vidyadhan 2026

ವಿದ್ಯಾಧನ್ ಸ್ಕಾಲರ್‌ಶಿಪ್ 2026: ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ; ಅರ್ಜಿ ಆರಂಭ

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಸರೋಜಿನಿ ದಾಮೋದರನ್ ಫೌಂಡೇಶನ್’ (SDF) ನೀಡುವ ವಿದ್ಯಾಧನ್ ಸ್ಕಾಲರ್‌ಶಿಪ್‌ಗೆ (Vidyadhan Scholarship 2026) ಆನ್‌ಲೈನ್ ಅರ್ಜಿ ಆಹ್ವಾನ. 10ನೇ ತರಗತಿ ಪಾಸಾದವರಿಗೆ ಸಿಗಲಿದೆ ₹10,000 ದಿಂದ ₹75,000 ವರೆಗೆ ಉಚಿತ ಆರ್ಥಿಕ ನೆರವು. ಈ ವಿದ್ಯಾರ್ಥಿ ವೇತನ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ…

  • *ಸ್ಕಾಲರ್‌ಶಿಪ್: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ₹10,000 ದಿಂದ ₹75,000 ವರೆಗೆ ನೆರವು.
  • *ಅರ್ಹತೆ: 2026ರಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಕನಿಷ್ಠ 90% ಅಂಕ ಪಡೆದಿರಬೇಕು.
  • *ಅರ್ಜಿ ಸಲ್ಲಿಕೆ: ಜುಲೈ 05, 2026 ರೊಳಗೆ ಆನ್‌ಲೈನ್ ಮೂಲಕ ಉಚಿತ ಅರ್ಜಿ ಸಲ್ಲಿಕೆ.
  • *ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಟೆಸ್ಟ್ (Screening Test) ಹಾಗೂ ಸಂದರ್ಶನದ ಮೂಲಕ ಆಯ್ಕೆ.

ವಿದ್ಯಾಧನ್ ಸ್ಕಾಲರ್‌ಶಿಪ್ 2026: ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ₹75,000 ವರೆಗೆ ಬೃಹತ್ ವಿದ್ಯಾರ್ಥಿವೇತನ!

ಬೆಂಗಳೂರು: ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದ ಕಾರಣದಿಂದಾಗಿ ತಮ್ಮ ಉನ್ನತ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಬಾರದು ಎಂಬ ಮಹದಾಸೆಯಿಂದ ಸರೋಜಿನಿ ದಾಮೋದರನ್ ಫೌಂಡೇಶನ್ (SDF) ಸ್ಥಾಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ವಿದ್ಯಾಧನ್ ಸ್ಕಾಲರ್‌ಶಿಪ್ (Vidyadhan Scholarship 2026). ಇದೀಗ 2026-27ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕದ ವಿದ್ಯಾರ್ಥಿಗಳಿಂದ ಅಧಿಕೃತವಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಯಲ್ಲಿ ಉತ್ತಮ ಅಂಕ ಪಡೆದು ಪ್ರಥಮ ಪಿಯುಸಿ (11th Standard) ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಡಿಗ್ರಿ, ಇಂಜಿನಿಯರಿಂಗ್, ಅಥವಾ ಮೆಡಿಕಲ್ ಓದುವವರಿಗೂ ಈ ಆರ್ಥಿಕ ನೆರವು ವಿಸ್ತರಣೆಯಾಗಲಿದೆ. ಇದರ ಸಂಪೂರ್ಣ ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.

ಯಾರಿಗೆ ಎಷ್ಟು ಸ್ಕಾಲರ್‌ಶಿಪ್ ಸಿಗಲಿದೆ? (Scholarship Amounts)

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರಂಭದಲ್ಲಿ 2 ವರ್ಷದ ಪಿಯುಸಿ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಆ ನಂತರ ಅವರು ಶಿಕ್ಷಣದಲ್ಲಿ ಉತ್ತಮ ಸಾಧನೆ ಮುಂದುವರಿಸಿದರೆ, ಅವರು ಆಯ್ಕೆ ಮಾಡುವ ಪದವಿ (Degree) ಕೋರ್ಸ್‌ಗಳಿಗೆ ಅನುಗುಣವಾಗಿ ಫೌಂಡೇಶನ್ ಅಥವಾ ಎಕ್ಸ್‌ಟರ್ನಲ್ ಸ್ಪಾನ್ಸರ್‌ಗಳ ಮೂಲಕ ಭಾರಿ ಮೊತ್ತದ ವಿದ್ಯಾರ್ಥಿವೇತನವನ್ನು ಮುಂದುವರಿಸಲಾಗುತ್ತದೆ.

