tata strive apply scaled

Tata STRIVE Recruitment: ಉಚಿತ ತರಬೇತಿ, ಪಂಚತಾರಾ ಹೋಟೆಲ್ ಉದ್ಯೋಗ, ₹18,000 ವೇತನ

ಟಾಟಾ ಸ್ಟ್ರೈವ್ (Tata STRIVE) ವತಿಯಿಂದ ಆತಿಥ್ಯ (Hospitality) ಕ್ಷೇತ್ರದಲ್ಲಿ ಹೌಸ್‌ಕೀಪಿಂಗ್ ಹುದ್ದೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ತಾಜ್‌ (Taj) ಸೇರಿದಂತೆ ಪಂಚತಾರಾ ಹೋಟೆಲ್‌ಗಳಲ್ಲಿ ನೇರ ಉದ್ಯೋಗಾವಕಾಶ, ಮಾಸಿಕ ₹18,000 ವರೆಗೆ ವೇತನ ಹಾಗೂ ಉಚಿತ ವಸತಿ ಸೌಲಭ್ಯ ಲಭ್ಯ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.,

Highlights:

  • ತಾಜ್ (TAJ) ಸೇರಿದಂತೆ 20 ರಿಂದ 30 ಪಂಚತಾರಾ (Star) ಹೋಟೆಲ್‌ಗಳಲ್ಲಿ 500ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ.
  • ತಿಂಗಳಿಗೆ ₹18,000 (In-hand) ವೇತನದ ಜೊತೆಗೆ PF ಮತ್ತು ಗ್ರಾಚ್ಯುಟಿ ಸೌಲಭ್ಯ.
  • ಅಭ್ಯರ್ಥಿಗಳಿಗೆ ಉಚಿತ ವಸತಿ (Free Hostel) ಸೌಲಭ್ಯ ಲಭ್ಯವಿದೆ.

ಟಾಟಾ ಸ್ಟ್ರೈವ್ ಉಚಿತ ತರಬೇತಿ ಮತ್ತು ನೇಮಕಾತಿ: ಸ್ಟಾರ್ ಹೋಟೆಲ್‌ಗಳಲ್ಲಿ ಕೆಲಸ ಪಡೆಯಲು ಸುವರ್ಣಾವಕಾಶ

ಆತಿಥ್ಯ (Hospitality) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಜನತೆಗೆ ಇಲ್ಲಿದೆ ಉತ್ತಮ ಅವಕಾಶ. ಟಾಟಾ ಸ್ಟ್ರೈವ್ (Tata STRIVE) ಹಾಗೂ ನೆಕ್ಸ್‌ಜೆನ್ ಲರ್ನಿಂಗ್ ಅಕಾಡೆಮಿ (Nextzen Learning Academy) ಸಹಯೋಗದಲ್ಲಿ ಹೌಸ್‌ಕೀಪಿಂಗ್ ಆಪರೇಷನ್ಸ್ (Housekeeping Operations) ವಿಭಾಗದಲ್ಲಿ ಉಚಿತ ತರಬೇತಿ ನೀಡಿ, ತರಬೇತಿ ಪೂರ್ಣಗೊಂಡ ಬಳಿಕ ಪಂಚತಾರಾ ಹೋಟೆಲ್‌ಗಳಲ್ಲಿ ನೇರ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ.

TATA Strive

ಈ ಅವಕಾಶ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರಿಗೂ ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗವಾರದಲ್ಲಿರುವ ಟಾಟಾ ಸ್ಟ್ರೈವ್ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ತಾಜ್‌ (Taj) ಸೇರಿದಂತೆ ವಿವಿಧ ಪಂಚತಾರಾ ಹೋಟೆಲ್‌ಗಳಲ್ಲಿ ಉದ್ಯೋಗ ದೊರೆಯುವ ಅವಕಾಶವಿದೆ..

