Bigg boss Kannada- ತಾರಾ ಮುಂದೆ ಕಣ್ಣೀರಿಟ್ಟ ಡ್ರೋನ್ ಪ್ರತಾಪ್..! ಇಲ್ಲಿದೆ ಕಂಪ್ಲೀಟ್ ಮಾಹಿತಿ | Drone prathap cries infront of tara

drone prathap crying in bigboss

ಬಿಗ್ ಬಾಸ್ ಸೀಸನ್ 10(BigBoss season 10) ಇದೀಗ ಹಲವಾರು ತಿರುವುಗಳನ್ನು ಕಂಡಿದ್ದು, ಸ್ಪರ್ಧಿಗಳು ಚೆನ್ನಾಗಿ ಆಟ ಆಡುತ್ತಿದ್ದಾರೆ. ಅದರ ಜೊತೆಗೆ ಬಿಗ್ ಬಾಸ್ ಮನೆಯೊಳಗೆ ವಿಜಯದಶಮಿ ಪ್ರಯುಕ್ತ ನಟಿ ತಾರಾ ಎಂಟ್ರಿ ಕೊಟ್ಟಿದ್ದರು. ತಾರಾ ರವರು ಮನೆಯ ಸ್ಪರ್ಧಿಗಳೊಂದಿಗೆ ಹಲವು ಮೋಜಿನ ಆಟ ಆಡಿಸಿದರು.ಎಲ್ಲರ ಜೊತೆ ಸಂತೋಷ ದಿಂದ ಇದ್ದರು. ಹಾಗೆಯೇ ಎಲ್ಲರ ಜೊತೆ ಮಾತನಾಡಿ ಪ್ರಡಿಯೊಬ್ಬರ ಸುಖ ದುಃಖ ವನ್ನು ಕೇಳಿದರು.
ಹೀಗೆ ಡ್ರೋನ್ ಪ್ರಾತಾಪ್(Drone Prathap) ರವರ ಜೊತೆ ಕುಳಿತು ಅವರ ಸುಖ ದುಃಖವನ್ನು ಕೇಳಿದರು. ಇದೆ ಸಂದರ್ಭ ದಲ್ಲಿ ಪ್ರತಾಪ್ ರವರು ತಮ್ಮ ದುಃಖ ವನ್ನು ತಾರಾ ರವರ ಬಳಿ ಹೇಳಿಕೊಂಡರು. ಇದನ್ನು ಕೇಳಿದ ವೀಕ್ಷಕರು ಕೂಡ ಮನನೊಂದಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಪ್ರತಾಪ್ ಅವರು ಅಪ್ಪ, ತಂಗಿ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರಂತೆ :

ನಟಿ ತಾರಾ ಡ್ರೋನ್ ಪ್ರತಾಪ್ ಪಕ್ಕದಲ್ಲಿ ಕುಳಿತು ತಾಯಿ ಮಮತೆ ವ್ಯಕ್ತಪಡಿಸುತ್ತ ‘ನಾನು ನಿನ್ನ ತಾಯಿ ಅಂದ್ಕೊಂಡು ಹೇಳು, ಸುಳ್ಳು ಹೇಳ್ಬೇಡ.. ನೀನು ಏನೋ ಹೇಳ್ಬೇಕು ಅಂತ ಇದ್ದೀಯ, ಅದನ್ನು ಹೇಳು ಅಂತ ಡ್ರೋನ್ ಪ್ರತಾಪ್ ಕೈ ಹಿಡಿದು ಮಮತಾಮಯಿಯಂತೆ ಕೇಳಿದ್ದಾರೆ. ಅದನ್ನು ಕಂಡು ಡ್ರೋನ್ ಪ್ರತಾಪ್ ತಾರಾ ಮಮತೆಗೆ ಕರಗಿ ನೀರಾಗಿ ಇಲ್ಲಿವರೆಗೂ ಸೀಕ್ರೆಟ್‌ ಆಗಿದ್ದ ಒಂದು ಸಂಗತಿ ಬಿಚ್ಚಿಟ್ಟಿದ್ದಾರೆ.

