Govt Scheme – ಆಕಳು ಸಾಕಾಣಿಕೆ ಉತ್ತೇಜನದ ಸಬ್ಸಿಡಿ ಯೋಜನೆಗೆ ಅರ್ಜಿ ಆಹ್ವಾನ, ನ.25 ರೊಳಗೆ ಅರ್ಜಿ ಸಲ್ಲಿಸಿ.

Subsidy by Department of Animal Husbandry

ಇದೀಗ ರೈತರಿಗೆ ಮತ್ತು ಪಶುಪಾಲನೆ ಮಾಡುವವರಿಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಸಹಾಯಧನ(Subsidy by Department of Animal Husbandry ) ಸಿಗಲಿದೆ ಅದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪಶು ಪಾಲನೆ ಮಾಡುವವರಿಗೆ ಸಿಹಿ ಸುದ್ದಿ :

ಇದೀಗ ಹೈನುಗಾರಿಕೆ ಅಥವಾ ಪಶುಪಾಲನೆ ಮಾಡುವವರಿಗೆ ಸರ್ಕಾರದಿಂದ ಹೆಚ್ಚಿನ ನೆರವು ಸಿಗುತ್ತಿದ್ದು , ಅವರಿಗೆ ಸಬ್ಸಿಡಿ (subsidy loan) ಅಥವಾ ಸಹಾಯಧನ ನೀಡಲು ಮುಂದಾಗಿದ್ದಾರೆ. ಈ ಒಂದು ಯೋಜನೆಯಡಿಯಲ್ಲಿ ಇತರ ಸಾಲ ಸೌಲಭ್ಯ ಅಂದರೆ ಬಡ್ಡಿ ರಹಿತ ಸಾಲ (loan without interest) ಇನ್ನಿತರ ಸೌಕರ್ಯಗಳನ್ನು ಒದಗಿಸುತ್ತಿದೆ. ಹಾಗೆಯೇ ಇದೀಗ ಮಿಶ್ರತಳಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಶೇಕಡ 90% ನಷ್ಟು ಸಹಾಯಧನ (subsidy Loan) ಸಿಗಲಿದೆ ಎಂದು ತಿಳಿದು ಬಂದಿದೆ.

2023-24 ನೇ ಸಾಲಿನ ಪಶುಪಾಲನೆದಾರರಿಗೆ ಉತ್ತೇಜನ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಅನುದಾನದಲ್ಲಿ ಘಟಕ ಉಪಯೋಜನೆಯಡಿ ಮಿಶ್ರತಳಿ ಹಸುಗಳನ್ನು ಖರೀದಿಸಲು ಸಹಾಯಧನ ನೀಡುತ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಎಂದರೆ ಹಸು ಖರೀದಿಯ ಶೇಕಡ 90ರಷ್ಟು ಅಂದರೆ 58,500 ಸಹಾಯವಾಗಿ ಸರ್ಕಾರ ನೀಡುತ್ತದೆ. ಮತ್ತು ಇನ್ನುಳಿದ 10% ಅಂದರೆ 6,500 ಬ್ಯಾಂಕಿ(Bank)ನಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಪುರುಷ ರೈತರಿಗೆ ಮಾತ್ರವಲ್ಲದೆ 33.3% ನಷ್ಟು ಮಹಿಳೆಯರಿಗೆ ಹಾಗೂ 3% ವಿಕಲಚೇತನರಿಗೆ ಕೂಡ ಈ ಒಂದು ಯೋಜನೆಯಲ್ಲಿ ಸಹಾಯಧನ ನೀಡಲಾಗುತ್ತದೆ.

ಈ ಒಂದು ಯೋಜನೆಯಡಿ ಸಿಗುವ ಸಹಾಯಧನ ಎಷ್ಟು ?

ಈ ಯೋಜನೆಯಲ್ಲಿ ಮಿಶ್ರತಳಿ ಎಂಬ ಹಸು ಘಟಕದಲ್ಲಿ ಮಿಶ್ರತಳಿ ಹಸುಗಳನ್ನು ವಿತರಿಸುತ್ತಾರೆ. ಮತ್ತು ಇದಕ್ಕಾಗಿ ಘಟಕ ವೆಚ್ಚ ಸುಮಾರು ರೂ. 65,000 ಅನ್ನು ಇಡಲಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಎಸ್ ಟಿ, ಎಸ್ ಸಿ ವರ್ಗದವರಿಗೆ ರೂ. 58,500 ಸಹಾಯಧನವನ್ನು ನೀಡಲು ನಿರ್ಧರಿಸಿದ್ದಾರೆ.

ಈ ಯೋಜನೆಗೆ ಅರ್ಹರ ಅರ್ಜಿದಾರರ ವಿವರ :

ಮೊದಲೆಯದಾಗಿ ಅರ್ಜಿದಾರರು ಪಶುಸಂಗೋಪನೆಯಲ್ಲಿ ತೊಡಗಿರಬೇಕು. ಹಾಗೆಯೇ ಎರಡನೆಯದಾಗಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ FRUITS ID ಅಂದರೆ ಗುರುತಿನ ಸಂಖ್ಯೆಯನ್ನು ಹೊಂದಿರಬೇಕಾಗಿರುತ್ತದೆ. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು ಎಂದು ಕೂಡ ತಿಳಿಸಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಸಹಾಯಧನ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳ (documents) ವಿವರ :

ರೈತರ ಆಧಾರ್ ಕಾರ್ಡ್ (Aadhaar card)
ಜಾತಿ ಪ್ರಮಾಣ ಪತ್ರ (cast certificate)
ಆದಾಯ ಪ್ರಮಾಣ ಪತ್ರ (income certificate)
ವಿಕಲಚೇತನರಾಗಿದ್ದರೆ ಅವರ ಪ್ರಮಾಣ ಪತ್ರ (handicapped certificate)
ಬ್ಯಾಂಕ್ ಖಾತೆಯ ವಿವರ (Bank Account Details)
ಮೊಬೈಲ್ ಸಂಖ್ಯೆ ( Mobile Number )

ಈ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ ( Date ) ಈ ಕೆಳಗಿನಂತಿದೆ :

ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ಹಾಗೆಯೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

 ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!