ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್, ಕಮ್ಮಿ ಸಮಯದಲ್ಲೇ ಹಣ ಡಬಲ್ ಆಗುತ್ತೆ..! ತುಂಬಾ ಜನರಿಗೆ ಗೊತ್ತಿಲ್ಲ

post office 2

ಇಂದು ಹಲವಾರು ಜನರು ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಅದರಲ್ಲೂ ಹೂಡಿಕೆ (Fixed deposit) ಎಂಬ ವಿಚಾರ ಬಂದರೆ ಹಲವು ಬ್ಯಾಂಕ್ ಗಳಲ್ಲಿ ( Banks ) ಅಷ್ಟೇ ಅಲ್ಲದೆ ಇನ್ನು  ಹಲವು ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಪೋಸ್ಟ್ ಆಫೀಸ್ ಯೋಜನೆ – Post Office Schemes 

ಇಂದು ಬ್ಯಾಂಕ್‌ಗಳಂತೆ, ಅಂಚೆ ಕಚೇರಿಗಳಲ್ಲಿಯೂ ( Post Office ) ಹಲವು ರೀತಿಯ ಯೋಜನೆಗಳನ್ನು ತೆರೆಯಲಾಗಿದೆ. ಅದರಲ್ಲಿ ಫಿಕ್ಸೆಡ್ ಡೆಪಾಸಿಟ್ (FD) ಕೂಡ ಒಂದಾಗಿದೆ. ಇದನ್ನು ಪೋಸ್ಟ್ ಆಫೀಸ್ ಅವಧಿ ಠೇವಣಿ ( Post Office Term Deposit ) ಎಂದು ಕರೆಯುತ್ತಾರೆ. ನೀವೇನಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಪೋಸ್ಟ್ ಆಫೀಸ್ ನಲ್ಲಿ ನೀಡಲಾದ ಈ ಯೋಜನೆಯ ಬಡ್ಡಿದರ :

ಇದೀಗ ಪೋಸ್ಟ್ ಆಫೀಸ್ ನ ಅವಧಿ ಠೇವಣಿ ಯೋಜನೆಯಡಿ 1, 2, 3 ಮತ್ತು 5 ವರ್ಷಗಳ ಅವಧಿಗೆ ಸುಲಭವಾಗಿ ಠೇವಣಿ ಮಾಡಬಹುದು. ಹಾಗೆಯೇ ಅವಧಿಗೆ ತಕ್ಕಂತೆ ಬಡ್ಡಿದರ ( Intrest Rate ) ಕೂಡ ಬದಲಾಗುತ್ತದೆ. ಈ ಯೋಜನೆಯ ಅವಧಿಯಲ್ಲಿ ನೀಡಲಾಗುವ ಠೇವಣಿಯ ಬಡ್ಡಿಯು ಶೇ.7.5 ರಷ್ಟು ಇರುತ್ತದೆ.
5 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇ.7.5ರ ಬಡ್ಡಿ ಲಭ್ಯವಿದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಅವಧಿಗೂ ಮನ್ನವೇ ನೀವೇನಾದರೂ ಖಾತೆ ಮುಚ್ಚಿದರೆ ನಿಗದಿತ ಬಡ್ಡಿಗಿಂತಲೂ ಕಡಿಮ ಆದಾಯ ಸಿಗುತ್ತದೆ.

ಈ ಯೋಜನೆಯಲ್ಲಿ ಬಡ್ಡಿ ದರವು ವರ್ಷಕ್ಕೆ ದ್ವಿಗುಣ ಗೊಳ್ಳುತ್ತದೆ :

ನೀವು ಈ ಯೋಜನೆಯ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಮತ್ತು ಶೇಕಡಾ 7.5 ರಷ್ಟು ಬಡ್ಡಿಯನ್ನು ಗಳಿಸಿದರೆ, ಅವರ ಹಣ ದ್ವಿಗುಣಗೊಳ್ಳಲು ಸುಮಾರು 9 ವರ್ಷ ಮತ್ತು 6 ತಿಂಗಳು ತೆಗೆದುಕೊಳ್ಳುತ್ತದೆ. ಅಥವಾ 114 ತಿಂಗಳುಗಳು ಕೂಡ ಆಗಬಹುದು.

whatss

ಈ ಯೋಜನೆಯಲ್ಲಿ ಇರುವ ಬಡ್ಡಿದರ, ಮೊತ್ತ, ಅವಧಿಯ ವಿವರ :-

ಠೇವಣಿ: 5 ಲಕ್ಷಗಳು
ಬಡ್ಡಿ: ಶೇಕಡಾ 7.5
ಮೆಚುರಿಟಿ ಅವಧಿ: 5 ವರ್ಷಗಳು
ಮೆಚ್ಯೂರಿಟಿ ಮೊತ್ತ: ರೂ. 7,24,974
ಬಡ್ಡಿ ಲಾಭ: ರೂ.2,24,974 ನೀಡಲಾಗುತ್ತದೆ.

