದಿಗೆ ಬರಲಿದೆ. ಇನ್ನು ಇದು 4G LTE, Wi-Fi , ಬ್ಲೂಟೂತ್ , ಡ್ಯುಯಲ್ GPS, GLONASS, BDS, GALILEO, ಮತ್ತು QZSS ಕನೆಕ್ಟಿವಿಟಿ ಆಯ್ಕೆಗಳನ್ನು ಬೆಂಬಲಿಸಲಿದೆ. ಇದು DTS HD ಧ್ವನಿಯೊಂದಿಗೆ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಇದು ಏಂಬಿಯಂಟ್‌ ಲೈಟ್‌ ಸೆನ್ಸಾರ್‌, ಇ-ದಿಕ್ಸೂಚಿ, ಸಂವೇದಕ, ಗೈರೊಸ್ಕೋಪ್, ಇನ್ಪ್ರಾರೆಡ್‌ ರಿಮೋಟ್ ಕಂಟ್ರೋಲ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಒಳಗೊಂಡಿದೆ. ಫೋನ್‌ನ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು (In display finger print sensor)ಸಹ ಒಳಗೊಂಡಿದೆ.

ನುಬಿಯಾ Z60 ಅಲ್ಟ್ರಾ ಫೋನ್‌ನ ಬೆಲೆ(Nubia Z60ultra smart phone price):

ನುಬಿಯಾ Z60ಅಲ್ಟ್ರಾ ಸಾರ್ಟ್‌ಫೋನ್‌ ಅನ್ನು ಬ್ಲಾಕ್‌ ಮತ್ತು ಸಿಲ್ವರ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಮೊದಲನೆಯದಾಗಿ, 8GB RAM ಮತ್ತು 256GB ಸಂಗ್ರಹಣೆ ಇರುವ ಫೋನ್ ನ ಆರಂಭಿಕ ಬೆಲೆಯು ಅಂದಾಜು 49,000 ರೂ. ಆಗಿದೆ.
12GB RAM ಮತ್ತು 256GB ಸಂಗ್ರಹಣೆಯಿರುವ ಫೋನ್‌ ಅಂದಾಜು 54,000 ರೂ ಆಗಿದೆ.
ಇದರ ಟಾಪ್‌ ಎಂಡ್‌ (Top end)ಆವೃತ್ತಿಯ 12GB RAM ಮತ್ತು 512GB ಸಂಗ್ರಹಣೆಯಿರುವ ಫೋನ್‌ ದರವು ಅಂದಾಜು 65,000 ರೂ ಆಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!