ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ ( big boss season 10 ) ಯಶಸ್ವಿಯಾಗಿ ಏಳನೇ ವಾರ ಮುಗಿಸಿ ಎಲಿಮಿನೇಷನ್ ಹಂತಕ್ಕೆ ಬಂದು ನಿಂತಿದೆ. ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವೀಕ್ಷಕರು ಕಿಚ್ಚನ ವಿಕೇಂಡ್ ಶೋ ಗಾಗಿ ( Weekendshow ) ಕಾಯುತ್ತಿದ್ದಾರೆ. ಹಾಗೂ ಯಾರು ಎಲಿಮೆಟ್ ( eliminate ) ಆಗಬಹುದು ಎಂದು ಕಾತುರವಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲ್ಲರೂ ಸ್ನೇಹಿತ ಎಲಿಮಿನೇಟ್ ಆಗುತ್ತಾರೆ ಅಂದುಕೊಂಡಿದ್ದರು, ಆದರೆ ಆಗಿದ್ದೆ ಬೇರೆ :
ಬಿಗ್ ಬಾಸ್‌ನಲ್ಲಿ ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ ವರ್ತೂರು ಸಂತೋಷ್, ನಮ್ರತಾ ಗೌಡ ಮತ್ತು ಡ್ರೋನ್ ಪ್ರತಾಪ್
ಶನಿವಾರದ ಸಂಚಿಕೆಯಲ್ಲಿ ಸೇಫ್ ಆಗಿದ್ದರು. ಇನ್ನು ಭಾನುವಾರದ ಸಂಚಿಕೆಯಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಸೇಫ್ ಆದರು. ಮೈಕಲ್ ಅಜಯ್, ಮತ್ತು ಸ್ನೇಹಿತ್ ಗೌಡ ಮೇಲೆ ಎಲಿಮಿನೇಷನ್ ಆಗುವ ಸಾಧ್ಯತೆ ಇತ್ತು. ಇದರಲ್ಲಿ ಒಬ್ಬರು ಮನೆ ಬಿಟ್ಟು ಹೊರಹೊಗಲಿದ್ದಾರೆ ಎಂದು ಸುದೀಪ್ ಅವರು ಹೇಳುತ್ತಿದ್ದರು.
ಹಾಗೇ ಇದೀಗ ಎಲ್ಲರ ಕಣ್ಣು ಬಿದ್ದಿದ್ದು ಸ್ನೇಹಿತ್ ಮೇಲೆ, ಅವರು ಎಲಿಮಿನೇಟ್ ಆಗ್ತಾರಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿತ್ತು. ಕಳೆದ ಬಾರಿ ಕ್ಯಾಪ್ಟನ್ ಆಗಿದ್ದ ನೀತು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಈ ಬಾರಿ ಸ್ನೇಹಿತ್ ಕೂಡ ಕ್ಯಾಪ್ಟನ್ ಆಗಿದ್ದು, ಅವರು ಎಲಿಮಿನೇಟ್ ಆಗುತ್ತಾರ ಎಂದು ಕಾಯುತ್ತಿದ್ದರು.
ಡೇಂಜರ್ ಝೋನ್‌ನಲ್ಲಿರುವ ( Danger Zone ) ಐದು ಮಂದಿಯ ಪೈಕಿ ಸ್ನೇಹಿತ್ ಗೌಡ ಮತ್ತು ಮೈಕಲ್ ಅಜಯ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆಯಿತ್ತು. ಆದರೆ, ಮುಖ್ಯ ವಾಗಿ ಇಲ್ಲಿ ಎಲ್ಲರೂ ಸ್ನೇಹಿತ್ ಅವರ ಕಡೆ ಕೈ ಮಾಡಿ ತೋರಿಸುತ್ತಿದ್ದಾರೆ. ಇದರಿಂದ ಸ್ನೇಹಿತ್ ಗೂ ಕೂಡ ಶಾಕ್ ಆಗಿದೆ.
