Vande Bharat Metro: ಈ ನಗರಗಳ ನಡುವೆ ವಂದೇ ಭಾರತ್ ಮೆಟ್ರೋ ಪ್ರಾರಂಭ!

Vande Bharat Metro

ದೇಶದೆಲ್ಲೆಡೆ ಹಳಿಗಳ ಮೂಲಕ ರೈಲು ಸಂಚಾರ ಕಲ್ಪಿಸಲು ಸಜ್ಜಾದ ಒಂದೇ ಭಾರತ್ ಮೆಟ್ರೋ ರೈಲು (vandhe bharath metro train).

ಈ ಹಿಂದೆ ರೈಲು ಸಂಚಾರಗಳು ಕಡಿಮೆ ಇದ್ದವು ಕಾಲೇಜು ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ಕೆಲಸಕ್ಕೆ ಹೋಗುವವರಿಗೆ ಪ್ರಯಾಣ ಮಾಡಲು ಬಹಳ ಕಷ್ಟವಿತ್ತು ಬಸ್ ಗಳಂತೂ ಹೇಳುವುದೇ ಬೇಡ ಶಕ್ತಿ ಯೋಜನೆ(Shakti scheme) ಶುರುವಾದ ನಂತರ ಬಸ್ ನಲ್ಲಿ ಪ್ರಯಾಣಿಸಲು ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದಾದ ನಂತರ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (vandhe bharath express train) ಬಿಡುಗಡೆ ಮಾಡಿದರು. ಈ ರೈಲು ಹೈ ಸ್ಪೀಡ್ (high speed) ರೈಲಾಗಿ ಯಶಸ್ವಿಯಾಗಿ ತನ್ನ ಓಡಾಟವನ್ನು ನಡೆಸುತ್ತಿದೆ. ಸಾರ್ವಜನಿಕರಿಗೆ, ದೂರದ ಊರುಗಳಿಗೆ ಕೆಲಸಕ್ಕೆ ಹೋಗುವವರಿಗೆ, ಹಾಗೂ ವಿದ್ಯಾರ್ಥಿಗಳಿಗೆ  ರೈಲು ಸಂಚಾರ ಒಂದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಹಾಗೆಯೇ ಇದೀಗ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಂತೆ ಹಳಿಗಳಿಗೆ ಬರಲು ಸಜ್ಜಾಗಿದೆ ಒಂದೇ ಭಾರತ್ ಮೆಟ್ರೋ ರೈಲು. ಈ ರೈಲಿನ ಮುಖ್ಯ ಉದ್ದೇಶ ಏನು? ವೇಗ (speed) ಮತ್ತು ಚಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಒಂದೇ ಭಾರತ್ ಮೆಟ್ರೋ ರೈಲು ಹಳಿಗಳಿಗೆ ಬರುವ ಮುಖ್ಯ ಉದ್ದೇಶ (purpose) :
664c7c6a8c166 new vande bharat train 215017487 16x9 1

ದೂರದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಹತ್ತಿರದ ನಗರಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಹಾಗೂ ದಿನನಿತ್ಯ ಕಚೇರಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ
ಈ ಒಂದೇ ಭಾರತ್ ಮೆಟ್ರೋ ರೈಲನ್ನು ಹಳಿಗಳಿಗೆ ತರಲು ಸಜ್ಜಾಗಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು (Indian train department) ಸಹ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಮುಂಬರುವ ಒಂದೆರೆಡು ತಿಂಗಳಲ್ಲಿ ಹೊಸ ವಂದೇ ಮೆಟ್ರೋ ದೆಹಲಿ ಹಾಗೂ ಆಗ್ರಾ ನಡುವೆ ಸಂಚಾರ ನಡೆಸಲಿದೆ.

ಒಂದೇ ಭಾರತ್ ಮೆಟ್ರೋ ರೈಲಿನ ವೇಗ (speed) ಮತ್ತು ಚಲಿಸುವ ವಿಧಾನ  :

ಹೊಸ ವಂದೇ ಭಾರತ್ ಮೆಟ್ರೋ ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಓಡಾಟ ಮಾಡಲಿದೆ. ಈ ರೈಲು ಬೆಳಗ್ಗೆಯೇ ದೆಹಲಿಯಿಂದ (Delhi) ಆಗ್ರಾಗೆ (Agra) ಸಂಚಾರವನ್ನು ಪ್ರಾರಂಭಿಸಲಿದ್ದು, ಇವೆರೆಡು ನಗರಗಳ ಮಧ್ಯೆಯಿರುವ 200 ಕಿಲೋಮೀಟರ್ ಅಂತರವನ್ನು ಕೇವಲ 1.5 ಗಂಟೆಯಲ್ಲಿ ತಲುಪಲಿದೆ.

ಪಂಜಾಬ್ ನಲ್ಲಿ ತಯಾರಾಗಿರುವ ಒಂದೇ ಭಾರತ್ ಮೆಟ್ರೋ ರೈಲು :

ಪಂಜಾಬ್‌ನ (Punjab) ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ (train coach factory) ವಂದೇ ಭಾರತ್ ಮೆಟ್ರೋ ರೈಲನ್ನು ತಯಾರಿಸಲಾಗುತ್ತಿದ್ದು, ಪ್ರಸ್ತುತ 50 ರೈಲುಗಳನ್ನು ಸಿದ್ಧಪಡಿಸಲಾಗಿದೆ. ಜುಲೈನಲ್ಲಿ ಈ ರೈಲುಗಳು ಪ್ರಾಯೋಗಿಕ ಸಂಚಾರವನ್ನು ನಡೆಸಬಹುದು ಎಂಬ ಮಾಹಿತಿ ತಿಳಿದು ಬಂದಿದೆ. ಹಾಗೆಯೇ ಮುಂಬರುವ ತಿಂಗಳಲ್ಲಿ 400 ವಂದೇ ಮೆಟ್ರೋ ರೈಲುಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೆ ಮಾಧ್ಯಗಳಿಗೆ ತಿಳಿಸಿದೆ.

