Home Loan – ಕಮ್ಮಿ ಬಡ್ಡಿ ದರದಲ್ಲಿ ಹೋಮ್ ಲೋನ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ.!

home loans

WhatsApp Group Telegram Group

ಪ್ರತಿಯೊಬ್ಬರಿಗೂ ಸ್ವಂತ ಮನೆ ಬೇಕು ಎಂಬ ಆಸೆ ಇರುತ್ತದೆ. ಕೆಲವರು ಮನೆ ನಿರ್ಮಿಸಲು ಗೃಹ ಸಾಲವನ್ನು ( Home Loan Scheme ) ಅವಲಂಬಿಸುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ( Indian Reserve Bank ) ಇತ್ತೀಚೆಗೆ ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೋ ದರವನ್ನು ( Repo Rate ) ಹಾಗೆಯೇ ಇರಿಸಲು ನಿರ್ಧರಿಸಿದೆ. ಇದರಿಂದಾಗಿ ಗೃಹ ಸಾಲ ಪಡೆದವರು ಹೆಚ್ಚಿನ ಬಡ್ಡಿದರದ ಸವಾಲನ್ನು ಎದುರಿಸುತ್ತಿದ್ದಾರೆ. ಹೀಗೆ ಆದಾಗ ಅವರು ಗೃಹ ಸಾಲಕ್ಕೆ ಮೊರೆ ಹೋಗಿ ಸಾಲ ಪಡೆದು ಮನೆ ಏನೋ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಪಡೆದ ಗೃಹ ಸಾಲಕ್ಕೆ ಬಡ್ಡಿ ಜಾಸ್ತಿ ಆಗಿ ಅವರು ಅದನ್ನು ತೀರಿಸಲು ಆಗದೆ ಕಷ್ಟ ಪಡುತ್ತಿದ್ದಾರೆ ಅಂಥವರಿಗೆ ಈ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಗೃಹ ಸಾಲದಲ್ಲಿ ಹೆಚ್ಚಾದ ಬಡ್ಡಿದರ :

ಅಕ್ಟೋಬರ್ 2019 ರಿಂದ ಫ್ಲೋಟಿಂಗ್ ರೇಟ್ ( Floating Rate ) ಸಾಲಗಳನ್ನು ಚಿಲ್ಲರೆ ಸಾಲಗಳಿಗೆ ರೆಪೊ ದರದಂತೆ ಬಾಹ್ಯ ಬೆಂಚ್‌ಮಾರ್ಕ್ ( Bench Mark ) ಆಧಾರಿತ ಸಾಲ ದರಕ್ಕೆ (EBLR) ಲಿಂಕ್ ಮಾಡಲಾಗಿದೆ. ಹೀಗಾಗಿ ಮೇ 2022 ಮತ್ತು ಫೆಬ್ರವರಿ 2023ರ ನಡುವೆ ರೆಪೊ ದರದಲ್ಲಿ 250 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವು ಗೃಹ ಸಾಲದ ಬಡ್ಡಿದರಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಸಾಲಗಾರರ ಮೇಲೆ ಹೆಚ್ಚಾಗಿ ಆರ್ಥಿಕತೆ ಕಾಡುತ್ತಿದೆ. ಆದರೆ ಪರಿಹಾರವು ಕೂಡ ಇದೆ ಸಾಲಗಾರರು ಕೆಲವು ಆಯ್ಕೆಗಳ ಮೂಲಕ ಗೃಹ ಸಾಲದ ಬಡ್ಡಿಯನ್ನು ಕಡಿಮೆ ಮಾಡಬಹುದು. ಅದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ.

