Yamaha Scooty – ಯಮಹಾದ ಮತ್ತೊಂದು ಹೊಸ ಸ್ಕೂಟಿ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Yamaha Aerox 155 scooty

ಇಂದು ಮಾರುಕಟ್ಟೆಯಲ್ಲಿ ಹಲವಾರು ವಾಹನಗಳು ಇವೆ. ಅದರಲ್ಲೂ ಬೈಕ್ ಸ್ಕೂಟರ್ ಗಳ ವಿಷಯಕ್ಕೆ ಬಂದರೆ, ವಿವಿಧ ಕಂಪೆನಿಗಳ ವೇಹಿಕಲ್ಸ್ ಗಳನ್ನು ( Vehicles ) ಕಾಣುತ್ತೇವೆ. ಹಾಗೆಯೇ ಅದರಲ್ಲೂ ಯಮಹಾ ಕಂಪೆನಿಯ ಬೈಕ್ ಮತ್ತು ಸ್ಕೂಟರ್ ಗಳು ಉಳಿದ ಎಲ್ಲ ವಾಹನಗಳನ್ನು ಹಿಂದಿಕ್ಕುತ್ತವೆ. ಜನರಿಗೆ ಯಮಹಾ ಕಂಪನೆಯ ಮೇಲಿನ ಬಹಳ ಉತ್ತಮ ನಂಬಿಕೆ ಇದೆ. ಹಾಗೆಯೇ ಯಮಹಾ ಕಂಪೆನಿ ಬಿಡುಗಡೆ ಮಾಡುವ ವಾಹನಗಳು ಬಹಳ ವಿಶಿಷ್ಟ ಮತ್ತು ಉತ್ತಮ ಗುಣಮಟ್ಟದಾಗಿರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಮಹಾ ಏರಾಕ್ಸ್ 155 (Yamaha Aerox 155):

new Yamaha Aerox 155 scooty

ಇದೀಗ ಯಮಹಾ ಕಂಪೆನಿಯು ತನ್ನ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲು ತಯಾರಾಗಿದೆ. ಯಮಹಾ ಏರಾಕ್ಸ್ 155 (Yamaha Aerox 155) ಎಂಬ ಹೊಸ ಸ್ಕೂಟರ್ (Scooter)ನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರಿನ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Yamaha Aerox 155 motoGPಯ ಹೊಸ ಆವೃತ್ತಿಯು ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಒಂದು ಸ್ಕೂಟರ್ ಇದೀಗ ಹೊಸ ಲುಕ್‌ ಅನ್ನು ಪಡೆದಿದೆ.

ಭಾರತ ಯಮಹಾ ಮೋಟಾರ್ (IYM) pv. Ltd., India ಯಮಮಾ ಮೋಟಾರ್ (IYM) ಬ್ರಿ. ಲಿಮಿಟೆಡ್ ತನ್ನ ಕಾಲ್ ಆಫ್ ದಿ ಬ್ಲೂ ಬ್ರ್ಯಾಂಡ್ ಅಭಿಯಾನದ ಅಡಿಯಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಜೊತೆಗೆ Yamaha Aerox 155 ಅನ್ನು ಬಿಡುಗಡೆ ಮಾಡಿದೆ. ಈ ಮ್ಯಾಕ್ಸಿ-ಸ್ಪೋರ್ಟ್ಸ್ ಸ್ಕೂಟರ್ ತನ್ನ ವಿಭಾಗದಲ್ಲಿ TCS ಅನ್ನು ಒಳಗೊಂಡಿರುವ ಭಾರತದಲ್ಲಿ ಮೊದಲ ಸ್ಕೂಟರ್ ಆಗಿದೆ.

tel share transformed

ಈ ಸ್ಕೂಟರಿನ ಬೆಲೆ (Price) :

ಈ ಸ್ಕೂಟರ್‌ನ ಆನ್-ರೋಡ್ ಬೆಲೆ 1,71,348 ರೂಪಾಯಿ ಆಗಿದೆ, ನೀವು ಇದನ್ನು 15,000 ರೂಪಾಯಿ ಡೌನ್ ಪಾವತಿಯೊಂದಿಗೆ ಖರೀದಿ ಮಾಡಬಹುದಾಗಿದೆ.

ಹಾಗೆಯೇ ನೀವು ಡೌನ್ ಪಾವತಿಯೊಂದಿಗೆ ಖರೀದಿ ಮಾಡಿದರೆ ಮಾಸಿಕ 5023 ರೂಪಾಯಿನಂತೆ ಕಂತುಗಳನ್ನು ಮೂರು ವರ್ಷಗಳ ಅವಧಿಗೆ (36 ತಿಂಗಳುಗಳು) ಪಾವತಿಸಬೇಕಾಗುತ್ತದೆ.

