ಕೇಂದ್ರದ ಉಚಿತ ವಿದ್ಯುತ್ ಸ್ಕೀಮ್ ಗೆ ಈಗಲೇ ಅರ್ಜಿ ಸಲ್ಲಿಸಿ.! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ

free current 1 1

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)’ ಒಂದು ಕ್ರಾಂತಿಕಾರಿ ಯೋಜನೆ. ಇದು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್(300 units Free Electricity) ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಮತ್ತು ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮನೆ ಬಳಕೆಗೆ ಉಪಯೋಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ‘ ಒಂದು ಚಾಣಾಕ್ಷ ಯೋಜನೆ, ಇದು ಭಾರತದ ವಿದ್ಯುತ್ ಪೂರೈಕೆಯನ್ನು ಉತ್ತಮಗೊಳಿಸಲು ಮತ್ತು ಪರಿಸರ ಸ್ಥಿರತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಯೋಜನೆಯ ಯಶಸ್ಸು ಮತ್ತು ಭಾರತದ ಶಕ್ತಿ ಭದ್ರತೆಯನ್ನು ಬಲಪಡಿಸಲು ‘ ಆತ್ಮನಿರ್ಭರ್ ಭಾರತ (Atmanirbhar Bharat)’ದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಹೀಗಿರುವಾಗ, ಉಚಿತ ವಿದ್ಯುತ ಸೂರ್ಯೋದಯ ಯೋಜನೆ(Free Electricity Suryodaya yojana)ಯ ಫಲಾನುಭವಿಗಲಾಗಳು ಕೆಲವೊಂದು ಪ್ರಮುಖ ವಿಷಯಗಳು ತಮ್ಮ ಗಮನದಲ್ಲಿ ಇರಲೇಬೇಕು, ಮೊದಲನೆಯದಾಗಿ, ಸೋಲಾರ್ ಫಲಕಗಳನ್ನೂ ಸ್ಥಾಪಿಸಲು ಮನೆ ಮೇಲ್ಚಾವಣಿ ಜಾಗ ಎಷ್ಟಿರಬೇಕು? ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಹೇಗಿರುತ್ತದೆ? ಅಗತ್ಯ ದಾಖಲೆಗಳು ಯಾವವು? ಎಂಬುವುದರ ಪ್ರಮುಖ ಮಾಹಿತಿಯ ಕುರಿತು ಇವತ್ತಿನ ವರದಿಯಲ್ಲಿ ಚರ್ಚಿಸಲಾಗಿದೆ, ವರದಿಯನ್ನು ಸಂಪೂರ್ಣವಾಗಿ ಓದಿ ಮತ್ತು ತಿಳಿದುಕೊಳ್ಳಿ.

ಸೂರ್ಯೋದಯ ಯೋಜನೆ:

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿ, ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ 300 ಯುನಿಟ್ ಉಚಿತ ಮಾಸಿಕ ವಿದ್ಯುತ್ ಪಡೆಯಬಹುದು. ಈ ಯೋಜನೆಯು ಒಂದು ಕೋಟಿ ಮನೆಗಳಿಗೆ ಮೇಲ್ಚಾವಣಿ ಸೌರ ವಿದ್ಯುತ್ ವ್ಯವಸ್ಥೆ(Rooftop solar power system)ಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

2024-25 ರ ಮಧ್ಯಂತರ ಬಜೆಟ್ ನಲ್ಲಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ (HNRE) ಕ್ಷೇತ್ರಕ್ಕೆ ಭಾರಿ ಹೆಚ್ಚಳವನ್ನು ಘೋಷಿಸಲಾಗಿದೆ. ಈ ಯೋಜನೆಗೆ 26,376 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 17,726.46 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ.

2014 ರಲ್ಲಿ ಚಾಲನೆಗೊಂಡ ಈ ಯೋಜನೆಯು ಭಾರತದ ಶಕ್ತಿ ಭವಿಷ್ಯದಲ್ಲಿ ಸೂರ್ಯನ ಬೆಳಕನ್ನು ಪ್ರಮುಖ ಪಾತ್ರಧಾರಿಯನ್ನಾಗಿ ಮಾಡುವ ಗುರಿ ಹೊಂದಿದೆ. ಕೇಂದ್ರ ಸರ್ಕಾರವು ನೆರವು ಮತ್ತು ವಿತರಣಾ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿ ಮನೆಯ ಮೇಲ್ಚಾವಣಿಯನ್ನು ಸಣ್ಣ ಸೌರ ವಿದ್ಯುತ್ ಸ್ಥಾವರವಾಗಿ ಪರಿವರ್ತಿಸಲು ಯೋಜಿಸಿದೆ.

2026 ರ ಮಾರ್ಚ್ ವೇಳೆಗೆ, 40 ಗಿಗಾ ವ್ಯಾಟ್ ಸೌರ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಗುರಿ ಈ ಯೋಜನೆ ಹೊಂದಿದೆ. ಇದು ಭಾರತದ ಒಟ್ಟಾರೆ ವಿದ್ಯುತ್ ಸಾಮರ್ಥ್ಯಕ್ಕೆ ಗಣನೀಯ ಕೊಡುಗೆ ನೀಡುವುದಲ್ಲದೆ, ಪರಿಸರ ಸ್ನೇಹಿ ಶಕ್ತಿಯ ಮೂಲವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಸೌರ ಫಲಕ ನಿಮ್ಮ ಮನೆಗೆ ಸೂಕ್ತವೇ?

