ಪ್ರಯಾಣಿಕರೆ  ಗಮನಿಸಿ – ಟಿಕೆಟ್ ವೇಟಿಂಗ್ ಲಿಸ್ಟ್ ಇದ್ದರೂ ರೈಲಿನಲ್ಲಿ ಪ್ರಯಾಣ ಮಾಡಬಹುದು, ಮತ್ತೊಂದು ಹೊಸ ಸೇವೆ ಪ್ರಾರಂಭ

train

ಈ ದೀಪಾವಳಿಯ ಸಂದರ್ಭದಲ್ಲಿ, ಹಬ್ಬ ಮುಗಿಸಿ ಪ್ರಯಾಣಿಸುವ ಎಲ್ಲಾ  ಪ್ರಯಾಣಿಕರಿಗೆ ಅನುಕೂಲ ಆಗುವಂತ ಹೊಸ ಸೇವೆಯನ್ನ ರೈಲ್ವೆ ಇಲಾಖೆ ಆರಂಭಿಸಿದೆ, ಹೌದು ನೀವು ಪ್ರಯಾಣಿಸುವ ಟಿಕೆಟ್ ಇನ್ನೂ ವೇಟಿಂಗ್ ಲಿಸ್ಟ್ ನಲ್ಲಿ ಇದ್ದರೆ ಕೆಳಗೆ ಕೊಟ್ಟಿರುವ  ರೈಲ್ವೆ ಇಲಾಖೆಯ ಹೊಸ ಸೇವೆಯ ಬಗ್ಗೆ ತಿಳಿದುಕೊಂಡು ನೀವು  ಕನ್ಫರ್ಮ್ ಟಿಕೆಟ್ ಪಡೆದುಕೊಳ್ಳಬಹುದು. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ವೇಟಿಂಗ್ ಲಿಸ್ಟ್ ಇದ್ದರೂ ಹೇಗೆ ಪ್ರಯಾಣ ಮಾಡಬಹುದು ?

ಸಾಮಾನ್ಯವಾಗಿ ನಾವು ಟಿಕೆಟ್ ಕಾಯ್ದಿರಿಸಲು IRCTC ವೆಬ್ಸೈಟ್ ಅಥವಾ ಆಪ್ ಅನ್ನ ನಾವು ಉಪಯೋಗಿಸುತ್ತೇವೆ. ಒಂದು ವೇಳೆ ನಮ್ಮ  ಟಿಕೆಟ್  ವೆಟಿಂಗ್ ಲಿಸ್ಟ್ ನಲ್ಲಿ ಇದ್ದರೆ ಅಥವಾ ನಾವು ಟಿಕೆಟ್ ಬುಕ್ ಮಾಡದೇ ಇದ್ದ ಪಕ್ಷದಲ್ಲಿ ಖಾಲಿ ಇರುವ ಸೀಟುಗಳನ್ನು ಪಡೆದುಕೊಳ್ಳಲು ನಾವು TTE ಭೇಟಿ ಮಾಡಿ ಸೀಟ್ ಪಡೆದುಕೊಳ್ಳುತ್ತೇವೆ.

ನಮಗೆಲ್ಲ ಗೊತ್ತಿರುವಂತೆ  ಭೋಗಿಗಳಲ್ಲಿ ಖಾಲಿ ಇರುವ ಸೀಟುಗಳನ್ನು  TTE ನೇರವಾಗಿ ಬುಕ್ ಮಾಡಿ ಸಂಪರ್ಕಿಸಿರುವ ಪ್ರಯಾಣಿಕರಿಗೆ ಕೊಡುತ್ತಾರೆ. ಆದರೆ ಇದೀಗ ರೈಲ್ವೆ ಇಲಾಖೆ ಹೊಸ ಮತ್ತೊಂದು ಸೇವೆಯನ್ನು ಪರಿಚಯಿಸಿದೆ, ಈ ಸೇವೆ ಮೂಲಕ ಪ್ರಯಾಣಿಕರು ಯಾವುದೇ ವ್ಯಕ್ತಿಯ ಸಹಾಯವಿಲ್ಲದೆ ನೇರವಾಗಿ ಆನ್ಲೈನ್ ನಲ್ಲಿ ಖಾಲಿ ಇರುವ ಸೀಟುಗಳನ್ನು ನೋಡಿ ತಿಳಿದುಕೊಳ್ಳಬಹುದು.

ಖಾಲಿ ಇರುವ ಸೀಟುಗಳನ್ನು ಹುಡುಕುವುದು ಹೇಗೆ?

ಹಂತ 1: IRCTC ಅಪ್ಲಿಕೇಶನ್ ತೆರೆಯಿರಿ. ‘ಟ್ರೈನ್’ ಐಕಾನ್ ಮೇಲೆ ಕ್ಲಿಕ್ ಮಾಡಿ. ‘Chart Vacancy’ ಮೇಲೆ ಕ್ಲಿಕ್ ಮಾಡಿ.

01 T

ಹಂತ 2: ನೀವು ಆಸನಗಳನ್ನು ಹುಡುಕಲು ಬಯಸುವ ರೈಲಿನ ಹೆಸರು/ಸಂಖ್ಯೆಯನ್ನು ನಮೂದಿಸಿ. ದಿನಾಂಕವನ್ನು ನಮೂದಿಸುವ ಅಗತ್ಯವಿಲ್ಲ, ಏಕೆಂದರೆ ಅಪ್ಲಿಕೇಶನ್ ಸ್ವತಃ ಅದನ್ನು ತೆಗೆದುಕೊಳ್ಳುತ್ತದೆ.

ಟ್ರೈನ್ ರದ್ದು – ಮೈಸೂರು ತುಮಕೂರು ಶಿವಮೊಗ್ಗ ಸೇರಿದಂತೆ 2 ದಿನ ಈ ರೈಲುಗಳ ಸಂಚಾರ ರದ್ದು

02 T

ಹಂತ 3: ನಾವು ಉದಾಹರಣೆಗೆ ‘07378-Mangalore Express’ ಅನ್ನು ನಮೂದಿಸಿದ್ದೇವೆ. ಮುಂದಿನ ಬೋರ್ಡಿಂಗ್ ಸ್ಟೇಷನ್ ಆಯ್ಕೆಮಾಡಿ.

04 T

ಹಂತ 4: ರೈಲು ಯಾವುದೇ ಖಾಲಿ ಬರ್ತ್‌ಗಳನ್ನು ಹೊಂದಿದ್ದರೆ, ಅದರ ವಿವರಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಎಲ್ಲಿ ಬರ್ತ್(ಗಳು) ಲಭ್ಯವಿದೆ ಮತ್ತು ಎಷ್ಟು ಸೀಟುಗಳು ಖಾಲಿ ಇವೆ ಎಂಬುದನ್ನು ಸಹ ತೋರಿಸಲಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಖಾಲಿ ಇರುವ ಸೀಟುಗಳನ್ನು ಟಿಟಿಯಿಂದ ಮಾತ್ರ ಹಂಚಿಕೆ ಮಾಡಲು ಸಾಧ್ಯವಾದರೆ, ಅದನ್ನು ಪರದೆಯ ಮೇಲೆ ತೋರಿಸಲಾಗುತ್ತದೆ. ಆ ಸೀಟುಗಳನ್ನು ಎಲ್ಲಿ ಹಂಚಲಾಗುತ್ತದೆ ಎಂಬುದನ್ನು ಪಕ್ಕದಲ್ಲಿ ನಮೂದಿಸಲಾಗುವುದು. ಇಲ್ಲಿ ಒಂದು ವಿಶೇಷ ಏನೆಂದರೆ ಎಲ್ಲಾ ವಿವರಗಳನ್ನು ಪಡೆಯಲು ನೀವು ಐಆರ್‌ಸಿಟಿಸಿ ಅಪ್ಲಿಕೇಶನ್ ಗೆ ಲಾಗಿನ್ ಮಾಡಬೇಕೆಂದೇನೂ ಇಲ್ಲ, ಈ ಅಪ್ಲಿಕೇಶನ್ ನಲ್ಲಿ ನೀವು ಖಾತೆಯನ್ನು ಹೊಂದಿರದೆ ಇದ್ದರೂ ಸಹಿತ ಈ ಸೇವೆ ನಿಮಗೆ ಕಾಣಿಸುತ್ತದೆ.

ಆದ್ದರಿಂದ ಈ ಹಬ್ಬದ ಸಂದರ್ಭದಲ್ಲಿ ನೀವು ಸೀಟುಗಳನ್ನು ಬುಕ್ ಮಾಡದೇ ಇದ್ದಲ್ಲಿ ಅಥವಾ ವೇಟಿಂಗ್ ಲಿಸ್ಟ್ ಇದ್ದಲ್ಲಿ ಈ ಸೇವೆ ಮೂಲಕ ಯಾವ ಭೋಗಿಯಲ್ಲಿ ಎಷ್ಟು ಸೀಟುಗಳು ಖಾಲಿ ಇವೆ ಎಂಬುದನ್ನು ತಿಳಿದುಕೊಂಡು ಆ ಸೀಟುಗಳನ್ನು ನೇರವಾಗಿ ಟಿಟಿ ಮೂಲಕ ಬುಕ್ ಮಾಡಿಸಿಕೊಳ್ಳಬಹುದು.ಈ ಮಾಹಿತಿಯನ್ನು ಎಲ್ಲಾ ರೈಲು ಪ್ರಯಾಣಿಕರಿಗೆ ತಪ್ಪದೆ ಶೇರ್ ಮಾಡಿ.

ಇದನ್ನೂ ಓದಿ – Jio Recharge Plan – ಹಬ್ಬಕ್ಕೂ ಮುನ್ನ 150GB ಡಾಟಾ & ಸ್ವಿಗ್ಗಿ  ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಜಿಯೋ.

ಇದನ್ನೂ ಓದಿ – ಮಹಿಳೆಯರೇ ಗಮನಿಸಿ : ಕೇಂದ್ರ ಸರ್ಕಾರದ ಈ ಯೋಜನೆ’ಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 6,000 ರೂ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ – Home Loan- ಹೋಮ್ ಲೋನ್ ತಗೋಳ್ಳೋ ಮೊದಲು ಈ ವಿಷಯಗಳು ಗೊತ್ತಿರಲಿ.!

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!