DCC Bank Recruitment 2026 apply

Belagavi DCC Bank Recruitment 2026: 104 ಕ್ಲರ್ಕ್, ಸಿಪಾಯಿ (Peon) ಹಾಗೂ ಗನ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (Belagavi DCC Bank) ವತಿಯಿಂದ ಖಾಲಿ ಇರುವ 104 ದ್ವಿತೀಯ ದರ್ಜೆ ಗುಮಾಸ್ತ (SDC), ಸಿಪಾಯಿ ಹಾಗೂ ಗನ್‌ಮ್ಯಾನ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.,

Highlights:

  • ನೇಮಕಾತಿ ಸಂಸ್ಥೆ: ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (Belagavi DCCB).
  • ಒಟ್ಟು ಖಾಲಿ ಹುದ್ದೆಗಳು: 104 ಹುದ್ದೆಗಳು.
  • ಹುದ್ದೆಗಳ ವಿವರ: ದ್ವಿತೀಯ ದರ್ಜೆ ಗುಮಾಸ್ತರು (SDC), ಸಿಪಾಯಿ (Peon) ಮತ್ತು ಬಂದೂಕುಧಾರಿ (Gunman).
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27 ಜುಲೈ 2026.

ಬ್ಯಾಂಕಿಂಗ್ ಮತ್ತು ಸಹಕಾರ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (Belagavi DCC Bank) ನೇಮಕಾತಿಯ ಅಧಿಸೂಚನೆ ಪ್ರಕಟವಾಗಿದೆ. ಬ್ಯಾಂಕಿನ ಪ್ರಧಾನ ಕಚೇರಿ ಹಾಗೂ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 104 ದ್ವಿತೀಯ ದರ್ಜೆ ಗುಮಾಸ್ತ (SDC), ಸಿಪಾಯಿ ಮತ್ತು ಗನ್‌ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ..

dcc

ಹುದ್ದೆಗಳ ವಿವರ ಮತ್ತು ಮಾಸಿಕ ವೇತನ ಶ್ರೇಣಿ (Vacancy & Salary Details)

ಅಧಿಸೂಚನೆಯ ಪ್ರಕಾರ ವಿವಿಧ ವೃಂದದ ಹುದ್ದೆಗಳ ಹಂಚಿಕೆ ಹಾಗೂ ವೇತನ ಶ್ರೇಣಿಯ ವಿವರಗಳು ಕೆಳಗಿನಂತಿವೆ:

ಹುದ್ದೆಯ ಹೆಸರು (Post Name)ಖಾಲಿ ಹುದ್ದೆಗಳ ಸಂಖ್ಯೆನಿಗದಿತ ಮಾಸಿಕ ವೇತನ ಶ್ರೇಣಿ (ರೂ. ಗಳಲ್ಲಿ)
ದ್ವಿತೀಯ ದರ್ಜೆ ಗುಮಾಸ್ತರು (Second Division Clerk – SDC)83ರೂ. 53,150 – 1,15,150/-
ಬಂದೂಕುಧಾರಿ (Gunman)01ರೂ. 47,650 – 1,05,650/-
ಸಿಪಾಯಿ (Peon)20ರೂ. 42,650 – 96,650/-
ಒಟ್ಟು ಹುದ್ದೆಗಳು104

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ನಿಯಮಗಳು

  • ದ್ವಿತೀಯ ದರ್ಜೆ ಗುಮಾಸ್ತರು (SDC): ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎ / ಬಿ.ಎಸ್ಸಿ / ಬಿ.ಕಾಂ (BA/B.Sc/B.Com) ಪದವಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು. (ಪದವಿಯಲ್ಲಿ ಕನಿಷ್ಠ ಒಂದು ವಿಷಯವಾಗಿ ಕಂಪ್ಯೂಟರ್ ಓದಿದ್ದರೆ ಕಂಪ್ಯೂಟರ್ ಸರ್ಟಿಫಿಕೇಟ್‌ನಿಂದ ವಿನಾಯಿತಿ ನೀಡಲಾಗುವುದು).
  • ಬಂದೂಕುಧಾರಿ (Gunman): ಎಸ್‌ಎಸ್‌ಎಲ್‌ಸಿ (SSLC/10th) ಉತ್ತೀರ್ಣರಾಗಿರಬೇಕು. ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳಿಂದ ನಿವೃತ್ತರಾದ ಮಾಜಿ ಸೈನಿಕರಾಗಿದ್ದು, ಚಾಲ್ತಿಯಲ್ಲಿರುವ ಬಂದೂಕು ಪರವಾನಗಿ (Valid Arms License) ಹೊಂದಿರಬೇಕು.
  • ಸಿಪಾಯಿ (Peon): ಎಸ್‌ಎಸ್‌ಎಲ್‌ಸಿ (SSLC/10th) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಭಾಷಾ ಜ್ಞಾನ: ಎಲ್ಲಾ ಹುದ್ದೆಗಳಿಗೂ ಕನ್ನಡ ಭಾಷೆ ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರುವುದು ಕಡ್ಡಾಯವಾಗಿದೆ.

ವಯೋಮಿತಿ (Age Limit)

27-ಆಗಸ್ಟ್-2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ವಿವರಗಳು ಹೀಗಿವೆ:

  • ಸಾಮಾನ್ಯ ವರ್ಗ (General): ಗರಿಷ್ಠ 35 ವರ್ಷಗಳು.
  • ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.

ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ (Application Fee)

ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್) ಪಾವತಿಸಬೇಕು. ಡಿಡಿ, ಚೆಕ್, ಅಂಚೆ ಆರ್ಡರ್ ಅಥವಾ ನಗದು ರೂಪದಲ್ಲಿ ಶುಲ್ಕ ಸ್ವೀಕರಿಸಲಾಗುವುದಿಲ್ಲ.

  • ಸಾಮಾನ್ಯ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ: ₹1,000/- (+ ಬ್ಯಾಂಕ್ ಗೇಟ್‌ವೇ ಶುಲ್ಕ).
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: ₹500/- (+ ಬ್ಯಾಂಕ್ ಗೇಟ್‌ವೇ ಶುಲ್ಕ).

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ (Selection Process & Exam Pattern)

ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ (Written Examination) ಹಾಗೂ ಮೌಖಿಕ ಸಂದರ್ಶನವನ್ನು (Interview) ಒಳಗೊಂಡಿರುತ್ತದೆ.

ದ್ವಿತೀಯ ದರ್ಜೆ ಗುಮಾಸ್ತ (SDC) ಪರೀಕ್ಷಾ ಮಾದರಿ (200 ಅಂಕಗಳು):

  • ಕನ್ನಡ ಭಾಷೆ: 50 ಅಂಕಗಳು
  • ಸಾಮಾನ್ಯ ಇಂಗ್ಲಿಷ್: 25 ಅಂಕಗಳು
  • ಸಾಮಾನ್ಯ ಜ್ಞಾನ: 25 ಅಂಕಗಳು
  • ಸಹಕಾರ ವಿಷಯಗಳು: 50 ಅಂಕಗಳು
  • ಭಾರತದ ಸಂವಿಧಾನ: 25 ಅಂಕಗಳು
  • ಬ್ಯಾಂಕಿಂಗ್ & ವಸ್ತುನಿಷ್ಠ ವಿಷಯ: 25 ಅಂಕಗಳು

ಸಿಪಾಯಿ ಮತ್ತು ಬಂದೂಕುಧಾರಿ ಪರೀಕ್ಷಾ ಮಾದರಿ (100 ಅಂಕಗಳು):

  • ಕನ್ನಡ ಭಾಷೆ: 50 ಅಂಕಗಳು
  • ಸಾಮಾನ್ಯ ಜ್ಞಾನ: 50 ಅಂಕಗಳು
  1. ಸಂದರ್ಶನ (15 ಅಂಕಗಳು): ಲಿಖಿತ ಪರೀಕ್ಷೆಯ ಅಂಕಗಳನ್ನು ಶೇ. 85 ಕ್ಕೆ ಇಳಿಸಿ, 1:5 ರ ಅನುಪಾತದಲ್ಲಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ (15 ಅಂಕಗಳು) ಕರೆಯಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ (How to Apply Online)

ಅರ್ಜಿಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು, ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಹಂತ 1: ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.belagavidccb.bank.in ಗೆ ಭೇಟಿ ನೀಡಿ ‘BDCC Bank Recruitment 2026’ ಆಯ್ಕೆಯನ್ನು ಆರಿಸಿ.

dcc bank belagavi

ಹಂತ 2: ನಿಯಮಗಳನ್ನು ಒಪ್ಪಿಕೊಂಡು ‘Open Application’ ಕ್ಲಿಕ್ ಮಾಡಿ, ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ ‘Apply’ ಬಟನ್ ಒತ್ತಿ ವಿವರಗಳನ್ನು ಭರ್ತಿ ಮಾಡಿ.

ಹಂತ 3: ನಿಮ್ಮ ವಿವರಗಳನ್ನು ಪರಿಶೀಲಿಸಿ (Preview) ಮುಂದುವರಿಯಿರಿ. ಈ ಹಂತದಲ್ಲಿ ನಿಮ್ಮ ಇಮೇಲ್‌ಗೆ Registration ID ಮತ್ತು Password ಬರುತ್ತದೆ.

ಹಂತ 4: ಬಿಳಿ ಹಿನ್ನೆಲೆಯುಳ್ಳ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ (ಗರಿಷ್ಠ 100 KB) ಮತ್ತು ಸಹಿಯನ್ನು (ಗರಿಷ್ಠ 50 KB) ನಿಗದಿತ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.

ಹಂತ 5: ನಿಮ್ಮ ಶೈಕ್ಷಣಿಕ ಅಂಕಪಟ್ಟಿ, ಜಾತಿ ಮತ್ತು ಮೀಸಲಾತಿ ಪ್ರಮಾಣಪತ್ರಗಳ ಸ್ವಯಂ ದೃಢೀಕೃತ (Self-Attested) ಜೆರಾಕ್ಸ್ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 6: ‘Pay Online’ ಬಟನ್ ಒತ್ತಿ ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಅರ್ಜಿ ಶುಲ್ಕ ಪಾವತಿಸಿ.

ಹಂತ 7: ಅಂತಿಮವಾಗಿ ‘Print Application’ ಕ್ಲಿಕ್ ಮಾಡಿ ಭರ್ತಿಯಾದ ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು (Important Dates)

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27-07-2026
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-08-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27-08-2026

Belagavi DCC Bank Recruitment 2026: Important Links

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್







WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories