Ola Scooter: ಓಲಾ ಸ್ಕೂಟಿ ಖರೀದಿ ಮೇಲೆ ಭರ್ಜರಿ ಆಫರ್, ಹೊಸ ಸ್ಕೂಟಿ ತಗೋತಿದ್ದರೆ, ತಪ್ಪದೇ ಓದಿ

ola scooty in less price

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Ola ಕಂಪನಿಯು ತನ್ನ ಸ್ಕೂಟರ್ ಗಳ ಮೇಲೆ ಆಕರ್ಷಕ ಆಫರ್ಸ್ ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಯಾವ ಆಫರ್ಸ್ ಗಳು ಯಾವ ಓಲಾ ಸ್ಕೂಟಿ ಗಳ ಮೇಲೆ ಇವೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಓಲಾ ಸ್ಕೂಟಿಗಳ ಮೇಲೆ ಆಕರ್ಷಕ ಆಫರ್ ಗಳು :

ಭಾರತದಲ್ಲಿ ಧ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ OLA ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ಗಳು ಭಾರೀ ಜನಪ್ರಿಯತೆಯನ್ನು ಪಡೆದೆ. ಇದೀಗ ಟಾಪ್ ಎಂಡ್ ಮಾದರಿಗಳಾದ ಎಸ್1 ಪ್ರೊ(Ola s1 pro), ಎಸ್1 ಏರ್(S1 air) ಮತ್ತು ಎಸ್1 ಎಕ್ಸ್ ಮೇಲೆ ಆಕರ್ಷಕ ಆಫರ್ಸ್ ನೀಡುತ್ತಿದೆ. ಹೊಸ EV ಸ್ಕೂಟರ್ ಖರೀದಿಸಲು ಯೋಚಿಸಿತ್ತಿರುವ ಗ್ರಾಹಕರಿಗೆ ಇದು ಬಂಪರ್ ಆಫರ್ ಎನ್ನಬಹುದು.

ಹಬ್ಬದ ಋತುವಿನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ EV ಗಳ ಮೇಲೆ ಹೆಚ್ಚು ಆಕರ್ಷಣೆಯನ್ನು ಪಡೆಯಲು ವಿಶೇಷತೆಗಾಗಿ ಭಾರತ್ ಇವಿ ಫೆಸ್ಟ್( Bharat EV fest ) ಅಭಿಯಾನ ಕೈಗೊಂಡಿದೆ. ಹೌದು, ಹೊಸ ಇವಿ ಅಭಿಯಾನದಡಿ ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಕ್ಯಾಶ್ ಬ್ಯಾಕ್(Cash back), ಎಕ್ಸ್ ಚೆಂಜ್(Exchanges) ಮತ್ತು ವಿಸ್ತರಿತ ಬ್ಯಾಟರಿ ವಾರಂಟಿಗಳು(Extended Battery Warranty ) ದೊರೆಯಲಿವೆ.

ಈ ಭಾರತ್ ಇವಿ ಫೆಸ್ಟ್ ಅಭಿಯಾನವು ಅಕ್ಟೋಬರ್ 22ರಿಂದ 24ರ ತನಕ ನಡೆಯಲಿದೆ, ಅಂದರೆ ಇಂದು ಕೊನೆಯ ದಿನವಾಗಿದೆ. 72 ಗಂಟೆಗಳ ಕಾಲ ನಡೆಯಲಿರುವ ಅಭಿಯಾನದಲ್ಲಿ ಹಲವಾರು ರೀತಿಯ ಭಾರೀ ಆಫರ್ಸ್ ಲಾಂಚ್ ಮಾಡಿದೆ.

ಆಫರ್ ಗಳ ವಿವರ :

ಆಫರ್ ಗಳ ಪ್ರಕಾರ OLA ಕಂಪನಿಯು ರೂ. 24,500 ಮೌಲ್ಯದ ವಿವಿಧ ಆಫರ್ ಗಳೊಂದಿಗೆ ರೂ. 2 ಸಾವಿರದ ವಿಶೇಷ ಗಿಫ್ಟ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಎಕ್ಸ್ High – End warranty ಆಗಿರುವ ಎಕ್ಸ್1 ಎಕ್ಸ್ ಪ್ಲಸ್ ಮಾದರಿಯ ಮೇಲೆ ರೂ. 5 ಸಾವಿರ ಡಿಸ್ಕೌಂಟ್ ನೊಂದಿಗೆ 5 ವರ್ಷಗಳ ಕಾಲ ಉಚಿತವಾಗಿ ಬ್ಯಾಟರಿ ಪ್ಯಾಕ್ ಮೇಲಿನ ವಾರಂಟಿ ಪಡೆಯುತ್ತಿದೆ. ದಸರಾ ಸಂಭ್ರಮದಲ್ಲಿ ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಇದು ಅತ್ಯುತ್ತಮ ಕೊಡುಗೆಯಾಗಲಿವೆ.