ಯಾವ ಕೋರ್ಸ್‌ಗೆ ಎಷ್ಟು ಹಣ ಸಿಗಲಿದೆ ಎಂಬ ವಿವರ ಇಲ್ಲಿದೆ:

  • PUC 1st Year: ₹10,000 (ವಾರ್ಷಿಕ)
  • PUC 2nd Year: ₹10,000 (ವಾರ್ಷಿಕ)
  • Degree (ಪದವಿ ವಿದ್ಯಾರ್ಥಿಗಳಿಗೆ): ₹20,000 ದಿಂದ ₹25,000 ವರೆಗೆ
  • Engineering (ಇಂಜಿನಿಯರಿಂಗ್): ₹45,000 ದಿಂದ ₹55,000 ವರೆಗೆ
  • Medical (ವೈದ್ಯಕೀಯ ಕೋರ್ಸ್): ಗರಿಷ್ಠ ₹40,000 ದಿಂದ ₹75,000 ವರೆಗೆ ವಿದ್ಯಾರ್ಥಿವೇತನ ಲಭ್ಯವಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? (Eligibility Criteria)

ವಿದ್ಯಾಧನ್ ವಿದ್ಯಾರ್ಥಿವೇತನ ಪಡೆಯಲು ಕರ್ನಾಟಕದ ವಿದ್ಯಾರ್ಥಿಗಳು ಈ ಕೆಳಗಿನ ಪ್ರಮುಖ ಅರ್ಹತೆಗಳನ್ನು ಹೊಂದಿರಬೇಕು:

  • ಶೈಕ್ಷಣಿಕ ಅರ್ಹತೆ: ವಿದ್ಯಾರ್ಥಿಯು ಕರ್ನಾಟಕ ರಾಜ್ಯದಿಂದ 2026ರಲ್ಲಿ 10ನೇ ತರಗತಿ (SSLC/CBSE/ICSE) ಪರೀಕ್ಷೆಯನ್ನು ಪೂರ್ಣಗೊಳಿಸಿರಬೇಕು ಹಾಗೂ ಪರೀಕ್ಷೆಯಲ್ಲಿ ಕನಿಷ್ಠ 90% ಅಂಕಗಳನ್ನು ಅಥವಾ 9 CGPA ಪಡೆದಿರಬೇಕು.
  • ವಿಕಲಚೇತನ ವಿದ್ಯಾರ್ಥಿಗಳಿಗೆ: ವಿಕಲಚೇತನ (Disability) ವಿದ್ಯಾರ್ಥಿಗಳಿಗೆ ಕಟ್-ಆಫ್ ಅಂಕವನ್ನು 75% ಕ್ಕೆ ನಿಗದಿಪಡಿಸಲಾಗಿದೆ.
  • ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಆದಾಯವು ₹2 ಲಕ್ಷಗಳಿಗಿಂತ ಕಡಿಮೆ ಇರಬೇಕು.

ಪ್ರಮುಖ ದಿನಾಂಕಗಳು ಹಾಗೂ ಆಯ್ಕೆ ಪ್ರಕ್ರಿಯೆ

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಜುಲೈ 2026
  • ಆನ್‌ಲೈನ್ ಸ್ಕ್ರೀನಿಂಗ್ ಟೆಸ್ಟ್ (Screening Test): 19 ಜುಲೈ 2026
  • ಸಂದರ್ಶನ (Interview): 08 ಆಗಸ್ಟ್ ನಿಂದ 30 ಆಗಸ್ಟ್ 2026 ರವರೆಗೆ ನಡೆಯಲಿದೆ (ಶಾರ್ಟ್‌ಲಿಸ್ಟ್ ಆದ ವಿದ್ಯಾರ್ಥಿಗಳಿಗೆ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುವುದು).

