Business Idea : ಬೇಸಿಗೆಯಲ್ಲಿ ಈ ಬಿಸಿನೆಸ್ ಸ್ಟಾರ್ಟ್ ಮಾಡಿ ತಿಂಗಳಿಗೆ 1 ಲಕ್ಷ ರೂ. ವರೆಗೆ ಸಂಪಾದಿಸಿ.

Bisleri water bottle dealership

ಇತ್ತೀಚಿನ ದಿನಗಳಲ್ಲಿ, ಕಚೇರಿ ಕೆಲಸಕ್ಕಿಂತ ಸ್ವಂತ ವ್ಯವಹಾರದತ್ತ ಜನರ ಒಲವು ಹೆಚ್ಚುತ್ತಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಸ್ವಂತ ಉದ್ಯಮ ಸ್ಥಾಪಿಸುವತ್ತ ಒಲವು ಹೆಚ್ಚಾಗಿದೆ. ಸ್ವಂತ ಉದ್ಯಮ (Own Business) ಸ್ಥಾಪಿಸುವುದು ಒಂದು ಸವಾಲಿನ ಕೆಲಸ. ಯಶಸ್ಸು ಸಾಧಿಸಲು ಸ್ವಲ್ಪ ಧೈರ್ಯ, ಶ್ರಮ, ಯೋಜನೆ, ಉತ್ಸಾಹ ಬೇಕಾಗುತ್ತದೆ. ಕಚೇರಿ ಕೆಲಸದ ಏಕತಾನತೆ ನಿಮಗೂ ಬೇಸರ ತಂದಿದೆಯೇ? ಸ್ವಂತ ಉದ್ಯಮದ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆಯೇ? ಹಾಗಾದ್ರೆ, ಈ ಲೇಖನ ನಿಮಗಾಗಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಳ್ಳಿಯಲ್ಲಾಗಲಿ, ನಗರದಲ್ಲಾಗಲಿ, ಛಲ ಇದ್ದರೆ ಯಾವುದೇ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು. ನಿಮ್ಮ ಕನಸಿನ ಉದ್ಯಮ ಸ್ಥಾಪಿಸಲು ಉತ್ತಮ ಅವಕಾಶ ಒದಗಿಸುವ ಒಂದು ಅದ್ಭುತ ಡೀಲರ್ಶಿಪ್ ಇಲ್ಲಿದೆ! ಈ ಅವಕಾಶವನ್ನು ಬಳಸಿಕೊಂಡು ಯಶಸ್ಸಿನ ಹಾದಿಯಲ್ಲಿ ನಡೆಯಲು ಸಿದ್ಧರಾಗಿ.

ಬಿಸಲರಿ ಜೊತೆಗೂಡಿ ಯಶಸ್ಸಿನ ಹಾದಿಯಲ್ಲಿ ನಡೆಯಿರಿ(Bisleri water bottle dealership)

ದೇಶದ ಪ್ರಖ್ಯಾತ ಖನಿಜಯುಕ್ತ ಜಲ ಉತ್ಪಾದಕ ಬಿಸಲರಿ ಜೊತೆಗೂಡಿ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಉತ್ತಮ ಅವಕಾಶ ಲಭ್ಯವಿದೆ. ಬಿಸಲರಿ ಫ್ರಾಂಚೈಸಿ (bisleri company franchise) aaaಪಡೆದು ಲಾಭದಾಯಕ ವ್ಯವಹಾರದ ಭಾಗವಾಗಿ.

ಬಿಸಲರಿ ಫ್ರಾಂಚೈಸಿ ಏಕೆ ಉತ್ತಮ ಆಯ್ಕೆ?

ಬಿಸಲರಿ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಖನಿಜಯುಕ್ತ ಜಲ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈ ಪ್ರಸಿದ್ಧ ಬ್ರಾಂಡ್ ಜೊತೆಗೂಡಿ ಯಶಸ್ಸಿನ ಹಾದಿಯಲ್ಲಿ ನಡೆಯುವ ಅವಕಾಶ ನಿಮ್ಮದಾಗುತ್ತದೆ.