ಹಾಗೆಯೇ ಗ್ರಾಹಕರು ಪೆಟ್ರೋಲ್ ಎಂಜಿನ್ ಸ್ಕೂಟರ್ ಗಳನ್ನು ಬದಲಿಗೆ ಮಾಡಿ ಅಂದರೆ ಎಕ್ಸ್ಚೇಂಜ್ ಮಾಡಿ ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಿಕೊಳ್ಳುವ ಗ್ರಾಹಕರಿಗೆ ರೂ. 10 ಸಾವಿರ ಎಕ್ಸ್ ಚೆಂಜ್ ಬೋನಸ್ ನೀಡುತ್ತಿದ್ದು. ಈ ಎಕ್ಸ್ಚೇಂಜ್ ಆಫರ್ ಅನ್ನು ದೇಶಾದ್ಯಂತ ಹೊಂದಿರುವ 1,000 ಓಲಾ ಇವಿ ಎಕ್ಸ್ಪಿರೆನ್ಸ್ ಸೆಂಟರ್( OLA EV Experience Center) ಗಳಲ್ಲಿ ಎಕ್ಸ್ ಚೆಂಜ್ ಮಾಡಿಕೊಳ್ಳೋವ ಅವಕಾಶ ಕಲ್ಪಿಸಿದೆ.

ಇನ್ನು ವಿಶೇಷವಾದ ಆಫರ್ ಅಂದರೆ, ರೇಫರ್ಲ್ ಕೇರ್ ಪ್ಲಸ್. ಈ ಆಫರ್ ಪ್ರಕಾರ OLA ಸ್ಕೂಟರ್ ಖರೀದಿಗೆ ಮಾಡುವಂತೆ ಸಲಹೆ ಮೇರೆಗೆ ಸ್ಕೂಟರ್ ಖರೀದಿಸಲು ಮುಂದಾದ ಗ್ರಾಹಕನಿಗೆ ಕಂಪನಿಯು ರೂ. 2 ಸಾವಿರದ ಮೌಲ್ಯದ ರೇಫರ್ಲ್ ಕೇರ್ ಪ್ಲಸ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಇದಲ್ಲದೇ, ಓಲಾ ಎಲೆಕ್ಟ್ರಿಕ್ ಕಂಪನಿ ತನ್ನ ಪಾಲುದಾರ ಹಣಕಾಸು ಸಂಸ್ಥೆಗಳ ಕ್ರೆಡಿಕ್ ಕಾರ್ಡ್ ಗಳನ್ನು ಬಳಸಿಕೊಂಡು ಖರೀದಿ ಮಾಡುವ ಗ್ರಾಹಕರಿಗೆ ಶೇ.5.99 ಬಡ್ಡಿದರದಲ್ಲಿ ವಿಶೇಷ ಸಾಲ(loan) ಸೌಲಭ್ಯಗಳನ್ನು ಒದಗಿಸುತ್ತದೆ. ಹಾಗೆಯೇ ಹೆಚ್ಚುವರಿಯಾಗಿರುವ ರೂ. 7,500 ಡಿಸ್ಕೌಂಟ್ ಆಫರ್ ಕೂಡ ನೀಡುತ್ತಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ(2nd Generation) ಸ್ಕೂಟರ್ ಬೆಲೆಗಳು ಹೀಗಿವೆ, ಎಸ್1 ಪ್ರೊ ಮಾದರಿಯ ಎಕ್ಸ್ ಶೋರೂಂ ಪ್ರಕಾರ ರೂ. 1,47,499 ಬೆಲೆಯಲ್ಲಿ ಲಭ್ಯವಿದೆ, ಎಸ್1 ಏರ್ ಸ್ಕೂಟರ್ ಮಾದರಿಯು 1,19,999 ಬೆಲೆ ಹೊಂದಿದೆ ಮತ್ತು ಎಸ್1 ಎಕ್ಸ್ ಪ್ಲಸ್ ಆವೃತ್ತಿಯು ರೂ. 1,09,99 ಬೆಲೆ ಹೊಂದಿದ್ದರೆ ಎಸ್1 ಎಕ್ಸ್ 3kvh ಬ್ಯಾಟರಿ ಪ್ಯಾಕ್ ರೂ. 99,999 ಮತ್ತು 2kvh ಬ್ಯಾಟರಿ ಪ್ಯಾಕ್ ಮಾದರಿಯು ರೂ. 89,999 ಬೆಲೆ ಹೊಂದಿದೆ.

ನೀವು ಸಹ ಈ ಹಬ್ಬದ ಸೀಸನ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ ಈ ಸಮಯ ಸೂಕ್ತವಾದದ್ದು ಎಂದು ಹೇಳಬಹುದು. ಈ ಭಾರತ್ ಇವಿ ಫೆಸ್ಟ್ ನಲ್ಲಿ ಪಡೆಯುವ ಆಫರ್ಸ್ ಲಾಭವನ್ನು ಪಡೆದುಕೊಂಡು ನಿಮ್ಮ ಮನೆಗೆ ಒಂದು ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ತನ್ನಿರಿ. ಹಾಗೆಯೇ ಇಂತಹ ಉತ್ತಮ ಆಫರ್ಸ್ ಗಳ ಮಾಹಿತಿಯನ್ನು ತಿಳಿಸಿಕೊಡುವ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

One thought on “Ola Scooter: ಓಲಾ ಸ್ಕೂಟಿ ಖರೀದಿ ಮೇಲೆ ಭರ್ಜರಿ ಆಫರ್, ಹೊಸ ಸ್ಕೂಟಿ ತಗೋತಿದ್ದರೆ, ತಪ್ಪದೇ ಓದಿ

Leave a Reply

Your email address will not be published. Required fields are marked *

error: Content is protected !!