ಮುಖ್ಯವಾಗಿ ಗೃಹ ಸಾಲದ ದರಗಳನ್ನು ಎದುರಿಸುತ್ತಿರುವ ಸಾಲಗಾರರು ಬಡ್ಡಿದರಗಳನ್ನು ಕಡಿಮೆ ಮಾಡಲು ತಮ್ಮ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು. ಆದರೆ ಪ್ರಸ್ತುತ ದರ ಮತ್ತು ಹೊಸ ಸಾಲಗಾರರಿಗೆ ನೀಡಲಾಗುವ ದರಗಳ ನಡುವೆ ವ್ಯತ್ಯಾಸ ಇದ್ದಾಗ ಮಾತ್ರ ಇದು ಕಡಿಮೆ ಆಗಬಹುದು.

whatss

ಸಾಲಗಾರರಿಗೆ ಮರುಪಾವತಿ ಪ್ರಕಿಯೆ ಇರುತ್ತದೆ :

ಸಾಲಾಗರರು ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಸಾಲಗಾರರು ಬ್ಯಾಂಕ್‌ಗೆ ಇಮೇಲ್ ಮೂಲಕ ಸಂದೇಶ ( E-mail Message ) ಕಳುಹಿಸಬೇಕಾಗುತ್ತದೆ. ನಂತರ ಮರುಪಾವತಿ ಅಥವಾ ಪರಿವರ್ತನೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಬಾಕಿ ಇರುವ ಸಾಲದ ಮೊತ್ತವು 0.25 ಪ್ರತಿಶತದಿಂದ 0.50 ಪ್ರತಿಶತದವರೆಗೆ ಇರುತ್ತದೆ. ಅಥವಾ ಸಾಲಗಾರರಿಗೆ ಇದು ಬೇಡವಾಗಿದ್ದರೆ ಅದರ ಬದಲು ಪರ್ಯಾಯ ಪರಿಹಾರವನ್ನು ಕೂಡ ಆರಿಸಿಕೊಳ್ಳಬಹುದು. ಹಾಗೆಯೇ ಅವರು ಗೃಹ ಸಾಲದ ಬಾಕಿಯನ್ನು ಇನ್ನೊಂದು ಬ್ಯಾಂಕ್‌ಗೆ ವರ್ಗಾಯಿಸಬಹುದು.

ಬ್ಯಾಂಕ್ ನಿಂದ ಬ್ಯಾಂಕ್ ಗೆ ವರ್ಗಾವಣೆ ವ್ಯವಸ್ಥೆ :

ಸದ್ಯಕ್ಕೆ ಸಾಲದ ಬ್ಯಾಂಕ್‌ನಲ್ಲಿ ಗೃಹ ಸಾಲದ ಬಡ್ಡಿ ದರವು ಹೆಚ್ಚಿದ್ದರೆ, ನೀವು ಕಡಿಮೆ ಬಡ್ಡಿ ದರವನ್ನು ನೀಡುವ ಬ್ಯಾಂಕ್‌ಗೆ ಬದಲಾಯಿಸಬಹುದಾಗಿದೆ. ಯಾಕೆಂದರೆ ಈ ಯೋಜನೆಯು ಅಸಲು ಮೊತ್ತ, ಬಡ್ಡಿ ಮತ್ತು EMI ಅನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ಹಣವನ್ನು ಉಳಿಸಬಹುದಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಯೋಜನೆಯಲ್ಲಿ ಶುಲ್ಕ ಮತ್ತು ಹಲವು ನಿಯಮಗಳು ( Rules ) ಒಳಗೊಂಡಿವೆ :