ಆಯ್ಕೆ ವಿಧಾನ (Selection Process):

ವಿದ್ಯಾರ್ಥಿಗಳು ಅರ್ಜಿಯಲ್ಲಿ ನೀಡಿದ ಮಾಹಿತಿ ಹಾಗೂ ಶೈಕ್ಷಣಿಕ ಸಾಧನೆಯ (Academic Performance) ಆಧಾರದ ಮೇಲೆ ಎಸ್‌ಡಿಎಫ್ (SDF) ಅಧಿಕಾರಿಗಳು ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಾರೆ. ಶಾರ್ಟ್‌ಲಿಸ್ಟ್ ಆದವರಿಗೆ ಸಣ್ಣ ಆನ್‌ಲೈನ್ ಟೆಸ್ಟ್ ಹಾಗೂ ಕಡ್ಡಾಯ ಸಂದರ್ಶನವನ್ನು (Interview) ನಡೆಸಿ ಅಂತಿಮವಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವಾಗ ಬೇಕಾಗುವ ಕಡ್ಡಾಯ ದಾಖಲೆಗಳು

ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳ ಸ್ಕ್ಯಾನ್ಡ್ ಕಾಪಿ (Scanned Copies) ನಿಮ್ಮ ಬಳಿ ಇರಬೇಕು:

  1. 10ನೇ ತರಗತಿಯ ಅಂಕಪಟ್ಟಿ (Marksheet): ಒರಿಜಿನಲ್ ಅಂಕಪಟ್ಟಿ ಇಲ್ಲದಿದ್ದರೆ, SSLC/CBSE ಬೋರ್ಡ್ ವೆಬ್‌ಸೈಟ್‌ನಿಂದ ಪಡೆದ ಪ್ರಾವಿಷನಲ್/ಆನ್‌ಲೈನ್ ಮಾರ್ಕ್ಸ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡಬಹುದು.
  2. ಆದಾಯ ಪ್ರಮಾಣಪತ್ರ (Income Certificate): ಸಕ್ಷಮ ಪ್ರಾಧಿಕಾರದಿಂದ (ತಹಶೀಲ್ದಾರ್) ಪಡೆದ ಅಧಿಕೃತ ಆದಾಯ ಪ್ರಮಾಣಪತ್ರ ಕಡ್ಡಾಯ. (ಗಮನಿಸಿ: ರೇಷನ್ ಕಾರ್ಡ್ ಅನ್ನು ಆದಾಯ ಪುರಾವೆಯಾಗಿ ಸ್ವೀಕರಿಸುವುದಿಲ್ಲ).
  3. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ (Photograph).

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)

Step 1: ವಿದ್ಯಾಧನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿದೆ. ವಿದ್ಯಾರ್ಥಿಗಳು ನೇರವಾಗಿ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು: www.vidyadhan.org

vidyadhan
vidyadhan 1

ಇಮೇಲ್ ಐಡಿ ಕಡ್ಡಾಯ: ಅರ್ಜಿ ಸಲ್ಲಿಸುವ ಮುನ್ನ ನಿಮ್ಮದೇ ಆದ ವೈಯಕ್ತಿಕ ಇಮೇಲ್ ಐಡಿ (Email ID) ಇರಬೇಕು. ಸೈಬರ್ ಕೆಫೆಯವರ ಇಮೇಲ್ ಬಳಸಬೇಡಿ, ಏಕೆಂದರೆ ಭವಿಷ್ಯದ ಎಲ್ಲಾ ಮಾಹಿತಿಗಳು (ಟೆಸ್ಟ್, ಇಂಟರ್ವ್ಯೂ) ನಿಮ್ಮ ಇಮೇಲ್‌ಗೇ ಬರುತ್ತವೆ.

vidyadhan 2

Step 3: ಇಲ್ಲಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿ

Step 4: ಹೊಸ ಅಕೌಂಟ್ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಹೆಸರು (ಮಾರ್ಕ್ಸ್ ಕಾರ್ಡ್‌ನಲ್ಲಿರುವಂತೆ), ಇಮೇಲ್ ಐಡಿ ಮತ್ತು ಹೊಸದಾಗಿ ಕನಿಷ್ಠ 8 ಅಕ್ಷರಗಳ ಪಾಸ್‌ವರ್ಡ್ (Password) ಕ್ರಿಯೇಟ್ ಮಾಡಿ.

