Tata Currv EV Car: ಟಾಟಾದ ಮತ್ತೊಂದು ಕಾರು ಬಿಡುಗಡೆ! ಬೆಲೆ, ಫೀಚರ್ಸ್​ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ!

Tata Currv EV Car

ಕಾರು ಖರೀದಿಗಾರರಿಗೆ ಮತ್ತೊಂದು ಉತ್ತಮ ಆಯ್ಕೆ. ಲ್ಯಾಂಬೋರ್ಗಿನಿ ಉರಸ್‌ನಂತೆ ಕಾಣುವ ಟಾಟಾ Curvv EV ಬಿಡುಗಡೆ.

ಕಾರು ಖರೀದಿಗಾರರು ಪ್ರತಿದಿನ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳ ಬಗ್ಗೆ ವಿಚಾರಿಸುತ್ತಿರುತ್ತಾರೆ. ಅದರಲ್ಲೂ ಐಷಾರಾಮಿ ಕಾರ್ ಲ್ಯಾಂಬೋರ್ಗಿನಿ(Lamborghini) ಯನ್ನು ಖರೀದಿಸುವುದು ಎಲ್ಲರ ಕನಸಾಗಿರುತ್ತದೆ.  ಆದರೆ ಅಧಿಕ ವೆಚ್ಚದ ಕಾರಣದಿಂದ ಈ ಕಾರನ್ನು ಕೆಲವರಿಗೆ ಖರೀದಿಸಲು ಆಗುವುದಿಲ್ಲ. ಆದ್ದರಿಂದ ಕಾರು ಖರೀದಿಗಾರರಿಗೆ ಅನುಕೂಲವಾಗುವಂತಹ ಬಜೆಟ್ ಫ್ರೆಂಡ್ಲಿ ಕಾರನ್ನು ಖರೀದಿಸುವಲ್ಲಿ ಗ್ರಾಹಕರು ಮುಂದಾಗುತ್ತಾರೆ. ಇದೀಗ ಟಾಟಾ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ವರ್ಷದ ಅತ್ಯಂತ ವಿಶೇಷವಾದ ಕಾರು ಟಾಟಾ Curvv  EV ಆಗಿದ್ದು, ಕಾರು ಖರೀದಿ ಮಾಡಬೇಕೆನ್ನುವ ಗ್ರಾಹಕರಿಗೆ Curvv  EV, ಒಂದು ಉತ್ತಮ ಆಯ್ಕೆಯಾಗಿದೆ ಹಾಗೂ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನೋಡಲು ಲ್ಯಾಂಬೋರ್ಗಿನಿ ಉರಸ್‌ನಂತೆ ಕಾಣುತ್ತದೆ ಈ ಒಂದು ಕಾರು. ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಲು ಆಗದ ಗ್ರಾಹಕರಿಗೆ ಟಾಟಾ Curvv  EV ಒಂದು ಉತ್ತಮ ಆಯ್ಕೆಯಾಗಿದೆ. ಟಾಟಾ Curvv  EV ಕಾರಿನ ಬೆಲೆ ಎಷ್ಟು? ಇದರ ವೈಶಿಷ್ಟ್ಯತೆಗಳೇನು? ಎಂಬ ಸಂಪೂರ್ಣಮಾಹಿತಿಯನ್ನು ತಿಳಿಯೋಣ ಬನ್ನಿ.

Tata Curvv EV ಬಿಡುಗಡೆ ಯವಾಗ?
20220406015716 Tata Curvv front

2024ರ ಮಧ್ಯದಲ್ಲಿ ಕಾರು ಮಾರಾಟವನ್ನು ಪ್ರಾರಂಭಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ 2024ರ ಮಧ್ಯದಲ್ಲಿ ಕಾರನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಟಾಟಾ Curvv EV ಉತ್ಪಾದನೆಯು ಜೂನ್‌ನಿಂದ ಆರಂಭಗೊಳ್ಳುತ್ತಿದೆ. ಆದ್ದರಿಂದ ಮುಂಬರುವ ಹಬ್ಬದ ಸೀಸನ್ ನಲ್ಲಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. 2 ಬಗೆಯಾದ ಆವೃತ್ತಿಯನ್ನು ಹೊಂದಿರುವ ಟಾಟಾ Curvv EV, ಮೊದಲಿಗೆ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ತದನಂತರದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ.

ಹೊಸ ಟಾಟಾ Curvv EV ವಿಭಿನ್ನವಾಗಿದೆ:

ಟಾಟಾ ನೆಕ್ಸಾನ್ ಇವಿ (Tata Nexon EV) ಕಾರ್ ಗಳನ್ನು ಹೋಲುವಂತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ Curvv Ev. ಈ ಕಾರು ಪರಿಚಯವಾಗಿದ್ದು,ಈ ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಶೋ 2024 ರಲ್ಲಿ. ಟಾಟಾ ನೆಕ್ಸಾನ್ ಇವಿ (Tata Nexon EV) ಕಾರ್ 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಆದರೆ ಟಾಟಾ Curvv EV ಅದಕ್ಕಿಂತಲೂ ಶಕ್ತಿಯುತ ಬ್ಯಾಟರಿ ಪ್ಯಾಕ್ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಭರ್ತಿ ಚಾರ್ಜ್ ನಲ್ಲಿ 500 ಕಿಲೋಮಿಟರ್ ರೇಂಜ್ (ಮೈಲೇಜ್) ನೀಡಲಿದೆ ಎನ್ನಲಾಗಿದೆ.
ಟಾಟಾ Curvv EV ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯನ್ನು ಎರಡನೇ ಹಂತದಲ್ಲಿ ಅಂದರೆ ಸೆಪ್ಟೆಂಬರ್ ಅಥವಾ ಮುಂದಿನ ವರ್ಷಗಳಲ್ಲಿ ಬಿಡುಗಡೆ ಮಾಡಲಿದೆ. ಇನ್ನು 1.2 ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ. ನೆಕ್ಸಾನ್‌ನಂತೆ 1.5 ಲೀಟರ್ ಶಕ್ತಿಯ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆ ಹೆಚ್ಚಿದೆ.

ಟಾಟಾ Curvv EV ವೈಶಿಷ್ಟ್ಯತೆಗಳು :

ನೂತನ ಟಾಟಾ ಕರ್ವ್ (Tata Curvv) ಎಲೆಕ್ಟ್ರಿಕ್ ಕಾರು 4-ಸ್ಪೋಕ್ ಸ್ಟೀರಿಂಗ್ ವೀಲ್, 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್,ಮುಂಭಾಗ (front) ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್, ವಿಶಾಲವಾದ ಬಾನೆಟ್, ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್ಸ್ ಹಾಗೂ ಪೂರ್ಣ ಉದ್ದದ ಲೈಟ್ ಬಾರ್ ಈ ರೀತಿಯಾದ ವೈಶಿಷ್ಟ್ಯತೆಗಳಿಂದ ಗ್ರಾಹಕರ ಮನಸ್ಸನ್ನು ಸೆಳೆಯುತ್ತಿದೆ.

ಟಾಟಾ Curvv EV ಸುರಕ್ಷತೆ ಹೇಗಿರುತ್ತದೆ :

ನಾವು ಎಷ್ಟೇ ದುಬಾರಿ ಕಾರುಗಳನ್ನು ಕೊಂಡುಕೊಂಡರು ಅದರಲ್ಲಿ ಸುರಕ್ಷತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನೋಡುತ್ತೇವೆ. ಇನ್ನು ಸುರಕ್ಷತೆಯ ವಿಷಯದಲ್ಲಿ ಟಾಟಾ ಕಾರುಗಳು  ಹೆಚ್ಚು ಜನಪ್ರಿಯವಾಗಿವೆ. ಅದೇ ರೀತಿಯಾಗಿ ಟಾಟಾ Curvv EV ಕಾರು ಸಹ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 6-ಏರ್‌ಬ್ಯಾಗ್‌, ADAS (Advanced Driver Assistance Systems), 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ (front) ಹಾಗೂ ರೇರ್ (back) ಪಾರ್ಕಿಂಗ್ ಸೇನಾರ್ಸ್, ESC (Electronic Stability Control) ಈ ರೀತಿಯಾದ  ಸುರಕ್ಷಿತಾ ವೈಶಿಷ್ಟ್ಯತೆಗಳನ್ನು ಹೊಂದಿದೆ ನೂತನ ಟಾಟಾ Curvv EV.

ಟಾಟಾ Curvv EV ಬೆಲೆ ಎಷ್ಟು?

ಟಾಟಾ Curvv EV ರೂ.11 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಗೆ ಸಿಗಬಹುದು ಎಂದು ಊಹಿಸಲಾಗಿದೆ.ನೋಡಲು
ಲ್ಯಾಂಬೋರ್ಗಿನಿ ಉರಸ್‌ನಂತೆ ಕಾಣುವ ಟಾಟಾ Curvv EV ಬಿಡುಗಡೆಗೆ ಬಿಡುಗಡೆಗೆ ಮುನ್ನವೇ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಇನ್ನು ಬಿಡುಗಡೆಗೊಂಡ ನಂತರ ಗ್ರಾಹಕರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ನೋಡಬೇಕು.

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!