ಈ ಸ್ಕೂಟರ್ ನ ಬಣ್ಣಗಳು (colors) :

ನಾಲ್ಕು ಬಣ್ಣ ರೂಪಾಂತರಗಳು ಲಭ್ಯವಿರುತ್ತವೆ. ಇವುಗಳಲ್ಲಿ ಮೆಟಾಲಿಕ್ ಬ್ಲಾಕ್, ರೇಸಿಂಗ್ ಬ್ಲೂ, ಗ್ರೇ ವರ್ಮಿಲಿಯನ್ ಮತ್ತು ಹೊಸ ಮೆಟಾಲಿಕ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

ಯಮಹಾ ಸ್ಕೂಟರಿನ ಎಂಜಿನ್ :

ಯಮಹಾ ಕಂಪೆಯು ಬಿಡುಗಡೆ ಮಾಡಿದೆOO33Yamaha Aerox 155 ಸ್ಕೂಟರ್ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ 155cc ಎಂಜಿನ್ ಹೊಂದಿದೆ. ಈ ಎಂಜಿನ್ 8,000 RPM ನಲ್ಲಿ 14.79 bhp ಪವರ್ ಮತ್ತು 6,500 RPM ನಲ್ಲಿ 13.9 Nm ಪೀಕ್ ಟಾರ್ಕ್ ( Pin Tarq ) ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಇತ್ತೀಚಿನ ಆವೃತ್ತಿಯ ಸ್ಕೂಟರ್‌ನ ಎಂಜಿನ್ OBD-2 ಕಂಪ್ಲೈಂಟ್ ಆಗಿದೆ. ಈ ಸ್ಕೂಟರ್ E20 ಇಂಧನ ಅಂದರೆ 20 ಪ್ರತಿಶತ ಎಥೆನಾಲ್ ಮತ್ತು 80 ಪ್ರತಿಶತ ಪೆಟ್ರೋಲ್‌ನಲ್ಲಿ ಚಲಿಸಬಲ್ಲದು. ಪ್ರಸರಣಕ್ಕಾಗಿ ಎಂಜಿನ್‌ನೊಂದಿಗೆ ಸಿವಿಟಿಯನ್ನು ಜೋಡಿಸಲಾಗಿದೆ. ನವೀಕರಿಸಿದ ಸ್ಕೂಟರ್ ಯಮಹಾದ ವೇರಿಯಬಲ್ ವಾಲ್ವ್ ಆಕ್ಚುಯೇಶನ್ (ವಿವಿಎ) ತಂತ್ರಜ್ಞಾನವನ್ನು ಸಹ ಹೊಂದಿದೆ.

whatss

ಯಮಹಾ ಏರೋಕ್ಸ್ 155 ವೈಶಿಷ್ಟ್ಯಗಳು :

ಯಮಹಾ ಏರೋಕ್ಸ್ 155 ಸ್ಕೂಟರ್‌ಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ನೀಡಲಾಗಿದೆ. ಪ್ರಯಾಣದ ಸಮಯದಲ್ಲಿ ಆಘಾತ ಪರಿಹಾರಕ್ಕಾಗಿ ಸ್ಕೂಟರ್‌ನ ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್-ಲೋಡೆಡ್ ರಿಯರ್ ಅಬ್ಸಾರ್ಬರ್ ಇದೆ. ಯಮಹಾ ಏರಾಕ್ಸ್ ಎಲ್ಲಾ-ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮುಂತಾದ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇವುಗಳಲ್ಲದೆ, ಇಂಧನ ಬಳಕೆ ಟ್ರ್ಯಾಕರ್, ನಿರ್ವಹಣೆ ಶಿಫಾರಸುಗಳು, ಪವರ್ ಸಾಕೆಟ್, ಸೀಟ್ ಸ್ಟೋರೇಜ್ ಅಡಿಯಲ್ಲಿ 24.5 ಲೀಟರ್, ದೊಡ್ಡ ಮಿಶ್ರಲೋಹದ ಚಕ್ರಗಳಂತಹ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ.

ಸ್ಕೂಟರ್ ಟಿವಿಎಸ್ ಎನ್‌ಟಾರ್ಕ್‌ನೊಂದಿಗೆ ( TVS Entorq )ಸ್ಪರ್ಧಿಸುತ್ತದೆ. ನೀವೇನಾದರೂ ಒಳ್ಳೆಯ ಸ್ಪೋರ್ಟಿ ಲುಕ್ಕಿರುವ ಸ್ಕೂಟರ್ ಅನ್ನು ನೋಡುತ್ತಿದ್ದರೆ ಇದು ಒಂದು ಉತ್ತಮ ಆಯ್ಕೆ ಎನ್ನಬಹುದಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!