Motorola – ಅತೀ ಕಮ್ಮಿ ಬೆಲೆಗೆ ಸಿಗುತ್ತಿದೆ ಮೋಟೋದ ಬೆಂಕಿ ಮೊಬೈಲ್, ಇಲ್ಲಿದೆ ಸಂಪೂರ್ಣ ಮಾಹಿತಿ

motorola e32 offers on flipkart

Motorola e32 ಅನ್ನು ಫ್ಲಿಪ್‌ಕಾರ್ಟ್‌(Flipkart )ನಲ್ಲಿ 33% ರಿಯಾಯಿತಿಯಲ್ಲಿ ಪಡೆಯಿರಿ, Motorola e32 ಒಂದು ಉತ್ತಮ ಮೌಲ್ಯದ ಸ್ಮಾರ್ಟ್‌ಫೋನ್ ಆಗಿದ್ದು, ಇದು ಅತ್ಯಾಧುನಿಕ ಲಕ್ಷಣಗಳು ಮತ್ತು ಸೌಲಭ್ಯಗಳನ್ನು ನೀಡುತ್ತದೆ. ಈ ಸ್ಮಾರ್ಟ್ ಫೋನ್ ಹಾಗೂ ಇದಕ್ಕೆ ಸಂಬಂಧಿತ ಆಫರ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲಾ ಈಗ 33% ರಿಯಾಯಿತಿ ಯೊಂದಿಗೆ ಫ್ಲಿಪ್‌ಕಾರ್ಟ್‌ ನಲ್ಲಿ ಲಭ್ಯ :

Motorola e32 phone

ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಹುಡುಕುತ್ತಿದ್ದೀರಾ? ಬಜೆಟ್‌ನಲ್ಲಿ ಉತ್ತಮ ಫೀಚರ್ಸ್‌ ಹೊಂದಿರುವ ಫೋನ್‌ ಬೇಕೆ? ಹಾಗಿದ್ದರೆ, ಮೊಟೊರೊಲಾ e32(Motorola e32) ಸ್ಮಾರ್ಟ್‌ಫೋನ್‌ ನಿಮಗೆ ಸೂಕ್ತ ಆಯ್ಕೆಯಾಗಿದೆ. ಈ ಫೋನ್‌ಗೆ ಈಗ 33% ರಿಯಾಯಿತಿ ನೀಡಲಾಗಿದ್ದು, ಕೇವಲ 7,999 ರೂ.ಗೆ ಖರೀದಿಸಬಹುದಾಗಿದೆ. ಈ ಫೋನಿನ ಫೀಚರ್ಸ್‌ಗಳಿಗೆ ಹೋಲಿಸಿದರೆ, ಈ ಫೋನ್‌ನ ಬೆಲೆ ತುಂಬಾ ಕಡಿಮೆಯಾಗಿದೆ. ಅಂದರೆ, ಉತ್ತಮ ಫೀಚರ್ಸ್‌ಗಳೊಂದಿಗೆ ಬಜೆಟ್‌ನಲ್ಲಿ ಫೋನ್‌ ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಬನ್ನಿ ಹಾಗಿದ್ದರೆ Flipkart ಯಾವ ಯಾವ ಕೊಡುಗೆಗಳ ಜೊತೆಗೆ ಈ ಸ್ಮಾರ್ಟ್‌ಫೋನ್‌ ಮಾರಾಟ ಮಾಡುತ್ತಿದೆ ಎಂದು ತಿಳಿದುಕೊಳ್ಳೋಣ. ಇದರ ಜೊತೆ ಜೊತೆಗೆ ಈ ಸ್ಮಾರ್ಟ್‌ಫೋನ್‌ನ ಉತ್ತಮ ಫೀಚರ್ಸ್ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಣ.

ರಿಯಾಯಿತಿ ಮತ್ತು ಕೊಡುಗೆಗಳು:

ಈ ಸ್ಮಾರ್ಟ್‌ಫೋನಿನ್ ವಾಸ್ತವಿಕ ಬೆಲೆ 11,999 ರೂ. ಆಗಿದ್ದು, 33% ರಿಯಾಯಿತಿಯಲ್ಲಿ ರೂ.7,999 ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಕೇವಲ ಇಷ್ಟೇ ಅಲ್ಲಾ, ಫ್ಲಿಪ್ಕಾರ್ಟ್ (Flipkart)ಈ ಸ್ಮಾರ್ಟ್ ಫೋನ್ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಗ್ರಾಹಕರಲ್ಲಿ ಹೆಚ್ಚಿನ ಕೊಡುಗೆ (more offers) ನೀಡಿ ಅನುಕೂಲ ಮಾಡಿಕೊಟ್ಟಿದೆ.

whatss

ಈ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ನಲ್ಲಿ ಗ್ರಾಹಕರು ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌(Axis bank Credit card) ಬಳಕೆ ಮಾಡಿ ಖರೀದಿಸಿದರೆ ಅವರಿಗೆ 5% ಕ್ಯಾಶ್‌ಬ್ಯಾಕ್ (Cash back) ಪ್ರಾಪ್ತವಾಗುತ್ತದೆ. ಜೊತೆಗೆ ತಿಂಗಳಿಗೆ 496 ರೂ.ಗಳ ಆರಂಭಿಕ EMI ಮೂಲಕವೂ ಸಹ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಇನ್ನೊಂದು ವಿಶೇಷ ಕೊಡುಗೆ ಅಂದರೆ,
ವಿನಿಮಯ ಆಫರ್ (Exchange offer), ಅಂದರೆ ನಿಮ್ಮ ಹಳೆಯ ಫೋನ್‌ ಉತ್ತಮವಾಗಿದ್ದರೆ ಅದನ್ನು ಬದಲಿಸಿ ಹೊಸ motorola e32 ಸ್ಮಾರ್ಟ್ ಫೋನ್ 6,900 ರೂ.ಗಳವರೆಗೆ ಖರೀದಿಸಬಹುದು. ಫೋನ್ ವೈಶಿಷ್ಠತೆಗಳು ಈ ಕೆಳಗಿನಂತಿವೆ :

Motorola e32 ವೈಶಿಷ್ಟ್ಯತೆಗಳು :

ಡಿಸ್ಪ್ಲೇ (Display):

ಮೋಟೊರೊಲಾ e32 ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇವು 6.5 ಇಂಚಿನ ಡಿಸ್ಪ್ಲೇ ಹೊಂದಿದ್ದು, 16:9 ಆಕಾರ ಅನುಪಾತವನ್ನು ಹೊಂದಿದೆ. ಇದರ ಸ್ಕ್ರೀನ್‌ ರೆಸಲ್ಯೂಶನ್ 1600 x 720 ಪಿಕ್ಸೆಲ್‌ಗಳಾಗಿದ್ದು, ಇದು HD+ ಗುಣಮಟ್ಟವನ್ನು ನೀಡುತ್ತದೆ. ಡಿಸ್‌ಪ್ಲೇಯಲ್ಲಿ 90 Hz ರಿಫ್ರೆಶ್‌ ದರವನ್ನು(refresh rate) ಹೊಂದಿದೆ, ಇದು ವೀಡಿಯೊಗಳು ಮತ್ತು ಆಟಗಳನ್ನು ಹೆಚ್ಚು ನಯವಾಗಿ ಪ್ರದರ್ಶಿಸಲು ಸಹಾಯ ಮಾಡುತ್ತದೆ. ಡಿಸ್‌ಪ್ಲೇಯ ಶೇಕಡಾ 89.03ರಷ್ಟು ಪ್ರದೇಶವು ಸ್ಕ್ರೀನ್‌ನಿಂದ ಆವೃತವಾಗಿದೆ, ಇದು ಡಿಸ್‌ಪ್ಲೇಯನ್ನು ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸುತ್ತದೆ.

tel share transformed

ಪ್ರೊಸೆಸರ್‌(processor):

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೊ G37 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ, ಇದು ಆಂಡ್ರಾಯ್ಡ್ 12(Android 12 ) ಆಪರೇಟಿಂಗ್ ಸಿಸ್ಟಮ್ (Operating system) ಮತ್ತು ಪವರ್‌ VR GE8320 GPU ವನ್ನು ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ 64 GB ಇಂಟರ್‌ ಸ್ಟೋರೇಜ್‌ (Internal storage) ಮತ್ತು 4 GB RAM ಆಯ್ಕೆ ಇದೆ. ಇದಲ್ಲದೆ, 1 TB ವರೆಗೂ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್‌(Memory card ) ಅನ್ನು ಸ್ಥಾಪಿಸುವ ಆಯ್ಕೆ ಸಹ ಇದೆ.

