Free LPG – ಇನ್ನೂ ಮುಂದೆ ಬಿಪಿಎಲ್‌ ಕಾರ್ಡ್‌ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

free gas without BPL card

ಬಿಪಿಎಲ್ ಕಾರ್ಡ್ (BPL Card) ಇಲ್ಲದಿದ್ದರೂ ಇದೀಗ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು (Gas connection) ನೀವು ಪಡೆದುಕೊಳ್ಳಬಹುದು. ಇದೀಗ ಯಾವುದೇ BPL ಕಾರ್ಡ್ ನೀಡದೆ ಉಜ್ವಲ ಯೋಜನೆ(Ujjawal yojana) ಅಡಿಯಲ್ಲಿ ನಾವು ಉಚಿತ ಗ್ಯಾಸ್ ಸಂಪರ್ಕವನ್ನು (FREE gas Connection) ಪಡೆದುಕೊಳ್ಳಬಹುದು. ಹೌದು, ಕೇಂದ್ರ ಸರ್ಕಾರ(central Government)ದ ಅತ್ಯುತ್ತಮ ಯೋಜನೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ಕೂಡ ಒಂದಾಗಿದೆ. ಈ ಹಿಂದೆ ಮಹಿಳೆಯರು ಕಟ್ಟಿಗೆ ಒಲೆ ಉರಿಸುತ್ತ ಅಡಿಗೆ ಮಾಡುತ್ತಿದ್ದರು, ಇದರಿಂದ ಅಸ್ತಮಾದಂತ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು ಆದರೆ ಇಂತಹ ಸಮಸ್ಯೆಯನ್ನು ತೆಗೆದುಹಾಕಲು ಮಹಿಳೆಯರಿಗೆ ಸಹಾಯ ಆಗಲಿ ಎಂಬ ನಿಟ್ಟಿನಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತರಲಾಗಿದೆ. ಇದೀಗ ಮಹಿಳೆಯರು ಈ ಯೋಜನೆಯ ಸೌಲಭ್ಯದಿಂದ ಯಾವುದೇ ಅನಾರೋಗ್ಯದ ಸಮಸ್ಯೆ ಇಲ್ಲದೆ ಆರಾಮವಾಗಿ ಅಡಿಕೆ ಮಾಡಿಕೊಳ್ಳುವ ಹಾಗೆ ಆಗಿದೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಶುಭ ಸುದ್ದಿ:

ujvala

ಭಾರತದ ಪ್ರಧಾನ ಮಂತ್ರಿಯಾದ ಮೋದಿಜಿ ಅವರ ಸರ್ಕಾರ ಇರುವ ನೇತೃತ್ವದಲ್ಲಿ ಈ ಉಜ್ವಲ ಯೋಜನೆಯನ್ನು (Ujjwala yojana)ಜಾರಿಗೆ ತಂದು ಬಡತನ ರೇಖೆಗಿಂತ ಕೆಳಗಿರುವ (below poverty line)ಹಾಗೂ ಕಡು ಬಡವರಿಗೆ ಅನುಕೂಲವಾಗಲು ಉಚಿತ ಗ್ಯಾಸ್ ಸಂಪರ್ಕವನ್ನು (Gas connection) ನೀಡಲಾಗಿದೆ. ದೇಶಾದ್ಯಂತ ಸುಮಾರು 10.35 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು (Gas connection) ನೀಡಲಾಗಿದ್ದು, ಈ ವರ್ಷ ಸುಮಾರು 75 ಲಕ್ಷ ಹೆಚ್ಚುವರೆ ಮಹಿಳೆಯರು ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಂಪರ್ಕವನ್ನು (Free gas connection) ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಈ ಯೋಜನೆಯ ಪ್ರಯೋಜನವನ್ನು ಬಹಳಷ್ಟು ಜನ ಕೂಡಾ ಪಡೆದುಕೊಂಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಉಚಿತ ಗ್ಯಾಸ್ ಸಂಪರ್ಕ:

