3991 police post apply now scaled

KSP ನೇಮಕಾತಿ 2026: 3,991 ಸಿವಿಲ್ ಪೊಲೀಸ್ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆರಂಭ; ಇಲ್ಲಿದೆ ಅರ್ಜಿ ಲಿಂಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಇಂದಿನಿಂದ (ಜೂನ್ 10) ಆರಂಭವಾಗಿದೆ. ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್, ಬೇಕಾಗುವ ಪ್ರಮುಖ ದಾಖಲೆಗಳು ಮತ್ತು ಫೋಟೋ ಸೈಜ್ ನಿಯಮಗಳ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ…

  • *ಅರ್ಜಿ ಆರಂಭ: 3,991 ಸಿವಿಲ್ ಪೊಲೀಸ್ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.
  • *ಕೊನೆಯ ದಿನಾಂಕ: ಜುಲೈ 3ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ.
  • *ದಾಖಲೆಗಳು: ಜಾತಿ, ಗ್ರಾಮೀಣ ಮೀಸಲಾತಿ ಪ್ರಮಾಣಪತ್ರಗಳ RD ಸಂಖ್ಯೆ ಕಡ್ಡಾಯ.
  • *ಫೋಟೋ ನಿಯಮ: ಅಪ್‌ಲೋಡ್ ಮಾಡುವ ಫೋಟೋ, ಸಹಿ 50kb ಒಳಗಿರಬೇಕು.

ಬಿಗ್ ನ್ಯೂಸ್: 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ; ಮೊಬೈಲ್‌ನಲ್ಲೇ ಅರ್ಜಿ ಹಾಕಲು ಈ ದಾಖಲೆಗಳು ಕಡ್ಡಾಯ!

ಬೆಂಗಳೂರು: ಖಾಕಿ ತೊಡುವ ಕನಸು ಹೊತ್ತು ಪೊಲೀಸ್ ಇಲಾಖೆಯಲ್ಲಿ (Karnataka Police Department) ಉದ್ಯೋಗ ಹುಡುಕುತ್ತಿರುವ ರಾಜ್ಯದ ಲಕ್ಷಾಂತರ ಯುವಕ-ಯುವತಿಯರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬಹುದೊಡ್ಡ ಸಿಹಿಸುದ್ದಿ ನೀಡಿದೆ. ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಇಂದಿನಿಂದಲೇ (ಜೂನ್ 10) ಆನ್‌ಲೈನ್ ಮೂಲಕ ಅಧಿಕೃತ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.ನಿಮ್ಮ ಮೊಬೈಲ್ ಫೋನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣವಾದ ಹಂತ ಹಂತದ ಮಾಹಿತಿ ಕೆಳಗೆ ಕೊಡಲಾಗಿದೆ.

ಈ ಬಾರಿಯ ಪೊಲೀಸ್ ನೇಮಕಾತಿ ಪ್ರಕ್ರಿಯೆಯನ್ನು ಕೆಇಎ (KEA) ನಡೆಸುತ್ತಿದ್ದು, ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ಗೊಂದಲಗಳಾಗದಂತೆ ಅಭ್ಯರ್ಥಿಗಳಿಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಪೋರ್ಟಲ್ ಓಪನ್ ಆಗಿದ್ದು, ಕೊನೆಯ ಕ್ಷಣದ ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಇಂದೇ ತಮ್ಮ ಅಗತ್ಯ ದಾಖಲೆಗಳನ್ನು ಒಗ್ಗೂಡಿಸಿ ಅರ್ಜಿ ಸಲ್ಲಿಸುವುದು ಜಾಣತನ.

