BIG NEWS : ರಾಜ್ಯದಲ್ಲಿ ಕಲರ್ ‘ಕಾಟನ್ ಕ್ಯಾಂಡಿ’ & ಗೋಬಿ ಬ್ಯಾನ್, ಮಾರಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ..!

cotton candy and gobi ban

ರಾಜ್ಯದಲ್ಲಿ ಕೃತಕ ಬಣ್ಣವನ್ನು ಬಳಸಿ ಮಾಡಲಾಗುತ್ತಿದ್ದ ಗೋಬಿ ಮಂಚೂರಿ(Gobi Manchurian) ಹಾಗೂ ಕಾಟನ್ ಕ್ಯಾಂಡಿಯನ್ನು ನಿಷೇಧಿಸಿ ನೆನ್ನೆ ಅಂದರೆ ಸೋಮವಾರ ರಾಜ್ಯ ಸರ್ಕಾರವು ಆದೇಶವೊಂದನ್ನು ಹೊರಡಿಸಿದೆ. ಏನಿದು ಆದೇಶ?, ಇನ್ನು ಮುಂದೆ ಗೋಬಿ ಮಂಚೂರಿಯನ್ನು ತಿನ್ನಲು ಆಗುವುದಿಲ್ಲವೇ ಎನ್ನುವ ಗೊಂದಲವಿದ್ದರೆ, ಈ ವರದಿಯು ನಿಮಗೆ ನಿಖರವಾದ ಉತ್ತರವನ್ನು ತಿಳಿಸುತ್ತದೆ. ವರದಿಯನ್ನು ಕೊನೆವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ರೀತಿಯ ಗೋಬಿ ಹಾಗೂ ಕಾಟನ್ ಕ್ಯಾಂಡಿ ತಿನ್ನುತ್ತಿದ್ದರೆ ಎಚ್ಚರಿಕೆ :

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಪ್ರತಿಯನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ.

ಈಗಾಗಲೇ ಹೊರ ರಾಜ್ಯಗಳಲ್ಲಿ ಬಾಂಬೆ ಮಿಠಾಯಿ (cotton candy) ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣಗಳನ್ನು ಬಳಸುವುದರಿಂದ, ಅಂತಹ ಕೆಮಿಕಲ್ಗಳು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ ಎಂದು ಬ್ಯಾನ್ ಮಾಡಲಾಗಿದೆ. ಈಗ ಕರ್ನಾಟಕದಲ್ಲೂ ಕೂಡ ಇದೇ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್‌-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ ‘ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್‌’ ರಾಸಾಯನಿಕ ಅಂಶ ಪತ್ತೆಯಾಗಿದೆ. ಕಲರ್​ ಕಾಟನ್​ ಕ್ಯಾಂಡಿ ಮಾರಾಟ ಮಾಡುವಂತೆ ಇಲ್ಲ. ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

whatss

ಕೃತಕ ಬಣ್ಣಗಳನ್ನು ಬಳಸಿದ ಪದಾರ್ಥವನ್ನು ತಿಂದರೆ ಏನಾಗುತ್ತದೆ ಗೊತ್ತಾ?:

ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಯಲ್ಲಿ ಬಳಸುವ ಕೃತಕ ಬಣ್ಣಗಳಿಂದ ಕ್ಯಾನ್ಸರ್ ಹಾಗೂ ಇದರ ಅದೆಷ್ಟೋ ರೋಗಗಳು ಬರಲು ಮಣೆ ಹಾಕಿ ಕೊಟ್ಟಂತಾಗುತ್ತದೆ. ಆದ್ದರಿಂದ ಇಂತಹ ಕೆಮಿಕಲ್ ಪದಾರ್ಥಗಳನ್ನು ಅಥವಾ ಬಣ್ಣಗಳನ್ನು ಬಳಸಿ ಮಾಡುವ ಖಾದ್ಯಗಳಿಂದ ದೂರ ಇರುವುದು ಒಳ್ಳೆಯದು. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಪೋಷಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕಲರ್ ಕ್ಯಾಂಡಿ ಮಾರಿದರೆ ಈ ಶಿಕ್ಷೆ ಕಡ್ಡಾಯ :

ಮಾರಾಟ ಹಾಗೂ ತಯಾರಿಸುವ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು .10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!