ನೇಮಕಾತಿಯ ಸಂಕ್ಷಿಪ್ತ ವಿವರಣೆ

ವಿವರಗಳುಮಾಹಿತಿ
ಯೋಜನೆ / ಸಂಸ್ಥೆಟಾಟಾ ಸ್ಟ್ರೈವ್ (Tata STRIVE) & ನೆಕ್ಸ್‌ಜೆನ್ ಲರ್ನಿಂಗ್ ಅಕಾಡೆಮಿ
ತರಬೇತಿ/ಹುದ್ದೆಯ ಹೆಸರುಹೌಸ್‌ಕೀಪಿಂಗ್ ಆಪರೇಷನ್ಸ್ (Housekeeping Operations)
ಒಟ್ಟು ಹುದ್ದೆಗಳು500 ಕ್ಕೂ ಹೆಚ್ಚು ಖಾಲಿ ಹುದ್ದೆಗಳು
ಉದ್ಯೋಗದ ಸ್ಥಳತಾಜ್ (Taj) ಮತ್ತು ಇತರೆ 20-30 ಸ್ಟಾರ್ ಹೋಟೆಲ್‌ಗಳು
ವೇತನ ಶ್ರೇಣಿ₹18,000/- (In-hand) + PF + Gratuity
ಸಂದರ್ಶನದ ಸ್ಥಳಟಾಟಾ ಕಚೇರಿ, ನಾಗವಾರ, ಬೆಂಗಳೂರು

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

  • ವಿದ್ಯಾರ್ಹತೆ: ಟಾಟಾ ಸ್ಟ್ರೈವ್ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (10th Pass) ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರಬೇಕು. (ಗಮನಿಸಿ: ಕೆಲವು ಮೂಲಗಳ ಪ್ರಕಾರ 8ನೇ ತರಗತಿ ಪಾಸಾದವರಿಗೂ ಅವಕಾಶವಿರಲಿದ್ದು, ಸಂದರ್ಶನದ ಸಮಯದಲ್ಲಿ ಇದನ್ನು ಖಚಿತಪಡಿಸಿಕೊಳ್ಳಬಹುದು).
  • ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು.

ತರಬೇತಿಯ ವಿವರ ಮತ್ತು ಸೌಲಭ್ಯಗಳು (Training & Benefits)

ಉದ್ಯೋಗಕ್ಕೆ ಸೇರುವ ಮುನ್ನ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ:

  • ತರಬೇತಿ ಅವಧಿ: ಒಟ್ಟು 13 ವಾರಗಳ (Duration: 13 Weeks) ವಿಸ್ತೃತ ತರಬೇತಿ ಇರಲಿದ್ದು, ಇದರಲ್ಲಿ 4 ವಾರಗಳ ಕಾಲ ‘ಆನ್-ಜಾಬ್ ಟ್ರೈನಿಂಗ್’ (On Job Training) ನೀಡಲಾಗುತ್ತದೆ ಜೊತೆಗೆ ಈ 4 ವಾರದ ಟ್ರೈನಿಂಗ್ ನಲ್ಲಿ ಸಹಿತ ಸಂಬಳ ಸಿಗುತ್ತದೆ. ಆರಂಭಿಕ 4 ವಾರಗಳ ತರಬೇತಿಯು ಬೆಂಗಳೂರಿನ ನಾಗವಾರದಲ್ಲಿರುವ ಟಾಟಾ ಬಿಲ್ಡಿಂಗ್‌ನಲ್ಲಿ ನಡೆಯಲಿದೆ.
  • ಉಚಿತ ವಸತಿ: ಹೊರಗಿನಿಂದ ಬರುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ಉಚಿತ ಹಾಸ್ಟೆಲ್ ಸೌಲಭ್ಯ (Free Hostel Facility) ಒದಗಿಸಲಾಗುತ್ತದೆ. ಜೊತೆಗೆ ಊಟದ ವ್ಯವಸ್ಥೆಯೂ ಲಭ್ಯವಿರುತ್ತದೆ.
  • ಹೆಚ್ಚುವರಿ ಕೌಶಲ್ಯಗಳು: ಕೇವಲ ಹೌಸ್‌ಕೀಪಿಂಗ್ ಮಾತ್ರವಲ್ಲದೆ, ಕಂಪ್ಯೂಟರ್ ಜ್ಞಾನ, ಸ್ಪೋಕನ್ ಇಂಗ್ಲಿಷ್ (Computer & English Training), ಕೆಲಸದ ಸ್ಥಳದ ಸಿದ್ಧತೆ (Workplace Readiness Skills) ಮತ್ತು ವ್ಯಕ್ತಿತ್ವ ವಿಕಸನ (Personality Development) ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

