Aadhaar Update: ಉಚಿತ ಆಧಾರ್‌ ಕಾರ್ಡ್‌ ತಿದ್ದುಪಡಿ ಡೆಡ್​ಲೈನ್ ವಿಸ್ತರಣೆ, ಮತ್ತೆ 3 ತಿಂಗಳು ಅವಕಾಶ

aadhaar free update

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಗಮನಕ್ಕೆ, ಹಲವಾರು ಜನರು ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷಗಳು ಕಳೆದರೂ ಕೂಡ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ. ಹಾಗಾಗಿ ಸರ್ಕಾರವು, ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕೆಂದು ಆದೇಶವನ್ನು ಹೊರಡಿಸಿದೆ. ನೀವೇನಾದರೂ 10 ವರ್ಷಗಳಿಗಿಂತ ಮೇಲ್ಪಟ್ಟು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದಿದ್ದರೆ ಡಿಸೆಂಬರ್ 14 ಒಳಗೆ ನವೀಕರಿಸಿ(update).ಡಿಸೆಂಬರ್ 14 ವರೆಗೂ ಆಧಾರ್ ಕಾರ್ಡ್ ನವೀಕರಣವು ಉಚಿತವಾಗಿದೆ.

ಯುಐಡಿಎಐ ( UIDAI ) ಆಧಾರ್ ಕಾರ್ಡ್ ( Adhaar Card ) ಸಂಬಂಧಿಸಿದವಿವರಗಳನ್ನು ನವೀಕರಿಸಲು ಬಳಕೆದಾರರನ್ನು ಕೋರಿಕೊಂಡಿದೆ. ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದಗಡುವನ್ನು ಮಾರ್ಚ್ 14 ರಿಂದ 2024 ರ ಜೂನ್14ರವರೆಗೆ ವಿಸ್ತರಿಸಲಾಗಿದೆ. ಈ ಗಡುವನ್ನು ವಿಸ್ತರಿಸುತ್ತಿರುವುದು ಇದು 3ನೇ ಬಾರಿ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು. ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಹೇಳಿದೆ. ಆನ್ ಲೈನ್ ನಲ್ಲಿ ಆಧಾರ್ ಮಾಹಿತಿ ನವೀಕರಣಕ್ಕೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಉಚಿತವಾಗಿ ಆಧಾರ್ ತಿದ್ದುಪಡಿ & ನವೀಕರಣ ಮಾಡಿಕೊಳ್ಳಿ

ಯುಐಡಿಎಐ ಉಚಿತ ಆಧಾರ್ ನವೀಕರಣದ ಗಡುವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿದೆ. ಇದರ ಪ್ರಕಾರ ಜೂ.14ರವರೆಗೆ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ ಡೇಟ್ ಮಾಡಲು ಅವಕಾಶವಿದೆ.

ಹೌದು, ಹಲವಾರು ಜನರು ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷಗಳು ಕಳೆದರೂ ಕೂಡ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ. ಹಾಗಾಗಿ ಸರ್ಕಾರವು, ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕೆಂದು ಆದೇಶವನ್ನು ಹೊರಡಿಸಿದೆ. ನೀವೇನಾದರೂ 10 ವರ್ಷಗಳಿಗಿಂತ ಮೇಲ್ಪಟ್ಟು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದಿದ್ದರೆ ಡಿಸೆಂಬರ್ 14 ಒಳಗೆ ನವೀಕರಿಸಿ(update).ಡಿಸೆಂಬರ್ 14 ವರೆಗೂ ಆಧಾರ್ ಕಾರ್ಡ್ ನವೀಕರಣವು ಉಚಿತವಾಗಿದೆ. ಸಾಮಾನ್ಯವಾಗಿ ಆಧಾರ್‌ ಅಪ್‌ಡೇಟ್‌ ಮಾಡಲು 50 ರೂ. ಶುಲ್ಕ ಪಾವತಿಸಬೇಕು. ಆದರೆ ಆಧಾರ್‌ನ ಅಧಿಕೃತ ವೆಬ್‌ಸೈಟ್‌ (https://myaadhaar.uidai.gov.in) ಮೂಲಕ ಅಪ್‌ ಡೇಟ್‌ ಮಾಡಿದರೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಕೇವಲ ಆನ್‌ಲೈನ್‌ನಲ್ಲಿ ಅಪ್ಡೇಟ್‌ ಮಾಡಲು ಮಾತ್ರವೇ ಶುಲ್ಕ ಇರುವುದಿಲ್ಲ. ಆದರೆ, ಸಾಮಾನ್ಯ ಸೇವಾ ಕೇಂದ್ರ (ಕಾಮನ್‌ ಸರ್ವೀಸ್‌ ಸೆಂಟರ್ಸ್‌- CSC)ಗಳಲ್ಲಿ ಅಪ್‌ಡೇಟ್ ಮಾಡಲು ಶುಲ್ಕ ಅನ್ವಯವಾಗುತ್ತದೆ.

ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಟ್ವೀಟ್‌ ಮಾಡಿದೆ. ಗಡುವು ಮೀರಿದ ಬಳಿಕ ಆಧಾರ್‌ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಬೇಕೆಂದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದೂ ಪ್ರಾಧಿಕಾರ ತಿಳಿಸಿದೆ.

ಹಾಗೆಯೇ ವಿಶೇಷ ಸೂಚನೆ ಎಂದರೆ, ಆಧಾರ್ ಅನ್ನು ನವೀಕರಿಸುವ ಮೂಲಕ, ನಿಮ್ಮ ಫೋಟೋ ಸಹ ನವೀಕರಿಸಲಾಗುತ್ತದೆ, ಅದು ಸಹ ಅಗತ್ಯವಾಗಿದೆ ಎಂದು ತಿಳಿಸಿದೆ.

