Tech News – ಒಂದೇ ಮೊಬೈಲ್ ಎಷ್ಟು ವರ್ಷ ಬಳಸಬಹುದು ಗೊತ್ತಾ? ಮೊಬೈಲ್ ಜೀವಿತಾವದಿ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ

life span of smart phone

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಒಂದು ಸ್ಮಾರ್ಟ್ ಫೋನ್ ನ ಆಯಸ್ಸು(Life Span) ಎಷ್ಟಿರಬಹುದು ಹಾಗೂ ಎಷ್ಟು ವರ್ಷಗಳ ಕಾಲ ಒಂದು ಸ್ಮಾರ್ಟ್ ಫೋನ್ ಅನ್ನು ಬಳಸಬಹುದು ಎಂದು ತಿಳಿಸಿಕೊಡುತ್ತೇವೆ. ಇದರ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸ್ಮಾರ್ಟ್ ಫೋನ್ ಗಳ ಆಯಸ್ಸು :

ಸ್ಮಾರ್ಟ್​​​ಫೋನ್​ಗಳು (Smartphones) ಇತ್ತೀಚೆಗೆ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಕೈಯಲ್ಲಿ ಮೊಬೈಲ್ ಇಲ್ಲದೆ ಇರುವರ ಸಂಖ್ಯೆ ಬಹುತೇಕ ಕಡಿಮೆ ಎನ್ನಬಹುದು. ಇತ್ತೀಚೆಗಂತೂ ಮೊಬೈಲ್​ ಮಾರುಕಟ್ಟೆ(Mobile Market) ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಪ್ರತಿ ದಿನ ಮೊಬೈಲ್ ಕಂಪನಿಗಳು ಹೈ – ಟೆಕ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಮಾಡುತ್ತಲೇ ಇವೆ. ಜನರು ಕೂಡ ಅಗ್ಗದ ಸ್ಮಾರ್ಟ್ ಫೋನ್ ನಿಂದ ಹಿಡಿದು iphone, oneplus, samsung ನಂತಹ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಹೆಚ್ಚೆಚ್ಚಾಗಿ ಬಳಸುತ್ತಿದ್ದಾರೆ. ಹೀಗಿರುವಾಗ ನೀವು ಉಪಯೋಗಿಸುತ್ತಿರುವ ಸ್ಮಾರ್ಟ್ ಫೋನ್ ಎಷ್ಟು ವರ್ಷ/ದಿನ ಬಾಳಿಕೆ ಬರುತ್ತೆ ಎಂದು ಯೋಚಿಸಿದ್ದೀರಾ?..ಇವತ್ತಿನ ವರದಿಯಲ್ಲಿ ಈ ವಿಷಯದ ಕುರಿತು ತಿಳಿಸಿಕೊಡಲಾಗಿದೆ.

ಜನರ ಬೇಡಿಕೆಗಳ ಅನುಗುಣವಾಗಿ ಪ್ರತಿದಿನ ವಿವಿಧ ಟೆಕ್ನಾಲಜಿಯ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಕಂಪನಿಯು ಹೊಸ ಫೋನ್ ಬಿಡುಗಡೆ ಮಾಡುವುದರೊಂದಿಗೆ ಮೂರು ವರ್ಷಗಳ OS(operating system) ಅಪ್ ಗ್ರೇಡ್ ಮಾಡುವುದಾಗಿ ಬಳಕೆದಾರರಿಗೆ ಭರವಸೆ ನೀಡುತ್ತದೆ. ಇದರ ಹೊರತಾಗಿ ಕಾಂಪನಿಯು ಬಳಕೆದಾರರಿಗೆ ಐದು ವರ್ಷಗಳ ಸುರಕ್ಷತೆಯ ನವೀಕರಣ(Upadtes)ಗಳನ್ನು ಸಹ ನೀಡುತ್ತದೆ. ಯಾವಾಗ ನಿಮ್ಮ ಸ್ಮಾರ್ಟ್ ಫೋನ್ ಅಪ್ಡೇಟ್ಸ್ ಕೇಳುವುದನ್ನು ನಿಲ್ಲುಸತ್ತದೆಯೋ ಅಲ್ಲಿಗೆ ನೀವು ನಿಮ್ಮ ಫೋನ್ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥಮಾಡಿಕೊಳ್ಳಿ.

