pvc voter id 2026 scaled

PVC Voter ID: ಆಧಾರ್ ಮಾದರಿಯ ಸ್ಮಾರ್ಟ್ ವೋಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹಳೆಯ ವೋಟರ್ ಐಡಿ ಹಾಳಾಗಿದೆಯೇ? ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್ ಮಾದರಿಯ ಹೊಸ ಪಿವಿಸಿ ವೋಟರ್ ಐಡಿ (PVC Voter ID) ಕಾರ್ಡ್ ಅನ್ನು ಉಚಿತವಾಗಿ ಮನೆಗೇ ತರಿಸಿಕೊಳ್ಳುವ ವಿಧಾನ ಇಲ್ಲಿದೆ.

ದಾವಣಗೆರೆ: ಹಳೆಯ ವೋಟರ್ ಐಡಿ ಕಾರ್ಡ್ ಹಾಳಾಗಿದೆಯೇ ಅಥವಾ ಹೊಸ ಸ್ಮಾರ್ಟ್ ಪಿವಿಸಿ (PVC) ವೋಟರ್ ಐಡಿ ಪಡೆಯಲು ಬಯಸುತ್ತೀರಾ? ಕೇಂದ್ರ ಚುನಾವಣಾ ಆಯೋಗವು ಮತದಾರರಿಗೆ ಆಧಾರ್ ಕಾರ್ಡ್ ಮಾದರಿಯ ಹೊಸ PVC Voter ID Card ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿದೆ.

ಸಾಮಾನ್ಯ ಕಾಗದದ ಅಥವಾ ಲ್ಯಾಮಿನೇಟ್ ಮಾಡಿದ ವೋಟರ್ ಐಡಿಗಳು ಬೇಗನೆ ಹಾಳಾಗುವ, ಅಕ್ಷರಗಳು ಅಳಿಸಿಹೋಗುವ ಹಾಗೂ ನೀರು ಅಥವಾ ಮಳೆಯಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಹೊಸ PVC ವೋಟರ್ ಐಡಿ ಕಾರ್ಡ್ ಹೆಚ್ಚು ಬಾಳಿಕೆ ಬರುವುದರ ಜೊತೆಗೆ ಸುರಕ್ಷಿತವಾಗಿದ್ದು, ಎಟಿಎಂ ಕಾರ್ಡ್ ಮಾದರಿಯಲ್ಲಿ ಇರುವುದರಿಂದ ಪರ್ಸ್‌ನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು.

ಹಳೆಯ ವೋಟರ್ ಐಡಿ ಕಳೆದುಕೊಂಡವರು, ಹಾಳಾಗಿರುವ ಅಥವಾ ಹೊಸ PVC ಕಾರ್ಡ್ ಪಡೆಯಲು ಬಯಸುವವರು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ.

 ಮುಖ್ಯಾಂಶಗಳು (Key Highlights)

  • ಅಧಿಕೃತ ವೆಬ್‌ಸೈಟ್: ಆನ್‌ಲೈನ್ ಪೋರ್ಟಲ್ voters.eci.gov.in ಮೂಲಕ ಅರ್ಜಿ ಸಲ್ಲಿಕೆ.
  • ಯಾವ ಫಾರ್ಮ್?: ಪಿವಿಸಿ ಕಾರ್ಡ್ ರಿಪ್ಲೇಸ್‌ಮೆಂಟ್‌ಗಾಗಿ Form 8 (ಫಾರ್ಮ್ 8) ಬಳಸಬೇಕು.
  • ವಿತರಣಾ ಸಮಯ: ಇ-ಸೈನ್ (eSign) ಮೂಲಕ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ರಿಜಿಸ್ಟರ್ಡ್ ವಿಳಾಸಕ್ಕೆ ಡೆಲಿವರಿ.