ಹುದ್ದೆಗಳ ವರ್ಗೀಕರಣ ಹಾಗೂ ಪ್ರಮುಖ ದಿನಾಂಕಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ಅಧಿಕೃತ ಎಕ್ಸ್ (Twitter) ಖಾತೆಯಲ್ಲಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಹುದ್ದೆಗಳ ಹಂಚಿಕೆ ಮತ್ತು ದಿನಾಂಕಗಳು ಈ ಕೆಳಗಿನಂತಿವೆ:

  • ಒಟ್ಟು ಹುದ್ದೆಗಳು: 3,991 ಪೋಸ್ಟ್‌ಗಳು
  • ಕಲ್ಯಾಣ ಕರ್ನಾಟಕ (HK) ಕೋಟಾ: 596 ಹುದ್ದೆಗಳು
  • ಉಳಿಕೆ ಮೂಲ ವೃಂದ (Non-HK) ಕೋಟಾ: 3,395 ಹುದ್ದೆಗಳು
  • ಅರ್ಜಿ ಸಲ್ಲಿಕೆ ಆರಂಭ: 10 ಜೂನ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಜುಲೈ 2026

ಆನ್‌ಲೈನ್ ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳು ನಿಮ್ಮ ಕೈಯಲ್ಲಿರಲಿ! (Checklist)

ಸೈಬರ್ ಸೆಂಟರ್‌ಗೆ ಹೋಗುವ ಮುನ್ನ ಅಥವಾ ನಿಮ್ಮ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಲು ಕುಳಿತುಕೊಳ್ಳುವ ಮುನ್ನ, ಈ ಕೆಳಗಿನ ಮೂಲ ದಾಖಲೆಗಳ (Original Documents) ಸ್ಕ್ಯಾನ್ಡ್ ಕಾಪಿ ಹಾಗೂ ಆರ್.ಡಿ (RD) ಸಂಖ್ಯೆಗಳನ್ನು ಕಡ್ಡಾಯವಾಗಿ ಸಿದ್ಧವಾಗಿಟ್ಟುಕೊಳ್ಳಿ ಎಂದು ಕೆಇಎ ಸೂಚಿಸಿದೆ.

  • ಆಧಾರ್ ಕಾರ್ಡ್ (Aadhaar Card): ನಿಮ್ಮ ಗುರುತಿನ ಖಾತ್ರಿಗಾಗಿ.
  • ಶೈಕ್ಷಣಿಕ ಅಂಕಪಟ್ಟಿಗಳು: ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ (ಪಿಯುಸಿ/ಪದವಿ) ಎಲ್ಲಾ ವರ್ಷಗಳ ಅಥವಾ ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಹಾಗೂ ಘಟಿಕೋತ್ಸವ ಪ್ರಮಾಣಪತ್ರ (Convocation) ಅಥವಾ ಪಿಡಿಸಿ (PDC). ಇವುಗಳನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.
  • ವಯಸ್ಸಿನ ದೃಢೀಕರಣ ದಾಖಲೆ: ಜನ್ಮ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸಿರುವ ಎಸ್‌ಎಸ್‌ಎಲ್‌ಸಿ (SSLC) ಮಾರ್ಕ್ಸ್ ಕಾರ್ಡ್ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ / ಶಾಲೆಯ ವರ್ಗಾವಣೆ ಪ್ರಮಾಣಪತ್ರ (TC) ಹೊಂದಿರಬೇಕು.
  • ಮಾಜಿ ಸೈನಿಕ ಮೀಸಲಾತಿ (Ex-Servicemen): ಸೈನಿಕ ಸೇವೆಯಿಂದ ಬಿಡುಗಡೆಯಾದ ಸರ್ಟಿಫಿಕೇಟ್ ಮತ್ತು ಪಿಂಚಣಿ/ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣಪತ್ರ. ಮಾಜಿ ಸೈನಿಕರ ಅವಲಂಬಿತರಾಗಿದ್ದರೆ, ಸೇವೆಯಲ್ಲಿದ್ದಾಗ ಮೃತಪಟ್ಟ ಅಥವಾ ಶಾಶ್ವತವಾಗಿ ಅಂಗವಿಕಲರಾದ ಅಧಿಕೃತ ಪ್ರಮಾಣಪತ್ರ.
  • ಅನಕ್ಷೇಪಣಾ ಪ್ರಮಾಣಪತ್ರ (NOC): ಈಗಾಗಲೇ ಬೇರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು, ಆಯ್ಕೆಯಾದಲ್ಲಿ ತಮ್ಮ ಇಲಾಖೆಗೆ ಸಲ್ಲಿಸಲು ಅನಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿಟ್ಟುಕೊಳ್ಳಬೇಕು.