ವೇತನ ಹಾಗೂ ಉದ್ಯೋಗದ ಪ್ಲೇಸ್‌ಮೆಂಟ್ (Placement & Salary)

ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಉದ್ಯೋಗದ ಭರವಸೆ (Placement Assistance) ನೀಡಲಾಗುತ್ತದೆ. ತಾಜ್ ಹೋಟೆಲ್ಸ್ (TAJ Hotels) ಸೇರಿದಂತೆ ಬೆಂಗಳೂರು ಹಾಗೂ ಇತರ ನಗರಗಳ ಪ್ರತಿಷ್ಠಿತ 20 ರಿಂದ 30 ಪಂಚತಾರಾ (Star) ಹೋಟೆಲ್‌ಗಳೊಂದಿಗೆ ಟಾಟಾ ಸಂಸ್ಥೆಯು ಒಪ್ಪಂದ ಮಾಡಿಕೊಂಡಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೈಗೆಟಕುವ (In-hand) ₹18,000/- ಮಾಸಿಕ ವೇತನದೊಂದಿಗೆ ಭವಿಷ್ಯ ನಿಧಿ (PF) ಮತ್ತು ಗ್ರಾಚ್ಯುಟಿ (Gratuity) ಸೌಲಭ್ಯಗಳು ದೊರೆಯಲಿವೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ (How to Apply)

ಈ ಹುದ್ದೆಗಳಿಗೆ ಯಾವುದೇ ಕಠಿಣ ಲಿಖಿತ ಪರೀಕ್ಷೆಗಳಿರುವುದಿಲ್ಲ. ಅತ್ಯಂತ ಸರಳವಾದ ನೇರ ಸಂದರ್ಶನದ ಮೂಲಕ (Direct Selection) ಆಯ್ಕೆ ಮಾಡಿಕೊಳ್ಳಲಾಗುತ್ತದೆ.

  1. ರೆಸ್ಯೂಮ್ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ತಮ್ಮ ಪರಿಷ್ಕೃತ ರೆಸ್ಯೂಮ್ (Resume / Bio-data) ಅನ್ನು ನೆಕ್ಸ್‌ಜೆನ್ ಲರ್ನಿಂಗ್ ಅಕಾಡೆಮಿ (Nextzen Learning Academy) ಗೆ ಇ-ಮೇಲ್ ಅಥವಾ ವಾಟ್ಸಾಪ್ (WhatsApp) ಮೂಲಕ ಕಳುಹಿಸಬೇಕು.
  2. ಶಾರ್ಟ್-ಲಿಸ್ಟ್ ಪ್ರಕ್ರಿಯೆ: ನೆಕ್ಸ್‌ಜೆನ್ ಅಕಾಡೆಮಿಯು ಬಂದಂತಹ ರೆಸ್ಯೂಮ್‌ಗಳನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಶಾರ್ಟ್-ಲಿಸ್ಟ್ ಮಾಡುತ್ತದೆ.
  3. ನೇರ ಸಂದರ್ಶನ: ಶಾರ್ಟ್-ಲಿಸ್ಟ್ ಆದ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗವಾರದಲ್ಲಿರುವ ಟಾಟಾ ಕಚೇರಿಯಲ್ಲಿ ಅತ್ಯಂತ ಸರಳವಾದ ಸಾಮಾನ್ಯ ಸಂದರ್ಶನವನ್ನು (Simple Interview) ನಡೆಸಲಾಗುತ್ತದೆ. ಸಂದರ್ಶನದಲ್ಲಿ ಬಹುತೇಕ ಎಲ್ಲರಿಗೂ ಅವಕಾಶ ಸಿಗಲಿದ್ದು, ತಕ್ಷಣವೇ (Immediate join) ತರಬೇತಿಗೆ ಸೇರ್ಪಡೆಗೊಳ್ಳಬಹುದು.

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್


WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories