airtel scholarship free laptop 2026

Airtel Scholarship 2026: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, 100% ಶುಲ್ಕ ವಿನಾಯಿತಿ!

ಭಾರ್ತಿ ಏರ್‌ಟೆಲ್ ಫೌಂಡೇಶನ್ (Bharti Airtel Foundation) ನಿಂದ ನೀಡಲಾಗುವ 2026-27ನೇ ಸಾಲಿನ ಭಾರ್ತಿ ಏರ್‌ಟೆಲ್ ಸ್ಕಾಲರ್‌ಶಿಪ್‌ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 100% ಟ್ಯೂಷನ್, ಹಾಸ್ಟೆಲ್ ಫೀಸ್ ಜೊತೆಗೆ ಉಚಿತ ಲ್ಯಾಪ್‌ಟಾಪ್ ದೊರೆಯಲಿದೆ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ…

  • *ಸ್ಕಾಲರ್‌ಶಿಪ್: ಭಾರ್ತಿ ಏರ್‌ಟೆಲ್ ಫೌಂಡೇಶನ್‌ನಿಂದ 2026-27ನೇ ಸಾಲಿನ ಬೃಹತ್ ವಿದ್ಯಾರ್ಥಿವೇತನ.
  • *ಬೆನಿಫಿಟ್ಸ್: 100% ಶುಲ್ಕ ವಿನಾಯಿತಿ, ಹಾಸ್ಟೆಲ್/ಮೆಸ್ ಫೀಸ್ ಹಾಗೂ ಉಚಿತ ಲ್ಯಾಪ್‌ಟಾಪ್.
  • *ಯಾರಿಗೆ?: ಟಾಪ್ 50 NIRF ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳಿಗೆ.
  • *ಕೊನೆಯ ದಿನಾಂಕ: ಜುಲೈ 31, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ.

ಭಾರ್ತಿ ಏರ್‌ಟೆಲ್ ವಿದ್ಯಾರ್ಥಿವೇತನ 2026-27: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಮತ್ತು 100% ಶುಲ್ಕ ವಿನಾಯಿತಿ!

ತಂತ್ರಜ್ಞಾನ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ಕಾಣುತ್ತಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರ್ತಿ ಏರ್‌ಟೆಲ್ ಫೌಂಡೇಶನ್ (Bharti Airtel Foundation) ಬಹುದೊಡ್ಡ ಆಸರೆಯಾಗಿ ನಿಂತಿದೆ.

2026-27ನೇ ಶೈಕ್ಷಣಿಕ ಸಾಲಿನ ಭಾರ್ತಿ ಏರ್‌ಟೆಲ್ ಸ್ಕಾಲರ್‌ಶಿಪ್ (Bharti Airtel Scholarship) ಗೆ ಇದೀಗ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 100% ಶುಲ್ಕ ಮರುಪಾವತಿಯ ಜೊತೆಗೆ ಉಚಿತ ಲ್ಯಾಪ್‌ಟಾಪ್‌ (Free Laptop) ಅನ್ನು ನೀಡಲಾಗುತ್ತಿದೆ.

ಈ ವಿದ್ಯಾರ್ಥಿವೇತನದ ಸಂಪೂರ್ಣ ವಿವರ, ಅರ್ಹತಾ ಮಾನದಂಡಗಳು, ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ..

ಏನಿದು ಭಾರ್ತಿ ಏರ್‌ಟೆಲ್ ಸ್ಕಾಲರ್‌ಶಿಪ್?

ಭಾರ್ತಿ ಎಂಟರ್‌ಪ್ರೈಸಸ್‌ನ (Bharti Enterprises) ಸಮಾಜಮುಖಿ ವಿಭಾಗವಾದ ಭಾರ್ತಿ ಏರ್‌ಟೆಲ್ ಫೌಂಡೇಶನ್, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ 2024ರಲ್ಲಿ ಈ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು ಆರಂಭಿಸಿದೆ. ದೇಶದ ಟಾಪ್ 50 NIRF ರ‍್ಯಾಂಕಿಂಗ್ ಹೊಂದಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ (IIT ಗಳು ಸೇರಿದಂತೆ) ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಇದರ ಮುಖ್ಯ ಗುರಿ.

