Labour Card: ಹೊಸ ಲೇಬರ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ | Labour Card Karnataka Application 2024

karmika card

ಕಾರ್ಮಿಕ ಇಲಾಖೆಯಿಂದ ನಿಮ್ಮ ಉನ್ನತೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬರಲಿವೆ. ಈ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕ ಕಾರ್ಡ್ (Labour Card Karnataka) ನೋಂದಣಿ ಕಡ್ಡಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers’ Welfare Board) ಮೂಲಕ ಕರ್ನಾಟಕ ಸರ್ಕಾರವು ಈ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಲಾಭ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು :

ಕಾರ್ಮಿಕ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ, ಅದು ದುಡಿಯುವ ವರ್ಗದ ಭದ್ರಕೋಟೆ. ಈ ಕಾರ್ಡ್ ಧಾರಕರಿಗೆ ಲಭ್ಯವಿರುವ ಸೌಲಭ್ಯಗಳ ಪಟ್ಟಿ :
ಅಪಘಾತ ಪರಿಹಾರ: ದುರದೃಷ್ಟಕರ ಘಟನೆಗಳಲ್ಲಿ ಭದ್ರತೆ.

ವೈದ್ಯಕೀಯ ಸಹಾಯಧನ: ಚಿಕಿತ್ಸೆಗೆ ಚಿಂತೆಯಿಲ್ಲ.

ತಾಯಿ ಮಗು ಸಹಾಯ ಹಸ್ತ: ಜನನದ ಸಮಯದಲ್ಲಿ ಆರ್ಥಿಕ ನೆರವು.

ಮದುವೆ ಸಹಾಯಧನ: ಹೊಸ ಜೀವನಕ್ಕೆ ಒಂದು ಕೈತುಂಬ ಭರವಸೆ.

ದುರ್ಬಲತೆ ಪಿಂಚಣಿ: ವೃದ್ಧಾಪ್ಯದಲ್ಲಿ ಜೀವನ ನಡೆಸಲು ಒಂದು ಆಸರೆ.

ಪಿಂಚಣಿ ಮುಂದುವರಿಕೆ: ಭವಿಷ್ಯದ ಭದ್ರತೆಗೆ ಖಾತರಿ.

ಶೈಕ್ಷಣಿಕ ಸಹಾಯಧನ: ಮಕ್ಕಳ ಶಿಕ್ಷಣಕ್ಕೆ ಉತ್ತೇಜನ.

ಹೆರಿಗೆ ಸೌಲಭ್ಯ: ಗರ್ಭಿಣಿ ಮಹಿಳೆಯರಿಗೆ ಆರೈಕೆ.

ಅಂತ್ಯಕ್ರಿಯೆ ವೆಚ್ಚ: ದುಃಖದ ಸಮಯದಲ್ಲಿ ಒಂದು ನೆರವು.

ಉಚಿತ ಸಾರಿಗೆ ಬಸ್ ಪಾಸ್: ಓಡಾಟಕ್ಕೆ ಯಾವುದೇ ಖರ್ಚಿಲ್ಲ.

ಶ್ರಮಸಮರ್ಥ್ಯ ಟೂಲ್ ಕಿಟ್: ಕೆಲಸಕ್ಕೆ ಉಪಯುಕ್ತ ಸಾಧನಗಳ ಉಡುಗೊರೆ

whatss

Labour Card Karnataka ಅರ್ಹತೆ :

ನೋಂದಣಿ ಮಾಡುವ ಪೂರ್ವದಲ್ಲಿ 1 ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

Labour Card Karnataka Application ಗಾಗಿ ಬೇಕಾಗಿರುವ ದಾಖಲೆಗಳು :

– 90 ದಿನಗಳ ಉದ್ಯೋಗ ದೃಡೀಕರಣ ಪತ್ರ
– ಅರ್ಜಿದಾರ ಮತ್ತು ಅವಲಂಬಿತರ ಆಧಾರ ಕಾರ್ಡ್ (Aadhar card)
– ಅರ್ಜಿದಾರರ ಬ್ಯಾಂಕ್ ಪಾಸುಬೂಕ್(Bank passbook )
– ಅರ್ಜಿದಾರರ ಆಧಾರ ಲಿಂಕ್ ಆಗಿರುವ ಮೊಬೈಲ್ ನಂಬರ್(Aadhar linked Mobile number)

ವಯೋಮಿತಿ :

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಲು ವಯೋಮಿತಿ 18 ರಿಂದ 60 ಮೀರಿರಬಾರದು.

ನೋಂದಣಿ ಮಾಡುವ ಕಚೇರಿಗಳು :

ಹಿರಿಯ ಕಾರ್ಮಿಕ ನಿರೀಕ್ಷಿಕರು(Senior Labor Inspector) / ಕಾರ್ಮಿಕ ನಿರೀಕ್ಷಿಕರ ಕಚೇರಿ (Labor Inspector)

ನೋಂದಣಿ ಅಭಿಯಾನ :

ಬೆಂಗಳೂರು ನಗರದಲ್ಲಿ 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್ 2024 ರವರೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನ ನಡೆಯಲಿದೆ.
ಇನ್ನುಳಿದ ಭಾಗದ ಜನರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು ಮತ್ತು ಹಿರಿಯ ಕಾರ್ಮಿಕ ನಿರೀಕ್ಷಿಕರನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 155214 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.

ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.

ಹಾಗೆಯೇ ಯಾವುದೇ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ( website links ) ಲಭ್ಯವಿದೆ ಅವುಗಳಲಿಗೆ ಭೇಟಿ ನೀಡಿ ಮಾಹಿತಿ ತಿಳಿದು ಕೊಳ್ಳಬಹುದು.

ಇಲಾಖೆಯ ವೆಬ್‌ಸೈಟ್‌ :
karbwwb.karnataka.gov.in

ವಿಶೇಷ ಸೂಚನೆ ( Important notice ) :

ಕಟ್ಟಡ ಕಾರ್ಮಿಕರಲ್ಲದವರು ನಕಲಿ
ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!