BEML ನಲ್ಲಿ ಸಿಬ್ಬಂದಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!! SSLC ಪಾಸಾದವರು ಅಪ್ಲೈ ಮಾಡಿ!

BEML staff driver recruitment

ಈ ವರದಿಯಲ್ಲಿ BEML ನೇಮಕಾತಿ 2024, ಸಿಬ್ಬಂದಿ ಚಾಲಕ ಹುದ್ದೆಗಳ ಕುರಿತು ತಿಳಿಸಿಕೊಡಲಿದ್ದೆವೆ. ರಕ್ಷಣಾ ಸಚಿವಾಲಯದಲ್ಲಿ ಈ ಹುದ್ದೆಗಳಿಗೆ ಸೇರಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

BEML ನೇಮಕಾತಿ(Recruitment) 2024:

ರಕ್ಷಣಾ ಸಚಿವಾಲಯದ ಅಡಿಯಲ್ಲಿ ಭಾರತದ ಪ್ರಮುಖ ಬಹು-ತಂತ್ರಜ್ಞಾನ ಕಂಪನಿಯಾದ BEM ಲಿಮಿಟೆಡ್, ಕಳೆದ ಆರು ದಶಕಗಳಲ್ಲಿ ವಿಶ್ವ ದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸುವ ತನ್ನ ಕ್ಷೇತ್ರದೊಂದಿಗೆ ಯಶಸ್ವಿಯಾಗಿ ಮುನ್ನಡೆಸಿದೆ, ಮುಖ್ಯವಾಗಿ ಪ್ರಮುಖ ವಲಯಗಳಾದ ರಕ್ಷಣಾ ಮತ್ತು ಏರೋಸ್ಪೇಸ್, ​​ರೈಲು ಮತ್ತು ಮೆಟ್ರೋ, ವಿದ್ಯುತ್, ಗಣಿಗಾರಿಕೆ & ಅದರ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳ ಮೂಲಕ ನಿರ್ಮಾಣವಾಗುತ್ತಿದೆ. ದೇಶದ ಭರವಸೆಯ ಯೋಜನೆಗಳಾದ ವಂದೇ ಭಾರತ್ ಸ್ಲೀಪರ್ ರೈಲುಗಳು, ಮೆಟ್ರೋ ರೈಲು ಕೋಚ್‌ಗಳು, ಹೈ ಮೊಬಿಲಿಟಿ ಮತ್ತು ಆರ್ಮರ್ಡ್ ರಿಕವರಿ ವೆಹಿಕಲ್, ಡಿಫೆನ್ಸ್‌ಗಾಗಿ ವಿಶೇಷ ಅಪ್ಲಿಕೇಶನ್ ಎಂಜಿನ್‌ಗಳು, ಅಲ್-ಆಧಾರಿತ ಉನ್ನತ-ಮಟ್ಟದ ಗಣಿಗಾರಿಕೆ ಉಪಕರಣಗಳನ್ನು ಮತ್ತಷ್ಟು ನಿರ್ಮಿಸಲು, BEML Ltd ವೃತ್ತಿ-ಆಧಾರಿತ ವೃತ್ತಿಪರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಿಬ್ಬಂದಿ ಚಾಲಕ( Staff Driver) ಹುದ್ದೆಗೆ ನಾಲ್ಕು ಪೋಸ್ಟ್ಗಳು ಖಾಲಿ ಇವೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. 

ಹುದ್ದೆಯ ವಿವರ :

ಇಲಾಖೆಯ ಹೆಸರು : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML)
ಹುದ್ದೆಯ ಹೆಸರು : ಸಿಬ್ಬಂದಿ ಚಾಲಕ 
ಪೋಸ್ಟ್‌ಗಳ ಸಂಖ್ಯೆ: 4 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು(ಕರ್ನಾಟಕ)

ವಿದ್ಯಾರ್ಹತೆ:

ಆಸಕ್ತಿಯುಳ್ಳ ಅಭ್ಯರ್ಥಿಗಳು ಹತ್ತನೇ ತರಗತಿಯನ್ನು ಪಾಸಾಗಿರಬೇಕು. 

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತರು ಗರಿಷ್ಠ 45 ವರ್ಷಗಳ ಮೀರಿರಬಾರದು. ಪ್ರಕಾರ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.

ಸಂಬಳ ಎಷ್ಟು?

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳ ವೇತನ ಶ್ರೇಣಿ ಎರಡು ವರ್ಷಗಳ ಕಾಲ 20ರಿಂದ 23,000ಗಳವರೆಗೂ ಇರುತ್ತದೆ. ನಂತರ ಹೆಚ್ಚಳ ಮಾಡಲಾಗುವುದು.

ಆಯ್ಕೆ ಪ್ರಕ್ರಿಯೆ :

ಚಾಲನ ಪರವಾನಿಗಿ (Driving licence ) ಹೊಂದಿದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ.

ಅರ್ಜಿ ಶುಲ್ಕ :

SC/ST ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳು 200 ರೂಗಳನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯ ನಮೂನೆಯನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಂತರ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು :

ಸೀನಿಯರ್ ಮ್ಯಾನೇಜರ್ (ಕಾರ್ಪೊರೇಟ್ ನೇಮಕಾತಿ),
ನೇಮಕಾತಿ ಕೋಶ,
BEML ಸೌಧ,
ನಂ.23/1, 4ನೇ ಮುಖ್ಯ ರಸ್ತೆ,
ಎಸ್.ಆರ್ ನಗರ, ಬೆಂಗಳೂರು -560027.

ಪ್ರಮುಖ ದಿನಾಂಕಗಳು:

ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾದ ದಿನಾಂಕ  : ಮೇ 15, 2024

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : ಜೂನ್ 5, 2024

ಅಧಿಕೃತ ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಫಾರ್ಮ್  : ಇಲ್ಲಿ ಕ್ಲಿಕ್ ಮಾಡಿ  

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!