HSRP ನಂಬರ್‌ ಪ್ಲೇಟ್‌ ನೋಂದಣಿ ಡೆಡ್‌ಲೈನ್‌..! ವಾಹನ ಮಾಲಕರೇ ಗಮನಿಸಿ !

HSRP number plate

HSRP (High security registration plate) ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.!

ಇಂದು ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಂತೂ (electrical vehicles) ಇಂದು ಮಾರುಕಟ್ಟೆಯಲ್ಲಿ ಇತರ ವಾಹನಗಳಿಗೆ ಪೈಪೋಟಿ (competition) ನೀಡುತ್ತಿವೆ. ದಿನ ಕಳೆದಂತೆ ತಂತ್ರಜ್ಞಾನ (technology) ಅಳವಡಿಕೆಯಿಂದ ತಯಾರಿಸಲ್ಪಟ್ಟ  ವಾಹನಗಳು ಜನರ ಮನಸ್ಸನ್ನು ಸೆಳೆಯುತ್ತಿವೆ. ಹಾಗೆಯೇ ವಾಹನಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಯು ಕೆಲವೊಂದು ಹೊಸ ಹೊಸ ನಿಯಮಗಳನ್ನು (new rules) ಜಾರಿಗೆ ತರುತ್ತಲೇ ಇದೆ. ಈಗಾಗಲೇ ಟ್ರಾಫಿಕ್ ನಿಯಮಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು ವಾಹನ ಸವಾರರಿಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಇದೀಗ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟು ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಎಷ್ಟು ದಂಡ ಹಾಕುತ್ತಾರೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

HSRP ನೋಂದಣಿ ಸಂಖ್ಯೆ ಫಲಕ ಕಡ್ಡಾಯ :

ಇಂದು ದೇಶಾದ್ಯಂತ ವಾಹನ ನೋಂದಣಿ ಸಂಖ್ಯೆ ಫಲಕ (HSRP) ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಎನ್ನುವ ನಿಯಮಗಳನ್ನು ರಾಜ್ಯ ಸರ್ಕಾರವು ಈಗಾಗಲೇ ಜಾರಿಗೆ ಮಾಡಿದೆ. ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕ (high security registration Number Plate) ಕಡ್ಡಾಯವಾಗಿ ಅಳವಡಿಸಲು ಸಾರಿಗೆ ಇಲಾಖೆಯು ಆದೇಶ ನೀಡಿದೆ. ಹಾಗೆಯೇ ಇದೀಗ ಅದರ ಗಡುವು ಮುಗಿಯುತ್ತಾ ಬಂದಿದೆ. ಆದರೂ ಇನ್ನು ಕೂಡ ಹಲವು ವಾಹನಗಳಿಗೆ ಈ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಲ್ಲ.
ಈ ವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಾ ಬಂದರೂ ಕೂಡ ಈ ವರೆಗೆ  2 ಕೋಟಿ ವಾಹನಗಳ ಪೈಕಿ ನೋಂದಣಿ ಮಾಡಿಸಿರುವುದು 35 ಲಕ್ಷ ಮಂದಿ ಮಾತ್ರ ಎಂಬ ವಿಚಾರ ಗೊತ್ತಾಗಿದೆ.

ಹೊಸ ನಂಬರ್ ಪ್ಲೇಟ್ ಗೆ ಇನ್ನು ನೋಂದಣಿ ಮಾಡಿಲ್ಲ :

ಈಗಾಗಲೇ  HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ಹೇಳಿದ್ದರೂ ಕೂಡ ಇನ್ನು ಹಲವಾರು ವಾಹನ ಮಾಲೀಕರು ಈ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಲ್ಲ. ಈ ಹಿಂದೆ 2023ರ ನವೆಂಬರ್ 17ರ ವರೆಗೆ ಎಚ್.ಎಸ್.ಆರ್.ಪಿ (HSRP) ಅಳವಡಿಕೆ ಮಾಡುವಂತೆ ಸೂಚನೆಯನ್ನು ನೀಡಲಾಗಿತ್ತು. ಅದರ ಬಳಿಕ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು ಆದರೆ ಇದೀಗ ಮತ್ತೆ ಸಮಯಾವಕಾಶವನ್ನು ನೀಡಲಾಗಿದೆ, ಅದೇ ರೀತಿ ಈಗ ಕೊನೆಯದಾಗಿ ಮೇ 31ರ ಒಳಗೆ HSRP Number Plate ಅಳವಡಿಕೆ ಮಾಡಲು ಅವಕಾಶವನ್ನು ಕೂಡ ವಾಹನ ಮಾಲಕರಿಗೆ ನೀಡಲಾಗಿದೆ.