ಹೊಸ PVC ವೋಟರ್ ಐಡಿ ಆರ್ಡರ್ ಮಾಡುವ ವಿಧಾನ (Step-by-Step Guide)

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಸ್ಮಾರ್ಟ್ ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು:

ಹಂತ 1: ಮೊದಲಿಗೆ ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಮತದಾರರ ಸೇವಾ ಪೋರ್ಟಲ್ voters.eci.gov.in ಗೆ ಭೇಟಿ ನೀಡಿ.

Voter list 2026 1 1

ಹಂತ 2: ವೆಬ್‌ಸೈಟ್‌ನ ಮುಖಪುಟದಲ್ಲಿ ಹಲವು ಆಯ್ಕೆಗಳಿರುತ್ತವೆ. ಅದರಲ್ಲಿ ‘Correction of Entries’ ಅಥವಾ ರಿಪ್ಲೇಸ್‌ಮೆಂಟ್ ವಿಭಾಗದಲ್ಲಿರುವ ಹಸಿರು ಬಣ್ಣದ ‘Fill Form 8’ ಮೇಲೆ ಕ್ಲಿಕ್ ಮಾಡಿ.

voter id correction 1

ಹಂತ 3: ನಿಮ್ಮ ಮೊಬೈಲ್ ಸಂಖ್ಯೆ (ಅಥವಾ EPIC ವೋಟರ್ ಐಡಿ ನಂಬರ್) ಮತ್ತು ಕ್ಯಾಪ್ಚಾ ಕೋಡ್ (Captcha) ನಮೂದಿಸಿ Request OTP ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್‌ಗೆ ಬರುವ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಿ. (ನೀವು ಹೊಸ ಬಳಕೆದಾರರಾಗಿದ್ದರೆ ಮೊದಲು Sign-Up ಮಾಡಿಕೊಳ್ಳಬೇಕು).

voter id correction 2

ಹಂತ 4: ಲಾಗಿನ್ ಆದ ಬಳಿಕ ಅಪ್ಲಿಕೇಶನ್ ‘Self’ (ನಿಮಗಾಗಿ) ಅಥವಾ ‘Other Elector’ (ಬೇರೆಯವರಿಗಾಗಿ) ಎಂದು ಕೇಳುತ್ತದೆ. ನಿಮ್ಮದೇ ಆಗಿದ್ದರೆ Self ಆಯ್ಕೆ ಮಾಡಿ, ನಿಮ್ಮ EPIC Number (ವೋಟರ್ ಐಡಿ ನಂಬರ್) ನಮೂದಿಸಿ. ಆಗ ನಿಮ್ಮ ಸಂಪೂರ್ಣ ವಿವರಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ.

voter id correction 3

ಹಂತ 5: ಮುಂದಿನ ಹಂತದಲ್ಲಿ, ನೀವು ಫಾರ್ಮ್ 8 ಅನ್ನು ಏಕೆ ಸಲ್ಲಿಸುತ್ತಿದ್ದೀರಿ ಎಂದು 4 ಆಯ್ಕೆಗಳನ್ನು ಕೇಳಲಾಗುತ್ತದೆ. ಅದರಲ್ಲಿ 3ನೇ ಆಯ್ಕೆಯಾದ “Issue of Replacement EPIC without correction” (ಯಾವುದೇ ತಿದ್ದುಪಡಿ ಇಲ್ಲದೆ ಹೊಸ ಕಾರ್ಡ್ ವಿತರಣೆ) ಎಂಬುದನ್ನು ಸೆಲೆಕ್ಟ್ ಮಾಡಿ.

voter id correction 5 1

ಹಂತ 6: ಕಾರಣ ನೀಡಿ (Select Reason – Very Important) ಹೊಸ ಕಾರ್ಡ್ ಏಕೆ ಬೇಕು ಎಂಬುವುದಕ್ಕೆ ಕಾರಣ ಕೇಳಲಾಗುತ್ತದೆ.