2024ರ ಉಚಿತ ಸೌರ ಮೇಲ್ಚಾವಣಿ ಯೋಜನೆಯಡಿ 1 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲು ಕನಿಷ್ಠ 10 ಚದರ ಮೀಟರ್ (10 square meters) ಖಾಲಿ ಜಾಗದ ಅಗತ್ಯವಿದೆ. 1ಕಿಲೋ ವ್ಯಾಟ್ ವರೆಗಿನ ಸೌರ ಫಲಕಗಳಿಗೆ ಯಾವುದೇ ವೆಚ್ಚವಿಲ್ಲದೆ ಸ್ಥಾಪಿಸಬಹುದು. 1 ರಿಂದ 3 ಕಿಲೋ ವ್ಯಾಟ್ ವರೆಗಿನ ಫಲಕಗಳಿಗೆ 40% ಸಬ್ಸಿಡಿ ಮತ್ತು 4 ರಿಂದ 10 ಕಿಲೋ ವ್ಯಾಟ್ ವರೆಗಿನ ಫಲಕಗಳಿಗೆ 20% ಸಬ್ಸಿಡಿ ಲಭ್ಯ. ಒಟ್ಟು 60% ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಬಹುದು.

ಗಮನಿಸಿ: ಕಾರ್ಖಾನೆಗಳಲ್ಲಿ ಸೌರ ವ್ಯವಸ್ಥೆಗಳನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್‌ಗಳನ್ನು ಶೇಕಡಾ 30 ರಿಂದ 50 ರಷ್ಟು ಕಡಿಮೆ ಮಾಡಬಹುದು. ಹೌದು, ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಮೂಲಕ, ಕಾರ್ಖಾನೆಗಳು ಗಣನೀಯ ಪ್ರಮಾಣದ ಹಣವನ್ನು ಉಳಿಸಬಹುದು.

whatss

ಇದರ ಪ್ರಯೋಜನಗಳು:

ವಿದ್ಯುತ್ ಬಿಲ್ ಕಡಿಮೆ(Lowers Electricity bill): ಮನೆಯ ವಿದ್ಯುತ್ ಬಳಕೆಗೆ ಸೌರಶಕ್ತಿಯನ್ನು ಬಳಸುವುದರಿಂದ ವಿದ್ಯುತ್ ಬಿಲ್‌ಗಳಲ್ಲಿ ಭಾರಿ ಉಳಿತಾಯ ಖಚಿತ.

ಹೆಚ್ಚುವರಿ ಆದಾಯ: ಉತ್ಪಾದಿಸಿದ ವಿದ್ಯುತ್ ಅನ್ನು ವಿದ್ಯುತ್ ಮಂಡಳಿಗಳಿಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದು.

ಪರಿಸರ ಸ್ನೇಹಿ(Eco-Friendly): ಸೌರಶಕ್ತಿಯ ಬಳಕೆಯಿಂದ ಪರಿಸರಕ್ಕೆ ಹಾನಿಕಾರಕವಾದ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಉದ್ಯೋಗ ಸೃಷ್ಟಿ(Creates Employment opportunities): ಈ ಯೋಜನೆಯಿಂದ ಉತ್ಪಾದನೆ, ಸ್ಥಾಪನೆ, ನಿರ್ವಹಣೆ, ಮಾರಾಟ ಮುಂತಾದ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ.

ಸೋಲಾರ್ ರೂಫ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು(Required Documents):

ವಿದ್ಯುತ್ ಬಿಲ್(Electricity bill)

ಆಧಾರ್ ಕಾರ್ಡ್(Aadhar card)

ಸ್ಯಾಲರಿ ಸ್ಲಿಪ್(Salary Slip)

ಪಾಸ್ ಬುಕ್ ಪ್ರತಿ( Bank Passbook copy)

ಪಾಸ್ ಪೋರ್ಟ್ ಅಳತೆಯ ಫೋಟೋ

ರೇಷನ್ ಕಾರ್ಡ್(Ration Card)

ಮೊಬೈಲ್ ಸಂಖ್ಯೆ(Mobile number)

ವಿಳಾಸದ ಪುರಾವೆ( Residential Address proof )

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು 40% ವರೆಗೆ ಸಬ್ಸಿಡಿ(subsidy) ಪಡೆಯುವ ಅವಕಾಶ ಲಭ್ಯವಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಪರಿಶೀಲಿಸಿ.

ಉಚಿತ ಕರೆಂಟ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :

https://pmsuryaghar.gov.in/ ಗೆ ಭೇಟಿ ನೀಡಿ.
“ಮೇಲ್ಚಾವಣಿ ಸೋಲಾರ್ ಗಾಗಿ ಅಪ್ಲೈ ಮಾಡಿ” ಎಂಬ ಆಯ್ಕೆ ಕ್ಲಿಕ್ ಮಾಡಿ

ಇದಕ್ಕೆ QR ಕೋಡ್ ಸ್ಕ್ಯಾನ್ ಮಾಡದರ ಮೂಲಕ SANDES ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

“ಸಾವಿರ ಫಲಕ ಅಳವಡಿಸಲು ಅಪ್ಲೈ ಮಾಡಿ” ಆಯ್ಕೆ ಕ್ಲಿಕ್ ಮಾಡಿ.

OTPಗಾಗಿ ವಿನಂತಿಸಿ ಮತ್ತು ಒಟಿಪಿ ನಮೂದಿಸಿ.
ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಮತ್ತು ನೋಂದಾಯಿತ ಗ್ರಾಹಕರ ಸಂಖ್ಯೆ/ಐಡಿ ನಮೂದಿಸಿ.

ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿಯನ್ನು ಸಲ್ಲಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!