ಖನಿಜಯುಕ್ತ ಜಲದ ಬೇಡಿಕೆ ಯಾವಾಗಲೂ ಏರುತ್ತಲೇ ಇದೆ. ಈ ಲಾಭದಾಯಕ ವ್ಯವಹಾರದ ಭಾಗವಾಗಿ ಉತ್ತಮ ಆದಾಯ ಗಳಿಸಬಹುದು.

ಯಾವುದೇ ಉದ್ಯೋಗದ ಒತ್ತಡವಿಲ್ಲದೆ ಸ್ವಂತ ಉದ್ಯಮದ ಸ್ವಾತಂತ್ರ್ಯವನ್ನು ಅನುಭವಿಸಬಹುದು.

ಬಿಸಲರಿ ಫ್ರಾಂಚೈಸಿ ಪಡೆದವರಿಗೆ ಉತ್ತಮ ತರಬೇತಿ, ಮಾರ್ಕೆಟಿಂಗ್ ಬೆಂಬಲ ಮತ್ತು ನಿರಂತರ ಮಾರ್ಗದರ್ಶನ ಲಭ್ಯವಿರುತ್ತದೆ.

ಬಿಸಿಲರಿ ಫ್ರಾಂಚೈಸಿ ಪಡೆಯುವುದು ಹೇಗೆ? (How to get Bisleri franchise):

ಬಿಸಿಲರಿ, ದೇಶದ ಅತಿದೊಡ್ಡ ನೀರಿನ ಬಾಟಲಿ ಕಂಪನಿ, 112 ಪ್ಲಾಂಟ್‌ಗಳ ಜಾಲವನ್ನು ಹೊಂದಿದೆ. 13 ಸ್ವಂತ ಪ್ಲಾಂಟ್‌ಗಳ ಜೊತೆಗೆ, ಉಳಿದವುಗಳನ್ನು ಡೀಲರ್‌ಗಳಿಗೆ ನೀಡಲಾಗಿದೆ. 4500 ಡಿಸ್ಟ್ರಿಬ್ಯೂಟರ್‌ (Distributor)ಗಳ ಬಲವಾದ ಜಾಲ ಮತ್ತು 5000 ಟ್ರಕ್‌ಗಳ ಮೂಲಕ, ಬಿಸಿಲರಿ ದೇಶದ ಪ್ರತಿ ಮೂಲೆಗೆ ತಲುಪುತ್ತದೆ. ನೀರು ಜೀವನಕ್ಕೆ ಅತ್ಯಗತ್ಯ, ಮತ್ತು ಬಿಸಿಲರಿ ಖ್ಯಾತಿಯು ಯಾವುದೇ ಕಾರಣಕ್ಕೂ ಬೇಡಿಕೆ ಕುಸಿಯುವುದಿಲ್ಲ ಎಂಬ ಭರವಸೆ ನೀಡುತ್ತದೆ. ಯಾವ ರೀತಿಯ ಡೀಲರ್‌ಶಿಪ್ ನಿಮಗೆ ಸೂಕ್ತ ಎಂಬುದರ ಮೇಲೆ ನಿಮ್ಮ ಲಾಭ ಅವಲಂಬಿತವಾಗಿರುತ್ತದೆ.

ಕೇವಲ ಆಫೀಸ್ ಸ್ಥಾಪನೆಗಾಗಿ 200-300 ಚದರ ಅಡಿ ಜಾಗ ಸಾಕು.