  • ಮಹಿಳೆಯರಿಗೆ ಆದ್ಯತೆ: ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಮುಂದಾಳತ್ವ ವಹಿಸಬೇಕು ಎಂಬ ಉದ್ದೇಶದಿಂದ ಈ ಸ್ಕಾಲರ್‌ಶಿಪ್‌ನಲ್ಲಿ ವಿದ್ಯಾರ್ಥಿನಿಯರಿಗೆ (Girl Students) ವಿಶೇಷ ಆದ್ಯತೆ ನೀಡಲಾಗುತ್ತದೆ.
  • ಉದಾಹರಣೆಗೆ, ಕಳೆದ 2025-26ನೇ ಸಾಲಿನಲ್ಲಿ ಆಯ್ಕೆಯಾದ ಒಟ್ಟು 500 ವಿದ್ಯಾರ್ಥಿಗಳಲ್ಲಿ ಶೇ. 26.8 ರಷ್ಟು (134) ಹೆಣ್ಣುಮಕ್ಕಳೇ ಇದ್ದರು.

ಸ್ಕಾಲರ್‌ಶಿಪ್‌ನ ಭರ್ಜರಿ ಪ್ರಯೋಜನಗಳು (Benefits)

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳನ್ನು ಅಧಿಕೃತವಾಗಿ “ಭಾರ್ತಿ ಸ್ಕಾಲರ್ಸ್” (Bharti Scholars) ಎಂದು ಕರೆಯಲಾಗುತ್ತದೆ. ಇವರಿಗೆ ಸಿಗುವ ಸೌಲಭ್ಯಗಳ ಪಟ್ಟಿ ಇಲ್ಲಿದೆ:

  1. 100% ವಾರ್ಷಿಕ ಶುಲ್ಕ: ವಿಶ್ವವಿದ್ಯಾಲಯ/ಸಂಸ್ಥೆಯ ಅಧಿಕೃತ ಶುಲ್ಕ ರಚನೆಯ (Fee Structure) ಪ್ರಕಾರ ವಿದ್ಯಾರ್ಥಿಯ ಪೂರ್ಣ (100%) ವಾರ್ಷಿಕ ಶುಲ್ಕವನ್ನು ಭರಿಸಲಾಗುತ್ತದೆ.
  2. ಹಾಸ್ಟೆಲ್ ಮತ್ತು ಮೆಸ್ ಫೀಸ್: ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಹಾಸ್ಟೆಲ್ ಹಾಗೂ ಮೆಸ್ ಶುಲ್ಕವನ್ನು ನೀಡಲಾಗುತ್ತದೆ. ಪಿಜಿ (PG) ಅಥವಾ ಬಾಡಿಗೆ ಮನೆಯಲ್ಲಿದ್ದರೆ ವಾಸ್ತವಿಕ ಖರ್ಚು ಅಥವಾ ಕಾಲೇಜು ಶುಲ್ಕ (ಯಾವುದು ಕಡಿಮೆಯೋ ಅದು) ನೀಡಲಾಗುವುದು.
  3. ಉಚಿತ ಲ್ಯಾಪ್‌ಟಾಪ್: ಇಂಜಿನಿಯರಿಂಗ್ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಕೋರ್ಸ್‌ನ ಮೊದಲ ವರ್ಷದಲ್ಲೇ ಪ್ರತಿಯೊಬ್ಬ ಭಾರ್ತಿ ಸ್ಕಾಲರ್‌ಗೂ ಒಂದು ಅತ್ಯಾಧುನಿಕ ಲ್ಯಾಪ್‌ಟಾಪ್ (Laptop) ಅನ್ನು ಉಚಿತವಾಗಿ ನೀಡಲಾಗುವುದು.
  4. ಪೂರ್ಣಾವಧಿ ಬೆಂಬಲ: ಷರತ್ತುಗಳನ್ನು (Renewal criteria) ಪೂರೈಸಿದರೆ, 4 ವರ್ಷಗಳ ಯುಜಿ (UG) ಕೋರ್ಸ್ ಹಾಗೂ 5 ವರ್ಷಗಳ ಇಂಟಿಗ್ರೇಟೆಡ್ (Integrated) ಕೋರ್ಸ್‌ಗಳ ಪೂರ್ಣ ಅವಧಿಗೆ ಈ ಸ್ಕಾಲರ್‌ಶಿಪ್ ಮುಂದುವರಿಯುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? (Eligibility Criteria)

ಭಾರ್ತಿ ಏರ್‌ಟೆಲ್ ವಿದ್ಯಾರ್ಥಿವೇತನ ಪಡೆಯಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು:

ಶಿಕ್ಷಣ:

ಅಭ್ಯರ್ಥಿಯು ಭಾರತದ ಟಾಪ್ 50 NIRF ರ‍್ಯಾಂಕಿಂಗ್ (2025ರ ಪಟ್ಟಿಯಂತೆ) ಹೊಂದಿರುವ ಇಂಜಿನಿಯರಿಂಗ್ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ವರ್ಷದ (2026-27 ಸಾಲು) ಯುಜಿ (UG) ಅಥವಾ 5 ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್‌ಗೆ ಪ್ರವೇಶ ಪಡೆದಿರಬೇಕು.