ಪೋಸ್ಟ್ ಆಫೀಸ್ ನಲ್ಲಿ ನೀಡಲಾದ ಈ ಯೋಜನೆಯ ಉಪಯೋಗ :

ಈ ಯೋಜನೆಯ ಟೈಮ್ ಡೆಪಾಸಿಟ್ ಸ್ಕೀಮ್ ( Time Deposite Scheme ) ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಒದಗಿಸುತ್ತದೆ. ಖಾತೆ ತೆರೆಯುವಾಗ ನಾಮಿನಿಯನ್ನು ಮಾಡುವ ಸೌಲಭ್ಯವೂ ಈ ಯೋಜನೆಯಲ್ಲಿ ನೀಡಲಾಗಿದೆ.
ಹಾಗೆಯೇ ಅವಧಿಪೂರ್ವದಲ್ಲೇ ಠೇವಣಿಯನ್ನು ಹಿಂಪಡೆದರೆ ಅದಕ್ಕೆ ತಕ್ಕಂತೆ ದಂಡವನ್ನು ವಿಧಿಸುತ್ತಾರೆ.

ಇನ್ನೊಂದು ಮುಖ್ಯ ವಿಚಾರ ಎಂದರೆ ಮೆಚ್ಯೂರಿಟಿಗೂ ಮೊದಲೆ ಖಾತೆ ಮುಚ್ಚಿದರೆ ಹೂಡಿಕೆದಾರರಿಗೆ ನಷ್ಟ ವಾಗುತ್ತದೆ. ಯಾಕೆಂದರೆ ಇದು ಧೀರ್ಘ ಕಾಲದ ಅವಧಿ ಆಗಿದೆ. ಪೋಸ್ಟ್ ಆಫೀಸ್ ಅವಧಿ ಠೇವಣಿ ಖಾತೆಯಲ್ಲಿ ಠೇವಣಿ ಮಾಡಿದ ದಿನಾಂಕದಿಂದ ಆರು ತಿಂಗಳ ಅವಧಿಗೆ ಮುಂಚಿತವಾಗಿ ಹಣ ಹಿಂಪಡೆಯಲು ಸಾಧ್ಯವಿಲ್ಲ. ನೀವು 6 ತಿಂಗಳ ನಂತರ ಆದರೆ 1 ವರ್ಷಕ್ಕಿಂತಲೂ ಮೊದಲೇ ಖಾತೆಯನ್ನು ಮುಚ್ಚಿದರೆ ಪೂರ್ಣ ಪ್ರಮಾಣದಲ್ಲಿ ಬಡ್ಡಿ ಸಿಗುವುದಿಲ್ಲ.
ಅವಧಿಗೆ ಮುನ್ನ ಹಣ ಹಿಂಪಡೆದರೆ ಕೇವಲ ಉಳಿತಾಯ ಖಾತೆಗೆ ಸಿಗವ ಬಡ್ಡಿ ದರವಷ್ಟೇ ಸಿಗುತ್ತದೆ. ಸದ್ಯಕ್ಕೆ ಈಗ ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಶೇ.4ರ ದರದಲ್ಲಿ ಬಡ್ಡಿ ಲಭ್ಯವಿದೆ.

ಪೋಸ್ಟ್ ಆಫೀಸ್ ಟರ್ಮ್‌ ಡೆಪಾಸಿಟ್‌ (Term Deposite ) ನ ಬಡ್ಡಿ ದರಗಳು ಹೀಗಿವೆ :

ಒಂದು ವರ್ಷ ಅವಧಿ ಠೇವಣಿ: ವಾರ್ಷಿಕ ಬಡ್ಡಿ 6.9%
ಎರಡು ವರ್ಷ ಅವಧಿ ಠೇವಣಿ: ವಾರ್ಷಿಕ ಬಡ್ಡಿ 7.0%
ಮೂರು ವರ್ಷ ಅವಧಿ ಠೇವಣಿ: ವಾರ್ಷಿಕ ಬಡ್ಡಿ 7.0%
ಐದು ವರ್ಷ ಅವಧಿ ಠೇವಣಿ: ವಾರ್ಷಿಕ 7.5%

ಪೋಸ್ಟ್ ಆಫೀಸ್ ಅವಧಿ ಠೇವಣಿಗೆ ಸಂಬಂಧಿಸಿದ ವಿಶೇಷ ವಿಷಯಗಳು ಈ ಕೆಳಗಿನಂತಿವೆ :