ನೀರಿನ ಸಂಗ್ರಹಣೆ ಮತ್ತು ಲೋಡಿಂಗ್ ಗಾಗಿ 1500-2000 ಚದರ ಅಡಿ ಜಾಗ ಬೇಕಾಗುತ್ತದೆ.

whatss

ಫ್ರಾಂಚೈಸಿ ಪಡೆಯಲು ಏನೇನು ಬೇಕು?(Required Documents):

ನಿಮ್ಮ ಕನಸಿನ ಫ್ರಾಂಚೈಸಿ ಉದ್ಯಮವನ್ನು ಪ್ರಾರಂಭಿಸಲು ಸಿದ್ಧರಿದ್ದೀರಾ? ಕೆಲವು ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಂಡರೆ ಸಾಕು.

ಆಧಾರ್ ಕಾರ್ಡ್(Aadhar Card)
ವಿಳಾಸದ ಪುರಾವೆ
ಎಲ್ಲಿ ಆರಂಭಿಸುತ್ತೀರಿ ಎನ್ನುವ ಸ್ಥಳದ ಪುರಾವೆ
ಪ್ಯಾನ್ ಕಾರ್ಡ್ ಸಂಖ್ಯೆ
ಎನ್ ಓ ಸಿ ಸರ್ಟಿಫಿಕೇಟ್(NOC Certificate)
ಬ್ಯಾಂಕ್ ಖಾತೆಯ ವಿವರ(Bank Account details)
GST ಸಂಖ್ಯೆ
ಕಚೇರಿಯ /ಗೋಡನ್ ಜಾಗಕ್ಕೆ ಇರುವ ಅಗ್ರಿಮೆಂಟ್ (ಸ್ವಂತ/ ಬಾಡಿಗೆ ತೆಗೆದುಕೊಳ್ಳುವುದಾದರೆ.

ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್: ಲಾಭದಾಯಕ ವ್ಯವಹಾರ ಅವಕಾಶ

ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್ ಪಡೆದುಕೊಳ್ಳುವುದು ಹೇಗೆ?

ನೀವು ಉತ್ತಮ ಮಾರ್ಕೆಟಿಂಗ್ ಕೌಶಲ್ಯ(Marketing Skills)ಮತ್ತು ಸಂವಹನ ಕೌಶಲ್ಯ(Communication skills) ಹೊಂದಿದ್ದರೆ, ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್ ಪಡೆಯುವುದು ಒಂದು ಲಾಭದಾಯಕ ವ್ಯವಹಾರ ಅವಕಾಶವಾಗಿದೆ. ಪ್ರಾರಂಭಿಸಲು, 2 ರಿಂದ 4 ಲಕ್ಷ ರೂಪಾಯಿಗಳ ಆರಂಭಿಕ ಬಂಡವಾಳ ಅಗತ್ಯವಿದೆ.

ಬಿಸಿಲರಿ ಡೀಲರ್ಶಿಪ್ ಏಕೆ ಲಾಭದಾಯಕವಾಗಿದೆ?

ಉತ್ತಮ ವ್ಯಾಪಾರ ಮನೋಭಾವ ಮತ್ತು ಚಾಕಚಕ್ಯತೆಯೊಂದಿಗೆ, ತಿಂಗಳಿಗೆ ₹80,000 ಕ್ಕಿಂತ ಹೆಚ್ಚಿನ ಆದಾಯ ಗಳಿಸಬಹುದು.

ಪ್ರತಿ ಬಾಟಲ್ ಮೇಲೆ 10% ಲಾಭಾಂಶ ಲಭ್ಯವಿದೆ.

ಬಿಸಿಲರಿ ಭಾರತದ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ವಾಟರ್ ಬ್ರಾಂಡ್‌ಗಳಲ್ಲಿ ಒಂದಾಗಿದೆ.

ಬಿಸಿಲರಿ ಡೀಲರ್ಶಿಪ್ ಪಡೆಯುವುದು ಹೇಗೆ?(How to get a Dealership?)

https://www.bisleri.com/distributor ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯವಿರುವ ಮಾಹಿತಿಯನ್ನು ಒಳಗೊಂಡ ಅರ್ಜಿ ಫಾರ್ಮ್ ಭರ್ತಿ ಮಾಡಿ. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿಯನ್ನು ಸಲ್ಲಿಸಿ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!