ಕಾನೂನು ನಿಯಮದ ಪ್ರಕಾರ ಕಡ್ಡಾಯ ನಿಯಮ ಜಾರಿಯಲ್ಲಿದೆ :

ಈ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ವಾಹನದ ಭದ್ರತೆ ಹಾಗೂ ಸುರಕ್ಷತೆ ಮೋಟಾ‌ರ್ ಕಾಯಿದೆ 1989 ಸೆಕ್ಷನ್ 90 ಹಾಗೂ 51ರ ಅನ್ವಯ ಈ ನಿಯಮ ಕಡ್ಡಾಯ ಎಂಬುದನ್ನು ಜಾರಿ ಮಾಡಲಾಗಿದೆ.
HSRP ಬಳಕೆಯಿಂದ ವಾಹನವನ್ನು ಕಳುವು ಮಾಡಿದರೆ ಅಥವಾ ವಾಹನಕ್ಕೆ ನಕಲಿ HSRP Number Plate ಹಾಕಿದರೆ ಪತ್ತೆ ಹಚ್ಚುವುದು ಸುಲಭ ಹಾಗಾಗಿ ಈ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಹೊಸ ವಾಹನ ಖರೀದಿ ಮಾಡಿದರೆ ಶೋರೂಮ್ (showroom) ನವರೇ ನಂಬ‌ರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಕೂಡ ಜಾರಿಯಲ್ಲಿ ಇದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ :

ಈಗಾಗಲೇ ವಾಹನ ನೋಂದಣಿ ಮಾಡಲು ರಾಜ್ಯ ಸಾರಿಗೆ ಇಲಾಖೆಯು ಹಲವು ಬಾರಿ ಅವಕಾಶ ನೀಡಿದ್ದು, ಇದೀಗ ಮೇ 31ರವರೆಗೆ HSRP ಪಡೆಯಲು ಮತ್ತು ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ.
ಇಷ್ಟು ಬಾರಿ ಅವಕಾಶ ನೀಡಿದರು ಕೂಡ ವಾಹನ ನೋಂದಣಿ ಮಾಡಲು ವಾಹನ ಸವಾರರು ನಿರಾಸಕ್ತಿ ತೋರಿಸಿದ್ದಾರೆ. ಜೂನ್ 01 ರಿಂದ HSRP ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಈಗಾಗಲೇ ನಿರ್ಧರಿಸಲಾಗಿದೆ. ಹಾಗಾಗಿ HSRP ಇಲ್ಲದ ವಾಹನಗಳಿಗೆ ನಿಯಮದಂತೆ ರೂ.500 ರಿಂದ 1,000ರೂ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದೆ ಇರುವವರು ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿಕೊಳ್ಳಲೇ ಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “HSRP ನಂಬರ್‌ ಪ್ಲೇಟ್‌ ನೋಂದಣಿ ಡೆಡ್‌ಲೈನ್‌..! ವಾಹನ ಮಾಲಕರೇ ಗಮನಿಸಿ !

  1. HSRP number plates ಕೂಡಲೆ ಸಿಗುವುದಿಲ್ಲ, ಒಂದು ತಿಂಗಳು ಕಾಯಬೇಕು, fraud site ಗಳು ಹುಟ್ಟಿಕೊಡಿವೆ ಇವುಗಳ ಬಗ್ಗೆ ಸರಕಾರ ಏನು ಕ್ರಮ ತೆಗೆದುಕೊಂಡಿದೆ

Leave a Reply

Your email address will not be published. Required fields are marked *

error: Content is protected !!