ಅರ್ಹ ಕೋರ್ಸ್‌ಗಳು:

  1. Electronics and Communication,
  2. Telecom, IT,
  3. Computer Science,
  4. Data Science,
  5. Aerospace,
  6. Emerging Technologies (AI, IoT, AR/VR, Machine Learning, Robotics)

ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಮಾತ್ರ ಅರ್ಹರು.

ಆದಾಯ ಮಿತಿ:

ವಿದ್ಯಾರ್ಥಿಯ ಪೋಷಕರು/ಪಾಲಕರ ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಆದಾಯವು ₹8 ಲಕ್ಷಗಳನ್ನು ಮೀರಬಾರದು.

ಇತರ ವಿದ್ಯಾರ್ಥಿವೇತನ:

ಭಾರ್ತಿ ಏರ್‌ಟೆಲ್ ಫೌಂಡೇಶನ್ ನೀಡುವ ಅದೇ ಉದ್ದೇಶಗಳಿಗಾಗಿ ಸರ್ಕಾರ ಅಥವಾ ಬೇರೆ ಯಾವುದೇ ಖಾಸಗಿ ಸಂಸ್ಥೆಗಳಿಂದ ಸ್ಕಾಲರ್‌ಶಿಪ್ ಪಡೆಯುತ್ತಿರಬಾರದು.

ಆದ್ಯತೆ:

  1. ವಿದ್ಯಾರ್ಥಿನಿಯರು,
  2. ವಿಕಲಚೇತನರು,
  3. ಒಂಟಿ ಪೋಷಕರಿರುವ ಅಥವಾ ಅನಾಥ ಮಕ್ಕಳು
  4. ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ (Transgender)

ಆಯ್ಕೆ ಪ್ರಕ್ರಿಯೆಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು ಮತ್ತು ಭಾರತದಲ್ಲೇ ನೆಲೆಸಿರಬೇಕು.

ಪ್ರಮುಖ ದಾಖಲೆಗಳು (Documents Required)

ಅರ್ಜಿ ಸಲ್ಲಿಸುವ ಮುನ್ನ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ:

  • ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ (ವೋಟರ್ ಐಡಿ, ಪ್ಯಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್).
  • ಪ್ರಸಕ್ತ ಸಾಲಿನ ಪ್ರವೇಶಾತಿ ಪುರಾವೆ (Admission Letter/Fee Receipt).
  • 12ನೇ ತರಗತಿಯ (ದ್ವಿತೀಯ ಪಿಯುಸಿ) ಅಂಕಪಟ್ಟಿ.
  • ಜೆಇಇ (JEE Scorecard) ಅಥವಾ ವಿವಿ ಪ್ರವೇಶ ಪರೀಕ್ಷೆಯ ಸ್ಕೋರ್‌ಕಾರ್ಡ್.

ಆದಾಯ ದಾಖಲೆ:

  1. ಸಂಬಳ/ಸ್ವಯಂ ಉದ್ಯೋಗಿಗಳಾಗಿದ್ದರೆ ಇತ್ತೀಚಿನ ಐಟಿಆರ್ (ITR Form) ಮತ್ತು ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್. ಆದಾಯ ತೆರಿಗೆ ಪಾವತಿಸದಿದ್ದರೆ/ನಿರುದ್ಯೋಗಿಗಳಾಗಿದ್ದರೆ ಸರ್ಕಾರಿ ಆದಾಯ ಪ್ರಮಾಣಪತ್ರ ಮತ್ತು 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್. (ಗಮನಿಸಿ: ITR ಸ್ವೀಕೃತಿ ರಶೀದಿಯನ್ನು ಆದಾಯ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ)
  2. ವಿದ್ಯಾರ್ಥಿ ಹಾಗೂ ಪೋಷಕರ ಬ್ಯಾಂಕ್ ಖಾತೆ ವಿವರ ಮತ್ತು 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್.
  3. ವ್ಯಾಸಂಗ ಮಾಡುತ್ತಿರುವ ಕಾಲೇಜಿನ/ಸಂಸ್ಥೆಯ ಬ್ಯಾಂಕ್ ಖಾತೆ ವಿವರ (Account Number, IFSC, ಇತ್ಯಾದಿ).
  4. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
  5. ಪಿಜಿ (PG) ಅಥವಾ ಬಾಡಿಗೆ ಮನೆಯಲ್ಲಿದ್ದರೆ ಖರ್ಚಿನ ರಶೀದಿ/ರೆಂಟ್ ಅಗ್ರಿಮೆಂಟ್.
  6. ಅಭ್ಯರ್ಥಿಯ ಉದ್ದೇಶದ ಹೇಳಿಕೆ (Statement of Purpose – SOP).
  7. ಪಠ್ಯೇತರ ಚಟುವಟಿಕೆಗಳು, ಸಾಧನೆಗಳು, ಪ್ರಾಜೆಕ್ಟ್ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆಗಳು (ಇದ್ದರೆ).

