ಬಿಗ್ ಬಾಸ್ ಸೀಸನ್ 10 ನ ( Big Boss ) ಸ್ಪರ್ಧಿ ವರ್ತೂರ್ ಸಂತೋಷ್ ಬಗ್ಗೆ ಈಗಾಗಲೇ ಶೋಷಿಯಲ್ ಮೀಡಿಯಾ ( Social Media ) ದಲ್ಲಿ ಹಲವಾರು ಆರೋಪಗಳು ಹರಿದಾಡುತ್ತಿವೆ. ಮೊದಲು ವರ್ತೂರ್ ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರು ಎಂದು ಅರೆಸ್ಟ್ ಆಗಿದ್ದರು. ಈಗ ಕೆಲವು ದಿನಗಳ ಹಿಂದೆ ಅವರು ಮದುವೆ ಆಗುತ್ತೇನೆ ಎಂದ ಕಾರಣಕ್ಕೆ ಅವರ ಮಾವ ಸೋಮನಾಥ್ ( Somanath ) ಸಾಂತೋಷ್ ಬಗ್ಗೆ ಹಿಂದಿನ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದರು. ಆದರೆ ಅವುಗಳು ಯಾವುದೂ ನಿಜವಲ್ಲ ಎಲ್ಲ ಸುಳ್ಳು ಎಂದು ಸಂತೋಷ್ ಕುಟುಂಬಸ್ಥರು ಈಗ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅದೇನೆಂದು ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವರ್ತೂರು ಸಂತೋಷ್ ಮೇಲೆ ಮಾಡಲಾದ ಎಲ್ಲಾ ಆರೋಪಗಳು ಸುಳ್ಳಾ?:
ಈ ಹಿಂದೆ ವರ್ತುರ್ ಸಂತೋಷ್ ವಿರುದ್ಧ ಅವರ ಮಾವ ಸೋಮನಾಥ್ ಆರೋಪಿಸಿದ್ದರು. ವರ್ತೂರು ಸಂತೋಷ್‌ಗೆ ಮದುವೆಯಾಗಿದೆ, ನನ್ನ ಮುಂದೆ ನನ್ನ ಮಗಳಿಗೆ ತಾಳಿ ಕಟ್ಟಿದ್ದಾನೆ. ಮದುವೆಗೆ ಸುಮಾರು ಹನ್ನೆರಡು ಸಾವಿರ ಜನರು ಆಗಮಿಸಿದ್ದರು. ಮಗಳು ಗರ್ಭಿಣಿ ಎನ್ನದೆ ಅವಳ ಕುತ್ತಿಗೆಗೆ ಚಾಕು ಇಟ್ಟಿದ್ದ. ಹಾಗೆಯೇ ಅವನು ಡ್ರಗ್ಸ್ ಅಡಿಕ್ಟ್ ಕೂಡ ಆಗಿದ್ದ. ಅವನಿಗೆ ಹೆಣ್ಣು ಮಗು ಕೂಡ ಆಗಿದೆ. ಎರಡು ವರ್ಷವಾದರೂ ಮಗುವನ್ನ ನೋಡಲು ಬಂದಿಲ್ಲ. ಎಂದು ಸೋಮನಾಥ್ ಆರೋಪಿಸಿದ್ದರು. ಆದರೆ ಈಗ ಈ ಎಲ್ಲಾ ಆರೋಪಗಳು ಶುದ್ಧ ಸುಳ್ಳು ( Fake News ) ಎಂದು ಹೇಳಿ ವರ್ತೂರು ಸಂತೋಷ್ ಕುಟುಂಬಸ್ಥರು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇದರ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್ ಅವರ ಸೋದರತ್ತೆ ಪ್ರಿಯಾಂಕಾ ( Priyanka ) ಮಾಧ್ಯಮದ ಮುಂದೆ ಈ ರೀತಿ ಹೇಳಿದ್ದಾರೆ. ಅವರ ಮಾವ ಸೋಮನಾಥ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಮದುವೆಯಾಗಿರೋದು ನಿಜ. ನನಗೆ ಮದುವೆಯಾಗಿಲ್ಲ ಅಂತ ವರ್ತೂರು ಸಂತೋಷ್ ಎಲ್ಲಿ ಹೇಳಿದ್ದಾನೆ ? ಅವನು ಹಾಗೆ ಹೇಳಿಲ್ಲ. ವರ್ತೂರು ಸಂತೋಷ್ ಮಾವ ಹೇಳ್ತಿರೋದೆಲ್ಲಾ ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೆಲ್ಲ ಕಾರಣ ವರ್ತೂರು ಸಂತೋಷ್ ಬೆಳೆಯುತ್ತಿರುವುದು. ಅದನ್ನು ಸಹಿಸಲು ಆಗದ ಕಾರಣ ಅವರು ಈ ರೀತಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಏನೆಂದ್ರೆ ಸಂತೋಷ್ ಅವನು ಡ್ರಗ್ ಅಡಿಕ್ಟ್ ಅಲ್ಲ. ಮಗಳನ್ನ ಇವರೇ ಕರ್ಕೊಂಡ್ ಹೋಗಿದ್ದಾರೆ. ಇನ್ನು ನೋಡುವುದಾದರೆ ಸಂತೋಷ್ ಹುಲಿ ಉಗುರು ವಿಚಾರಕ್ಕೆ ಜೈಲಿಗೆ ಹೋದಾಗ ಅವರು ಏನು ಹೇಳಲಿಲ್ಲ ಮತ್ತು ಬಂದು ನೋಡಲು ಇಲ್ಲ. ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಈ ಎಲ್ಲ ಆರೋಪಗಳು ನಿಜವಾಗಿಯೂ ಇದ್ದರೆ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಗೆ ಹೋಗುತ್ತಿರಲಿಲ್ಲ, ಹಾಗೆಯೇ ಅವರು ಇಂದು ಇಷ್ಟೊಂದು ಜನ ಅಭಿಮಾನಿಗಳನ್ನು ಹೊಂದುತ್ತಿರಲಿಲ್ಲ. ಈ ಎಲ್ಲ ಆರೋಪಗಳು ಶುದ್ಧ ಸುಳ್ಳು ಎಂದು ವರ್ತೂರು ಸಂತೋಷ್ ಸೋದರ ಮಾವ ಸತೀಶ್ ತಿಳಿಸಿದ್ದಾರೆ.
ಈ ಒಂದು ವಿಚಾರ ದ ಬಗ್ಗೆ ಮಾತನಾಡಿದ ವರ್ತುರ್ ಸಂತೋಷ್ ಪರ ವಕೀಲ ರಾಜೇಶ್ ( Lawer Rajesh ) ಅವರು, ವರ್ತೂರು ಸಂತೋಷ್‌ಗೆ ಮದುವೆಯಾಗಿರೋದು ನಿಜ. ‘’ಮದುವೆಯಾಗಿಲ್ಲ’’ ಅಂತ ಅವರು ಎಲ್ಲೂ ಹೇಳಿಕೊಂಡಿಲ್ಲ. ಅವರನ್ನು ಬೇಕು ಅಂತಲೇ ಹುಲಿ ಉಗುರು ಪ್ರಕರಣದಲ್ಲಿ ಸಿಲುಕಿಸಿ ಹಾಕಿದ್ದಾರೆ. ಈಗ ಬೇರೆ ಬೇರೆ ಆರೋಪಗಳು ಬರುತ್ತಿವೆ. ಅವರು ಡ್ರಗ್ ಅಡಿಕ್ಟ್ ಆಗಿಲ್ಲ. ಈ ಎಲ್ಲ ಆರೋಪಗಳು ಸುಳ್ಳು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಇದರ ಬಗ್ಗೆ ಸ್ಪಷ್ಟನೆ ಕೊಡ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಇದನ್ನೂ ಓದಿ – ಈ ವರ್ಗದ ಜನರ ಗೃಹಲಕ್ಷ್ಮಿ & ಅನ್ನಭಾಗ್ಯದ ಹಣ ರದ್ದು.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ , @ahara.kar.nic.in/
ಇದನ್ನೂ ಓದಿ – Vivo Mobiles – ವಿವೋದ ಮತ್ತೆರಡು ಹೊಸ ಸ್ಮಾರ್ಟ್ ಫೋನ್ಸ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ
ಇದನ್ನೂ ಓದಿ – Free LPG – ಇನ್ನೂ ಮುಂದೆ ಬಿಪಿಎಲ್ ಕಾರ್ಡ್ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