  • Lost (ಕಳೆದುಹೋಗಿದೆ)
  • Destroyed (ಪ್ರಕೃತಿ ವಿಕೋಪದಿಂದ ನಾಶವಾಗಿದೆ)
  • Mutilated (ಹಾಳಾಗಿದೆ/ಹರಿದುಹೋಗಿದೆ)
voter id correction 6 1

ಇಲ್ಲಿ Mutilated ಆಯ್ಕೆಯನ್ನು ಕ್ಲಿಕ್ ಮಾಡುವುದು ಅತ್ಯಂತ ಸೂಕ್ತ. ಏಕೆಂದರೆ, ‘Lost’ (ಕಳೆದುಹೋಗಿದೆ) ಎಂದು ನೀಡಿದರೆ ಪೊಲೀಸ್ FIR ಕಾಪಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ‘Mutilated’ ಆಯ್ಕೆ ಮಾಡಿದರೆ ಯಾವುದೇ ದಾಖಲೆ ಅಪ್‌ಲೋಡ್ ಮಾಡುವ ಅಗತ್ಯವಿರುವುದಿಲ್ಲ.

ಹಂತ 7: ಲ್ಲಾ ವಿವರಗಳನ್ನು ಪರಿಶೀಲಿಸಿ Next ಕ್ಲಿಕ್ ಮಾಡಿ. ಕೊನೆಯಲ್ಲಿ ಆಧಾರ್ (Aadhaar) ಮೂಲಕ ಇ-ಸೈನ್ (e-Sign) ಮಾಡಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ OTP ಯನ್ನು ನಮೂದಿಸಿ ದೃಢೀಕರಿಸಿ.

ಅಂತಿಮ ಹಂತ: ಅಂತಿಮವಾಗಿ Submit ಬಟನ್ ಕ್ಲಿಕ್ ಮಾಡಿ. ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗುತ್ತದೆ ಮತ್ತು ನಿಮಗೆ ಒಂದು ರೆಫರೆನ್ಸ್ ನಂಬರ್ (Reference Number) ಸಿಗುತ್ತದೆ.

ಈ ಪ್ರಕ್ರಿಯೆ ಮುಗಿದ 15 ದಿನಗಳ ಒಳಗೆ, ನಿಮ್ಮ ಹೊಸ ಸ್ಮಾರ್ಟ್ ಪಿವಿಸಿ ವೋಟರ್ ಐಡಿ ಕಾರ್ಡ್ ಅಂಚೆ (Speed Post) ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ.

ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಹಳೆಯ ವೋಟರ್ ಐಡಿಯಿಂದ ಹೊಸ ವೋಟರ್ ಐಡಿ ಗೆ ಬದಲಾಯಿಸಿಕೊಳ್ಳಬಹುದು, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೂ ಶೇರ್ ಮಾಡಿ.

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್ದಾವಣಗೆರೆ

📲

ಸರ್ಕಾರಿ ಸೇವೆಗಳು ಹಾಗೂ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಆ್ಯಪ್ ಡೌನ್‌ಲೋಡ್ ಮಾಡಿ!

ವೋಟರ್ ಐಡಿ, ಆಧಾರ್ ಕಾರ್ಡ್ ಅಪ್‌ಡೇಟ್ಸ್ ಹಾಗೂ ಸರ್ಕಾರಿ ಯೋಜನೆಗಳ ಲೇಟೆಸ್ಟ್ ಮಾಹಿತಿಯನ್ನು ನಿಮ್ಮ ಮೊಬೈಲ್‌ನಲ್ಲಿ ಕ್ಷಣಕ್ಷಣಕ್ಕೂ ಪಡೆಯಲು ‘Needs of Public’ ಆ್ಯಪ್ ಅನ್ನು ಇಂದೇ ಇನ್‌ಸ್ಟಾಲ್ ಮಾಡಿಕೊಳ್ಳಿ.

▶️ Play Store ನಿಂದ ಡೌನ್‌ಲೋಡ್ ಮಾಡಿ

⭐ 100% ಉಚಿತ • ⚡ ತ್ವರಿತ ಅಪ್‌ಡೇಟ್ಸ್ • 🤝 ಕನ್ನಡಿಗರ ಭರವಸೆಯ ಆ್ಯಪ್

WhatsApp Group Join Now
Telegram Group Join Now

Popular Categories