ಈ ಯೋಜನೆಯಲ್ಲಿ ಈ ವ್ಯವಸ್ಥೆಯನ್ನು ಪಡೆಯಲು ಸಾಲಗಾರರು ಸಮಯ ಮತ್ತು ಕೆಲವು ವೆಚ್ಚಗಳನ್ನು ಭರಿಸಬೇಕಾಗುತ್ತದೆ.
ಹಾಗೆಯೇ ಸಾಲಗಾರರು ಬಾಕಿ ಇರುವ ಸಾಲದ ಮೊತ್ತದ 0.25 ಪ್ರತಿಶತದಿಂದ 2 ಪ್ರತಿಶತದವರೆಗೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.
ಇದರಲ್ಲಿ ಇರುವ ಶುಲ್ಕಗಳು ಎಂದರೆ :  ಸಂಸ್ಕರಣಾ ಶುಲ್ಕಗಳು, ಕಾನೂನು, ಮೌಲ್ಯಮಾಪನ ಶುಲ್ಕಗಳು ಮತ್ತು ದಾಖಲೆ ಪರಿಶೀಲನೆ ಶುಲ್ಕಗಳು ಇತ್ಯಾದಿ.

ಈ ಯೋಜನೆಯಲ್ಲಿ ಇರುವ ಇನ್ನಿತರ ಮುಖ್ಯ ಸೂಚನೆಗಳು ಈ ಕೆಳಗಿನಂತಿವೆ :

ಇದೊಂದು ಮುಖ್ಯ ಸೂಚನೆ ಆಗಿದ್ದು, ಲಾಕ್-ಇನ್ ಅವಧಿ ಮುಗಿಯುವ ಮೊದಲು ಸಾಲಗಾರರು ಸಾಲವನ್ನು ಬದಲಾಯಿಸಿದರೆ, ಅವರು ಸಾಲದ ಮೊತ್ತದ 0.4 ರಿಂದ 4 ಪ್ರತಿಶತದಷ್ಟು ಮರುಪಾವತಿ ದಂಡವನ್ನು ಪಾವತಿಸಬೇಕಾಗುತ್ತದೆ. ಯಾವಾಗ ಅವರ ಕ್ರೆಡಿಟ್ ಪ್ರೊಫೈಲ್ ಸುಧಾರಿಸುತ್ತದೆಯೋ ಆ ಸಮಯದಿಂದ ಮಾಸಿಕ ಆದಾಯವು ಹೆಚ್ಚಾಗುತ್ತದೆ.
ಮತ್ತು ಸಾಲಗಾರರು ಉತ್ತಮ ಉದ್ಯೋಗವನ್ನು ಪಡೆದುಕೊಂಡಾಗ ಅವರು ಇತರ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರವನ್ನು ಪಡೆಯಲು ಅರ್ಹರಾಗಬಹುದು.

tel share transformed

ಈ ಯೋಜನೆಯಲ್ಲಿ ನೀವು ಮಾಡಬೇಕಾದ ಕೆಲಸಗಳು :

ಸಾಲಗಾರರು ಉಳಿತಾಯ, ಸಂಸ್ಕರಣಾ ಶುಲ್ಕ ಮತ್ತು ಇತರ ವೆಚ್ಚಗಳನ್ನು ಲೆಕ್ಕ ಹಾಕಬೇಕು ಯಾಕೆಂದರೆ ದರದ ಕನಿಷ್ಠ 50 ಬೇಸಿಸ್ ಪಾಯಿಂಟ್‌ಗಳು ಕಡಿಮೆಯಾಗಿದ್ದರೆ ಮಾತ್ರ ಸಾಲವನ್ನು ವರ್ಗಾಯಿಸಬೇಕು.
ಆಗ ಮಾತ್ರ ಇದು ದೀರ್ಘಾವಧಿಯ ಉಳಿತಾಯವನ್ನು ಪಡೆದು ಕೊಳ್ಳುತ್ತದೆ. ಇದಿಷ್ಟು ಈ ಗೃಹ ಸಾಲ ಯೋಜನೆಯಲ್ಲಿ ಇರುವ ಮಾಹಿತಿ ನಿಮಗೂ ಕೂಡ ಗೃಹ ಸಾಲ ಪಡೆಯಬೇಕೆಂದಿದ್ದರೆ ಈ ಮೇಲಿನ ಎಲ್ಲ ಸೂಚನೆಗಳನ್ನು ಅನುಸರಿಸಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!