ಕ್ಯಾಮೆರಾ(Camera):

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಡುಯಲ್ ಕ್ಯಾಮೆರಾ ಸೆಟಪ್ (dual rear camera) ಅನ್ನು ಹೊಂದಿದೆ, ಮೊದಲನೆಯದು 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ಇದು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಕಡಿಮೆ ಬೆಳಕಿನಲ್ಲಿ ಸಹ ಉತ್ತಮ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಎರಡನೆಯದು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸರ್‌ ಆಗಿದೆ, ಇದು ಬ್ಯಾಕ್‌ಗ್ರೌಂಡ್ ಅನ್ನು ಅಸ್ಪಷ್ಟಗೊಳಿಸಲು ಸಹಾಯ ಮಾಡುತ್ತದೆ.
ಈ ಎರಡು ಕ್ಯಾಮೆರಾಗಳು ಒಟ್ಟು 12 ಮೆಗಾಪಿಕ್ಸೆಲ್‌ ರೆಸಲ್ಯೂಶನ್‌ ಅನ್ನು ಒದಗಿಸುತ್ತವೆ. ಈ ರೆಸಲ್ಯೂಶನ್‌ನಿಂದ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಬಹುದು.

ಮುಖ್ಯ ಕ್ಯಾಮೆರಾದಲ್ಲಿ ಪೋರ್ಟ್ರೇಟ್, ಫೋಟೋ, ಪನೋರಮಾ, ನೈಟ್ ವಿಷನ್, ಪ್ರೊ ಮೋಡ್, ಡ್ಯುಯಲ್ ಕ್ಯಾಪ್ಚರ್ ಫೋಟೋ, ಲೈವ್ ಫಿಲ್ಟರ್, ಫೇಸ್ ಬ್ಯೂಟಿ, ಗೂಗಲ್ ಲೆನ್ಸ್ ಇಂಟಿಗ್ರೇಷನ್, ಎಚ್‌ಡಿಆರ್, ಟೈಮರ್, ಅಸಿಸ್ಟೆವ್ ಗ್ರಿಡ್, ವಾಟರ್‌ಮಾರ್ಕ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಇನ್ನು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ, (Selfie camera) ಇದರಿಂದ ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ತೆಗೆಯಬಹುದು.

ಬ್ಯಾಟರಿ ಮತ್ತು ಇತರೆ ವೈಶಿಷ್ಠತೆಗಳು :

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು (battery)ಹೊಂದಿದೆ. ಈ ಬ್ಯಾಟರಿಯು ಒಂದು ದಿನದ ಬಳಕೆಗೆ ಸಾಕಾಗುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್‌, ಪ್ರಾಕ್ಸಿಮಿಟಿ ಸೆನ್ಸರ್, ಆಂಬಿಯೆಂಟ್ ಲೈಟ್ ಸೆನ್ಸರ್, ಅಕ್ಸೆಲೆರೊಮೀಟರ್ ಮತ್ತು ನೋಟಿಫಿಕೇಶನ್ ಎಲ್‌ಇಡಿ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಫೀಚರ್ಸ್‌ಗಳಿವೆ. ಈ ಫೀಚರ್ಸ್‌ಗಳು ಈ ಫೋನ್‌ ಅನ್ನು ಬಜೆಟ್‌ ಬೆಲೆಯಲ್ಲಿ ಉತ್ತಮ ಆಯ್ಕೆಯನ್ನಾಗಿ ಮಾಡುತ್ತವೆ.

ಒಟ್ಟಾರೆಯಾಗಿ, Motorola e32 ಬಜೆಟ್- ಫ್ರೆಂಡ್ಲಿ(Budget friendly) ಸ್ಮಾರ್ಟ್ಫೋನ್ ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿದೆ. ಇದು ನಯವಾದ ರಿಫ್ರೆಶ್ ದರ, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಯೋಗ್ಯವಾದ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುವ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಹಾಗೆಯೇ ಇಂತಹ ಉತ್ತಮ ಸ್ಮಾರ್ಟ್ ಫೋನ್ ಆಫರ್ ಕುರಿತಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಾತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!