ವಂದೇ ಭಾರತ್ ಮೆಟ್ರೋ ರೈಲಿನ ವಿನ್ಯಾಸ (style) :

ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಿರುವ ಈ ಒಂದೇ ಭಾರತ್ ಮೆಟ್ರೋ ರೈಲುಗಳು 100 – 250 ಕಿಲೋಮಿಟರ್ ವ್ಯಾಪ್ತಿಯೊಳಗೆ ಕಾರ್ಯಾಚರಣೆಯನ್ನು ಮಾಡಲಿವೆ. ಹಾಗೆಯೇ ಇದರಲ್ಲಿ 12 ಬೋಗಿ (ಕೋಚ್‌)ಗಳು ಇರಲಿದ್ದು, ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಇನ್ನು 16 ಭೋಗಿಗಳನ್ನು ಹೆಚ್ಚಿಸಬಹುದು. ಈ ಒಂದೇ ಭಾರತ್ ಮೆಟ್ರೋ ರೈಲಿನ ವಿಶೇಷತೆ ಎಂದರೆ, ದೇಶಾದ್ಯಂತ 124 ಪ್ರಮುಖ ನಗರಗಳನ್ನು ವಂದೇ ಮೆಟ್ರೋ ಸಂಪರ್ಕಿಸಲಿದೆ. ಆಗ್ರಾ (Agra) – ಮಥುರಾ (Mathura) ಮತ್ತು ತಿರುಪತಿ (Thirupathi) – ಚೆನ್ನೈ (Chennai) ಮಾರ್ಗದಲ್ಲಿಯೂ ಕೂಡ ಓಡಾಟ ನಡೆಸುತ್ತದೆ.

ಹಾಗೆಯೇ ಈ ರೈಲು ಸಂಪೂರ್ಣವಾಗಿ ಹವಾನಿಯಂತ್ರ ವನ್ನು ಒಳಗೊಂಡಿದೆ. ವಂದೇ ಭಾರತ್ ಮೆಟ್ರೋ ರೈಲುಗಳ ಕೋಚ್‌ವೊಂದರಲ್ಲಿ ಸರಿ ಸುಮಾರು 250 ಮಂದಿ ಪ್ರಯಾಣಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಫೇರ್ & ಸ್ಮೋಕ್ ಡಿಟೆಕ್ಷನ್ ಸಿಸ್ಟಮ್ (Fair and smoke detection system) (ಅಗ್ಗಿ ಪತ್ತೆ ವ್ಯವಸ್ಥೆ) ಹೊಂದಿದೆ. ಇದರಲ್ಲಿ ಆಟೋಮೆಟಿಕ್ ಡೋರ್ (ಸ್ವಯಂ ಚಾಲಿತ ಬಾಗಿಲು) ಮತ್ತು ಆರಾಮದಾಯಕ ಆಸನಗಳನ್ನು ಕೂಡ ನೀಡಲಾಗಿದೆ.

ಭಾರತೀಯ ರೈಲಿನಲ್ಲಿ ವಿಮಾನದ ಸೌಕರ್ಯಗಳು (airplane facilities) :

ಭಾರತೀಯ ರೈಲ್ವೆ ಇಲಾಖೆಯು ವಂದೇ ಭಾರತ್ ಮೆಟ್ರೋ ರೈಲಿನೊಂದಿಗೆ ವಂದೇ ಭಾರತ್ ಸ್ಲೀಪರ್‌ನ್ನು (Vandhe Bharath sleeper) ಸಹ ಅಭಿವೃದ್ಧಿಪಡಿಸುತ್ತಿದೆ. ಎಲ್ಲಾ ಸೌಲಭ್ಯಗಳು ದೂರ ಪ್ರಯಾಣ ಬೆಳೆಸುವವರಿಗೆ ಬಹಳ ಉಪಯುಕ್ತವಾಗಿದೆ ಇದರಲ್ಲಿ ವಿಮಾನದಲ್ಲಿರುವಂಥ ಎಲ್ಲ ಸೌಕರ್ಯಗಳು ಕೂಡ ಪ್ರಯಾಣಿಕರಿಗೆ ಸಿಗಲಿದೆ. ಒಟ್ಟು 823 ಬರ್ತ್‌ಗಳನ್ನು ಹೊಂದಿರಲಿದ್ದು, ಇದರಲ್ಲಿ ಸ್ವಯಂ ಚಾಲಿತ ಬಾಗಿಲನ್ನು (automatic open doors) ಕೂಡ ಅಳವಡಿಸುವ ಮಾಹಿತಿ ಇದೆ ಜನಸಾಮಾನ್ಯರು ಆರಾಮದಾಯಕವಾಗಿ ತಮ್ಮ ಪ್ರಯಾಣವನ್ನು ಬೆಳೆಸಬಹುದಾಗಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!