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಇದೀಗ ಒಂದು ಶುಭ ಸುದ್ದಿ. ಹೌದು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಹಿಂದೆ ಮುಖ್ಯವಾಗಿ ಬಿಪಿಎಲ್ ಕಾರ್ಡ್( mandatory BPL card) ಮತ್ತು ಆಧಾರ್ ಕಾರ್ಡ್ (Adhar card) ಅವಶ್ಯಕವಾಗಿ ಕಡ್ಡಾಯವಾಗಿತ್ತು ಮತ್ತು ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತಿರಲಿಲ್ಲ. ಆದರೆ ಇದೀಗ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್ ನೀಡುವುದರ ಮೂಲಕ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಳ್ಳಬಹುದು.
ಇನ್ನು ಮುಂದೆ ಉಜ್ವಲ ಯೋಜನೆಯ ಅಡಿಯಲ್ಲಿ ನೀವೇನಾದರು ಉಚಿತ ಗ್ಯಾಸ್ ಕನೆಕ್ಷನ್(free gas connection) ಅನ್ನು ಪಡೆದುಕೊಳ್ಳಲು ಬಯಿಸಿದರೆ ನಿಮ್ಮ ಆಧಾರ್ ಕಾರ್ಡ್, ವಾಸ ದೃಢೀಕರಣ ಪತ್ರದೊಂದಿಗೆ ಸ್ವಯಂ ಘೋಷಣೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು 14 ಅಂಶಗಳ ಸ್ವಯಂ ಘೋಷಣೆಯ ಅರ್ಜಿಯನ್ನು ಭರ್ತಿ ಮಾಡಿ, ಗ್ಯಾಸ್ ಸಂಪರ್ಕ ಪಡೆಯುವ ಗ್ಯಾಸ್‌ ಏಜೆನ್ಸಿಗೆ ಸಲ್ಲಿಸಲು ಅವಕಾಶ
ನೀಡಲಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಅರ್ಜಿ ಪಡೆಯುವ ಗ್ಯಾಸ್‌ ಏಜೆನ್ಸಿಯ ಸಿಬ್ಬಂದಿ, ಅರ್ಜಿದಾರರನ್ನು ಭೇಟಿ ಮಾಡಿ ಪರಿಶೀಲನೆ ನಡೆಸುವ ಮೂಲಕ ಸ್ವಯಂ ಘೋಷಣೆಯ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಗ್ಯಾಸ್ ಏಜೆನ್ಸಿ ಸಿಬಂದಿಗಳಿಗೆ ನೀಡುತ್ತಾರೆ. ಅವರಿಂದ ಅನುಮತಿ ಸಿಕ್ಕ ಬಳಿಕ ಗ್ಯಾಸ್‌ ಏಜೆನ್ಸಿಯವರು, ಅರ್ಜಿದಾರ ಫಲಾನುಭವಿ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಂಪರ್ಕವನ್ನು ನೀಡುತ್ತಾರೆ.

ಹೀಗೆ ನೀವು ಕೂಡಾ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ಕನೆಕ್ಷನ್ ಅನ್ನು ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಯೋಚನೆ ಮಾಡದೆ ಮಹಿಳೆಯರು ಉಚಿತವಾಗಿ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಳ್ಳಿ. ಮತ್ತು ಈ ಯೋಜನೆಯ ಫಲಾನುಭವಿಗಳು ನೀವಾಗಿ ಎಂದು ಆಶಿಸುತ್ತೇವೆ. ಈ ಉಜ್ವಲ ಯೋಜನೆಯ ಪ್ರಯೋಜವನ್ನು ಪಡೆದುಕೊಳ್ಳಲು ಆನ್ಲೈನ್(online) ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಗ್ಯಾಸ್ ಏಜೆನ್ಸಿ(gas agency) ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!