Step 5: ನಂತರ ‘Apply Now’ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಇಮೇಲ್‌ಗೆ ಆಕ್ಟಿವೇಶನ್ ಲಿಂಕ್ (Activation Link) ಬರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿ ಅಕೌಂಟ್ ಆಕ್ಟಿವೇಟ್ ಮಾಡಿಕೊಳ್ಳಿ.

Step 6: ಮತ್ತೆ ಲಾಗಿನ್ ಆಗಿ, ಲಭ್ಯವಿರುವ ಪ್ರೋಗ್ರಾಂಗಳ ಪಟ್ಟಿಯಿಂದ ‘Karnataka 11th Program – 2026’ ಆಯ್ಕೆಮಾಡಿ ‘Apply Now’ ಬಟನ್ ಒತ್ತಿ.

vidyadhan 3 1

Step 7: ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ತುಂಬಿ, ಕಡ್ಡಾಯ ದಾಖಲೆಗಳು ಹಾಗೂ ಫೋಟೋವನ್ನು ಅಪ್‌ಲೋಡ್ ಮಾಡಿ ‘Submit’ ಮಾಡಿ. “Submission Successful” ಎಂಬ ಮೆಸೇಜ್ ಬಂದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ ಎಂದರ್ಥ.

vidyadhan 5

ಹೆಚ್ಚಿನ ಮಾಹಿತಿಗಾಗಿ ಅಥವಾ ಸಹಾಯಕ್ಕಾಗಿ ಸಂಪರ್ಕಿಸಿ:

  • ಇಮೇಲ್: [email protected]
  • ಸಹಾಯವಾಣಿ (Help Desk): +91 9663517131 / +91 8068333500

ಎಚ್ಚರಿಕೆ: ಈ ವಿದ್ಯಾರ್ಥಿವೇತನ ಸಂಪೂರ್ಣ ಉಚಿತವಾಗಿದ್ದು, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ‘ಸರೋಜಿನಿ ದಾಮೋದರನ್ ಫೌಂಡೇಶನ್’ ಬೇರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅಧಿಕಾರ ನೀಡಿಲ್ಲ. ದಯವಿಟ್ಟು ಮಧ್ಯವರ್ತಿಗಳನ್ನು ನಂಬಿ ಮೋಸಹೋಗಬೇಡಿ.

ಅರ್ಹ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಿ ಹಾಗೂ 90% ಕ್ಕಿಂತ ಹೆಚ್ಚು ಅಂಕ ಪಡೆದ ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ಹಂಚಿಕೊಳ್ಳಿ!

ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

17 responses to “ವಿದ್ಯಾಧನ್ ಸ್ಕಾಲರ್‌ಶಿಪ್ 2026: ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ; ಅರ್ಜಿ ಆರಂಭ”

  1. Randha Fathima Avatar
    Randha Fathima

    Bangalore near dubasipalya

  2. Reehan Sharif Avatar
    Reehan Sharif

    I need scholarship
    My name is Reehan Sharif
    I am passed 2nd puc with 76.33 percentage

  3. Reehan Sharif Avatar
    Reehan Sharif

    My name is Rehan Sharif I am passed 2nd puc with 76.33 percentage from mysuru because I need scholarship

  4. Akash Chintakal Avatar
    Akash Chintakal

    Need scholarship

  5. Kushal Gowdru Avatar

    Nana nanige 1.00000 amount bekithu kothiya sir

  6. Kushal Gowdru Avatar

    Nana ge 1.00000 amount bekithu kothiya sir

  7. B A Aishwarya Avatar
    B A Aishwarya

    Need scholarship because I paid the education

Leave a Reply

Your email address will not be published. Required fields are marked *


Popular Categories