ನಾನು ಕೆಲವು ತಪ್ಪು ಮಾಡಿದಾಗ ಮನೆಯವರಿಗೆ ಹಲವರು ಕಾಲ್ ಮಾಡಿ ‘ನಿಮ್ ಮಗಂಗೆ ಊಟದಲ್ಲಿ ಏನಾದ್ರೂ ಹಾಕಿ ಸಾಯಿಸ್ಬಿಡಿ.. ಅಂಥ ಮಗ ಯಾಕೆ ? ಅವನು ಎಲ್ಲ ಕಡೆ ನಿಮ್ಮ ಮರ್ಯಾದೆ ತಗೆದಿದ್ದಾನೆ’ ಎಂದಿದ್ದಾರೆ. ಮುಂದುವರಿದ ಪ್ರತಾಪ್ ‘ನಾನು ನನ್ನ ಅಪ್ಪ, ತಂಗಿ ನಂಬರ್‌ ಅನ್ನು ಬ್ಲಾಕ್ ಮಾಡಿದ್ದೇನೆ, ಅಮ್ಮನ ನಂಬರ್ ಕೂಡ ಬ್ಲಾಕ್ ಮಾಡಿದ್ದೇನೆ. ನನಗೆ ಮುದುವೆ ವಯಸ್ಸಿಗೆ ಬಂದಿರುವ ತಂಗಿ ಇದ್ದಾಳೆ’ಎಂದಿದ್ದಾರೆ. ಆತನ ಮಾತಿಗೆ ತಾರಾ ಬೇಸರಗೊಂಡು ಮರುಪ್ರಶ್ನೆ ಕೇಳಿದ್ದಾರೆ.

‘ಯಾಕೆ ನಿನಗೆ ಊಟದಲ್ಲಿ ಏನೋ ಹಾಕಲು ಹೇಳಿದ್ದು?’ ಎಂದು ಕೇಳಿದ ತಾರಾಗೆ ಪ್ರತಾಪ್ ‘ನಾನು ದುಡ್ಡು ಮಾಡಿದೀನಿ, ಡ್ರೋನ್ ಬಗ್ಗೆ ಏನೇನೋ ಮಾತಾಡಿದೀನಿ..ಅಂತ’ ಎಂದಿದ್ದಾನೆ. ತಾರಾ ಮುಂದೆ ಮಾತನಾಡಿರುವ ಡ್ರೋನ್ ಪ್ರತಾಪ್ ಕೊನೆಯಲ್ಲಿ ಬೇಸರದಿಂದ ಕಣ್ಣೀರು ಇಟ್ಟಿದ್ದಾರೆ.

ಬಿಗ್ ಬಾಸ್ ಗೆ ಅಪ್ಪ ಅಮ್ಮ ಹಾಗೂ ತಂಗಿಯನ್ನು ಮೀಟ್ ಮಾಡಲು ಅವಕಾಶ ಮಾಡಿಕೊಡಿ ಎಂದು, ಅಳುತ್ತ ಬೇಡಿಕೊಂಡಿದ್ದಾರೆ. ಒಟ್ಟಿನಲ್ಲಿ ನಟಿ ತಾರಾ ಬಿಗ್ ಬಾಸ್ ಮನೆಯಲ್ಲಿ ಹಲವರನ್ನು ಮಾತನಾಡಿಸಿದ್ದಾರೆ. ಡ್ರೋನ್ ಪ್ರತಾಪ್ ಮಾತುಗಳನ್ನು ತಮ್ಮ ಆಫೀಸಿಯಲ್ ಇನ್‌ಸ್ಟಾಗ್ರಾಂನಲ್ಲಿ ತುಣುಕೊಂದನ್ನು ಬಿಟ್ಟಿದ್ದಾರೆ. ಹೀಗೆ ಪ್ರತಾಪ್ ರವರ ಹಿಂದಿನ ದುಃಖ ವನ್ನು ಕೇಳಿದ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!