ಯಾರಿಗೆಲ್ಲ ಇದು ಅನ್ವಯವಾಗುತ್ತದೆ ?

ಮುಖ್ಯವಾಗಿ 10 ವರ್ಷಗಳ ಆಧಾರ್ ಪೂರ್ಣಗೊಳಿಸಿದ ಬಳಕೆದಾರರು ಈ ಸೌಲಭ್ಯವನ್ನು ಬಳಸಬಹುದು. ಹಾಗೆಯೇ ಯುಐಡಿಎಐ ತಿಳಿಸಿದ ಪ್ರಕಾರ ದಾಖಲೆಗಳನ್ನು ನವೀಕರಿಸಲೇಬೇಕು. ಈ ಒಂದು ಹೊಸ ಬದಲಾವಣೆ ಮಾಡಿದರೆ ಇದರಿಂದ ನಿಮಗೆ ಬಹಳ ಸಹಾಯವಾಗಲಿದೆ. ಇನ್ನು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಸರ್ಕಾರಿ ಗುರುತಿನ ಚೀಟಿಯಲ್ಲೂ ನಮ್ಮ ವಿಳಾಸವಿದೆ. ಆದರೆ ನಮ್ಮ ಪಾಸ್‌ಪೋರ್ಟ್ ಅನ್ನು ಐಡೆಂಟಿ ಕಾರ್ಡ್ ( Identity Card ) ಮತ್ತು ಗುರುತಿನ ಕಾರ್ಡ್ ಆಗಿ ಬಳಸುತ್ತೇವೆ. ಇನ್ನು ನೋಡುವುದಾದರೆ ಶಾಲಾ ಪ್ರಮಾಣಪತ್ರದಲ್ಲಿ ಕೂಡ ಫೋಟೋ ಇದೆ. ಹಗಾಗಿ  ಸಮಯಕ್ಕೆ ಅನುಗುಣವಾಗಿ ನವೀಕರಿಸುವುದು ಉತ್ತಮ. ಹಾಗೆಯೇ ಇದರಲ್ಲಿ ಬಯೋಮೆಟ್ರಿಕ್ಸ್ ಕೂಡ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು 10 ವರ್ಷಗಳ ನಂತರ ತನ್ನ ಆಧಾರ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಪ್ರಾರಂಭಿಸಲಾದ ಮೈ ಆಧಾರ್ ಪೋರ್ಟಲ್ನಲ್ಲಿ, ನೀವು ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಉಚಿತವಾಗಿ ನವೀಕರಿಸಬಹುದು.

whatss

ಆಧಾರ್‌ ಅಪ್ಡೇಟ್‌ಗೆ ಏನೆಲ್ಲ ಬೇಕು?

ಪಡಿತರ ಚೀಟಿ.
ಮತದಾರರ ಗುರುತಿನ ಚೀಟಿ.
ಪಾಸ್‌ಬುಕ್.
ಭಾರತೀಯ ಪಾಸ್ಪೋರ್ಟ್.
ಸರ್ಕಾರ ನೀಡಿದ ಗುರುತಿನ ಚೀಟಿ/ಪ್ರಮಾಣಪತ್ರ,
ST/SC/OBC ಪ್ರಮಾಣಪತ್ರ ಅಥವಾ
ಮದುವೆ ಪ್ರಮಾಣಪತ್ರ,
ಭಾವಚಿತ್ರವನ್ನು ಹೊಂದಿದ. ಅಂಗವೈಕಲ್ಯ ಗುರುತಿನ ಚೀಟಿ / ಅಂಗವಿಕಲತೆಯ ಪ್ರಮಾಣಪತ್ರ.

ಆಧಾರ್ ಕಾರ್ಡನ್ನು ನವೀಕರಿಸುವ(update) ವಿಧಾನ :

How to update Aadhaar? : ಆಧಾರ್ ಕಾರ್ಡನ್ನು ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅಪ್ಡೇಟ್ ಮಾಡಬಹುದು. ನಿಮ್ಮ ಜನ್ಮ ದಿನಾಂಕ, ವಿಳಾಸ, ಹೆಸರು ಹೀಗೆ ಎಲ್ಲವನ್ನು ಆನ್ಲೈನ್ ಮುಖಾಂತರ ಅಪ್ಡೇಟ್ ಮಾಡುವ ವಿಧಾನ ಕೆಳಗಿನಂತಿದೆ :

ಹಂತ 1:  ಮೊದಲನೆಯದಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://myaadhaar.uidai.gov.in/

ಹಂತ 2: ನಂತರ ಲಾಗಿನ್‌ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ, Captcha ಎಂಟರ್ ಮಾಡಿ,

aaa1

ಹಂತ 3: Send OTP ಬಟನ್ ಮೇಲೆ ಕ್ಲಿಕ್ ಮಾಡಿ, ಓಟಿಪಿ ನಿಮ್ಮ ರಿಜಿಸ್ಟರ್ ಫೋನ್ ನಂಬರ್ಗೆ ಬರುತ್ತದೆ ಅದನ್ನು enter ಮಾಡಿ ಲಾಗಿನ್ ಆಗಿ.

aaa2

ಹಂತ 4: ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ.

aaa3

ಹಂತ 5: ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.

aaa5

ಹಂತ 6: ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 7: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.

ಹಂತ 8: 15 ದಿನಗಳೊಳಗೆ ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರ್ ನಲ್ಲಿ ಅಪ್ಡೇಟ್ ಆಗುತ್ತದೆ.

ಹೀಗೆ ನೀವು ಬೇಕಾದ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು. 14/9/2023 ರ ವರೆಗೂ ಆಧಾರ್ ಕಾರ್ಡಿನ ನವೀಕರಣಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿದೆ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!