ಈ ವಾರ ಕೂಡ ಎಲಿಮಿನೇಷನ್ ಇಲ್ಲ :
ಈ ವಾರ ಸ್ನೇಹಿತ್ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂದು ಹಲವರ ವಾದವಾಗಿತ್ತು. ಹೀಗಿರುವಾಗ ಸುದೀಪ್ ಅವರು ಸ್ನೇಹಿತ ಹಾಗೂ ಮೈಕಲ್ ಕಣ್ಣ ಮುಂದೆಯೇ ಮನೆಯ ಡೋರನ್ನು ಓಪನ್ ಮಾಡಿಸಿದರು. ಮನೆಗೆ ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇಬ್ಬರು ಹೊಸದಾಗಿ ಬಂದಿದ್ದಾರೆ. ಇಂತಹ ಸಮಯದಲ್ಲಿ 50 ದಿನಗಳಿಂದ ಆಡುತ್ತಾ ಬಂದಿರುವ ಗಟ್ಟಿ ಸ್ಪರ್ಧಿಗಳನ್ನು ಹೊರಹಾಕುವುದು ಸರಿಯಲ್ಲ, ಒಂದು ವೇಳೆ ಅವರಿಬ್ಬರ ಹೆಸರು ನಾಮಿನೇಷನ್‌ನಲ್ಲಿ ಇದ್ದಿದ್ದರೆ ಯಾರು ಹೊರಗೆ ಹೋಗುತ್ತಿದ್ದರು? ಎಂದಿದ್ದಾರೆ. ಹಾಗಂತ ಹೊಸಬರನ್ನು ನಾಮಿನೇಷನ್ ಲಿಸ್ಟ್‌ಗೆ ಸೇರಿಸುವಂತೆಯೂ ಇಲ್ಲ, ಅವರಿಗೂ ಕೂಡ ಅವಕಾಶ ಬೇಕು. ಇದೆಲ್ಲ ಯೋಚಿಸಿದ ಬಳಿಕ ಯಾರನ್ನು ಎಲಿಮಿನೇಟ್ ಮಾಡದಿರಲು ತೀರ್ಮಾನಿಸಿದ್ದಾಗಿ ಸುದೀಪ್ ಹೇಳಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಸುದೀಪ್ ಅವರು ಎಂದು ಬಳಸದ ಅಧಿಕಾರವನ್ನು ಬಳಸಿ ಸ್ನೇಹಿತ ಹಾಗೂ ಮೈಕಲ್ ಹೆಸರನ್ನು ಮನೆಯಲ್ಲಿ ಉಳಿಸಿದ್ದಾರೆ. ಮೈಕಲ್ ಅವರು ಕೂಡ ಚೆನ್ನಾಗಿ ಆಟ ಆಡುತ್ತಿದ್ದಾರೆ ಹಾಗೆ ಸ್ನೇಹಿತ ಅವರು ಕೂಡ ಕಳೆದ ಒಂದು ವಾರದಿಂದ ಚೆನ್ನಾಗಿ ಆಟ ಆಡಿ ಕ್ಯಾಪ್ಟನ್ ಆಗಿದ್ದಾರೆ. ಇದೇ ಕಾರಣದಿಂದಾಗಿ ಇಬ್ಬರು ಮನೆಯಲ್ಲೇ ಉಳಿಯಬೇಕು, ಇವರಿಬ್ಬರು ಅರ್ಹರು ಇದ್ದಾರೆ ಎಂದು ಸುದೀಪ್ ಅವರು ಹೇಳಿದರು. ಇನ್ನು ಸ್ವತಃ ಸುದೀಪ್ ಸೇಫ್ ಮಾಡಿದ್ದ ಮೈಕೆಲ್ ಹಾಗೂ ಸ್ನೇಹಿತ್ ಇಬ್ಬರನ್ನು ತಾವೇ ನೇರವಾಗಿ ಮುಂದಿನ ವಾರ ನಾಮಿನೇಷನ್ ಲಿಸ್ಟ್‌ಗೆ ಸೇರಿಸಿದ್ದಾರೆ. ಇನ್ನು ಮುಂದಿನ ವಾರ ಯಾರು ಹೋಗುತ್ತಾರೆ ಎಂದು ಅದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

WhatsApp Group




