iQoo Mobiles – ಐಕ್ಯೂದ ಮತ್ತೊಂದು ಮೊಬೈಲ್ ಭರ್ಜರಿ ಎಂಟ್ರಿ, ಬೆಲೆ ಎಷ್ಟು ಗೊತ್ತಾ..?

iQoo Neo 9 series

ಇಂದು ಸ್ಮಾರ್ಟ್ ಫೋನ್ ಗಳ ( Smart phone ) ಜಗತ್ತು ಬೇರೆನೆ ಇದೆ. ಹೌದು, ಪ್ರತಿದಿನ ಹೊಚ್ಚ ಹೊಸ ಸ್ಮಾರ್ಟ್ ಗಳು ಬಿಡುಗಡೆಯಾಗುತ್ತಲೇ ಇವೆ. ಅವುಗಳಲ್ಲೂ ಅತ್ಯಾಧುನಿಕ ಫೀಚರ್ಸ್ ಗಳುಳ್ಳ ಸ್ಮಾರ್ಯ್ ಫೋನ್ ಗಳ ನಡುವೆ ಪೈಪೋಟಿ ( Competition ) ನಡೆಯುತ್ತಲೇ ಇದೆ. ಪ್ರತಿಯೊಬ್ಬರ ಕೈಯಲ್ಲೂ ವಿವಿಧ ಫೀಚರ್ಸ್ ಗಳುಳ್ಳ ಮೊಬೈಲ್ ಫೋನ್ ಗಳನ್ನು ನಾವು ಕಾಣುತ್ತೇವೆ. ದಿನನಿತ್ಯದ ಯಾವುದೇ ಕೆಲಸವನ್ನು ನಾವು ಕ್ಷಣಮಾತ್ರದಲ್ಲಿ ಮೊಬೈಲ್ ಫೋನ್ ನಲ್ಲಿಯೇ ಮಾಡಿ ಮುಗಿಸುತ್ತೇವೆ. ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಸಂಸ್ಥೆ ವಿವೋ ( Vivo ) ತನ್ನ ಸಬ್ ಬ್ರ್ಯಾಂಡ್ ಐಕ್ಯೂ ( Sub Brand iQoo ) ಅಡಿಯಲ್ಲಿ ಎರಡು ನೂತನ ಫೋನುಗಳನ್ನು ಪರಿಚಯಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಐಕ್ಯೂ ನಿಯೋ 9 ಮತ್ತು ( iQoo Neo 9 ) ಐಕ್ಯೂ ನಿಯೋ 9 ಪ್ರೊ ( iQoo Neo 9 Pro )

ಹೌದು, ಇದೀಗ ಚೀನಾ ಮಾರುಕಟ್ಟೆಯಲ್ಲಿ ಐಕ್ಯೂ ನಿಯೋ 9 ಮೊಬೈಲ್ ಫೋನ್ ನ ಮಾಡೆಲ್ ಅನ್ನು (iQoo Neo 9 series) ಬಿಡುಗಡೆ ಮಾಡಲಾಗಿದೆ. ಈ ಒಂದು ಮಾಡೆಲ್ ಐಕ್ಯೂ ನಿಯೋ 9 ಮತ್ತು ( iQoo Neo 9 ) ಐಕ್ಯೂ ನಿಯೋ 9 ಪ್ರೊ ( iQoo Neo 9 Pro ) ಎಂಬ ಎರಡು ಮಾದರಿಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

iQoo Neo 9 Pro

ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್ ಫೋನ್ ನ ಬೆಲೆಯ ( price ) ವಿವರ :

ಈ ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ನ ಸ್ಮಾರ್ಟ್ ಫೋನ್ ಅನ್ನು ಸ್ಟೋರೇಜ್ ಗೆ ತಕ್ಕಂತೆ ಬೆಲೆಯನ್ನು ನಿಗದಿಪಡಿಸಿದ್ದಾರೆ.

ಐಕ್ಯೂ ನಿಯೋ 9 ಸ್ಮಾರ್ಟ್ ನ ಬೆಲೆ :

ಐಕ್ಯೂ ನಿಯೋ 12GB + 256GB ಆಯ್ಕೆಗೆ ರೂ. 26,900 ನಿಂದ ಪ್ರಾರಂಭವಾಗುತ್ತದೆ.
16GB + 256GB ಮಾಡೆಲ್ ಗೆ ರೂ. 29,300 ನಿಗದಿಪಡಿಸಿದ್ದಾರೆ.
ಹಾಗೆಯೇ 16GB + 512GB ಸ್ಮಾರ್ಟ್ ಫೋನ್ ಗೆ 32,800 ರೂ. ನಿಗದಿಪಡಿಸಿದ್ದಾರೆ.