ನಿಮ್ಮ ಫೋನ್ ಅಪ್ಡೇಟ್ ಕೇಳುತ್ತಿಲ್ವಾ :

ನಿಮ್ಮ ಫೋನ್ ಏಕೆ ಅಪ್ಡೇಟ್ ಕೇಳುತ್ತದೆ ಎಂದು ಯೋಚಿಸಿದ್ದೀರಾ?. ಇದಕ್ಕೆ ಕಾರಣ ನಿಮ್ಮ ಸ್ಮಾರ್ಟ್ ಫೋನ್ ನ ರಕ್ಷಣೆ, ಅಂದರೆ ನಿಮ್ಮ ಫೋನ್ ಗೆ ಯಾವದೇ ರೀತಿಯ ಸಾಫ್ಟ್ವೇರ್ ವೈರಸ್(Virus) ಅಟ್ಯಾಕ್ ಆಗದಿರಲಿ ಮತ್ತು ನಿಮ್ಮ ಸ್ಮಾರ್ಟ್ ಫೋನ್ ನ ಸುರಕ್ಷತೆಗಾಗಿ ನವೀಕರಣಗಳು(Updates) ಖಂಡಿತವಾಗಿರುತ್ತದೆ.
ಈ ಅಪ್ಡೇಟ್ಸ್ ಗಳು ಆಯಾ ಕಂಪನಿಯ ಫೋನಿನ ಕಂಪನಿಗಳು ನೀಡುತ್ತವೆ. ಕಂಪನಿಯು ಅಪ್ಡೇಟ್ಸ್ ನೀಡುವುದನ್ನು ನಿಲ್ಲಿಸಿದರೆ, ನಿಮ್ಮ ಫೋನ್ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥಮಾಡಿಕೊಳ್ಳಿ. ಸಾಫ್ಟ್ವೇರ್ ಅಪ್ಡೇಟ್ಸ್ ಗಳು ನೀಡುವುದನ್ನು ನಿಲ್ಲಿಸಿದರೆ ಫೋನ್ ನ್ ಜೀವಿತಾವಧಿ ಅಲ್ಲಿಗೆ ಮುಗಿತು ಎಂದರ್ಥ.

ಯಾವದೇ ರೀತಿಯ ಸ್ಮಾರ್ಟ್ ಫೋನ್ ಆಗಲಿ ಕಡಿಮೇ ಬೆಲೆಯ ಅಥವಾ ಹೆಚ್ಚು ಬೆಲೆಯ ಫೋನ್ ಅಪ್ಡೇಟ್ಸ್ ಕೇಳುವುದು ಬಂದ್ ಆದರೆ ನಿಮ್ಮ ಸ್ಮಾರ್ಟ್ ಫೋನ್ ಶೀಘ್ರದಲ್ಲಿ ಬದಲಾವಣೆ ಮಾಡಿ, ಅದರ ಜೀವಿತಾವಧಿ ಅಲ್ಲಿಗೆ ಮುಗಿತು ಎಂದರ್ಥ. ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲ್ಪಡುವ ಸ್ಮಾರ್ಟ್ ಫೋನ್ ಗಳ ಕಂಪನಿಗಳು ಸುರಕ್ಷತೆ ನವೀಕರಣಗಳ ಮತ್ತು OS(operating system) ಅಪ್ ಗ್ರೇಡ್ ಗಳ ಭರವಸೆ ನೀಡುವುದಿಲ್ಲಾ. ಆದರೆ ದುಬಾರಿ ಸ್ಮಾರ್ಟ್ ಫೋನ್ ಗಳ ಕಂಪನಿಯು ‘ Flagship’ ವೈಶಿಷ್ಟಗಳೊಂದಿಗೆ ಸುರಕ್ಷತೆ ನವೀಕರಣಗಳ ಮತ್ತು OS(operating system) ಅಪ್ ಗ್ರೇಡ್ ಗಳಿಗೆ ಹೆಚ್ಚು ಸಮಯ ನೀಡುತ್ತವೆ. ಹೀಗಾಗಿ ಈ ಸ್ಮಾರ್ಟ್ ಫೋನ್ ಗಳು ಹೆಚ್ಚು ಕಾಲ ಬಳಕೆಯಾಗುತ್ತವೆ.

ಹಾಗೆಯೇ, ಇಂತಹ ಉತ್ತಮ ಟೆಕ್ನಿಕಲ್ ಟಿಪ್ಸ್ ತಿಳಿಸಿಕೊಡುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!