1st ಪಿಯುಸಿ’ ಗೆ (1st PUC) ಉಚಿತ ಪ್ರವೇಶದೊಂದಿಗೆ ವಸತಿ ಕಾಲೇಜುಗಳಿಗೆ ಸೇರಬೇಕೆ!? ಹಾಗಿದಲ್ಲಿ 15-05-2024 ರಿಂದ 27-05-2024 ರವರೆಗೂ ಅರ್ಜಿ (application) ಸಲ್ಲಿಸಬಹುದು.
ಇದೇ ತಿಂಗಳ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶ (SSLC exam result) ಪ್ರಕಟವಾಗಿತ್ತು. ಫಲಿತಾಂಶ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಮುಂದೆ ನಾನು ಯಾವ ಕಾಲೇಜಿಗೆ ಸೇರಬೇಕು ಎಲ್ಲಿ ಸೇರಬೇಕು? ಎಂಬ ಹಲವಾರು ಗೊಂದಲಗಳು ಇರುತ್ತವೆ. ಕೆಲವರು ಮನೆಗೆ ಹತ್ತಿರವಾಗುವಂತಹ ಕಾಲೇಜುಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ದೂರವಾದರೂ ಪರವಾಗಿಲ್ಲ ಒಳ್ಳೆ ಕಾಲೇಜಿಗೆ (college) ಸೇರಬೇಕೆಂಬ ಆಸೆಯಿಂದ ಕಾಲೇಜುಗಳ ಹುಡುಕಾಟ ಮಾಡುತ್ತಿರುತ್ತಾರೆ. ನೀವು ವಾಸಿಸುತ್ತಿರುವ ಪ್ರದೇಶದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪಿಯುಸಿ(PUC)ಗೆ ಸಂಬಂಧಿಸಿದ ಕಾಲೇಜಿಗಳು ಇಲ್ಲವಾದಲ್ಲಿ ಅಥವಾ ವಸತಿ ಕಾಲೇಜುಗಳಿಗೆ ಸೇರಬೇಕೆನ್ನುವವರು ಹಾಗೂ ಉಚಿತ ಪ್ರವೇಶದೊಂದಿಗೆ ಪ್ರಥಮ ಪಿಯುಸಿ (1st PUC) ಹಾಗೂ ದ್ವಿತೀಯ ಪಿಯುಸಿ (2nd PUC) ಯನ್ನು ಮುಗಿಸಬೇಕೆನ್ನುವವರಿಗೆ ಇಲ್ಲಿದೆ ಒಂದು ಉತ್ತಮ ಆಯ್ಕೆ. ಹೌದು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿನ ವಸತಿ ಕಾಲೇಜುಗಳಲ್ಲಿ ಉಚಿತ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿಯಲ್ಲಿ ಯಾವುದೇ ಬೋರ್ಡ್ ನಿಂದ ಪಾಸ್ ಆಗಿದ್ದರೂ ಕೂಡ ಈ ವಸತಿ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆಯಬಹುದು. ಯಾವೆಲ್ಲಾ ಕಾಲೇಜುಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ? ಅರ್ಜಿ ಸಲ್ಲಿಕೆಗೆ ಬೇಕಾಗುವ ಅರ್ಹತೆಗಳೇನು? ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಯಾವದು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಮೊರಾರ್ಜಿ ದೇಸಾಯಿ (morarji desai) ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜುಗಳು, ಡಾ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಕಾಲೇಜುಗಳು, ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆ ಈ ಎಲ್ಲಾ ಕಾಲೇಜುಗಳಿಂದ 2024 25 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿಗೆ ಪ್ರವೇಶ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗೂ ಈ ಎಲ್ಲಾ ಕಾಲೇಜುಗಳು ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿವೆ.