ಜಾತಿ ಮತ್ತು ಒಳಮೀಸಲಾತಿ: ಕೆಇಎ ನೀಡಿದ ಹೊಸ ವಿಶೇಷ ಸೂಚನೆ

ಮೀಸಲಾತಿ ಕೋರುವ ಅಭ್ಯರ್ಥಿಗಳು ಈ ವಿಚಾರದಲ್ಲಿ ಅತ್ಯಂತ ಎಚ್ಚರ ವಹಿಸಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಪ್ರಮಾಣಪತ್ರಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಅಧಿಕೃತ ನಮೂನೆಗಳಲ್ಲಿಯೇ ಪಡೆದಿರಬೇಕು.

  • SC ಅಭ್ಯರ್ಥಿಗಳಿಗೆ ಕಡ್ಡಾಯ ನಿಯಮ: ಪರಿಶಿಷ್ಟ ಜಾತಿಯ (SC) ಅಭ್ಯರ್ಥಿಗಳು ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಒಳಮೀಸಲಾತಿ ಪ್ರಕಾರ ತಮಗೆ ಅನ್ವಯವಾಗುವ ಎಸ್ಸಿ-ಎ (SC-A), ಎಸ್ಸಿ-ಬಿ (SC-B) ಮತ್ತು ಎಸ್ಸಿ-ಸಿ (SC-C) ಜಾತಿ ಪ್ರಮಾಣಪತ್ರಗಳ ‘RD ಸಂಖ್ಯೆ’ಯನ್ನು (RD Number) ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಲೇಬೇಕು.
  • ಗ್ರಾಮೀಣ ಮೀಸಲಾತಿ (Rural Quota): ಗ್ರಾಮೀಣ ಕೋಟಾ ಕ್ಲೇಮ್ ಮಾಡುವ ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ನಮೂನೆ-1 ರಲ್ಲಿ ಹಾಗೂ SC/ST/OBC ಅಭ್ಯರ್ಥಿಗಳು ನಮೂನೆ-2 ರಲ್ಲಿ ಪ್ರಮಾಣಪತ್ರ ಹೊಂದಿರಬೇಕು.
  • GM ಅಭ್ಯರ್ಥಿಗಳಿಗೆ ಎಚ್ಚರಿಕೆ: ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ಗ್ರಾಮೀಣ ಕೋಟಾವನ್ನು ಪಡೆಯಬೇಕಾದರೆ, ಕಡ್ಡಾಯವಾಗಿ ಆದಾಯ ಪ್ರಮಾಣಪತ್ರ (Non-Creamy Layer ಸರ್ಟಿಫಿಕೇಟ್) ಹೊಂದಿರಲೇಬೇಕು ಎಂದು ಕೆಇಎ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
  • ಇತರೆ ಮೀಸಲಾತಿ: ಕನ್ನಡ ಮಾಧ್ಯಮ ಹಾಗೂ ವಿಶೇಷ ಚೇತನ (PH) ಮೀಸಲಾತಿ ಕೋರುವವರು ಅದಕ್ಕೆ ಸಂಬಂಧಿಸಿದ ಅಧಿಕೃತ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.

ಅಪ್‌ಲೋಡ್ ಮಾಡುವ ಫೋಟೋ ಮತ್ತು ಸಹಿಯ ಸೈಜ್ ಎಷ್ಟಿರಬೇಕು?

ಆನ್‌ಲೈನ್ ಅರ್ಜಿಯಲ್ಲಿ ಬಹುತೇಕ ಅಭ್ಯರ್ಥಿಗಳು ಮಾಡುವ ದೊಡ್ಡ ತಪ್ಪು ಎಂದರೆ ಫೋಟೋ ಅಪ್‌ಲೋಡ್ ಮಾಡುವುದು. ಅರ್ಜಿ ತಿರಸ್ಕೃತವಾಗದಂತೆ ತಡೆಯಲು ಈ ಕೆಳಗಿನ ಅಳತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ:

  • ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Photo) ಮತ್ತು ಬಿಳಿ ಹಾಳೆಯ ಮೇಲೆ ಮಾಡಿರುವ ಸಹಿಯ (Signature) ಸ್ಕ್ಯಾನ್ಡ್ ಕಾಪಿ ಕಡ್ಡಾಯವಾಗಿ 50kb ಗಿಂತ ಕಡಿಮೆ (Under 50kb) ಗಾತ್ರದಲ್ಲಿರಬೇಕು.