ನೀವು ಪೋಸ್ಟ್ ಆಫೀಸ್ ಅವಧಿ ಠೇವಣಿಯಲ್ಲಿ ಕನಿಷ್ಠ 1000 ರೂಗಳನ್ನು ಠೇವಣಿ ಮಾಡಬಹುದು ಮತ್ತು ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ.
ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಬೇಕಾದಷ್ಟು ಖಾತೆ ತೆರೆಯಬಹುದು, ಖಾತೆಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ.
ಖಾತೆಯನ್ನು ತೆರೆಯುವ ಸಮಯದಲ್ಲಿ ಯಾವ ಬಡ್ಡಿ ದರ ಇರುತ್ತದೆಯೋ, ಅದೇ ಬಡ್ಡಿ ದರವು ಖಾತೆಯ ಅವಧಿಯು ಪೂರ್ಣಗೊಳ್ಳುವವರೆಗೆ ಅನ್ವಯಿಸುತ್ತದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್‌ನಲ್ಲಿನ ನಿಮ್ಮ ಹೂಡಿಕೆಯ ಮೇಲಿನ ಬಡ್ಡಿಯನ್ನು ತ್ರೈಮಾಸಿಕ ಸಂಯೋಜನೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಈ ಬಡ್ಡಿಯನ್ನು ತ್ರೈಮಾಸಿಕದ ( 3 years ) ಆಧಾರದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ವರ್ಷದ ಕೊನೆಯಲ್ಲಿ ನಿಮ್ಮ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ.
ನೀವು ಖಾತೆ ತೆರೆದ ದಿನಾಂಕದಿಂದ ನಿಖರವಾಗಿ ಒಂದು ವರ್ಷ ಪೂರ್ಣಗೊಂಡ ನಂತರ ನಿಮ್ಮ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ.
18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ TD ಖಾತೆಯನ್ನು ತೆರೆಯಬಹುದು. ಮಕ್ಕಳ ಹೆಸರಲ್ಲಿ ಅವರ ಪೋಷಕರು ಖಾತೆ ತೆರೆಯಬಹುದು.
10 ವರ್ಷ ಪೂರೈಸಿದ ಮಗು ತನ್ನ ಸಹಿಯೊಂದಿಗೆ ತನ್ನ ಖಾತೆಯನ್ನು ನಿರ್ವಹಿಸಬಹುದು. ಈ ಖಾತೆಯನ್ನು ತನ್ನ ಹೆಸರಿನಲ್ಲಿಯೂ ತೆರೆಯಬಹುದು.
ನೀವು 5 ವರ್ಷಗಳ ಅವಧಿ ಠೇವಣಿ ಖಾತೆಯನ್ನು ತೆರೆದರೆ, ಅದರಲ್ಲಿ ಠೇವಣಿ ಮಾಡಿದ ಹಣದ ಮೇಲೆ ನೀವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು.

tel share transformed

ಇಂಡಿಯಾ ಪೋಸ್ಟ್ ಹೂಡಿಕೆದಾರರಿಗೆ ನೀಡಿದ ಠೇವಣಿ ಯೋಜನೆಗಳ ವಿವರ :

ಈಗಾಗಲೇ ಸರ್ಕಾರವು 9 ಸಣ್ಣ ಅಂಚೆ ಕಚೇರಿ ಉಳಿತಾಯ ಯೋಜನೆಗಳನ್ನು ನೀಡುತ್ತಿದೆ. ಹಾಗೆಯೇ ಇವುಗಳನ್ನು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ :

ಸಾರ್ವಜನಿಕ ಭವಿಷ್ಯ ನಿಧಿ (PPF)
ಸುಕನ್ಯಾ ಸಮೃದ್ಧಿ ಯೋಜನೆ (SSY)
ರಾಷ್ಟ್ರೀಯ ಉಳಿತಾಯ ಬಾಂಡ್ (NSC)
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಸೇರಿದಂತೆ ಇನ್ನು 5 ಯೋಜನೆಗಳಿವೆ. ಹಾಗೆಯೇ ಸರ್ಕಾರವು ಈ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಬದಲಾಯಿಸುತ್ತಲೇ ಇರುತ್ತದೆ. ಇದು ಹೂಡಿಕೆದಾರರಿಗೆ ಖುಷಿಯ ವಿಚಾರ ನೀಡಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

2 thoughts on “ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್, ಕಮ್ಮಿ ಸಮಯದಲ್ಲೇ ಹಣ ಡಬಲ್ ಆಗುತ್ತೆ..! ತುಂಬಾ ಜನರಿಗೆ ಗೊತ್ತಿಲ್ಲ

Leave a Reply

Your email address will not be published. Required fields are marked *

error: Content is protected !!