Gruhalakshmi – ಗೃಹಲಕ್ಷ್ಮಿ 2000/- ಹಣ ಬರದೇ ಇದ್ದವರಿಗೆ ಈ ದಿನಾಂಕದೊಳಗೆ ಜಮಾ- ಸಿಎಂ ಸಿದ್ದರಾಮಯ್ಯ ಹೇಳಿಕೆ

gruhalakshmi 3

ಇನ್ನು ಮುಂದೆ ಪ್ರತಿ ಗ್ರಾಮ ಪಂಚಾಯಿತಿ(Gram panchayath) ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್(Gruhalakshmi adalat) ನಡೆಯಲಿದೆ. ಏನಿದು ಗೃಹಲಕ್ಷ್ಮಿ ಅದಾಲತ್ ಎಂದು ಯೋಚಿಸುತ್ತಿದ್ದೀರಿಯೇ?, ಈ ಯೋಜನೆಯು 2 ಲಕ್ಷ ಜನರಿಗೆ ಗೃಹಲಕ್ಷ್ಮಿಯ ಹಣ ಬರದೇ ಇರುವ ಕಾರಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದಾಲತ್ ನಡೆಸಿ, ತೊಂದರೆಗಳನ್ನು ಬಗೆಹರಿಸಿ ಎಲ್ಲಾ ಗೃಹಲಕ್ಷ್ಮಿಯರಿಗೆ ಹಣ ತಲುಪುವಂತೆ ಮಾಡಲಾಗುವುದು. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ :

ಇಲ್ಲಿಯವರೆಗೂ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿಗೆ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಅದರಲ್ಲಿ, 1.10 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೆರಹಣವನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಎರಡು ಲಕ್ಷ ಫಲಾನುಭವಿಗಳಿಗೆ ಕೆಲವು ತೊಂದರೆಗಳಿಂದ ಹಣ ವರ್ಗಾವಣೆ ಆಗುತ್ತಿಲ್ಲ, ಆ ತೊಂದರೆಗಳನ್ನು ಬಗೆಹರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಂಕ್ ಖಾತೆಯ(Bank Account) ಮಾಹಿತಿಯಲ್ಲಿ ಗೊಂದಲ, ಆಧಾರ್‌ ಲಿಂಕ್‌ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಗೆ ತೊಂದರೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಡಿಸೆಂಬರ್ ಒಳಗಾಗಿ ಈ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಿ ಉಳಿದ ಎರಡು ಲಕ್ಷ ಫಲಾನುಭವಿಗಳಿಗೆ ಹಾಗೂ ಎಲ್ಲರಿಗೂ ಕೂಡ ಗ್ಯಾರೆಂಟಿ ಗೃಹಲಕ್ಷ್ಮಿ ಹಣವನ್ನು ಖಾತೆಗೆ ಬರುವಂತೆ ಮಾಡಲಾಗುವುದು ಎಂದು ಸಿದ್ದರಾಮಯ್ಯನವರು ಸಂದೇಶವನ್ನು ನೀಡಿದ್ದಾರೆ.

ಡಿಸೆಂಬರ್ ನಲ್ಲೂ ಹಣ ಬಾರದೇ ಇದ್ದರೆ ಈ ಕೆಲಸ ಮಾಡಿ

ಹಣ ಬಾರದೇ ಇದ್ದರೆ ಇನ್ನು ಮುಂದೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ತಕ್ಷಣವೇ ನೀವು ಅದಾಲತ್ ದೂರು ಸಲ್ಲಿಸಬಹುದು. ಗ್ರಾಮ ಪಂಚಾಯತ್ ಸಿಬ್ಬಂದಿ ನಿಮ್ಮ ಮನೆಗೆ ಬಂದು ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದಾರೆ. ಯಾರ ಖಾತೆಗೆ ಹಣ ಬಂದಿಲ್ಲವೋ ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಪರಿಹರಿಸಿ ಖಾತೆಗೆ ಹಣ ಜಮಾ ಆಗುವಂತೆ ಮಾಡುತ್ತಾರೆ, ಅಂಗನವಾಡಿ ಸಹಾಯಕಿಯರು ಹಾಗೂ ಗ್ರಾಮ ಪಂಚಾಯತ್ ಕಡೆಯಿಂದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ. ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಇದ್ದಲ್ಲಿ ತಾವೇ ಸ್ವತಃ ಬ್ಯಾಂಕಿಗೆ ಕರೆದುಕೊಂಡು ಹೋಗಿ ಹಾಗೂ ಮತ್ತಿತರ ದಾಖಲೆಗಳು ಸರಿಯಾಗಿ ಮಾಡಿಕೊಡುತ್ತಾರೆ.ಅದಾಲತ್ ಪ್ರಕ್ರಿಯೆ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿ ಯಾವ ಮಹಿಳೆಯ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ವಿವರವನ್ನು ಸರ್ಕಾರಕ್ಕೆ ನೀಡಬೇಕು.