📌 ಸೂಚನೆ: ಪೊಲೀಸ್ ಇಲಾಖೆಯ ಈ 3,991 ಹುದ್ದೆಗಳ ವಯೋಮಿತಿ, ವಿದ್ಯಾರ್ಹತೆ, ವೇತನ ಶ್ರೇಣಿ ಹಾಗೂ ಪರೀಕ್ಷಾ ವಿಧಾನದ ‘ಸಂಪೂರ್ಣ ನೋಟಿಫಿಕೇಶನ್ ಪಿಡಿಎಫ್’ ಮಾಹಿತಿಯನ್ನು ಓದಲು ಕೆಳಗಿನ ಬಟನ್ ಕ್ಲಿಕ್ ಮಾಡಿ.

👉 ಸಂಪೂರ್ಣ ಮಾಹಿತಿ ಓದಲು ಇಲ್ಲಿ ಕ್ಲಿಕ್ ಮಾಡಿ 👈

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ಕೆಇಎ ವೆಬ್ ಸೈಟಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವ ಡೈರೆಕ್ಟರ್ ಲಿಂಕ್ ಮೇಲೆ ಕ್ಲಿಕ್ ಮಾಡಿ

Step:1 ಅರ್ಜಿ ಸಲ್ಲಿಸುವ ಮುನ್ನ ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನು ರೆಡಿ ಇಟ್ಟುಕೊಳ್ಳಿ.

step1

Step 2: ಅರ್ಜಿ ಸಲ್ಲಿಕೆ ಒಟ್ಟು ಐದು ಹಂತಗಳಲ್ಲಿ ಇದ್ದು, ಎಲ್ಲಾ ಹಂತಗಳನ್ನು ಸರಿಯಾಗಿ ಪೂರ್ಣಗೊಳಿಸಬೇಕು

step 2

Step 3: ವೆಬ್ ಸೈಟ್ ನಲ್ಲಿ ಕೊಟ್ಟಿರುವ ಮೊದಲ ಹಂತವನ್ನು ಪೂರ್ಣಗೊಳಿಸಲು, ನಿಮ್ಮ ಆಧಾರ್ ನಂಬರ್ ಹಾಕಿ ವೆರಿಫೈ ಮಾಡಿಕೊಳ್ಳಬೇಕು, So 10th Std/SSLC/CBSE/ICSE Registration Number ಹಾಕಿ ಬೋರ್ಡ್ ಸೆಲೆಕ್ಟ್ ಮಾಡಿ ಕೊಟ್ಟಿರುವ ಕ್ಯಾಪ್ಚ ಎಂಟರ್ ಮಾಡಿ sumbit ಬಟನ್ ಕ್ಲಿಕ್ ಮಾಡಿ

step 3

Step 4: ನಂತರ ಆನ್ಲೈನ್ ಅರ್ಜಿ ಓಪನ್ ಆಗುತ್ತದೆ, ಕೇಳಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ

step 4

Step 5: ನಿಮ್ಮ ಭಾವಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಿ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವಾಗ ಏನಾದರೂ ಸಂದೇಹಗಳಿದ್ದರೆ ಕೆಳಗೆ ಕಮೆಂಟ್ ಬಾಕ್ಸ್ ನಲ್ಲಿ ಪ್ರಶ್ನೆಗಳನ್ನು ಕೇಳಬಹುದು.

ತಡವೇಕೆ? ಕೊನೆಯ ಕ್ಷಣದ ಸರ್ವರ್ ಗಡಿಬಿಡಿಯನ್ನು ತಪ್ಪಿಸಲು, ಈಗಲೇ ಕೆಇಎ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ. ಪರೀಕ್ಷಾ ಸಿದ್ಧತೆಗೆ ಆಲ್ ದಿ ಬೆಸ್ಟ್!

ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories