ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ದಾವಣಗೆರೆಗೆ ಶ್ರೀಮತಿ ಗಾಯತ್ರಿ ಸಿದ್ದೇಶ್ವರ..! ಪ್ರತಾಪ್ ಸಿಂಹಗೆ ತಪ್ಪಿದ ಟಿಕೆಟ್

gayatri siddeshwara

ಮಾರ್ಚ್ 12ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿಎಂ ಸಿದ್ದೇಶ್ವರ್ ಅವರು ನನಗೆ ಇಲ್ಲವೇ ನಮ್ಮ ಕುಟುಂಬದವರಿಗೆ ದಾವಣಗೆರೆ ಲೋಕಸಭಾ  ಟಿಕೆಟ್ ಸಿಗುವುದು ಖಚಿತ’ ಎಂದು  ಹೇಳಿದ್ದರು, ಹಾಗೆಯೇ ದಾವಣಗೆರೆಯಲ್ಲಿ ಮತ್ತೊಮ್ಮೆ  ಜಿ ಎಂ ಸಿದ್ದೇಶ್ವರರ ಕುಟುಂಬಕ್ಕೆ ಲೋಕಸಭೆಯ ಬಿಜೆಪಿಯ ಟಿಕೆಟ್ ಒಲಿದು ಬಂದಿದ್ದು ಅನೇಕ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತಂದಿದೆ. ಜಿಎಂ ಸಿದ್ದೇಶ್ವರ್. 2004ರಿಂದ ಸತತ 4 ಬಾರಿ ದಾವಣಗೆರೆ MPಯಾಗಿ ಗೆದ್ದಿರೋ ಇವರು ಈಗ 5ನೇ ಭಾರಿ ಅವರ ಪತ್ನಿಗೆ ಬಿಜೆಪಿ ಟಿಕೆಟ್ ಒಲಿದು ಬಂದಿದೆ.

ದೇಶ ಸೇವೆಗೆ ಅವಕಾಶ ಸಿಕ್ಕರೆ ಖಂಡಿತ ಸ್ಪರ್ಧಿಸುತ್ತೇನೆ  ಎಂದು ಗಾಯತ್ರಿ ಹಿಂದೆಯೇ ಒಮ್ಮೆ ನುಡಿದಿದ್ದರು, ಮತ್ತು ಸತತ 4 ಭಾರಿ ಸಂಸಧರಾಗಿ ಆಯ್ಕೆಯಾದ ಜಿ. ಎಂ ಸಿದ್ದೇಶ್ವರರ ಅನುಭವದಿಂದ ಸಮಾಜ ಸೇವೆಯ ಬಗ್ಗೆ ಗಾಯತ್ರಿ ಅವರು ಸಾಕಷ್ಟು ತಿಳಿದುಕೊಂಡಿದ್ದಾರೆ.

ಯಾರು ಗಾಯತ್ರಿ ಗೌಡರ ಸಿದ್ದೇಶ್ವರ?

WhatsApp Image 2024 03 13 at 9.55.51 PM 1

ಸದಾ ಸಮಾಜ ಸೇವೆ ಮತ್ತು ಬಡವರ ಬಗ್ಗೆ ಕನಿಕರ ಹೊಂದಿರುವ ಶ್ರೀಮತಿ ಗಾಯತ್ರಿ ಅವರು ದಿನಾಂಕ 16-05-1955 ರಲ್ಲಿ ಜನಿಸಿದರು, ಶಿವಮೊಗ್ಗದ ನ್ಯಾಷನಲ್ ಗರ್ಲ್ಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿರುವ ಅವರು ಹಿಂದೂ ಲಿಂಗಾಯತ ಜಾತಿಗೆ ಸೇರಿದ್ದಾರೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಈ ಬಾರಿ ಕಾಂಗ್ರೆಸ್‌ ಬಿಜೆಪಿ ಫೈಟ್‌ ಅನ್ನೋದಕ್ಕಿಂತ, ಬೀಗರ ನಡುವೆ ಕದನ ಶುರುವಾಗಿದೆ. ಅಂದ್ರೆ ಶಾಮನೂರು ಶಿವಶಂಕರಪ್ಪ V/S ಜಿಎಂ ಸಿದ್ದೇಶ್ವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

2004ರಲ್ಲಿ ರಾಜ್ಯದಲ್ಲಿ ಬಿಜೆಪಿ ಇನ್ನು ಅಂಬೆಗಾಲಿಡುತ್ತಿತ್ತು. ಆದರೆ ಅದಾಗ್ಲೇ ಜಿಎಂ ಸಿದ್ದೇಶ್ವರ್ ಅವರು ದಾವಣಗೆರೆ ಬಿಜೆಪಿ ಸಂಸದರಾಗಿ ಗೆದ್ದು ಬೀಗಿದ್ರು. ಈ ಬಾರಿ ಕಾಂಗ್ರೆಸ್ ನಿಂದ ಶಾಮನೂರ ಅವರ ಸೊಸೆಯಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಕಾಂಗ್ರೆಸ್ ಇಂದ ಟಿಕೆಟ್ ಸಿಗುವುದು ಖಚಿತವಾಗಿದೆ ಎಂದು ಹೇಳಬಹುದು. ಹಾಗಾಗಿ ದಾವಣಗೆರೆಯಲ್ಲಿ ಈ ಸಾರಿ ನೆಕ್ ಟು ನೆಕ್ ಫೈಟ್ ಇದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂದು ಕಾದು ನೋಡಬೇಕಿದೆ.

ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.

ಈ ಬಾರಿ ಬಿಜೆಪಿ ಒಟ್ಟು 8 ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿದೆ. ಮೈಸೂರು ಸಂಸದ, ಪ್ರತಾಪ್‌ ಸಿಂಹ, ಬೆಂಗಳೂರು ಉತ್ತರ ಸಂಸದ ಡಿವಿ ಸದಾನಂದ ಗೌಡ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಹಾವೇರಿ ಸಂಸದ ಶಿವಕುಮಾರ್‌ ಉದಾಸಿ, ತುಮಕೂರು ಸಂಸದ ಜಿಎಸ್‌ ಬಸವರಾಜು(ನಿವೃತ್ತಿ ಘೋಷಿಸಿದ್ದರು) ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್(ನಿವೃತ್ತಿ ಘೋಷಿಸಿದ್ದರು), ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.

ಯಾರಿಗೆ ಟಿಕೆಟ್?

ಚಿಕ್ಕೋಡಿ: ಅಣ್ನಾ ಸಾಹೇಬ್ ಶಂಕರ್ ಜೊಲ್ಲೆ

ಬಾಗಲಕೋಟೆ: ಪಿ.ಸಿ ಗದ್ದಿಗೌಡರ

ಬಿಜಾಪುರ: ರಮೇಶ ಜಿಗಜಿಣಗಿ

ಗುಲ್ಬರ್ಗ: ಡಾ. ಉಮೇಶ್ ಜಾಧವ್‌

ಬೀದರ್: ಭಗವಂತ ಖೂಬಾ

ಕೊಪ್ಪಳ: ಬಸವರಾಜ ಕ್ಯಾವತ್ತೂರ

ಬಳ್ಳಾರಿ: ಶ್ರೀರಾಮುಲು

ಹಾವೇರಿ: ಬಸವರಾಜ ಬೊಮ್ಮಾಯಿ

ಧಾರವಾಡ: ಪ್ರಲ್ಹಾದ ಜೋಶಿ

ದಾವಣಗೆರೆ: ಗಾಯತ್ರಿ ಸಿದ್ದೇಶ್ವರ

ಶಿವಮೊಗ್ಗ: ಬಿ.ವೈ ರಾಘವೇಂದ್ರ

ಉಡುಪಿ–ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟ

ತುಮಕೂರು: ವಿ. ಸೋಮಣ್ಣ

ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಚಾಮರಾಜನಗರ: ಎಸ್‌. ಬಾಲರಾಜ್‌

ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್ ಮಂಜುನಾಥ್‌

ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ

ಬೆಂಗಳೂರು ಕೇಂದ್ರ: ಪಿ.ಸಿ ಮೋಹನ್‌

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!