ಗೃಹ ಲಕ್ಶ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ:

 ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಮುಖ್ಯಮಂತ್ರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಹೀಗೆ ಮತ್ತಿತರ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಬರದಿದ್ದರೆ ಅಂತಹ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲಿ ಅದಾಲತ್ ನಡಸಿ ಡಿಸೆಂಬರ್ ಒಳಗೆ ಅವುಗಳೆಲ್ಲವುಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಹಾಗಾಗಿ ಇನ್ನು ಗೃಹಲಕ್ಷ್ಮಿಯ ಹಣ ಬಂದಿಲ್ಲ ಎಂದು ಚಿಂತಿಸುತ್ತಿರುವವರಿಗೆ ಇದು ಒಂದು ಸಂತಸದ ಸುದ್ದಿಯಾಗಿದೆ. ಎಲ್ಲಾ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಡಿಸೆಂಬರ್ ಒಳಗಾಗಿ ಖಾತೆಗೆ ಬಂದು ಜಮಾ ಆಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಇದುವರೆಗೂ ಹಣ ಬರದೇ ಇದ್ದವರಿಗೆ ಒಟ್ಟಿಗೆ 6 ಸಾವಿರ ರೂ. ಖಾತೆಗೆ ಬರುತ್ತೆ

ಬುಧವಾರ ಬೆಂಗಳೂರಿನ ಮಲ್ಲೇಶ್ವರಂ ನ ಬೆಂಗಳೂರು ಒನ್ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್  ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡು ಇದುವರೆಗೂ ಹಣ ಬರದೇ ಇರುವ ಫಲಾನುಭವಿಗಳು ಚಿಂತೆ ಮಾಡಬೇಕಿಲ್ಲ, ಮೂರು ತಿಂಗಳ ಒಟ್ಟು ಬಾಕಿಯಾದ 6000 ರೂಪಾಯಿಯನ್ನು ಪೂರ್ಣವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು.ಹೀಗಾಗಿ ಅಧಿಕಾರಿಗಳಿಗೆ ಟ್ರೈನಿಂಗ್ ನೀಡಲಾಗುತ್ತಿದ್ದು, ಇನ್ನು ಹತ್ತು ದಿನದಲ್ಲಿ ಗೃಹಲಕ್ಷ್ಮಿ ಗೊಂದಲ ಕ್ಲಿಯರ್ ಆಗಲಿದೆ ಎಂದು ತಿಳಿಸಿದರು. ಇದರ ಜೊತೆಗೆ ‘1902’ ಹೆಲ್ಪ್ ಲೈನ್ ನಂಬರ್ ಇದ್ದು, ಇದಕ್ಕೆ ಕೆರೆಮಾಡಿ ಮಹಿಳೆಯರು ಮಾಹಿತಿಯನ್ನ ಪಡೆದುಕೊಳ್ಳಬಹುದು ಎಂದರು.

ಅಂಚೆ ಕಚೇರಿ ಸಹಾಯ ಪಡೆದುಕೊಳ್ಳಿ..! ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)

ದೇಶಾದ್ಯಂತದ ಸುಮಾರು ಶೇ.77 ಗ್ರಾಮೀಣ ಖಾತೆದಾರರಿಗೆ ಮನೆಯಲ್ಲಿ ಕುಳಿತು ಬ್ಯಾಂಕಿನಿ೦ದ ಹಣವನ್ನು ಹಿಂಪಡೆಯುವ ಅಥವಾ ಜಮಾ ಮಾಡುವ ಅನುಕೂಲವಿದೆ. ಅಂಚೆ ಉಳಿತಾಯ ಖಾತೆಯನ್ನು ಕೇವಲ 5 ನಿಮಿಷದಲ್ಲಿ ತೆರೆಯಬಹುದಾಗಿದೆ. ಕರ್ನಾಟಕದಲ್ಲಿ ಐಪಿಪಿಬಿ 33 ಶಾಖೆಗಳಿವೆ. ಐಪಿಪಿಬಿ ಖಾತೆ ತೆರೆದರೆ ಶೀಘ್ರವೇ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಇದುವರೆಗೂ ಹಣ ಬಾರದೇ ಇರುವ ಎಷ್ಟೋ ಜನರು ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾತೆ ತೆರೆದ ಎರಡೇ ದಿನಗಳಲ್ಲಿ ಹಣ ಬಂದಿರುವ ಉದಾಹರಣೆಗಳಿವೆ, ಹಣ ಬರದಿರುವ ಎಷ್ಟೋ ಫಲಾನುಭವಿಗಳ ಬ್ಯಾಂಕಿಂಗ್ ಕೆವೈಸಿನಲ್ಲಿ ಸಮಸ್ಯೆ ಇರುವ ಕಾರಣ DBT ವರ್ಗಾವಣೆ ಕಷ್ಟಕರವಾಗಿದೆ, ಹಾಗಾಗಿ ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎನ್ನುವರು ಇದೊಂದು ಪ್ರಯತ್ನ ಮಾಡಿ ನೋಡಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

2 thoughts on “Gruhalakshmi – ಗೃಹಲಕ್ಷ್ಮಿ 2000/- ಹಣ ಬರದೇ ಇದ್ದವರಿಗೆ ಈ ದಿನಾಂಕದೊಳಗೆ ಜಮಾ- ಸಿಎಂ ಸಿದ್ದರಾಮಯ್ಯ ಹೇಳಿಕೆ

  1. I have applied to gruhalakshmi scheme on 8 th August. But till today I have not received any amount. I and my husband has no other sources. And we both are senior citizens. Please see to it and help us to get our beneficiary

Leave a Reply

Your email address will not be published. Required fields are marked *

error: Content is protected !!