ವಿದ್ಯಾರ್ಥಿಗಳಿಗೆ ವಸತಿ ಕಾಲೇಜಿನಲ್ಲಿ ಒದಗಿಸಲಾಗುವ ಸೌಲಭ್ಯಗಳು :
ಇನ್ನು ಸಾಮಾನ್ಯವಾಗಿ ಎಲ್ಲಾ ವಸತಿ ಕಾಲೇಜು(Residential College)ಗಳಲ್ಲಿ ನೀಡಲಾಗುವಂತಹ ಮೂಲಭೂತ ಸೌಲಭ್ಯಗಳನ್ನು ಸಾಮಾನ್ಯವಾಗಿ ಇಲ್ಲಿಯೂ ಕೂಡ ಕೊಡಲಾಗುತ್ತದೆ ಅಂದರೆ ಪಠ್ಯ ಪುಸ್ತಕ, ಆಹಾರ, ಸಮವಸ್ತ್ರ ಶುಚಿ ಸಂಭ್ರಮ ಕಿಟ್, ಈ ರೀತಿಯ ಸೌಲಭ್ಯಗಳ ಜೊತೆಗೆ ವೃತ್ತಿಪರ ಕೋರ್ಸ್ ಗಳಾದ ಪಿಸಿಎಂಬಿ(PCMB) / ಪಿಸಿಎಂಸಿ(PCMC) ಹಾಗೂ ವಾಣಿಜ್ಯ(commerce) ವಿಷಯಗಳಿಗೆ ಆಂಗ್ಲ ಮಾಧ್ಯಮದಲ್ಲಿ (English medium) ತರಬೇತಿಗಳನ್ನು ನೀಡಲಾಗುವುದು.
ಬಹಳ ಮುಖ್ಯವಾಗಿ ಗೌರವಾನ್ವಿತ ಸಂಸ್ಥೆಗಳಿಂದ ನೀಟ್(NEET), ಜೆಇಇ(JEE), ಕೆಸಿಇಟಿ, ಸಿಎಲ್‌ಟಿ, ಸಿಎ ಫೌಂಡೇಷನ್ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಅರ್ಜಿದಾರರಿಗೆ ಇರಬೇಕಾದಂತಹ ಅರ್ಹತೆಗಳು (qualifications) :
ವಸತಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಜಿದಾರರಿಗೆ ಕೆಲವೊಂದಷ್ಟು ಲಕ್ಷಣಗಳು ಇರಬೇಕು.
ಮೊದಲಿಗೆ ಅರ್ಜಿದಾರ ಕರ್ನಾಟಕದ ನಿವಾಸಿ ಆಗಿರಬೇಕು.
ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯ ರೂ.2.50
ಲಕ್ಷಗಳನ್ನು ಮೀರಿರಬಾರದು.
ಶೇಕಡ.75ರಷ್ಟು ಪ್ರವೇಶವನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಮೀಸಲಿರಿಸಲಾಗಿದೆ.
ಇನ್ನುಳಿದ ಶೇಕಡ. 25 ರಷ್ಟು ಪ್ರವೇಶಗಳನ್ನು ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಲಾಗಿದೆ. ಹಾಗೂ ಇದರಲ್ಲಿಯೇ ವಿಕಲಚೇತನರಿಗೆ ಶೇ.3 ರಷ್ಟು ಪ್ರವೇಶಾತಿಯನ್ನು ಮೀಸಲಿರಿಸಲಾಗಿದೆ.
ಅರ್ಜಿದಾರ ಬಹಳ ಮುಖ್ಯವಾಗಿ ಅಲ್ಪಸಂಖ್ಯಾತರ ಯಾವುದೇ ವಸತಿ ಶಾಲೆ, ಸರ್ಕಾರಿ, ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :
ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಸಲ್ಲಿಸಬಹುದು ಹಾಗೂ ಆಸಕ್ತ ಅಲ್ಪಸಂಖ್ಯಾತರ ಪೋಷಕರು, ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳ(Documents) ಸಹಿತ ತಮಗೆ ಹತ್ತಿರವಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ, ಡಾ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಕಾಲೇಜುಗಳು , ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ (ಉನ್ನತೀಕರಣಗೊಂಡ) ಕಾಲೇಜುಗಳಲ್ಲಿ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ :15-05-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-05-2024 ರ ಸಂಜೆ 05-30 ಗಂಟೆವರೆಗೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.