Realme GT5 Pro: ಅತೀ ದೊಡ್ಡ ಸ್ಕ್ರೀನ್ & 12 GB RAM ನೊಂದಿಗೆ ಮತ್ತೊಂದು ರಿಯಲ್ಮಿ ಮೊಬೈಲ್ ಬಿಡುಗಡೆ.

Realme GT 5 pro phone 1

ಮೊಬೈಲ್ ಅಂದರೆ ಯಾರಿಗೆ ಬೇಡ ಹೇಳಿ, ಇಂದಿನ ಕಾಲದಲ್ಲಿ ಎಲ್ಲರೂ ಮೊಬೈಲ್ ಫೋನ್ ಗಳನ್ನು ( Mobile Phones ) ಬಳಸುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳವರೆಗೂ ಬಳಸುತ್ತಾರೆ. ಹಾಗೆಯೇ ಹೊಸ ಹೊಸ ರೀತಿಯ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಲೇ ಇದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅದರಲ್ಲೂ ಹಲವಾರು ಮೊಬೈಲ್ ಬ್ರಾಂಡ್ ಗಳು ಇದ್ದಾವೆ. ಅದರಲ್ಲಿ ರಿಯಲ್ಮಿ (realme) ಕೂಡ ಒಂದು. ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಫೋನುಗಳನ್ನು ಬಿಡುಗಡೆ ಮಾಡದೆ ಇದ್ದ ಪ್ರಸಿದ್ಧ ರಿಯಲ್ ಮಿ ಕಂಪನಿ ( Realme Company ) ಇದೀಗ ದಿಢೀರ್ ಆಗಿ ತನ್ನ ಹೊಸ ರಿಯಲ್ ಮಿ ಜಿಟಿ 5 ಪ್ರೊ ( Realme GT 5 PRO ) ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ.

ರಿಯಲ್ ಮಿ ಜಿಟಿ 5 ಪ್ರೊ ( Realme GT 5 PRO ) :

Realme GT 5 PRO phone

ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಫೋನ್ ನಲ್ಲಿ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ ಇದೆ. 24GB RAM ನ ಆಯ್ಕೆ ನೀಡಲಾಗಿದೆ. ಫಾಸ್ಟ್ ಚಾರ್ಜರ್, ಕ್ಯಾಮೆರಾ ಕೂಡ ಅದ್ಭುತವಾಗಿದೆ. ರಿಯಲ್ ಮಿ ಜಿಟಿ 5 ಪ್ರೊ ಫೋನಿನ ಬೆಲೆ, ಫೀಚರ್ಸ್ ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ರಿಯಲ್ ಮಿ ಜಿಟಿ 5 ಪ್ರೊ ನ ಬೆಲೆಯ ವಿವರ :

ರಿಯಲ್ ಮಿ ಜಿಟಿ 5 ಪ್ರೊ 12GB RAM ಮತ್ತು 256GB ಗೆ ರೂ.39,800 ನಿಂದ ಪ್ರಾರಂಭವಾಗುತ್ತದೆ. ಇದು 16GB + 512GB ಗೆ ರೂ.46,800 ಮತ್ತು 16GB + 1TB ಗೆ ರೂ.50,400 ಬೆಲೆಯನ್ನು ನಿಗದಿ ಪಡಿಸಿಡಿದ್ದಾರೆ.

ಈ ಮೊಬೈಲ್ ಅನ್ನು ಮೂರು ಬಣ್ಣದಲ್ಲಿ ವಿನ್ಯಾಸ ಗೊಳಿಸಿದ್ದಾರೆ :

ರೆಡ್ ರಾಕ್ (ಕಿತ್ತಳೆ)
ಸ್ಟಾರಿ ನೈಟ್ (ಕಪ್ಪು)
ಬ್ರೈಟ್ ಮೂನ್ (ಬಿಳಿ)
ಈ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಆರೆಂಜ್ ಮತ್ತು ವೈಟ್ ರೂಪಾಂತರಗಳು ಹಿಂಭಾಗದಲ್ಲಿ ಲೆದರ್ ಫಿನಿಶ್ ಹೊಂದಿದ್ದರೆ, ಕಪ್ಪು ಬಣ್ಣವು ಮ್ಯಾಟ್ ಫಿನಿಶ್‌ನಲ್ಲಿ ಬರುತ್ತದೆ.

ಈಗ ರಿಯಲ್ ಮಿ ಜಿಟಿ 5 ಪ್ರೊ ಫೀಚರ್ಸ್ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ :

ಡಿಸ್‌ಪ್ಲೇ:

ರಿಯಲ್ ಮಿ ಜಿಟಿ 5 ಪ್ರೊ 6.78-ಇಂಚಿನ 1.5K ಕರ್ವ್ಡ್ AMOLED ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್, 4500 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು Pro-XDR ಬೆಂಬಲದೊಂದಿಗೆ 8T LTPO ಪ್ಯಾನೆಲ್ ಆಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಪ್ರೊಸೆಸರ್:

ಈ ಸ್ಮಾರ್ಟ್‌ಫೋನ್ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಜೋಡಿಯಾದ Adreno 750 GPU ನಿಂದ ಚಾಲಿತವಾಗಿದೆ.

ಹಿಂಬದಿಯ ಕ್ಯಾಮೆರಾಗಳು:

ಇದು OIS ಜೊತೆಗೆ 50MP Sony LYT-T808 ಸಂವೇದಕ, OIS+EIS ಜೊತೆಗೆ 50MP Sony IMX890 ಪೆರಿಸ್ಕೋಪ್ ಟೆಲಿಫೋಟೋ ಸಂವೇದಕ ಮತ್ತು 8MP ಓಮ್ನಿವಿಷನ್ OV0810 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ.

ಮುಂಭಾಗದ ಕ್ಯಾಮರಾ:

ಸೆಲ್ಫಿಗಳಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ, ಚಾರ್ಜಿಂಗ್:

ಹೊಸ ರಿಯಲ್ ಮಿ ಫ್ಲ್ಯಾಗ್‌ಶಿಪ್ 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಸಾಫ್ಟ್‌ವೇರ್:

ರಿಯಲ್ ಮಿ ಜಿಟಿ 5 ಪ್ರೊ ಆಂಡ್ರಾಯ್ಡ್ 14-ಆಧಾರಿತ Realme UI 5.0 ಅನ್ನು ರನ್ ಮಾಡುತ್ತದೆ.

ಇನ್ನು ಇತರೆ ವೈಶಿಷ್ಟ್ಯಗಳು ಅಂದರೆ : ಈ ಸ್ಮಾರ್ಟ್‌ಫೋನ್ IP64 ರೇಟಿಂಗ್, 3VC ಐಸ್‌ಬರ್ಗ್ ಕೂಲಿಂಗ್ ಸಿಸ್ಟಮ್, NFC, ಡಾಲ್ಬಿ ಅಟ್ಮಾಸ್, ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಹೈ-ರೆಸ್ ಆಡಿಯೋ ಸಿಸ್ಟಮ್ ಅನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

Leave a Reply

Your email address will not be published. Required fields are marked *