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಈ ಸ್ಕಾಲರ್‌ಶಿಪ್‌ಗೆ ಪ್ರಮುಖ ಶೈಕ್ಷಣಿಕ ಪೋರ್ಟಲ್ ಆದ Buddy4Study ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

Step 1: ನಿಮ್ಮ ನೋಂದಾಯಿತ ಇಮೇಲ್/ಮೊಬೈಲ್ ಸಂಖ್ಯೆ/ಜಿಮೇಲ್ ಬಳಸಿ Buddy4Study ವೆಬ್‌ಸೈಟ್‌ಗೆ ಲಾಗಿನ್ ಆಗಿ (ಖಾತೆ ಇಲ್ಲದಿದ್ದರೆ ಮೊದಲು ರಿಜಿಸ್ಟರ್ ಆಗಿ).

Airtel 1

Step 2: ಲಾಗಿನ್ ಆದ ನಂತರ ‘Bharti Airtel Scholarship 2026-27’ ಅರ್ಜಿ ಪುಟಕ್ಕೆ ರೀಡೈರೆಕ್ಟ್ ಆಗುತ್ತೀರಿ.

Airtel 2

Step 3: ಅಲ್ಲಿ ‘Start Application’ ಬಟನ್ ಕ್ಲಿಕ್ ಮಾಡಿ, ಕೇಳಲಾದ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.

Airtel 3

Step 4: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

Step 5: ನಿಯಮ ಮತ್ತು ಷರತ್ತುಗಳನ್ನು (Terms and Conditions) ಒಪ್ಪಿಕೊಂಡು, ‘Preview’ ಮಾಡಿ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಂಡ ನಂತರ ‘Submit’ ಬಟನ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2026

ವಿಶೇಷ ಸೂಚನೆ: ಆಯ್ಕೆಯಾಗಿ ಉದ್ಯೋಗ ಪಡೆದ ನಂತರ, ಭಾರ್ತಿ ಸ್ಕಾಲರ್‌ಗಳು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸ್ವಯಂಪ್ರೇರಿತವಾಗಿ ಆರ್ಥಿಕ ಬೆಂಬಲ ನೀಡುವ ಬದ್ಧತೆಯನ್ನು ಹೊಂದಿರಬೇಕು (Culture of giving back). ಅಲ್ಲದೆ, ಸ್ಕಾಲರ್‌ಶಿಪ್ ಪಡೆಯುವ ಅವಧಿಯಲ್ಲಿ ಪ್ರತಿ ವರ್ಷ ಕನಿಷ್ಠ 5 ಗಿಡಗಳನ್ನು ನೆಟ್ಟು ಪೋಷಿಸಲು (Environmental Leadership) ಪ್ರೋತ್ಸಾಹಿಸಲಾಗುತ್ತದೆ.

ಅರ್ಹ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರೊಂದಿಗೂ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಿ!

ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

ಈ ಮಾಹಿತಿಗಳನ್ನು ಓದಿ:


WhatsApp Group Join Now
Telegram Group Join Now

5 responses to “Airtel Scholarship 2026: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, 100% ಶುಲ್ಕ ವಿನಾಯಿತಿ!”

  1. Renuka Avatar
    Renuka

    Kampli panjar M ಸೂಗೂರು ಗ್ರಾಮ ಪಂಚಾಯತಿ M ಸೂಗೂರು

  2. Prema Manjunath Hunasimarad Avatar
    Prema Manjunath Hunasimarad
  3. Karthik v Avatar
    Karthik v

    It is helpfull for me because I have no a any now I need a laptop to learn the program related and get a placement it is very hard without laptop that only i have need a laptop to the up coming studies and me are coming from very poor family my college fees is very i have need to your amount and it is useful for me I have requested to you to give laptop for me

Leave a Reply

Your email address will not be published. Required fields are marked *


Popular Categories