ಪಿಯುಸಿ ಆದವರಿಗೆ ಒಂದು ವರ್ಷದ ಕೌಶಲ್ಯ ತರಬೇತಿ! ಈಗಲೇ ಅಪ್ಲೈ ಮಾಡಿ

free skill training

ದ್ವಿತೀಯ ಪಿಯುಸಿ (PUC) ಪಾಸಾದ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್. 1 ವರ್ಷದ ಉಚಿತ ಕೌಶಲ್ಯ ತರಬೇತಿಗೆ (free skill training) ಅರ್ಜಿ ಆಹ್ವಾನಿಸಲಾಗಿದೆ!

ದ್ವಿತೀಯ ಪಿಯುಸಿ(2nd PUC) ಪಾಸಾದ ವಿದ್ಯಾರ್ಥಿಗಳು ಪಿಯುಸಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿ ಇರುತ್ತಾರೆ. ಅವರಲ್ಲಿ ಉತ್ತಮ ಕೌಶಲ್ಯವಿದ್ದರೂ ಸರಿಯಾದ ಉದ್ಯೋಗ ಸಿಗದೇ ಹಾಗೂ ಕಲಿಯಲು ಅವಕಾಶವಿಲ್ಲದೆ ಪಿಯುಸಿ ಮುಗಿಸಿ (after PUC ) ಮುಂದೇನು ಮಾಡಬೇಕೆಂಬ ಬಹುದೊಡ್ಡ ಯೋಚನೆಯಲ್ಲಿ ಮುಳುಗಿರುತ್ತಾರೆ. ಆದರೆ ಇದೀಗ ಪಿಯುಸಿ ಮುಗಿಸಿದಂತ ವಿದ್ಯಾರ್ಥಿಗಳು ಚಿಂತಿಸಬೇಕಿಲ್ಲ ಅವರಿಗಾಗಿ ಒಂದು ವರ್ಷದ ಉಚಿತ ಕೌಶಲ್ಯ ತರಬೇತಿಗಾಗಿ (1 year free skill training) ಅರ್ಜಿ ಆಹ್ವಾನಿಸಲಾಗಿದೆ. ಈ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ಕೌಶಲ್ಯ ತರಬೇತಿ:

ಈ ಉಚಿತ ಕೌಶಲ್ಯ ತರಬೇತಿಗಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, (Ministry of Labor and Employment) ಉದ್ಯೋಗ ಮಹಾನಿರ್ದೇಶನಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC and ST)ದ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ ವತಿಯಿಂದ ಈ ತರಬೇತಿಗಾಗಿ ಕಲಿಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳು (application) ಆಹ್ವಾನಿಸಲಾಗಿದೆ. ಹಾಗೆಯೇ ಅಭ್ಯರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಈ ಒಂದು ತರಬೇತಿ ಸಹಾಯ ಮಾಡುತ್ತದೆ.

ಎಲ್ಲಿ ಮತ್ತು ಯಾರಿಗೆ ಈ ಒಂದು ತರಬೇತಿ :

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ತರಬೇತಿಯನ್ನು ಬೆಂಗಳೂರಿನಲ್ಲಿ ನೀಡಲಾಗುತ್ತಿದ್ದು, ಒಂದು ವರ್ಷದ ಅವಧಿಯ ಕೌಶಲ್ಯ ತರಬೇತಿ ಇದಾಗಿದೆ. ಸಂಪೂರ್ಣವಾಗಿ ಉಚಿತವಾಗಿ ಒಂದು ವರ್ಷದಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ. ನಿರುದ್ಯೋಗ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ  ಯುವಕ ಯುವತಿರಿಗೆ (men and women) ಬೆಂಗಳೂರಿನಲ್ಲಿರುವ ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳ ಮೂಲಕ ಗುಂಪು ‘ಸಿ’ ಹುದ್ದೆಗಳ ನೇಮಕಾತಿ(Recruitment)ಗೆ ಸಂಬಂಧಿಸಿದ ಒಂದು ವರ್ಷದ ಅವಧಿಯ ವಿಶೇಷ ಕೌಶಲ್ಯ ತರಬೇತಿಯನ್ನು ನೀಡುತ್ತಿರುವುದು ಯುವಕ ಯುವತಿಯರಿಗೆ ಸಂತಸವನ್ನು ತಂದಿದೆ.

ಯಾವ ಯಾವ ರೀತಿಯ ತರಬೇತಿಗಳು ಲಭ್ಯ  :

ಒಂದು ವರ್ಷದ ಅವಧಿಯ ಕೌಶಲ್ಯ ತರಬೇತಿಯಲ್ಲಿ ವಿಶೇಷ ತರಬೇತಿ ಯೋಜನೆ, ಓ ಲೇವಲ್ ಕಂಪ್ಯೂಟರ್ ತರಬೇತಿ, ಓಲೇವಲ್ ಕಂಪ್ಯೂಟರ್ ಸಿಎಚ್ಎಮ್, ಆಫೀಸ್ ಅಟೋಮೋಷನ್, ಅಕೌಂಟಿಂಗ್ ಮತ್ತು ಪಬ್ಲಿಷಿಂಗ್ ಅಸಿಸ್ಟಂಟ್, ಕಂಪ್ಯೂಟರ್ ಅಪ್ಲಿಕೇಷನ್ ಮತ್ತು ಬ್ಯೂಸಿನೆಸ್ ಅಕೌಂಟಿಂಗ್ ಅಸೋಸೀಯಟ್ ಮತ್ತು ಸೈಬರ್ ಸೆಕ್ಯೂರ್ಡ್ ವೆಬ್ ಡವಲಪಮೆಂಟ್ ಅಸೋಸೀಯೇಟ್ ಸೇರಿ ಒಟ್ಟು 6 ರಿಂದ 7 ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ  :

ಅರ್ಜಿದಾರನ ವಿದ್ಯಾರ್ಹತೆ ಪಿಯುಸಿ ಮುಗಿದಿರಬೇಕು.
ಅಭ್ಯರ್ಥಿಗಳಿಗೆ ಹಾಜರಾತಿ ನಿಯಮಗಳಿಗೊಳಪಟ್ಟು ತರಬೇತಿ ಭತ್ಯೆಯನ್ನು ತರಬೇತಿ ಅವಧಿಯಲ್ಲಿ ನೀಡಲಾಗತ್ತದೆ.
ಅಗತ್ಯ ದಾಖಲೆಗಳ ಜೊತೆಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 10/06/2024ರ ಸಂಜೆ 5 ಗಂಟೆ.
ಅರ್ಜಿಗಳನ್ನು ಪೋಸ್ಟ್ (post) ಮುಖಾಂತರ ಅಥವಾ ಖುದ್ದಾಗಿ ಅವರೇ ಕಚೇರಿಗೆ ಹೋಗಿ ಅರ್ಜಿಗಳನ್ನು ಸಲ್ಲಿಸಬಹುದು.

ಗಮನಿಸಿ (notice) :

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅರ್ಜಿ ಪಡೆಯಲು ಕಛೇರಿಯ ಮುಖ್ಯಸ್ಥರಾದ ಉಪ-ಪ್ರಾದೇಶಿಕ ಉದ್ಯೋಗಾಧಿಕಾರಿಗಳನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಿ ಅರ್ಜಿ ಹಾಗೂ ಸೇವಾ ಷರತ್ತುಗಳನ್ನು ಪಡೆಯಬಹುದು.

ಈ ಮಾಹಿತಿಗಳನ್ನು ಓದಿ

 


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!