ಐಕ್ಯೂ ನಿಯೋ 9 ಪ್ರೊ ನ ಬೆಲೆ :

12GB + 256GB ರೂಪಾಂತರಕ್ಕೆ ರೂ. 35,100
16GB + 256GB ರೂಪಾಂತರಕ್ಕೆ 38,600 ರೂ.
16GB + 512GB ರೂಪಾಂತರಕ್ಕೆ 42,100 ರೂ.
16GB + 1TB ಆಯ್ಕೆಗೆ 46,800 ರೂ ನಿಗದಿ ಪಡಿಸಿದ್ದಾರೆ.

whatss

ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಫೀಚರ್ಸ್ :
ಡಿಸ್ಪ್ಲೇ ( Display ) :

iQoo Neo 9 Pro 1 1

ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಎರಡು ಸ್ಮಾರ್ಟ್ ಫೋನ್ ಗಳು,
2,800 x 1,260 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ AMOLED ಡಿಸ್ ಪ್ಲೇ ಹೊಂದಿದೆ.
ಹಾಗೆಯೇ 144Hz ವರೆಗೆ ರಿಫ್ರೆಶ್ ದರ ಮತ್ತು HDR10+ ಬೆಂಬಲ ಪಡೆದುಕೊಂಡಿದೆ.

ಪ್ರೊಸೆಸರ್ ( Processor ) :

ಐಕ್ಯೂ ನಿಯೋ 9 ಸ್ಮಾರ್ಟ್ ಫೋನ್ Adreno 740 GPU ಸ್ನಾಪ್ ಡ್ರಾಗನ್ 8 Gen 2 SoC ಮೂಲಕ ಕಾರ್ಯನಿರ್ವಹಿಸಿದರೆ.
ಐಕ್ಯೂ ನಿಯೋ 9 ಪ್ರೊ Immortalis-G720 GPU ಮೀಡಿಯಾಟೆಕ್ ಡೈಮೆನ್ಸಿಟಿ 9300 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಆಂಡ್ರಾಯ್ಡ್ 14-ಆಧಾರಿತ OriginOS ನೊಂದಿಗೆ ರನ್ ಆಗುತ್ತದೆ.

ಸ್ಟೋರೇಜ್ ( storage ) :

ಈ ಫೋನ್‌ಗಳು 16GB ವರೆಗೆ LPDDR5X RAM ಮತ್ತು 1TB ವರೆಗೆ UFS 4.0 ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿವೆ.

tel share transformed

ಕ್ಯಾಮೆರಾ ( camera ) :

ಐಕ್ಯೂ ನಿಯೋ 9 ಮತ್ತು ಪ್ರೊ ಮಾಡೆಲ್ ನ ಸ್ಮಾರ್ಟ್ ಫೋನ್ ನಲ್ಲಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿವೆ. ಹಾಗೆಯೇ ಹಿಂಭಾಗದಲ್ಲಿ, ಐಕ್ಯೂ ನಿಯೋ 9 ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ Sony IMX920 ಪ್ರಾಥಮಿಕ ಸಂವೇದಕ ಮತ್ತು ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.
ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್ ಫೋನ್ ಐಕ್ಯೂ ನಿಯೋ 9 ಸ್ಮಾರ್ಟ್ ಫೋನ್ ಮಾಡೆಲ್ ನ ಕ್ಯಾಮೆರಾ ಸೆಟ್ ಅಪ್ ಹೊಂದಿದೆ. ಆದರೆ ಇದರಲ್ಲಿ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ನೀಡಲಾಗಿದೆ.

ಈ ಸ್ಮಾರ್ಟ್ ಫೋನ್ ಸರಣಿಯ ಇನ್ನಿತರ ಮುಖ್ಯ ಫೀಚರ್ಸ್ ಗಳು ( Other Features ) :

ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,160mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
5G, 4G VoLTE, Wi-Fi 7, ಬ್ಲೂಟೂತ್ 5.3, OTG, GPS ಸಂಪರ್ಕದೊಂದಿಗೆ ಡ್ಯುಯಲ್ ಸಿಮ್ ಆಯ್ಕೆ ಇದರಲ್ಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!